ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಮಂತ್ರಣ ಪತ್ರಿಕೆ ಸುಲಿಗೆಕೋರ ಕಂಪೆನಿಯ ಜಾಹೀರಾತಿನಂತೆ..

ವೀರಣ್ಣ ಮಡಿವಾಳರ

ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಒಮ್ಮೆ ನೋಡಿ ! ಯಾವುದಕ್ಕೆ ಹೇಗೆ ಎಷ್ಟು ಪ್ರಾತಿನಿಧ್ಯ ನೀಡಲಾಗಿದೆ ಗಮನಿಸಿ.
ಭಾಗವಹಿಸುವವರೆಲ್ಲ ಜಾಹೀರಾತು ನಟರಂತೆಯೂ, ಲಾಡ್ಜ್ ಹೆಸರು, ವಿಳಾಸ, ಪೋನ್ ನಂಬರ್, ರೂಮ್ ರೆಂಟ್ ಎಲ್ಲವೂ ಸರಕುಗಳಂತೆಯೂ , ಆಮಂತ್ರಣ ಪತ್ರಿಕೆ ಯಾವುದೋ ಸುಲಿಗೆಕೋರ ಕಂಪೆನಿಯ ಜಾಹೀರಾತಿನಂತೆಯೂ…. ಕಷ್ಟವಾಗುತ್ತಿದೆ ಮುಂದೆ ಇನ್ನೂ ಹೇಳಲು! ತುಂಬಾ ದೊಡ್ಡ ಪ್ರಚಾರವೇ ಸಿಗುತ್ತಿದೆ. ಎಷ್ಟೊಂದು ಸ್ಪಂದನಗಳು! ಅವು ಪ್ರತಿಭಟನೆ ರೂಪದಲ್ಲಿದ್ದರೂ, ಲಾಭ ಕಂಪೆನಿಗೇ!
ಇನ್ನೂರೈವತ್ತೇ ಗ್ರಾಹಕರೇಕೆ? ಇದು ಟೆಂಡರ್ ಜಮಾನಾ ಅಲ್ಲವಾ? ಒಂದೇ ಪ್ರಶ್ನೆ ಕಾಡುತ್ತಿದೆ. ಜಾಹೀರಾತುದಾರರೇ ಯಾರೆಂದು ತಿಳಿಯುತ್ತಿಲ್ಲ ! ಗೊತ್ತಿದ್ದವರು , ತಿಳಿದವರು, ಅಥವಾ ಜಾಹೀರಾತುದಾರರಾದರೂ ದಯಮಾಡಿ ಮುಂದೆ ಬಂದು ಹೇಳಿ. ಯಾಕೆಂದರೆ ಇದು ಕಂಪೆನಿಯ ಉಳಿವಿನ ಪ್ರಶ್ನೆ. ಅಷ್ಟೇ ಅಲ್ಲ ಕೊಳ್ಳುವವನ ಘನತೆಯ ಪ್ರಶ್ನೆಯೂ. ನಂತರ ಯೋಚಿಸೋಣ. ಮುಂದೇನು ಅಂತಾ.
 
ಧಾರವಾಡದ ಲಾಡ್ಜ್ ಗಳಿಗಾಗಿ ಸಾಹಿತ್ಯ ಸಂಭ್ರಮವೋ ಅಥವಾ ಲಾಡ್ಜ್ ಗಳ ಸಹಯೋಗದೊಂದಿಗೆ ಕಾರ್ಯಕ್ರಮವೋ? ಅಯ್ಯೊ ಹೌದಲ್ಲ ಈ ಕಾರ್ಯಕ್ರಮ ಧಾರವಾಡದಲ್ಲೇ ಏಕೆ? ಓಹೋ ಯಾವುದಕ್ಕೆ ಎಲ್ಲಿ ಮಾರ್ಕೆಟ್ ಇದೆಯೋ ಅಲ್ಲಿಯೇ ಮಾರಾಟ ಮಾಡಬೇಕಲ್ಲವೇ? ವ್ಯವಹಾರ ತಿಳಿಯದ ದಡ್ಡರು ನಾವು

‍ಲೇಖಕರು G

18 January, 2013

1 Comment

  1. basavaraj mudanoor

    ‘ಸತ್ಯ ಯಾವುತ್ತೂ ಕಹಿ’. ದೊಡ್ಡವರ ಬಕೆಟ್ ಹಿಡಿದು ಫಾಯಿದೆ ಪಡೆಯುವ ಜನರೇ ತುಂಬಿರುವ ಜಮಾನ ಇದು. ಇಂಥ ಸಂದರ್ಭದಲ್ಲೂ ನಿಮ್ಮಂಥ ಯುವ ಲೇಖಕರು ಯಾರ ಮುಲಾಜಿಲ್ಲದೆ ಎಲ್ಲದರಲ್ಲೂ ವ್ಯಾಪಾರಿ ಬುದ್ಧಿತೋರುವವರ ಎದೆಗೊದ್ದಂತೆ ಹೇಳುತ್ತಿರುವುದು ನಿಜಕ್ಕೂ ಎದೆಗಾರಿಕೆ. ಸದಾ ನಿಮ್ಮೊಂದಿಗೆ ನಾವು -ಬಸವರಾಜ ಮುದನೂರ್, ಶಹಾಪೂರ. ಚಿತ್ರದುರ್ಗ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading