ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆನಂದ ಆನಂದ ಆನಂದವೋ….

dsc_2843_t.jpgವಾರೆ ವಾಹ್! ಎನಿಸದಿದ್ದರೆ ಕೇಳಿ. ಹೀಗೆ ಸುಮ್ಮನೆ ಇಂಟರ್ನೆಟ್ ಎಂಬ ಸಮುದ್ರದ ಮುಂದೆ ನಾವು ಗಾಳ ಹಾಕಿ ಕುಳಿತಿದ್ದಾಗ ಈ ಬ್ಯೂಟಿಫುಲ್ ಬ್ಲಾಗ್ ಸಿಕ್ಕಿಬಿಡಬೇಕೇ?

soudaminiandanand.jpg

ಈಗ ಅಮೆರಿಕಾದಲ್ಲಿ ನೆಲಸಿರುವ ಆನಂದ್ ಹಾಗೂ ಸೌದಾಮಿನಿ ಹೆಗ್ಡೆ ಅವರ ಕ್ಯಾಮೆರಾ ನಿಜಕ್ಕೂ ನಡೆಸಿರುವುದು ಕುಸುರಿ ಕೆಲಸ. ೨೦೦೦ದಲ್ಲಿ ಈ ಇಬ್ಬರೂ ಮದುವೆಯಾದಾಗ ಯೋಚಿಸಿದ್ದು ಇಬ್ಬರಿಗೂ ಸಮಾನ ಆಸಕ್ತಿ ಯಾವುದರಲ್ಲಿದೆ ಎಂದು. ಸುತ್ತಾಟ, ಕಲೆ ಎಂಬುದು ಗೊತ್ತಾಯ್ತ. ಈ ಎರಡನ್ನೂ ಸಮಾನವಾಗಿ ಬೆಸೆಯಲು ಇವರು ಕೈಗೆತ್ತಿಕೊಂಡದ್ದು ಕ್ಯಾಮೆರಾವನ್ನು.

ಯಾರೋ ಉಚಿತ ಸಲಹೆ ಕೊಟ್ಟರಂತೆ. ಫೋಟೋಗ್ರಫಿ ಕಲೀಬೇಕಾದರೆ ಸಾಕಷ್ಟು ಫಿಲ್ಮ್ ಖರ್ಚು ಮಾಡಿ ಅಂತ. ಪಾಪ, ಇವರು ಬಂಡಿಗಟ್ಟಲೆ ಫಿಲ್ಮ್ ಖರ್ಚು ಮಾಡಿದ ಮೇಲೆ ಇವರು ಆರಂಭಿಸಿದಾಗ ಎಲ್ಲಿ ನಿಂತಿದ್ದರೋ ಅಲ್ಲೇ ನಿಂತಿದ್ದರಂತೆ. ಖರ್ಚಾಗಿದ್ದು ಖರ್ಚು ಮಾತ್ರ.

ದಿಢೀರ್ ಕೈಗೆ ಸಿಕ್ಕ ಜಾನ್ ಷಾ ಪುಸ್ತಕ ಇವರ ನೋಟವನ್ನೇ ಬದಲಾಯಿಸಿಬಿಟ್ಟಿತು. ನಂತರ ಇವರ ಕ್ಯಾಮರಾದಿಂದ ಹೊರಬಂದದ್ದು ಮಾತ್ರ ಕಾವ್ಯ. ದೃಶ್ಯ ಕಾವ್ಯ.

ಸ್ಯಾಂಪಲ್ ಇಲ್ಲಿದೆ. ಇನ್ನೂ ಬೇಕು ಅನಿಸಿದರೆ ಹೆಗ್ಡೆ ಫೋಟೋಸ್ ಗೆ ಭೇಟಿ ಕೊಡಿ. ಚೆನ್ನಾಗಿದೆ ಎಂದರೆ ಅವರ ಮೈಲ್ ವಿಳಾಸ: anand_hegde@hotmail.com

delicate_s.jpg      gilirekke4_s.jpg       roda3tif_s.jpg

strivingforidentity_s.jpg      dsc_2843_t.jpg          237-flr-mac-dh_t.jpg

‍ಲೇಖಕರು avadhi

16 January, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading