ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ದೇಶದಲ್ಲಿ ಬಡಜನರೇ ಇಲ್ಲ…

ವಿ ಆರ್ ಕಾರ್ಪೆ೦ಟರ್ ಹ೦ಚಿಕೊ೦ಡಿದ್ದು

ವಿ ಆರ್ ಕಾರ್ಪೆ೦ಟರ್

ಮೋದಿಯನ್ನು ಪ್ರಧಾನಿ ಅಭ್ಯರ್ಥಿಯೆಂದು ಒಂದು ವರ್ಗ ಎಗ್ಗಿಲ್ಲದೇ ಬಿಂಬಿಸುತ್ತಿರುವ ಈ ಹೊತ್ತಿನಲ್ಲಿ

ಬ್ರೆಕ್ಟ್ ಬರೆದ ಕವಿತೆ (ಅನುವಾದ ಶಾ. ಬಾಲುರಾವ್)

ಮಡಿವಂತ ಪ್ರಧಾನಿಯ ಬಗ್ಗೆ… ನೆನಪಾಯ್ತು!

 

ಕೇಳಿದ್ದೇನೆ; ಆ ಪ್ರಧಾನಿ ಕುಡಿಯುವುದಿಲ್ಲವಂತೆ

ಮೀನು ಮಾಂಸ ತಿನ್ನುವುದಿಲ್ಲವಂತೆ, ಸಿಗರೇಟು ಸೇದುವುದಿಲ್ಲವಂತೆ

ಅವನಿರುವುದು ಒಂದು ಸಾಧಾರಣ ಮನೆಯಲ್ಲಂತೆ.

ಮತ್ತೆ ಇದನ್ನೂ ಕೇಳಿದ್ದೇನೆ; ಆ ದೇಶದ ಬಡಜನ

ಹೊಟ್ಟೆಗಿಲ್ಲದೆ ಪಾಡು ಪಡುತ್ತಿದ್ದಾರಂತೆ.

ಅದರ ಬದಲು ಹೀಗೆಂದು ಕೇಳುವುದು ಎಷ್ಟು ಮೇಲು

ಪ್ರಧಾನಿ ಕ್ಯಾಬಿನೆಟ್ ಮೀಟಿಂಗುಗಳಲ್ಲೂ ಕುಡಿದು ಕೂತಿರುತ್ತಾನೆ

ತಜ್ಞರಲ್ಲದ ಕೆಲಮಂದಿ ಕಾಯಿದೆ ಕಾನೂನುಗಳನ್ನು ಬದಲಾಯಿಸುತ್ತಿದ್ದಾರೆ

ಅವನು ಅವರ ಪೈಪಿಂದೇಳುವ ಹೊಗೆಯನ್ನೇ ನೋಡುತ್ತಿರುತ್ತಾನೆ

ಆ ದೇಶದಲ್ಲಿ ಬಡಜನರೇ ಇಲ್ಲ.

 

]]>

‍ಲೇಖಕರು G

14 July, 2012

2 Comments

  1. D.RAVI VARMA

    ನಿಮ್ಮ ಚಿಂತನೆ ತುಂಬಾ ಅರ್ಥಪುರ್ನವಾಗಿದೆ.ದಾಸರು ಎಂದೋ ಹೇಳಿದ ಈ ಮಾತು ನೆನಪಿಗೆ ಬರ್ತಿದೆ'” ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆಉತ್ತಮ ಪ್ರಭುತ್ವ ಎನ್ನುವುದು ಲೊಳಲೊಟ್ಟೆ “

  2. vasanth

    ನಮ್ಮ ಕನಾ೵ಟಕದ ಹೊಸ ಮುಖ್ಯಮಂತ್ರಿ ಜಗದೀಶ ಶೆಟ್ಟರ್ಅವರ ಬಗ್ಗೆ ನಮ್ಮ ಮಾಧ್ಯಮದವರು ತುಂಬಾ ಸಜ್ಜನ ಅಂತ ಬೊಗಳೆ ಬೀಡುತ್ತಿದ್ದರೆ.ಹಿಂಬಾಗಿಲಿನ ಮೂಲಕ ಮತ್ತು ಭ್ರಷ್ಟರ ಅಣತಿಯಂತೆ ಆಯ್ಕೆಯಾದವರು ಸಜ್ಜನರೇ?
    ಬ್ರೆಕ್ಟ್ ರ ಪದ್ಯ ತುಂಬಾ ಸಕಾಲಿಕ.ವಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading