ಮಮತಾ ಅರಸಿಕೆರೆ
ಕಳೆದ ಭಾನುವಾರ ಪ್ರೊ ರಾಜಪ್ಪ ದಳವಾಯಿ “ರಂಗಾನುಸಂಧಾನ” ಕಾರ್ಯಕ್ರಮ ಮಲ್ಲಿಕಾರ್ಜುನ ಮಹಾಮನೆಯವರ ಮಹಾಮನೆಯಲ್ಲಿ ಜರುಗಿತ್ತು. ರಾಜಪ್ಪ ದಳವಾಯಿಯವರ ರಂಗಕೃತಿಗಳ ಕುರಿತು ವೈವಿಧ್ಯ ಗೋಷ್ಠಿಗಳು ಹಾಗೂ ಸಂವಾದ.. ಮಹತ್ವದ ಗೋಷ್ಠಿಗಳ ಮಾತುಗಳನ್ನು ಸುಮ್ಮನೆ ಕುಳಿತು ಆಲಿಸುವ, ಆಸ್ವಾದಿಸುವ ಅಂತಿದ್ದ ನನ್ನನ್ನ ನಿರೂಪಣೆಗೆಂದು ವೇದಿಕೆಗೆ ಕರೆದು ಆಯೋಜಕರು ಆರಾಮಾಗಿ ಇದ್ದುಬಿಟ್ಟರು.
ಮಲ್ಲಿಕಾರ್ಜುನ ಮಹಾಮನೆಯವರು, ಟಿ ಎಸ್ ವಿವೇಕಾನಂದರು ಜಂಟಿಯಾಗಿ ಆಯೋಜಿಸಿದ್ದು ಈ ಕಾರ್ಯಕ್ರಮ. ಗುಂಡಣ್ಣ ಚಿಕ್ಕಮಗಳೂರು, ಬಸವಲಿಂಗಯ್ಯನವರು, ಶಿವಕುಮಾರ್ ನೀಹ, ಡಾ ಪ್ರದೀಪ್ ಮಾಲ್ಗುಡಿ, ಶಂಕರಯ್ಯ ಘಂಟಿ, ಸಾಸ್ವೆಹಳ್ಳಿ ಸತೀಶ್ ಅವರ ಮಾತುಗಳು ಚೆನ್ನಾಗಿದ್ದವು. ರುದ್ರೇಶ್ ಅದರಂಗಿ, ರಾಜು ಮಳವಳ್ಳಿ, ನಾ ವೆಂಕಿ ಕೋಲಾರ, ವಡ್ಡಗೆರೆ ನಾಗರಾಜಯ್ಯ, ಹಾಗೂ ಬಹಳಷ್ಟು ರಂಗಾಸಕ್ತರು ಸಾಹಿತ್ಯಾಸಕ್ತರು ಭಾಗವಹಿಸಿದ್ದ ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಿದ್ದು ವಿಶೇಷ.

ಬರಗೂರು ಸರ್ ಉದ್ಘಾಟನೆ ಮಾಡಿದ್ದು, ಹನುಮಂತಯ್ಯನವರು ಅತಿಥಿಗಳಾಗಿದ್ದರು.ಮಹಾಮನೆಯವರ ಮನೆ ಮಹಾಮನೆಯೇ ಸರಿ. ಸಿವಗಂಗ ರಂಗಮಂದಿರ ಎಂಬ ಹೆಸರಿನ ಪುಟ್ಟ ಜಾಗದಲ್ಲಿ, ಕೆಳಮಹಡಿಯಲ್ಲಿ ಊಟ ತಿಂಡಿಗೆಂದು ಸ್ಥಳ, ನೆಲಮಹಡಿಲಿ ಪುಟ್ಟ ಆಫೀಸು, ಮೊದಲನೇ ಮಹಡಿ ವಾಸಕ್ಕೆಂದು ಮನೆ, ಎರಡನೇ ಮಹಡಿ ರಂಗವೇದಿಕೆ.
ಸುಮಾರು 50 ಕ್ಕೂ ಹೆಚ್ಚು ಜನರು ಸೇರಬಹುದಾದ ಸ್ಥಳದಲ್ಲಿ ಗ್ರೀನ್ ರೂಂ, ವಾವ್ ರೂಂ, ಎಲ್ಲವೂ ಇದೆ. ಇರುವಷ್ಟು ಜಾಗವನ್ನು ಹೇಗೆ ಅಚ್ಚುಕಟ್ಟಾಗಿ ಬಳಸಬಹುದೆಂಬು ಚಿತ್ರಣವನ್ನು ಇಲ್ಲಿ ಕಾಣಬಹುದು. ಅಂದಿನ ಕಾರ್ಯಕ್ರಮ, ಆ ಮಹಾಮನೆಯನ್ನ ಕಂಡು ಸಂತೋಷವಾಯ್ತು.













0 Comments