ಆನಂದ ಭೋವಿ
‘ನಕ್ಷತ್ರ’ ಆತ ತನ್ನ ಶರಟಿನ ಗುಂಡಿಯನ್ನು ನೇರವಾಗಿ ಆಕೆಯ ಮುಖದ ಕಡೆ ಹೊರಳಿಸಿದ.
‘ಹೊಳೆಯುತ್ತಿದೆ’ ಆಕೆ ತನ್ನ ಕಣ್ಣ ಕಾಡಿಗೆಯನ್ನು ತಿಡಿಕೊಂಡು ಅವನನ್ನೆ ದಿಟ್ಟಿಸಿದಳು.
‘ನಾನು ಕನಸಿನಲ್ಲೂ ಉಹಿಸಿರಲಿಲ್ಲ,ಆನಂದದಿಂದ ತುಡಿಯುತ್ತಿದ್ದೆನೆ.’
‘ಕಣ್ಣು ಮುಚ್ಚದ ರಾತ್ರಿಯ ನಿಶಬ್ಧತೆ ಮತ್ತೆ ಚುಚ್ಚುತ್ತಿದೆ’
‘ನಿನ್ನಲ್ಲಿ ಈ ನಿಟ್ಟುಸಿರೇ……?’
‘ಉಸಿರೇ..ನಿಲ್ಲದ..ಆಟ’
‘ನನಗೆ ಗೆಲುವಿನ ಹುಮ್ಮಸ್ಸು.’
‘ಗೆದ್ದವರಿಗೆ ಬೆಲೆ ಕಟ್ಟಲಾದಿತೆ…?’
‘ಈ ಆಟಕ್ಕೂ ಬೆಲೆ ಕಟ್ಟಿರುವೆಯಲ್ಲ’
‘ಗೆಲ್ಲುವವರು ನೀಡುವ ಭಕ್ಷಿಸು’
‘ಅಯೋ ಅನ್ನಿಸುತ್ತೆ.’
‘ಅನುಕಂಪ ಬೇಡ’
‘ನೀನಗೆ ಇದು ಬೇಡವಾಗಿತ್ತು’
‘ನಿನ್ನಂತವರೂ….ಬದುಕಬೇಕಲ್ಲ…’
‘ಒಂದು ರಾತ್ರಿಯ ಬದುಕು’
‘ಆ ಒಂದು ರಾತ್ರಿಯ ಹಿಂದೆ, ನೀ ಪುಟಗಟ್ಟಲೇ ಬರೆಯಬಹುದಾದ ಇತಿಹಾಸವಿದೆ.’
‘ಇತಿಹಾಸ ನೀಮರ್ಿಸಿದವಳು ನೀನು.’
‘ಯಾಕೇ.! ಗತ ವೈಭವದ ನೆನಪಲ್ಲೆ ಹೂತು ಹಾಕುವ ಹುನ್ನಾರವೇ.?’

2
‘ಹೂತು ಹೋಗಿರುವ ಕೆಲವರ ಚರೀತ್ರೆಯನ್ನು ತರೆದು ತೋರಿಸುವ ಕಾತುರ.’
‘ಚಾರೀತ್ರ್ಯ ವಧೆಯ ದುರಾಸೆ.’
‘ದುರಾಸೆಯಲ್ಲ, ಮಹತ್ವಾಕ್ಷಾಂಸೆ’
‘ಅಲ್ಲ’
‘ಮತ್ತೇನು.?’
‘ಸ್ಪಧರ್ೆ’
‘ಇರಬಹುದು’
‘ದಾಳ ಹುಡುಕುತ್ತಿರುವೆ’
‘ಸಂಶಯದಿಂದ ನೋಡಬೇಡ.’
‘ಬಲಿಪಶು ನಾನೇ…’
‘ಅಷ್ಟೊಂದು ಅನುಮಾನಿಸಬೇಡ’
‘ಐಸ್ ಹಾಕಲೆ.’
‘ಯಾಕೋ ಡ್ರಿಂಕ್ಸ ಒಗರು ಒಗರಾಗಿದೆ.’
‘ಕೈ ತಪ್ಪುವ ಭಯ.’
‘ನೆಶೆಯೇರುತ್ತಿದೆ,’
‘ಉನ್ಮಾದವಿಲ್ಲ, ಕಪಟವಿದೆ.’
‘ಜಾಣೆಯಂತೆ ಉತ್ತರಿಸಬೇಡ.’
‘ಸ್ಕ್ರೀಪ್ಟ ಇಲ್ಲದ ಉತ್ತರಗಳು ಇವು.’
‘ಅಭಿನಯ ಪ್ರವೀಣೆ’
3
‘ಹೊಟ್ಟೆಪಾಡು’
‘ಅಷ್ಟೆ ಸಾಕಾಗಿತ್ತು’
‘ಹೇಳುವದು ಬಲು ಸುಲಭ’
‘ನಿನಗೇನು ಕಡಿಮೆಯಿತ್ತು’
‘ಈಗ ಕಡಿಮೆಯಾಗಿರುವುದು ನಿನಗೆ’
‘ಪ್ರಶ್ನೆಗೆ ಪ್ರಶ್ನೆಯೇ?’
‘ಉತ್ತರವಿಲ್ಲದ ಪ್ರಶ್ನೆ ನಿನ್ನದು’
‘ಯಾಕೆ ಉತ್ತರವಿಲ್ಲ’
‘ಮತ್ತೆ ಮತ್ತೆ ಅದೇ ಕಥೆ ಬೇಕೇ ? ನಾನು ಅಸಾಹಯಕಳೆಂಬ ಅನುಕಂಪ,ಸಮಾಜದ ದೋಷಣೆ,ಬಿದ್ದು ಹೋದವರ ಗೋಸಂಬಿತನ ನಾಚಿಕೆ ಬಿಟ್ಟು ಹೇಳಬೇಕೆ?’
‘ಅದೇ ನಾನು ಕೇಳುತ್ತಿರುವದು.’
‘ಅವರಿಗಿಂತಲೂ ನೀನೆ ನಯ ವಂಚಕ.’
‘ನಿನ್ನ ವಚಿಚಿಸಿದವರ ಜನ್ಮ ಜಾಲಾಡುವ ಎದೆಗಾರಿಕೆ’
‘ಸೋಡಾ ಬೆರಸಲೆ’
‘ಸುಕ್ಕಾ ಕುಡಿದವನು ನಾನು’
‘ಉಪ್ಪಿನಕಾಯಿ ಮೋಹದಲ್ಲಿ ಬಿದ್ದಿರುವೆ.’
‘ನಾಲಿಗೆಯ ಚಪಲ’
‘ನಾಲಿಗೆಯೆ ನಿನ್ನ ಬಂಡವಾಳ’
‘ಪ್ರತಿ ಮಾತಿಗೂ ರೊಕ್ಕ ಉದಿರುತ್ತಿದೆ.’
4
‘ನಾನು ಮೈ ಮಾರಿದಂತೆ ನೀನು ಮಾತು ಮಾರುತ್ತಿರುವೆ.’
‘ವಂಡರಪುಲ್ ಹೋಲಿಕೆ.’
‘ಹೋಲಿಕೆಯಲ್ಲ, ವಾಸ್ತವ’
‘ಆ ಕಹಿ ಸತ್ಯಗಳು ಎಲ್ಲರಿಗೂ ಅನ್ವಯ’
‘ಅಂದ್ರೆ’
‘ನಿನ್ನ ಹಿಂದಿನ ದಿನಗಳ ನೆನಪಿಸಿಕೊ’
‘ನೆನೆಯುವದರಲ್ಲಿ ಏನಿದೆ ? ಪರದೆ ಮೇಲೆ ರಾಣಿ.ಹಿಂದೆ ಈ ನರಕ.’
‘ನಾನು ಹೇಳುತ್ತಿರುವದು ನಿನ್ನ ಆರಂಭದ ಸಿನಿ ಬದುಕು’
‘ನಿನ್ನದು ನಿನಗೆ ನೆನಪಿರಬೇಕಲ್ಲ.’
‘ಸೋತ ನಿನ್ನ ಕಣ್ಣುಗಳು…ಅವುಗಳನ್ನು ಪ್ರೋತ್ಸಾಹಿಸಿ ನಾನು ಬರೆದ ಪುಟತುಂಬಿದ ಲೇಖನಗಳು.’
‘ಅಬ್ಬಾ.! ಎಂತಹ ಮಾತು.. ನಿನ್ನ ಪತ್ರಿಕೆಯ ಸಕರ್ೂಲೇಶನ್ ಹೆಚ್ಚಿಸಲು ನನ್ನ ಅರೆಬೆತ್ತಲೆ ಪೋಟೊ ಬೇಕಾಗಿತ್ತು.’
‘ಕೃತಜ್ಞತೆ ಇಲ್ಲದವಳು.’
‘ಬ್ರೇಕಿಂಗ ನ್ಯೂಸ್ ಹುಡುಕುವ ಕಣ್ಣಿಗೆ ಎಲ್ಲವು ಹಳದಿಯೆ.’
‘ಕಿಕ್ಕು ವೇಸ್ಟ ಮಾಡುತ್ತಿದ್ದಿಯಾ..’
‘ಆಸೆಗೂ ಮಿತಿ ಇರಲಿ’
‘ಇದು ಆಸೆ ಅಲ್ಲ, ಆಕ್ಷಾಂಸೆ.’
‘ಯಾವ ಸುಖಕ್ಕೆ.’
5
‘ಸಾಮಾನ್ಯ ಮನುಷ್ಯನಾಗುತ್ತಿದ್ದೆನೆ.’
‘ಅದೆ ಮಧುರ’
‘ನಿನ್ನ ಪರಿಮಳದ ಘಾಟು ಆವರಿಸುತ್ತಿದೆ’
‘ಬೀಳುವಾಗ ಎಚ್ಚರವಿರಲಿ’
‘ಮಾದಕ ಮೌನ’
‘ಒರಟು ಒರಟಾದ ನಿನ್ನ ಕೂದಲುಗಳು ಚುಚ್ಚುತ್ತಿವೆ.’
‘ನಿನ್ನ ಉಸಿರಲ್ಲಿ ಸೆಳೆತವಿದೆ’
‘ಎಲ್ಲರದೂ ಇದೆ ಮಾತು’
‘ಯಾರು ಯಾರು ಹೀಗೆ ಅಂದವರು?’
‘ಸರಸದಲ್ಲೂ ನಿನ್ನ ಸಂದರ್ಶನ ಅಭಾದಿತ’
‘ವೃತಿಗುಣ ,ಎಲ್ಲಿ ಹೋದರು ಹುಡುಕುವ ಹಂಬಲ’
‘ಹುಡಗಾಟವಲ್ಲ, ಕೆಬರಾಟ.ನಿನ್ನ ಕೈ ಎನೋ ಹುಡುಕುತಿದೆ’
ನಿನ್ನ ತುಟಿಯ ಹೀರುವ ಆಸೆ’
‘ನನ್ನ ತುಟಿಯಲ್ಲಿ ಉದರುವ ಹೆಸರನ್ನು ಆರಿಸಲು ತಡಕಾಡುತ್ತಿರುವೆ’
‘ಟಿ.ಆರ್.ಪಿ ಯೆಂಬ ಮಾಯೆಯ ಬಲೆ’
‘ಹ್ಹ.ಹ್ಹ…..ಎಂತಹ ಮೋಜಿನಾಟ.’
‘ಹೇಳಿಬಿಡು. ಪ್ಲೀಜ್. . .’
‘ಯಾರ ಹೆಸರ ಹೇಳಲಿ.. ಹೀರೊ, ವಿಲನ್ ,ಡೈರಕ್ಟರ್, ಪ್ರೊಡ್ಯುಸರ್.’
‘ಅವರ್ಯಾರು ಬೇಡ’
6
‘ಮತ್ಯಾರು,’
‘ಪೊಲಿಟಿಸಿಯನ್’
‘ಯಾಕೋ..!’
‘ಬ್ರೇಕಿಂಗ್ ನ್ಯೂಸ್ ಖಡಕ್ ಆಗಿರುತ್ತೆ’
‘ಕಾಪರ್ುರೇಟರಾ,ಎಂ.ಎಲ್.ಎ,ಮಿನಿಷ್ಟರ್ ಯಾರು ಬೇಕು’
‘ಚಾಲ್ತಿಯಲ್ಲೀರೊ ಯಾವ ಕುಳ ಆದ್ರು ನಡೆಯುತ್ತೆ’
‘ನನ್ನ ಲಿಸ್ಟಲ್ಲಿ ನೀನು ಸೇರಿರುವೆ’
‘ಪ್ರಖ್ಯಾತ ನಟಿಯ ಖಾಸಗಿ ಬದುಕು’
‘ಹೆಸರಾಂತ ಪತ್ರಕರ್ತನ ಸ್ಪ್ರಿಂಗ ಆಪರೇಶನ್’
‘ಬೆತ್ತಲಾದ ಮೇಲೆ ಎಲ್ಲರೂ ಒಂದೆ’
‘ಕತ್ತಲಲ್ಲಿ ನಾವಿಬ್ಬರೂ ಬೆತ್ತಲಾದರೂ, ಬೆಳಕಿನಡೆಗೆ ನನ್ನನ್ನು ಮಾತ್ರ ದೂಡುತ್ತಿರುವೆ’
‘ನಿನ್ನ ಆಕ್ರೋಶ ಅರ್ಥವಾಗುತ್ತೆ.ಓಡುತ್ತಿರುವ ರೇಸ್ಲ್ಲಿ ನಾನು ನೆಪ ಮಾತ್ರ.’
‘ಪ್ರತಿ ಓಟಕ್ಕೂ ಒಂದು ಅಂತ್ಯವಿದೆ.ಪ್ರತಿ ಗೆಲವಿಗೂ ಕೊನೆಯಿದೆ.’
‘ಈಗ ನಾನು ಸೋಲುತ್ತಿದ್ದೆನೆ ..ಪ್ಲೀಜ್.’
‘ನಿರಮ್ಮಳ ರಾತ್ರಿಯ ಚುಕ್ಕಿ ಬೆಳಗುತ್ತಿದೆ,ಮುಳಗುವ ಭಯವಿಲ್ಲದೆ’
‘ನಿನ್ನ ಸೆಳೆತದಲ್ಲಿ ಬಂಧಿಯಾಗಿದ್ದೆನೆ.ಸಡಿಲಿಸಬೇಡ,ಬಿಗಿಯಾಗಿಸು.ಬಿಸಿಯಾಗುತ್ತಿದ್ದೆನೆ’
‘ಬಿಳಿಕೂದಲು ನೆರತಿದ್ದರು ಚಪಲ ಸತ್ತಿಲ್ಲ,ಸುಮ್ಮನೆ ಚಿತ್ಕರಿಸುತ್ತಿರುವೆ,’
‘ವಿಸ್ಕಿಯ ರುಚಿಗಿಂತಲೂ, ನಿನ್ನ ತುಟಿಯ ಬಣ್ಣದ ರುಚಿ ಸಿಹಿಯಾಗಿದೆ’
‘ಬಿದ್ದು ಹೋಗುವ ಹತ್ತು ನಿಮಿಷಕ್ಕೆ ಎಷ್ಟೊಂದು ಶೃಂಗಾರ..?
7
‘ನಿನ್ನ ಕಿರು ನಗೆಯ ಸುರಳಿಯಲ್ಲಿ ಸುತ್ತಿಕೊಂಡ ಉದ್ವೇಗ’
‘ನೀನು ಹಸಿದಿದ್ದು ಸುದ್ಧಿಗಾಗಿ,… ಈಗ ಹಸಿದ ಕಣ್ಣು .ನಿನ್ನನ್ನು ಕಿವಡನಾಗಿಸಿತು’
‘ಗೆಲ್ಲುವ ಆಸೆ ಕಮರಿದೆ,ನಿನ್ನ ಬಾಹುಗಳಲ್ಲಿ ಸೆಳೆದಿಕೊ’
‘ಸಹಜ ತಪ್ಪುಗಳಲ್ಲಿ ಉದರುತ್ತಿರುವೆ’
‘ಮೌನವಾಗು …..! ಮಾತನಾಡುಬೇಡ…’
‘ಹಾಂ…ಸಾವಕಾಶ …ಹೋ!…ಸಾವಕಾಶ.’
‘ಉಶ್…ಉಶ್… ಚಳಿಯಲ್ಲಿ ಬೆಂಕಿಯಂತೆ ಉರಿಯುತ್ತಿರುವೆ.’
‘ಈ ಒಂದು ಕ್ಷಣಕ್ಕೆ ……ನಿನ್ನ ಮೈ ತುಂಬ ಬೇವರು.’
‘ಸಾಕು . . .’
‘ಆಟ ಮುಗಿಸಿದೆ’
‘ವಿಷಾದವಿದೆ’






ಚೆನ್ನಾಗಿದೆ …ಸುರುಳಿ ಬಿಚ್ಚುತ್ತಾ ಹೋದಂತೆ ಕುತೂಹಲ ..ಕಾಡುವ ಪ್ರಶ್ನೆ ..ವಾಸ್ತವಕ್ಕೆ ಹಿಡಿದ ಕನ್ನಡಿ
Vah! wonderful. uttama kathe, nirupane, shaili, namgu kathe kattuva riti kalisidakke thanks.
superubh……………..