
ಉಷಾ ಆಳಂದ್
ಚಿತ್ರ: ನಾಗಶ್ರೀ ಶೆಟ್ಟಿ
ಮಳೆಗಾಲದ ಸುರಿವ ಮಳೆಯಲ್ಲಿನ ಚಹಾ
ಚಳಿಗಾಲದ ಚುಮು ಚುಮು ನಸುಕಿನಲ್ಲಿನ ಚಹಾ
ಥರಗಟ್ಟುವ ಚಳಿಯ ರಾತ್ರಿಯಲ್ಲಿ ಕುಡಿವ ಚಹಾ

ಗ್ಯಾಲರಿಯಲ್ಲಿ ಗಂಡನೊಡನೆ ಹರಟುತ್ತ ಕುಡಿವ ಚಹಾ
ಗಾರ್ಡನ್ನಿನಲ್ಲಿ ಕುಟುಂಬದೊಂದಿಗೆ ಕುಡಿವ ಚಹಾ
ಕದ್ದು ಪ್ರಿಯಕರನೊಡನೆ ಹೊಟೆಲ್ನಲ್ಲಿ ಸವಿಯುವ ಚಹಾ
ಕಾಲೇಜು ಕ್ಯಾಂಟೀನ್ ನಲ್ಲಿ ಗೆಳೆಯ ಗೆಳತಿಯರೊಂದಿಗೆ ಕುಡಿವ ಬೈಟು ಚಹಾ
ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆಗೆ ಕುಡಿವ ಹಕ್ಕಿನ ಚಹಾ
ಗೆಳತಿಯ ಮನೆಯ ಕುರು ಕುರು ಮಾತು/ತಿಂಡಿಯೊಡನಾಡಿ ಚಹಾ
ರಾತ್ರಿ ನಿದ್ದೆಗೆಟ್ಟು ಓದುವಾಗಿನ ಚಹಾ
ಊರಿಗೆ ಹೊರಟಾಗ ರಸ್ತೆ ಬದಿ ಕಾರು ನಿಲ್ಲಿಸಿ ಕುಡಿಯುವ ಚಹಾ
ಹೊಲದಲ್ಲಿ ಒಲೆಯ ಮೇಲಿನ ಹೊಗೆ ಮಿಶ್ರಿತ ಬೆಲ್ಲದ ಚಹಾ
ದಣಿದು ಬಂದಾಗ ಅಮೃತವೆನಿಸುವ ಚಹಾ
ನೆಗಡಿಯೋಡಿಸುವ ಶುಂಠಿ ಚಹಾ
ಫೈವ್ ಸ್ಟಾರ್ ಹೊಟೆಲ್ ನಲ್ಲಿ ಟೀ ಸೆಟ್ನಲ್ಲಿ ಸರ್ವ್ ಮಾಡುವ ಚಹಾ
ಕಾಶ್ಮೀರದ ಬರ್ಫಿನಲ್ಲಿ ಕುಡಿವ ಹಾಲಿಲ್ಲದ ಕಾವಾ ಚಹಾ
ಬೇಡದ ಅತಿಥಿಗಳಿಗೆ ಕೇಳುವ ಔಪಚಾರಿಕ/ ವರ್ಚುವಲ್ ಚಹಾ
ಬೇಸರದ ಕ್ಶಣದಲ್ಲಿ ಒಬ್ಬಳೇ ಕುಳಿತು ಕುಡಿಯುವ ಚಹಾ
ಕಾರಣ ಇಲ್ಲದೇ ಹಾಗೇ ಕುಡಿಯುವ ಚಹಾ……..ಆಹಾ!… ಚಹಾ





0 Comments