ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಸಂಜೆ ಧಾರವಾಡದಲ್ಲಿ..

ಕಲಾಮಂಡಳ ಟ್ರಷ್ಟ್, ಧಾರವಾಡ, ಕಳೆದ ೨೦ ವರ್ಷಗಳಿಂದ ಧಾರವಾಡ ನಗರವನ್ನು ಕೇಂದ್ರಸ್ಥಾನವಾಗಿಟ್ಟುಕೊಂಡು ದೃಶ್ಯ ಕಲೆಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರುತ್ತಿರುವ ಸಂಸ್ಥೆಯಾಗಿದೆ. ಸಂಸ್ಥೆ ತನ್ನ ೨೦ ನೆಯ ವರ್ಷಾಚರಣೆ ಸಂಭ್ರಮದ ಈ ಸಂದರ್ಭದಲ್ಲಿ, ದೃಶ್ಯಕಲೆಯ ವಿವಿಧ ಪ್ರಕಾರಗಳನ್ನು ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ಹಮ್ಮಿಕೊಳ್ಳುವ ಯೋಜನೆ ಇದೆ. ಈ ವರ್ಷದ ಮೂರನೆಯ ಕಾರ್ಯಕ್ರಮವಾಗಿ ಇದೇ ಜುಲೈ, ೨೨, ಶುಕ್ರವಾರ, ಸಂಜೆ ೬.೧೫ ಕ್ಕೆ ಸೃಜನಾ ರಂಗ ಮಂದಿರದಲ್ಲಿ ಗಜಬ್ ಕಹಾನಿ ಎಂಬ ನಾಟಕವನ್ನು ಆಯೋಜಿಸಿದ್ದೇವೆ.

ಗಜಬ ಕಹಾನಿ ಮರಾಠಿ ನಾಟಕ.

ಮೂಲ ಕಥೆ: ಶ್ರೀ ಜೋಸ್ ಸರಾಮಾಗೋ. ನೋಬೆಲ್ ಪ್ರಶಸ್ತಿ ಪುರಸ್ಕೃತರು ಅವರ ದಿ ಎಲಿಫೆಂಟ ಜರ್ನಿ ಅನುವಾದ ಮತ್ತು ನಾಟಕರೂಪಾಂತರ : ಪ್ರದೀಪ ವೈದ್ಯ ರಂಗವಿನ್ಯಾಸ ಹಾಗೂ ನಿರ್ದೇಶನ : ಮೋಹಿತ ತಕಾಲಕರ್ ಪ್ರಮುಖ ಪಾತ್ರದಲ್ಲಿ ಕಲಾವಿದರಾದ ಗೀತಾಂಜಲಿ ಕುಲ್ಕರ್ಣಿ, ನಚಿಕೇತ ಪೂರ್ಮಪತ್ರ್ರೆ, ಉಮೇಶ ಜಗತಾಪ ಹಾಗೂ ೨೦ ಜನ ನಟ ನಟಿಯರು ಅಭಿನಯಿಸಲಿದ್ದಾರೆ.

ಜುಲೈ, ೨೨, ಶುಕ್ರವಾರ ೨೦೧೧,ಸಂಜೆ ೬.೧೫ ಕ್ಕೆ

ಸ್ಥಳ: ಸೃಜನಾ ರಂಗ ಮಂದಿರ,ಕೆಸಿಡಿ,ಧಾರವಾಡ.

ನಾಟಕದ ಅವಧಿ ೯೭ ನಿಮೀಷಗಳು. ನಾಟಕ ವೀಕ್ಷಣೆಗೆ ಪ್ರವೇಶ ಪತ್ರ ಕಡ್ಡಾಯ

ಪ್ರವೇಶ ಪತ್ರಕ್ಕಾಗಿ ಸಂಪರ್ಕಿಸಿ: ಮಧು ದೇಸಾಯಿ. ಕಾರ್ಯದರ್ಶಿ, ಕಲಾಮಂಡಳ, ನಂಬರ ೩,೧ನೇ ಕ್ರಾಸ, ಕೇಶವನಗರ, ಧಾರವಾಡ-೭.

ದೂರವಾಣಿ: ೨೪೪೫೪೭೪ ಮೋಬೈಲ: ೯೪೪೮೦ ೨೨೯೫೨

ಗಜಬ್ ಕಹಾನಿ ನಾಟಕದ ಸಾರಾಂಶ

ವ್ಯಕ್ತಿಗೆ ಮದುವೆಯ ಸಂದರ್ಭದಲ್ಲಿ ವಿಧ,ವಿಧವಾದ ಉಡುಗೊರೆಗಳು ಬರುವದು ಸಹಜ. ಆದರೆ ಉಡುಗೊರೆಯಾಗಿ ಜೀವಂತ ಆನಯೊಂದನ್ನು ನೀಡಿದರೆ ಹೇಗಾಗಬೇಕು..? ಹೀಗೆ ಉಡುಗೊರೆಯಾಗಿ ನೀಡಲ್ಪಟ್ಟ ಆನೆ ಮತ್ತು ಅದರ ಮಾವುತ ಲಿಸ್ಬೆನ್ ನಗರದಿಂದ ವಿಯನ್ನಾ ದ ವರೆಗೆ ಪಯಣಿಸಿದ ಕಥೆ ನಾಟಕವಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತದೆ.. ಸೊಲೋಮನ್ನ ಎಂಬ ಹೆಸರಿನ ಆನೆ ಮತ್ತು ಅದರ ಮಾವುತ ಸುಬ್ರೋ ಇವರ ಸುಧೀರ್ಘ ಪಯಣದ ಸಂದರ್ಭದಲ್ಲಿ ನಡೆಯುವ ಘಟನೆಗಳೇ ನಾಟಕದ ವಸ್ತು. ನೊಬೆಲ್ ಪ್ರಶಸ್ತಿ ಪುರಸ್ಕೃತ ಶ್ರೀ ಜೋಸ್ ಸರಾಮಾಗೋ ಅವರ ದಿ ಎಲಿಫೆಂಟ ಜರ್ನಿ ಎಂಬ ಕಥೆಯನ್ನು ಆಧರಿಸಿ ತಯಾರಾದ ನಾಟಕ ಗಜಬ್ ಕಹಾನಿ

ಸುಧೀರ್ಘವಾದ ಪಯಣದಲ್ಲಿ ಸೊಲೋಮನ್ ಹಾಗೂ ಮಾವುತ ಸುಬ್ರೋ ಇವರ ನಡುವಿನ ಭಾವನಾತ್ಮಕ ಸಂಬಧ, ಪಯಣದ ಉದ್ದಕ್ಕೂ ಭೆಟ್ಟಿಯಾಗುವ ವ್ಯಕ್ತಿಗಳು, ಅವರ ಮನಸ್ಥಿತಿ, ಭಿನ್ನ, ಭಿನ್ನ ವಾತಾವರಣ, ಇದರ ನಡುವೆ ಹುಟ್ಟುವ ಘಟನೆಗಳು, ನಡೆಯುವ ಜಾತಿ – ವರ್ಗ ಹಾಗೂ ಧಾರ್ಮಿಕ ಸಂಘರ್ಷದ ಸಂಗತಿಗಳು, ಅವುಗಳ ಮೂಲಕ ಅನಾವರಣಗೊಳ್ಲುವ ಮಾನವೀಯ ಸಂಬಂಧಗಳು ಹೀಗೆ ಮನುಷ್ಯನ ಬದುಕಿನ ಸಂದಿಗ್ಧತೆಗಳ ಒಳನೋಟಗಳನ್ನು ಈ ನಾಟಕ ಸೂಕ್ಷ್ಮವಾಗಿ ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ.

ಮರಾಠಿ ಮತ್ತು ಗಿಬರಿಷ್ ಭಾಷೆಯಲ್ಲಿ ಭಾಷಾಂತರಗೊಂಡ ಈ ನಾಟಕ ಮುಖ್ಯವಾಗಿ ಮನುಷ್ಯನ ಸ್ವಭಾವದ ಅಸ್ತಿತ್ವವನ್ನೆ ಪ್ರಶ್ನೆ ಮಾಡುತ್ತದೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂದರ್ಭಗಳಲ್ಲಿ ಮನುಷ್ಯನ ವರ್ತನೆ ಎಷ್ಟೊಂದು ಸೀಮಿತಗೊಳ್ಳುತ್ತದೆ ಎನ್ನುವದನ್ನು ವಿಡಂಬನಾತ್ಮಕವಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ ಈ ನಾಟಕ.

 

‍ಲೇಖಕರು G

22 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading