ಕಥೆಯಾದ ಸಂಕ್ರಾಂತಿ
ಮಂಜುನಾಥ ದಾಸನಪುರ
ಹದಿನೈದು ವರ್ಷಗಳ ಹಿಂದಿನ ನೆನೆಪು. ಸಂಕ್ರಾಂತಿ ಹಬ್ಬದ ಆ ಮುಂಜಾವು ನನ್ನ ಊರು ಮಂಜಿನಿಂದ ಆವರಿಸಿತ್ತು. ಮಗುವು ತಾಯಿಯ ಹಾಲನ್ನು ಹೀರುವಂತೆ ಸೂರ್ಯನ ಕಿರಣಗಳು ಆ ಮಂಜನ್ನು ಹೀರುತ್ತಾ ಭೂಮಿಯ ಕಡೆಗೆ ದಾವಿಸುತ್ತಿತ್ತು. ಚಿಲಿಪಿಲಿಗಳ ನಿನಾದ, ಹಸು ಕರುಗಳ `ಅಂಬಾ’ ಎನ್ನುವ ಕೂಗು ಆ ದಿನ ನನ್ನ ಕಿವಿಗೆ ಹೊಸ ಕೂಗಾಗಿ ಕೇಳಿಸಿತು.
ಸಂಕ್ರಾಂತಿಯ ಕೆಲವು ದಿನಗಳ ಹಿಂದೆಯಷ್ಟೇ ಹೊಲಗಳಿಂದ ರಾಗಿಯನ್ನು ಕಣಗಳಿಗೆ ಸಾಗಿಸಲಾಗಿರುತ್ತಿತ್ತು. ಕೆಲವರು ರಾಗಿತೆನೆಯಿಂದ ರಾಗಿಯನ್ನು ಬೇರ್ಪಡಿಸುವ ಕೆಲಸವನ್ನು ಶುರು ಮಾಡಿದ್ದರು. ಆ ಕಣಗಳಲ್ಲಿ ನಾವು ನಾಲ್ಕೈದು ಮಂದಿ ಹುಡುಗರು ಕಲ್ಲಿನ ಗುಂಡುಗಳ ಮೇಲೆ ಕುಳಿತು, ಮುಂಜಾವಿನ ಆ ಏಳೆ ಬಿಸಿಲನ್ನು ಕಾಯುಸುತ್ತಾ, ಇಂದು ಊರಿನಲ್ಲಿ ನಡೆಯುವ ಎತ್ತುಗಳ ಮೆರವಣಿಗೆಯಲ್ಲಿ ಯಾರ ಮನೆಗಳ ಎತ್ತುಗಳು ಮಿಂಚಲಿವೆ ಎಂದು ಚಚರ್ೆಗಳನ್ನು ಶುರುವಚ್ಚಿಕೊಳ್ಳುತ್ತಿದ್ದೆವು.
ಬಂಡಪ್ಪನವರ ಮನೆ, ದೊಡ್ಡನಾರಣಪ್ಪನವರ ಮನೆ, ಸೊಣ್ಣಪ್ಪನವರ ಮನೆಯ ಎತ್ತುಗಳು ಹೆಚ್ಚು ಆಕರ್ಷಕವಾಗಿರಬಹುದೆಂದು’ ಎಲ್ಲರ ಸವರ್ಾನು ಒಮ್ಮತದ ಮೇರೆಗೆ ನಮ್ಮ ಚಚರ್ೆ ಕೊನೆಗೊಳ್ಳುತ್ತಿತ್ತು.

Courtesy: Puttiprapancha
ಹಬ್ಬದ ಹಿಂದಿನ ದಿನದ ಸಂಜೆಯೇ ಹಸುಗಳಿಗೆ, ಎತ್ತುಗಳಿಗೆ, ಕುರಿಗಳಿಗೆ, ಮೇಕೆಗಳಿಗೆ ಬೇಕಾಗುವಷ್ಟು ಆಹಾರವನ್ನು ಹೊಲಗಳಲ್ಲಿ ಕೂಯ್ದು ತಂದಿರುತ್ತಿದ್ದರು. ಸಂಕ್ರಾಂತಿಯ ಬೆಳಗ್ಗೆಯೇ ಮನೆಗಳಲ್ಲಿರುವ ಎಲ್ಲಾ ಹಸುಗಳು, ಎತ್ತುಗಳು, ಮೇಕೆಗಳು, ಕುರಿಗಳು, ಎಮ್ಮೆಗಳನ್ನು ಬಾವಿಗಳಲ್ಲಿ ತೊಳೆಯುತ್ತಿದ್ದೆವು. ಬೇರೆ ದಿನಗಳಲ್ಲಿ ಹಸುಗಳಿಗೆ ಸ್ನಾನ ಮಾಡಿಸುವಾಗ, ಅವುಗಳೇನಾದರೂ ಮೊಂಡು ಹಠ ಮಾಡಿದರೆ ಬಾಯಿಂದ ಘಜರ್ಿಸುತ್ತಾ, ಬೈಯುತ್ತಾ ಅದಕ್ಕೂ ಅವು ಜಗ್ಗದಿದ್ದರೆ, ಕೋಲಿನಿಂದ ಸರಿಯಾಗಿ ಹೊಡೆದು ತೊಳೆಯುತ್ತಿದ್ದರು. ಆದರೆ, ಸಂಕ್ರಾಂತಿ ಹಬ್ಬದ ದಿನ ಯಾವುದೇ ಪ್ರಾಣಿಗಳನ್ನು ಹೊಡೆಯುವ ಹಾಗಿರಲಿಲ್ಲ. ಏಕೆಂದರೆ ಈ ಹಬ್ಬ ಇರುವುದೇ ಹಸುಗಳಿಗಾಗಿ ಇದು ನಮ್ಮೂರಿನವರ ನಂಬಿಕೆಯಾಗಿತ್ತು.
ಒಮ್ಮೆ ನಮ್ಮ ವಾರಿಗೆಯವನೇ ಆದ ಗೆಳೆಯ ರಮೇಶ, ತನ್ನ ಮನೆಯಲ್ಲಿದ್ದ ಕೋಳಿ, ನಾಯಿ, ಬೆಕ್ಕಿಗೆ ಸ್ನಾನ ಮಾಡಿಸಿದ್ದ. ಇವನ ವರ್ತನೆಯನ್ನು ಕಂಡು ನಾವು ಆಗ ಅವನನ್ನು ವ್ಯಂಗ್ಯ ಮಾಡಿದ್ದೆವು. ಈಗಲೂ ಸಂಕ್ರಾಂತಿಯ ಹಬ್ಬದಂದು ಅವನ ವರ್ತನೆಯನ್ನು ನೆನೆದು ತಮಾಷೆ ಮಾಡುತ್ತೇವೆ ಅವನಿಗೆ.
ಆ ದಿನ ನಮ್ಮಂತ ಹುಡುಗರಿಗೆ ಚಿಕ್ಕಪುಟ್ಟ ಕೆಲಸಗಳು ಮೀಸಲಿರುತ್ತಿತ್ತು. ಬೆಳಗ್ಗೆಯೇ ಎದ್ದು ಹೊಲಗಳಿಗೆ ಹೋಗಿ ಅವರೆಕಾಯಿ ಕಿತ್ತು ತರುವುದು. ಎತ್ತುಗಳ ಕೊಂಬನ್ನು ಜೀಕುವುದಕ್ಕಾಗಿ ಗಾಜನ್ನು ಹುಡುಕಿ ತರುವುದು. ಹಸುಗಳನ್ನು ತೊಳೆಯುವಾಗ ದೊಡ್ಡವರಿಗೆ ಸಹಾಯ ಮಾಡುವುದು. ಹಾಗೂ ಹಸುಗಳನ್ನು ಶೃಂಗಾರ ಮಾಡಬೇಕಾದಾಗ ಹಸುಗಳಿಂದ ದೂರ ನಿಂತುಕೊಳ್ಳುವುದು. ಎಷ್ಟೊ ಸಲ ನಮ್ಮ ಹಳ್ಳಿಯ ಹುಡುಗರು ಕುತೂಹಲದಿಂದ ಹಸುಗಳ ಅತ್ತಿರ ಹೋಗಿ ಅವುಗಳ ಕಾಲಿನಿಂದ ಒದೆ ತಿಂದಿದ್ದಾರೆ.
ಹುಡುಗರು ಮನೆಗಳಲ್ಲಿ ಕೊಟ್ಟ ಕೆಲಸವನ್ನು ಅದಷ್ಟು ಬೇಗ ಬೇಗ ಮುಗಿಸುತ್ತಿದ್ದೆವು. ಏಕೆಂದರೆ, ಬೇರೆಯವರು ಮನೆಯ ಎತ್ತುಗಳನ್ನು ಹೇಗೆಲ್ಲಾ ಶೃಂಗರಿಸಿದ್ದಾರೆ ಎಂಬುದನ್ನು ನೋಡುವ ಕುತೂಹಲ ಊರಿನ ಎಲ್ಲಾ ಹುಡುಗರಿಗೂ ಇತ್ತು. ಅದರಲ್ಲೂ ಬಂಡಪ್ಪನವರ ಹಾಗೂ ದೊಡ್ಡನಾರಾಯಣಪ್ಪ ಮನೆಗಳ ಎತ್ತುಗಳ ಶೃಂಗಾರ ಮಾಡುವುದನ್ನು ನೋಡುವುದೇ ಒಂದು ಖುಷಿಯಾಗುತ್ತಿತ್ತು ನಮಗೆ. ಈ ಮನೆಯವರು ಪಕ್ಕದ ಊರಿನಲ್ಲಿದ್ದ ಕ್ಯಾಮರಮ್ಯಾನ್ನ್ನು ಕರೆಸುತ್ತಿದ್ದರು. ಆ ಕ್ಯಾಮರಮ್ಯಾನ್ ವಿವಿಧ ಬಂಗಿಗಳಲ್ಲಿ ಕುಳಿತು, ಎತ್ತುಗಳನ್ನು ಸೆರೆ ಹಿಡಿಯುತ್ತಿದ್ದ ರೀತಿ ನಮಗೆಲ್ಲಾ ಮೋಜಿಗ ವೆನಿಸುತ್ತಿತ್ತು.
ಮಧ್ಯಾಹ್ನ ಎರಡು ಗಂಟೆ ಮೀರುತ್ತಿದ್ದಂತೆ ಟಮಟೆಗಳ ಶಬ್ದ ಗಜರ್ಿಸುತ್ತಿತ್ತು. ಈ ಶಬ್ದ ಕೇಳುತ್ತಿದ್ದಂತೆ ಊರಿನ ಹುಡುಗರೆಲ್ಲಾ `ಹೊ..ಹೊ..ಹೊ..’ ಎಂದು ಕಿರುಚುತ್ತಾ, ಕುಣಿಯುತ್ತಾ ಟಮಟೆ ಬಾರಿಸುವವರ ಜೊತೆಗೆ ಹೆಜ್ಜೆ ಆಕುತ್ತಿದ್ದೆವು. ಟಮಟೆ ಬಾರಿಸುವ ವೃಂದದವರು ಪ್ರತಿ ಮನೆಯವರ ಸಮೀಪ ಹೋಗುತ್ತಿದ್ದಂತೆ, ಆ ಮನೆಯವರು ತಮ್ಮ ಎತ್ತುಗಳಿಗೆ ಮಂಗಳಾರತಿ ಮಾಡಿ, ದೃಷ್ಟಿ ತೆಗೆದು ಊರಿನ ಮೆರವಣಿಗೆಗೆ ಕಳಿಸುತ್ತಿದ್ದರು.
ಇಂದಿನ ಸಂಕ್ರಾಂತಿ
ಇಂದು ಆ ಘಟನೆಗಳು ಕತೆಗಳಾಗಿ ನಮ್ಮೊಡನೆ ಹರಿದಾಡುತ್ತಿವೆ. ತೀರ ಹದಿನೈದು ವರ್ಷಗಳ ಹಿಂದಿನ ಸರಪಳಿ ಕಟ್ಟಾಗಿದೆ. ಇದು ನಮಗೆ ಆನಾಥಪ್ರಜ್ಞೆ ಹಾಗೂ ನಮ್ಮೊಳಗೆ ನಾವೇ ಪರಕೀಯತೆಯನ್ನು ಅನುಭವಸಿಸುವಂತಹದ್ದಾಗಿದೆ.
ಇಂದು ನಮ್ಮೂರಿನಲ್ಲಿ ಒಂದು ಜೊತೆ ಎತ್ತುಗಳು ಇಲ್ಲ. ನಾವು ಓಡಾಡಿದ, ದಣಿವಾರಿಸಿಕೊಂಡ, ರಾಗಿ ಬೆಳೆದ, ಹಸು ಮೇಯಿಸಿದ ಈ ನೆಲ ಇಂದು ನಮ್ಮೊಂದಿಗಿಲ್ಲ.
ಹೊಲ, ಹಸು, ಇಲ್ಲದ ಮೇಲೆ ಇನ್ನೆಲ್ಲಿ ಸಂಕ್ರಾಂತಿ. ಸಾಂಕೇತಿಕವಾಗಿ ಸಂಕ್ರಾಂತಿಯನ್ನು ಆಚರಿಸುತ್ತಿದ್ದೇವೆ. ಹಬ್ಬದ ದಿನದಂದು ಮಕ್ಕಳ ಕೇಕೆ ಆಗಲಿ, ಹಸುವಿನ ಅಂಬಾ ಎನ್ನುವ ಕೂಗಾಗಲಿ, ಟಮಟೆಗಳ ಶಬ್ದಗಳು ಇಲ್ಲ.
ಇಂದು ನಮ್ಮ ಹಳ್ಳಿಯ ಪ್ರತಿ ಮನೆಗಳು ಒಂದು ಸಣ್ಣ ಸಣ್ಣ ದೇವಸ್ಥಾನಗಳಾಗಿವೆ. ತಮ್ಮ ಸ್ವಂತ ದೇವರಿಗೆ ಆಡಂಬರದಿಂದ ಆಲಂಕಾರ ಮಾಡಿ, ತಮಗೆ ಬೇಕಾದ ಅಡುಗೆಗಳನ್ನು ಮಾಡಿಕೊಂಡು ತಿಂದು ಖುಷಿ ಪಡುವುದಷ್ಟೇ ಆಗಿದೆ.






Hi Manju
how r u
Call me 97407 99829
From Harish Designer
ಮಂಜು,,,,
ಇದು ನಿನಗೆ
ಮರೆತ್ತಿದ್ದ ಹಳ್ಳಿ ಹಬ್ಬದ ನೆನಪುಗಳು:
ಬಂಡಪ್ಪ,
ಸಣ್ಣಪ್ಪ,ದೊಡ್ಡಪ್ಪನವರ ದುಡಿಯುವ ಎತ್ತುಗಳು,
ವರುಷಕೊಮ್ಮೆ ಸಿಂಗರಿಸುವ,ಅಲಂಕಾರಗಳು.
ಹಬ್ಬದಲ್ಲಿ ದೇವಸ್ಥಾನದ ಬಳಿಯ ಅಡುಗೆ,ಆಡಂಬರುಗಳು
ಸವಿದವರಿಗೆ ಗೋತ್ತು ಸಂಕ್ರಾತಿಯ ಉಮ್ಮಸ್ಸು…
Super Manju,
ಇತ್ತೇಚೆಗಿನ ಹಬ್ಬಗಳು ಕೇವಲ ಮನೆಯಲ್ಲಿ ಕುಳಿತು TV ನೋಡುವುದಕ್ಕೆ ಮುಗಿದು ಹೋಗುತ್ತಿರುವುದು ಬಹಳ ನೋವು ಕೊಡುತ್ತಿದೆ. ಹಳ್ಳಿಗಳ ಹಬ್ಬಗಳು ಅದೇಕೋ ಯಾವತ್ತಿಗೂ ಕಾಡುತ್ತವೆ.