ಭಗತ್ಸಿಂಗ್ : ವಿಮೋಚನಾ ಸಮರದಲ್ಲಿ ಅರಳಿದ ಹೂ…
-ಕೆ. ಮಹಾಂತೇಶ
ಇಂದು ದೇಶಕ್ಕಾಗಿ ಬಲಿದಾನಗೈದ ಭಗತ್ಸಿಂಗ್ ಜನ್ಮದಿನ..
ಇಂದು ಸೆಪ್ಟೆಂಬರ್ 27 ಬ್ರಿಟಿಷರ ನೇಣುಕಂಭಕ್ಕೆ ತನ್ನ ಯೌವನದ ಸುಗಂಧವನ್ನು ಲೇಪಿಸಿ ಜಗತ್ತಿನ ಕ್ರಾಂತಿಕಾರಿ ಚಳುವಳಿಯ ಇತಿಹಾಸದಲ್ಲೇ ಅತ್ಯಂತ ಚಿಕ್ಕವಯಸ್ಸಿನಲ್ಲೇ ಹುತಾತ್ಮನೆಂಬ ಬಿರುದು ಭಗತ್ಸಿಂಗ್ ಜನ್ಮ ದಿನ. ಹೌದು ಭಗತ್ಸಿಂಗ್ ಎಂಬ ಅಂದಿನ ಆ ಯುವಕ ಅಂದು ಬ್ರಿಟಿಷರ ನೇಣು ಕುಣಿಕೆಯಿಂದ ಪಾರಾಗಿ ಬದುಕಿ ದೀರ್ಘಾಯಷ್ಯಿಯಾಗಿ ಬದುಕಿದ್ದರೂ ಇಂದು ಅವರು ನಮ್ಮೊಂದಿಗಿರಲು ಸಾಧ್ಯವೇ ಇರಲಿಲ್ಲ. 1907 ಸೆಪೆಂಬರ್ 27 ರಂದು ಹುಟ್ಟಿದ ಭಗತ್ಸಿಂಗ್ಗೆ ಅವರಿಗೆ ಇಂದಿಗೆ 118 ಜನ್ಮದಿನವಾಗಿರುತ್ತಿತ್ತು. ಅವರು ಒಂದು ವೇಳೆ ಶತಾಯುಷ್ಯೀಯಾಗಿ ಬದುಕಿದ್ದರೂ ಈಗಿರುವ ಜನಪ್ರಿಯಯತೆ ಹಾಗೂ ಗೌರವವನ್ನು ಪಡೆಯುತ್ತಿದ್ದರೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ. ಅಂತಹ ಒಬ್ಬ ಯುವಕ ಇವತ್ತಿಗೂ ಭಾರತದ ಕ್ರಾಂತಿಕಾರಿ ಚಳುವಳಿಯಲ್ಲಿ ಆದರ್ಶ ಮತ್ತು ಉಜ್ವಲ ನಕ್ಷತ್ರವಾಗಿ ಮಿನುಗುತ್ತಿರುವ ಹಿಂದಿರುವ ಕಾರಣ ಬೇರೇನೂ ಅಲ್ಲ ಅವರು ದೇಶದ ವಿಮೋಚನೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನ.
ಮನೆಯೇ ಹೋರಾಟದ ಕುಲುಮೆ:
ಭಗತ್ಸಿಂಗ ಹುಟ್ಟಿದ್ದು ಪಂಜಾಬ್ನ ಜಲಂಧರ ಜಿಲ್ಲೆಯ ಖಾತ್ಕರ್ಕಲಾನ್ ಎಂಬ ಹಳ್ಳಿಯಲ್ಲಿ. ಆದರೆ ತಂದೆಯು ಸಮೀಪದ ಲಾಯಲ್ಪುರಕ್ಕೆ ಸ್ಥಳಾಂತರ ಹೊಂದಿದ್ದರಿಂದ ಭಗತ್ಸಿಂಗ್ ಅಲ್ಲಿಗೆ ಹೋಗಬೇಕಾಯಿತು. ಅಲ್ಲಿ ನೀರಾವರಿ ಕಾಲುವೆಗೆ ಬ್ರಿಟಿಷರು ವಿಧಿಸಿದ್ದ ಭೂ ಕಂದಾಯದ ವಿರುದ್ದ ರೈತರ ಹೋರಟ ಆರಂಭಗೊಂಡಿತ್ತು. ಅದರ ನೇತೃತ್ವವನ್ನು ಸ್ವತಃ ಭಗತ್ಸಿಂಗ್ ಚಿಕ್ಕಪ್ಪ ಸರ್ದಾರ್ ಅಜಿತ್ಸಿಂಗ್ ವಹಿಸಿದ್ದರು. ಅವರು ಮಾಡುತ್ತಿದ್ದ ಉಗ್ರ ಭಾಷಣಗಳು ಬ್ರಿಟಿಷ ಆಡಳಿತಕ್ಕೆ ಬಿಸಿ ತುಪ್ಪಗಳಾಗಿದ್ದವು ಹೀಗಾಗಿಯೇ ಅವರನ್ನು ಬಂಧಿಸಲು ಪೊಲೀಸರು ಏನೆಲ್ಲಾ ಸರ್ಕಸ್ ನಡೆಸಿದರೂ ಅಜಿತ್ಸಿಂಗ್ ಅವರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದರು. ಇದು ಎಳೆಯ ಬಾಲಕ ಭಗತ್ ಅವರನ್ನು ಆಕರ್ಷಣೆ ಮಾಡಿದವು. 1915 ರಲ್ಲಿ ಲಾಹೋರ ಪಿತೂರಿ ಮೊಕದ್ದಮೆಯ ವಿಚಾರಣೆ ನಡೆಸಿ 24 ಸ್ವಾತಂತ್ರ್ಯ ಹೋರಾಟಗಾರರಿಗೆ ಮರಣ ದಂಡನೆ ವಿಧಿಸಿ ಉಳಿದ 27 ಜನರನ್ನು ಅಂಡಮಾನ ಜೈಲಿಗೆ ದೂಡಿದ್ದು, ನಂತರ 1919 ಜಲಿಯನ್ವಾಲಾಬಾಗ್ನಲ್ಲಿ ನಡೆದ ನಾನೂರಕ್ಕೂ ಹೆಚ್ಚಿನ ಜನರ ಹತ್ಯಾಕಾಂಡ ಹಾಗೂ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬ್ರಿಟಿಷರು ನೇಣಿಗೇರಿಸಿದ ಕತರ್ಾರ್ ಸಿಂಗ್ ಸರಬಾನ ಗೇಣಿಗೇರುವ ಕೊನೆಯಲ್ಲಿ ಹೇಳಿದ ಮಾತುಗಳು ಭಗತ್ಸಿಂಗ್ ಅವರನ್ನು ಉದ್ದೀಪನಗೊಳಿಸಿದ್ದವು.
ಅಪಾರ ಜ್ಞಾನ ದಾಯಿ..
ಜಗತ್ತಿನ ಕ್ರಾಂತಿಕಾರಿ ಚಳುವಳಿಯ ಇತಿಹಾಸದಲ್ಲಿ ಇಷ್ಟು ಚಿಕ್ಕವಯಸ್ಸಿನಲ್ಲಿ ಹುತಾತ್ಮರಾದ ಮತ್ತು ಆ ಚಿಕ್ಕ ವಯಸ್ಸಿನಲ್ಲಿ ಆಳವಾದ ರಾಜಕೀಯ ಜ್ಞಾನವನ್ನು ಪಡೆದಿದ್ದ ವ್ಯಕ್ತಿಗಳು ಅತ್ಯಂತ ವಿರಳ. ಭಗತ್ಸಿಂಗ್ ಸಹವರ್ತಿಯಾಗಿ ಅವರ ಜೊತೆ ಜೈಲಿನಲ್ಲಿದ್ದು ಬಾಲಾಪರಾಧಿ ಎಂಬ ಹಣೆ ಪಟ್ಟಿಯೊಂದಿಗೆ ಶಿಕ್ಷೆಯಿಂದ ಬಿಡುಗಡೆಯಾಗಿ ಇತ್ತೀಚಿನವರೆಗೂ ಬದುಕಿದ್ದ ಶಿವವರ್ಮ 1980 ರಲ್ಲಿ ಒಮ್ಮೆ ಕಾನ್ಪುರದಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದಾಗ ರಾಜಸ್ಥಾನದ ಕಾಲೇಜೊಂದರಲ್ಲಿ ತತ್ವಶಾಸ್ತ್ರದ ಅಧ್ಯಾಪಕನಾಗಿದ್ದ ಸಹ ಪ್ರಯಾಣಿಕನೊಬ್ಬ ಶಿವವರ್ಮ ಆಗಷ್ಟೇ ಓದಿ ಮುಗಿಸಿದ್ದ ಭಗತ್ಸಿಂಗ್ ಅವರ ‘ನಾನೇಕೇ ನಾಸ್ತೀಕ ? ಎಂಬ ಪುಸ್ತಕವನ್ನು ಕೈಗೆತ್ತಿಕೊಂಡು ಕಎಲವು ಪುಟಗಳನ್ನು ತಿರುವಿ ‘ನಿಜವಾಗಿಯೂ ಆತನಿಗೆ ಇಂತಹ ಗಂಭೀರ ವಿಷಯಗಳ ಬಗ್ಗೆ ಬರೆಯುವ ಸಾಮಥ್ರ್ಯವಿತ್ತೇ ?’ ಎಂದು ಪ್ರಶ್ನಿಸಿದರಂತೆ. ಆದರೆ ಭಗತ್ಸಿಂಗ್ ಬದುಕ ಮತ್ತು ಬರಹಗಳನ್ನು ಗಮನಿಸಿದಾಗ ಕೇವಲ ನಾಸ್ತೀಕತನದ ಬಗ್ಗೆ ಮಾತ್ರವಲ್ಲ, ಅವತ್ತಿನ ಸಮಕಾಲಿನ ಆಥರ್ಿಕ, ರಾಜಕೀಯ, ಸಾಮಾಜಿಕ, ಧಾಮರ್ಿಕ, ಸಾಂಸ್ಕೃತಿಕ ಮತ್ತು ಕಲೆ ಹಾಗೂ ಸಾಹಿತ್ಯಿಕ ವಿಷಯಗಳ ಬಗ್ಗೆಯೂ ಅತ್ಯಂತ ಸ್ಪಷ್ಟತೆ ಮತ್ತು ನಿಖರವಾದ ಜ್ಞಾನವನ್ನು ಅವರು ಪಡೆದುಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅಷ್ಟು ಮಾತ್ರವಲ್ಲ ಭಗತ್ಸಿಂಗ್ ಹುತಾತ್ಮರಾಗಿ ಇಷ್ಟೊಂದು ಧೀರ್ಘ ಅವಧಿಯ ಬಳಿಕವೂ ಅವರ ಬಗ್ಗೆ ಈಗಲೂ ಹಲವು ರೀತಿಯ ಚಚರ್ೆಗಳನ್ನು ನಡೆಯುತ್ತಿರುವುದು, ಅವರ ಕುರಿತಾದ ಹತ್ತಾರು ಪುಸ್ತಕಗಳು ಈಗಲೂ ನಿರಂತರವಾಗಿ ಪ್ರಕಟವಾಗುತ್ತಿರುವುದು ಅವರ ಕುರಿತಾಗಿ ಸಾಕ್ಷ್ಯ ಚಿತ್ರಗಳು, ಚಲನಚಿತ್ರಗಳು ನಿಮರ್ಾಣಗೊಂಡಿರುವುದನ್ನು ಗಮನಿಸಿದಾಗ ಭಗತ್ಸಿಂಗ್ ಅವರ ಬಗ್ಗೆ ಇದ್ದ ಗೌರವ ಮತ್ತು ಮತ್ತು ಅಭಿಮಾನ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ.

ತಿರುಚಿದ ಇತಿಹಾಸ
ಇತ್ತೀಚಿಗೆ ಬ್ರಿಟಿಷ್ ಇತಿಹಾಸಕಾರನೊಬ್ಬ ಬರೆದ ಪುಸ್ತಕದಲ್ಲಿ ಭಗತ್ಸಿಂಗ್ ಹಾಗೂ ಮತ್ತೊಬ್ಬ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಅವರನ್ನು ‘ಭಯೋತ್ಪಾದಕರು’ ಎಂಬ ಹಣೆ ಪಟ್ಟಿ ಕಟ್ಟಿರುವುದು ಹಲವರನ್ನು ಕೆರಳಿಸಿದ. ಅದರಲ್ಲೂ ಭಗತ್ಸಿಂಗ್ ಅವರ ಇತಿಹಾಸವನ್ನು ಅತ್ಯಂತ ಹತ್ತಿರದಿಂದ ಬಲ್ಲ ಹೆಸರಾಂತ ಹಿರಿಯ ಪತ್ರಕರ್ತರಾದ ಕಲದೀಪ್ ನಯ್ಯರ್ ಬ್ರಿಟಿಷ್ ಬರಹಗಾರನ ಆ ಆಭಿಪ್ರಾಯವನ್ನು ಹಾಗೂ ಆ ಬಗ್ಗೆ ಬ್ರಿಟಿಷ್ ಸಮುದಾಯ ಮೌನವಹಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿ ಲೇಖನ ಬರೆದಿದ್ದಾರೆ. ಹಾಗೆ ನೋಡಿದರೆ ಭಾರತದ ಸ್ವಾತಂತ್ರ್ಯ ಚಳುವಳಿಯ ಆರಂಭದ ಘಟ್ಟದಲ್ಲೇ ಎರಡು ವಿಭಿನ್ನ ಧಾರೆಗಳು ಬೆಳೆದು ಬಂದಿದ್ದು ಇತಿಹಾಸ. ಅಂದಿನ ಚಳುವಳಿಯ ನೇತೃತ್ವವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನೊಳಗೆಯೇ ಸೌಮ್ಯವಾದಿಗಳು ಮತ್ತು ಉಗ್ರವಾದಿಗಳು ಎಂಬ ಎರಡು ಬಣಗಳು ಅಸ್ತಿತ್ವದಲ್ಲಿದ್ದವು. ಆ ಕಾಲದಲ್ಲಿ ಉತ್ತರ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಆರಂಭದಲ್ಲಿ ನೌಜವಾನ್ ಸಭಾ ಹಾಗೂ ನಂತರದಲ್ಲಿ ಹಿಂದುಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಷಿಯೇಷನ್ ಮೂಲಕ ವಿಶೇಷವಾಗಿ ಯುವಜನರನ್ನು ಸಂಘಟಿಸುತ್ತ ಕ್ರಾಂತಿಕಾರಿ ಚಳುವಳಿಯನ್ನು ರೂಪಿಸುತ್ತಿದ್ದ ಭಗತ್ಸಿಂಗ್ ಹಾಗು ಆತನ ಸಂಗಾತಿಗಳನ್ನು ಸ್ವತಃ ಕಾಂಗ್ರೆಸ್ ನಾಯಕರೆ ಉಗ್ರವಾದಿಗಳು ಹಾಗೂ ಭಯೋತ್ಪಾದಕರು ಎಂದು ಹೀಯಾಳಿಸುತ್ತಿದ್ದರು. ಆದರೆ ಸ್ವತಃ ಭಗತ್ಸಿಂಗ್ ಅವರೇ ಬರೆದ ಹಲವು ಬರಹಗಳಲ್ಲಿ ಅವರ ಬಗ್ಗೆ ಬಂದ ಆರೋಪಗಳಿಗೆ ಹೀಗೆ ಪ್ರತ್ಯುತ್ತರ ನೀಡಿದ್ದಾರೆ. ನಾನು ಭಯೋತ್ಪಾದಕನಲ್ಲ ಮತ್ತು ಪ್ರಾಯಶಃ ಕ್ರಾಂತಿಕಾರಿ ಜೀವನದ ಪ್ರಾರಂಭದ ದಿನಗಳನ್ನು ಹೊರತುಪಡಿಸಿದರೆ ಎಂದೂ ಭಯೋತ್ಪಾದಕನಾಗಿರಲಿಲ್ಲ ಎಂಬುದನ್ನು ಖಡಾಖಂಡಿತವಾಗಿ ಹೇಳಲು ಇಚ್ಚಿಸುತ್ತೇನೆ; ಭಯೋತ್ಪಾದಕ ವಿಧಾನಗಳಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂಬುದೂ ನನಗೆ ಖಚಿತವಾಗಿದೆ. ‘ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ನ್ ಅಸೋಷಿಯೇಷನ್’ ಇತಿಹಾಸವೇ ಇದಕ್ಕೆ ಜೀವಂತ ಉದಾಹರಣೆ. ನಮ್ಮನ್ನು ನಾವು ಈ ಮಹಾ ಚಳುವಳಿಯ ಮಿಲಿಟರಿ ವಿಭಾಗವಾಗಿ ಗುರುತಿಸಿಕೊಳ್ಳಬೇಕೆಂಬ ಒಂದೇ ಗುರಿಯತ್ತ ನಮ್ಮ ಎಲ್ಲಾ ಚಟುವಟಿಕೆಗಳು ಕೇಂದ್ರೀಕರಣವಾಗಿದ್ದವು.
ಸ್ಪಷ್ಟ ಗುರಿ ಮತ್ತು ದಾರಿ.
ಆದರೆ ಭಗತ್ಸಿಂಗ್,ರಾಜಗುರು, ಸುಖದೇವ ಮೊದಲಾದ ಯುವಕರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಿ ಹಾದಿಯನ್ನು ಹಿಡಿದಿದ್ದು ಯಾಕೆ? ಮತ್ತು ಅವತ್ತು ಅದಕ್ಕೆ ಪೂರಕವಾಗಿ ಕಾರಣವಾದ ಆಂಶಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದರೆ ಭಗತ್ಸಿಂಗ್ ಅವರು ಹೊಂದಿದ್ದ ಗುರಿ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. 1917ರಲ್ಲಿ ನಡೆದ ರಷ್ಯಾದ ಸಮಾಜವಾದಿ ಸಮಾಜ ನಿಮರ್ಾಣದ ಕ್ರಾಂತಿ. ಅದರಿಂದಾಗಿ ಪ್ರೇರೇಪಿತರಾದ ಭಗತ್ಸಿಂಗ್. 1931 ಫೆಬ್ರವರಿ 2ರಂದು ಅಂದರೆ ಬ್ರಿಟಿಷರು ಗಲ್ಲಿಗೇರಿಸುವ ಎರಡು ತಿಂಗಳ ಹಿಂದಷ್ಟೇ ಬರೆದ ಒಂದು ಲೇಖನದಲ್ಲಿ ದೇಶದ ಯುವಕರು ಮಾಕ್ರ್ಸವಾದವನ್ನು ಅಳವಡಿಸಿಕೊಳ್ಳುವಂತೆ ಆ ಮೂಲಕ ಸಮಾಜದಲ್ಲಿ ಅಳವಾಗಿ ಬೇರು ಬಿಟ್ಟಿರುವ ಶೋಷಣಾ ವ್ಯವಸ್ಥೆಯನ್ನು ಕೊನೆಗಾಣಿಸಲು ದೇಶದಲ್ಲಿ ಅತ್ಯಂತ ಶೋಷಣೆಗೆ ಒಳಗಾಗಿರುವ ರೈತ-ಕಾಮರ್ಿಕರನ್ನು ಸಂಘಟಿಸಬೇಕೆಂದು ಕರೆ ನೀಡಿದ್ದರು. ಆದರೆ ಭಾರತದಲ್ಲಿ ಅಂದಿನ ದಿನಗಳಲ್ಲಿ ತೀವ್ರ ರೀತಿಯಲ್ಲಿ ಬ್ರಿಟಿಷ್ ಆಡಳಿತದ ವಿರೋಧಿಯಾಗಿ ಬೆಳೆದು ಬರುತ್ತಿದ್ದ ಕ್ರಾಂತಿಕಾರಿ ಚಳುವಳಿಯನ್ನು ಧಮನ ಮಾಡಲು ಬ್ರಿಟಿಷ್ ಸಕರ್ಾರವು ಶಾಸನ ಸಭೆಯಲ್ಲಿ ‘ಸಾರ್ವಜನಿಕ ಸಂರಕ್ಷಣಾ ಮಸೂದೆ ಹಾಗೂ ಕಾರ್ಮಿಕ ಚಳುವಳಿಯನ್ನು ಧಮನ ಮಾಡುವ ಕಾಮರ್ಿಕ ವಿವಾದ ಮಸೂದೆಯನ್ನು ಮಂಡಿಸಲು ಮುಂದಾಗಿದ್ದ ಘಟನೆಯೇ 1929 ಮಾರ್ಚ 20 ರಂದು ಸೆಂಟ್ರಲ್ ಆಸೆಂಬ್ಲಿಯಲ್ಲಿ ಬಾಂಬು ಹಾಕುವ ಪ್ರೇರಣೆಯನ್ನು ಕಾಂತಿಕಾರಿಗಳಿಗೆ ನೀಡಿದ್ದುಂತೂ ಸತ್ಯ ಆದರೆ ಹಾಗಂತ ಮಾತ್ರಕ್ಕೆ ಅವರು ಖಂಡಿತ ಭಯೋತ್ಪಾದಕರಾಗಿರಲಿಲ್ಲ ಅಥವಾ ಹಿಂಸೆಯ ಮೂಲಕ ಜನರ ಕಲ್ಯಾಣವನ್ನು ರೂಪಿಸುವ ಉಗ್ರ ಸ್ವರೂಪದ ಹಿಂಸೆಯ ಆರಾಧಕರಂತೂ ಆಗಿರಲೇ ಇಲ್ಲ. ‘ಕಿವುಡರಿಗೆ ಕಿವಿ ಕೇಳಿಸಬೇಕಾದರೆ ಸದ್ದು ಬಹಳ ಜೋರಾಗಿರಬೇಕು. ನಾವು ಬಾಂಬೆಸೆದಾಗ ಯಾರನ್ನಾದರೂ ಕೊಲ್ಲುವುದು ನಮ್ಮ ಆಶಯವಾಗಿರಲಿಲ್ಲ. ಕಿವುಡು ಸಕರ್ಾರವನ್ನು ಎಚ್ಚರಿಸುವುದಷ್ಟೇ ನಮ್ಮ ಗುರಿಯಾಗಿತ್ತು’ ಎಂದು ತಮ್ಮ ಕೃತ್ಯವನ್ನು ಭಗತ್ಸಿಂಗ್ ನ್ಯಾಯಲಯದಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಅಲ್ಲದೆ ಕ್ರಾಂತಿ ಎಂದರೆ ಬಾಂಬು ಬಂದೂಕುಗಳ ಆರಾಧನೆಯೂ ಅಲ್ಲ ನಮ್ಮ ಪ್ರಕಾರ ‘ಕ್ರಾಂತಿ ಎಂದರೆ ಅನ್ಯಾಯದ ಬುನಾದಿಯ ಮೇಲೆ ಕಟ್ಟಲ್ಪಟ್ಟ ಈ ಅಸಮಾನ ಶೋಷಣಾ ವ್ಯವಸ್ಥೆ ಬದಲಾಗಬೇಕು. ಎಂಬ ಆದರ್ಶ ಭಗತ್ಸಿಂಗ್ ಅವರದ್ದಾಗಿತ್ತು.
ದೇಶಕ್ಕಾಗಿ, ಜನತೆಯ ಒಳಿತಿಗಾಗಿ ಕೇವಲ 24 ವರ್ಷದಲ್ಲೇ ತನ್ನ ಯೌವನವನ್ನೇ ಬಲಿಯಾಗಿಸಿದ ಭಗತ್ಸಿಂಗ್ ಅಂದು ಇಂದು ಮಾತ್ರವಲ್ಲ ಮುಂದಿನ ಯುವ ಜನಾಂಗಕ್ಕೂ ಆದರ್ಶವೇ ಸರಿ. ಅಂತಹ ಆದರ್ಶಗಳನ್ನು ಈ ದೇಶದ ಯುವ ಜನರಲ್ಲಿ ಬಿತ್ತುವ ಕೆಲಸವನ್ನು ಅವರ ಮುಂದುವರೆಸೋಣ, ಆ ಮೂಲಕ ಅವರ ಜನ್ಮದಿನವನ್ನು ಸಾರ್ಥಕಗೊಳಿಸೋಣ..





0 Comments