ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆದರೆ ನಾವು ದಾರಿ ತಪ್ಪಿದ್ದೇವೆ…

‘ನಮ್ಮ ಜೀವನ ಸ್ವಾತಂತ್ರ್ಯ, ಸುಖ, ಸಂತೋಷದಿಂದ ಇರಬಹುದು, ಆದರೆ ನಾವು ದಾರಿ ತಪ್ಪಿದ್ದೇವೆ. ದುರಾಶೆ ಮಾನವಾತ್ಮಗಳನ್ನು ವಿಷಪೂರಿತ ಮಾಡಿದೆ, ದ್ವೇಷದ ಗೋಡೆಗಳನ್ನು ನಿರ್ಮಿಸಿದೆ. ದುಷ್ಟತನ ನಮ್ಮೊಳಗೆ ನೆಲೆ ಪಡೆದು ರಕ್ತಪಾತಕ್ಕೆ ವಿಷಾದಕ್ಕೆ ದಾರಿ ಮಾಡಿಕೊಟ್ಟಿದೆ. ನಾವು ವೇಗವನ್ನು ಹೆಚ್ಚಿಸಿಕೊಂಡಿದ್ದೇವೆ. ನಮ್ಮನ್ನು ನಾವೇ ಬಂಧಿಸಿಕೊಂಡಿದ್ದೇವೆ… ‘ ಇದು `ದಿ ಗ್ರೇಟ್ ಡಿಕ್ಟೇಟರ್’ ಸಿನೆಮಾದಲ್ಲಿನ ಸಾಲುಗಳು.
ಇದು `ದಿ ಗ್ರೇಟ್ ಡಿಕ್ಟೇಟರ್’ಗಳ ಕಾಲ. ಹಾಗಾಗಿ ಕುಂ ವೀರಭದ್ರಪ್ಪ ಅವರ ‘ಚಾಪ್ಲಿನ್’ ಕೃತಿಯ `ದಿ ಗ್ರೇಟ್ ಡಿಕ್ಟೇಟರ್’ ಅದ್ಯಾಯವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.  ಡಿ ವಿ ಪ್ರಹ್ಲಾದ್ ಸಂಪಾದಕತ್ವದ ‘ಸಂಚಯದಿಂದ ಈ ಲೇಖನ ಆರಿಸಿಕೊಳ್ಳಲಾಗಿದೆ. ಕಾಮಧೇನು ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದೆ.
chaplin-dictator
ಎರಡನೇ ಮಹಾಯುದ್ಧದ ಕಾರ್ಮೋಡಗಳು  ಪೂರ್ವ ದಿಗಂತದಿಂದ ಒಂದೊಂದಾಗಿ ಮೇಲೆದ್ದು ನಭೋ ಮಂಡಲವನ್ನು ವ್ಯಾಪಿಸತೊಡಗಿದ್ದವು. ಜಗತ್ತು ಪ್ರಥಮ ಮಹಾಯುದ್ಧದಿಂದ ಪಾಠ ಕಲಿತಿರಲಿಲ್ಲ.
`ಲೀಗ್ ಆಫ್ ನೇಷನ್ಸ್’ ಎಂಬುದೊಂದು 1920ರಲ್ಲೇ ಏರ್ಪಟ್ಟಿತಲ್ಲವೇ? ಅದು ಬಲಾಢ್ಯ ರಾಷ್ಟ್ರಗಳ ಕೈಗೊಂಬೆಯಾಗಿ ಯುರೋಪಿನ ಕಿರಿಯ ರಾಷ್ಟ್ರಗಳ ಆಶೋತ್ತರಗಳಿಗೆ ತಣ್ಣೀರೆರಚಿತ್ತು. ಇದರಿಂದ ಸ್ವಾಭಿಮಾನಧನರಾದ ಜರ್ಮನ್ನರು ಕನಲಿದರು… ಕನಲಿದ ಜರ್ಮನ್ನರನ್ನು `ನಾಝಿಜಂ’  ಸಿದ್ಧಾಂತದ ತಿಪ್ಪೆಯ ಮೇಲೆ ಸಂಘಟಿಸಲು ಹಿಟ್ಲರ್ ಗೆ   ಕಷ್ಟವಾಗಲಿಲ್ಲ. ಪ್ರಚಂಡ ವಾಗ್ಮಿಯಾಗಿದ್ದ ಅವನು ಪ್ರತಿಯೋರ್ವ ಜರ್ಮನ್ನರ ಎದೆಯಲ್ಲಿ ಆಕ್ರಮಣಶೀಲತೆಯ, ಮಹತ್ವಾಕಾಂಕ್ಷೆಯ ವಿಷಬೀಜವನ್ನು ಬಿತ್ತುವಲ್ಲಿ ಯಶಸ್ವಿಯಾದನು. ಇಟಲಿಯ ಮುಸುಲೋನಿಯ ಹೆಗಲ ಮೇಲೆಕೈಹಾಕಿ ವರ್ಸೆಲ್ಸ್  ಒಪ್ಪಂದವನ್ನು ತುಚ್ಛೀಕರಿಸಿದನು. ತನ್ನ ಅಖಂಡ ಪರಿಕಲ್ಪನೆಯ ಜರ್ಮನ್ನಿನಲ್ಲಿದ್ದ ಯಹೂದಿಗಳಿಗೆ ಜಾಗ ಖಾಲಿ ಮಾಡುವಂತೆ ಹೇಳಿದನಲ್ಲದೆ ಅವರಿಗೆ ಬಗೆಬಗೆ ಹಿಂಸೆ ಕೊಡಲಾರಂಭಿಸಿದನು.
ಆಲ್ಬರ್ಟ್ ಐನಸ್ಟೈನ್ ರಂತಹ  ವಿಜ್ಞಾನಿಗಳು, ಥಾಮಸ್ ಮಾನ್ರಂಥ ಲೇಖಕರು ಅಮೆರಿಕಕ್ಕೆ ತಾತ್ಕಾಲಿಕವಾಗಿ ವಲಸೆ ಬಂದುಬಿಟ್ಟರು. ದ್ವಿತೀಯ ಜಾಗತಿಕ ಯುದ್ಧ ಅಥವಾ ಹಿಟ್ಲರನ ಯುದ್ಧದ ಘೋರ ಪರಿಣಾಮದಿಂದಾಗಿ ಜಾಗತಿಕ ಚಿತ್ರೋದ್ಯಮವೂ ತತ್ತರಿಸದೆ ಇರಲಿಲ್ಲ. ಯುರೋಪಿನ ಅನೇಕ ಚಿತ್ರ ತಯಾರಿಕಾ ಕಂಪನಿಗಳು ಲಾಕಪ್ ಘೋಷಿಸಿಬಿಟ್ಟವು. ಏನಿಲ್ಲಾಂದರೂ ಇನ್ನೂರು ಮುನ್ನೂರು ಚಿತ್ರಗಳನ್ನು ತಯಾರಿಸುತ್ತಿದ್ದ ಇಂಗ್ಲೆಂಡ್ 1939ರಲ್ಲಿ ಬಿಡುಗಡೆ ಮಾಡಿದ್ದು ಕೇವಲ ನಲವತ್ತು ಚಿತ್ರಗಳನ್ನು ಮಾತ್ರ. ಜರ್ಮನಿಯಲ್ಲಿ ಚಿತ್ರರಂಗವನ್ನು ನಾಝಿ ಪ್ರಚಾರ ಕಾರ್ಯಕ್ಕಾಗಿ ಬಳಸಿಕೊಳ್ಳಲಾಯಿತು.ದೂರದ ಹಾಲಿವುಡ್ ಮೇಲೂ ಯುದ್ಧದ ಪರಿಣಾಮ ಬೀರದೆ ಇರಲಿಲ್ಲ. ಹಾಲಿವುಡ್ನಲ್ಲಿ ತಯಾರಾದ ಚಿತ್ರಗಳು ಫೆಸಿಫಿಕ್ ದಾಟಲೇ ಇಲ್ಲ.
ಅದುವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನ ಯುದ್ಧವನ್ನು ಗಂಟಲಲ್ಲಿಟ್ಟುಕೊಂಡು ನುಂಗುವ, ಉಗುಳುವ ಬಗ್ಗೆ ಯೋಚಿಸುತ್ತಿತ್ತು. ಆದರೆ ರೂಸ್ವೆಲ್ಟ್ ಒಳಗೊಳಗೇ ಹಿಟ್ಲರ್ ಮೇಲೆ ಹಲ್ಲು ಕಡಿಯುತ್ತಿದ್ದ. ಅಮೆರಿಕದಲ್ಲಿ ಎಷ್ಟೋ ಸಂಸ್ಥೆಗಳು ಜರ್ಮನ್ನರ ಅಧೀನದಲ್ಲಿದ್ದುದರಿಂದ ಬಹಿರಂಗವಾಗಿ ಏನೂ ಹೇಳಲು ಸಾಧ್ಯವಿರಲಿಲ್ಲ. ಆದರೆ ಒಬ್ಬರು ಇನ್ನೊಬ್ಬರನ್ನು ಗುಮಾನಿಯಿಂದ ನೋಡುತ್ತಿದ್ದರು. ಮಾಡರ್ನ್ ಟೈಂಸ್  ಬಿಡುಗಡೆಯಾದ ಮೇಲೆ ಚಾಪ್ಲಿನ್ನನ್ನು ಬಂಡವಾಳಶಾಹಿಗಳ ಲಿಸ್ಟ್ ನಿಂದ ತೆಗೆದುಬಿಟ್ಟಿದ್ದರು; ಕಮ್ಯುನಿಸ್ಟ್ ಸಿದ್ಧಾಂತದ ಕಡೆ ವಾರೆಗಣ್ಣಿನಿಂದ ನೋಡುತ್ತಿರುವವನು ಎಂದು ಒಳಗೊಳಗೇ ಅನುಮಾನಿಸಲಾರಂಭಿಸಿದ್ದರು. ಆದರೆ ಚಾಪ್ಲಿನ್ ಯಾವುದೇ ಸಿದ್ಧಾಂತದ ಗೂಟಕ್ಕೆ ಕೊರಳೊಡ್ಡಿರಲಿಲ್ಲ. ಸಾಮಾನ್ಯ ಮನುಷ್ಯನ ಪರ ಯೋಚಿಸಬಲ್ಲವನಾಗಿದ್ದನಷ್ಟೆ.
ತನ್ನ ಪ್ರೀತಿಯ ಜಗತ್ತನ್ನು ಇನ್ನೊಂದು ಮಹಾಯುದ್ಧದ ಹೆಬ್ಬಾಯಿಗೆ ನೂಕಿದ್ದ ಹಿಟ್ಲರ್ನನ್ನು ಮೊದಲಿನಿಂದಲೂ ಅನುಮಾನದಿಂದ ನೋಡುತ್ತಿದ್ದ. ಒಬ್ಬ ಸೃಜನಶೀಲ ವ್ಯಕ್ತಿಯಾಗಿ ಅವನನ್ನು ಆಸಕ್ತಿ ಮತ್ತು ಕುತೂಹಲದಿಂದ ಗಮನಿಸುತ್ತಲೇ ಇದ್ದ. ಅವನು ತನ್ನ ಚಾರ್ಲಿ ಯ ಟಿಪಿಕಲ್ ಮೀಸೆಯನ್ನು ಕದ್ದಿದ್ದಾನೆ ಎಂದುಕೊಳ್ಳದೆ ಇರಲಿಲ್ಲ. ಚಾರ್ಲಿ ಮತ್ತು ಹಿಟ್ಲರ್ ಚಿಕ್ಕ ದೊಡ್ಡಪ್ಪನ ಮಕ್ಕಳಂತೆ ಗೋಚರಿಸುತ್ತಿದ್ದುದೇ ಒಂದು ವಿಶೇಷವಾಗಿತ್ತು.
ಜರ್ಮನ್ ವಿದ್ಯಮಾನಗಳೊಂದಿಗೆ ನಿರಂತರ ಸಂಬಂಧವಿರಿಸಿಕೊಂಡಿದ್ದ ಪತ್ರಕರ್ತ ಹಿರಸ್ಟ್ ಖುದ್ದು ಜರ್ಮನಿಗೆ ಹೋಗಿ ಹಿಟ್ಲರ್ನ ಜೊತೆ ತಾಸುಗಟ್ಟಲೆ ಮಾತಾಡಿ ಬಂದಿದ್ದ. ಲೇಖನಗಳನ್ನು ಬರೆದ. ತಾನು ಹಿಟ್ಲರ್ ಕುರಿತು ಸಿನಿಮಾ ತಯಾರಿಸಬೇಕೆಂದು ದೂರದೂರದಿಂದ ಅಭಿಮಾನಿಗಳು ಚಾಪ್ಲಿನ್ಗೆ ಆ ಸವರ್ಾಧಿಕಾರಿಯ ಭಾವಚಿತ್ರಗಳನ್ನು ಕಳಿಸುತ್ತಿದ್ದರೂ, ಹಿಟ್ಲರ್ನ ರೂಕ್ಷ ವ್ಯಕ್ತಿತ್ವ ಚಾಪ್ಲಿನ್ ಮೇಲೆ ಯಾವ ಪರಿಣಾಮವನ್ನು ಬೀರಲಿಲ್ಲ, ಆದರೆ ಚಾಪ್ಲಿನ್ ಮಾತ್ರ ಹಿಟ್ಲರ್ನ ವಿಲಕ್ಷಣ ವ್ಯಕ್ತಿತ್ವದ ಬಗ್ಗೆ ತಲೆ ಕೆಡಿಸಿಕೊಂಡಿದ್ದ.
ತನ್ನ ಮತ್ತು ಪೌಲೆಟ್ಳ ಪ್ರೇಮ ಪ್ರಕರಣದ ಬಗ್ಗೆ ಅವನು ಕಥೆ ಹೆಣೆಯುವ ಪ್ರಯತ್ನದಲ್ಲಿ ತೊಡಗಿದ್ದ. ಇಂಥ ಪ್ರೇಮಕಥೆ ಕುರಿತು ಅನೇಕ ಜನ ಲೇಖಕರ ಬಳಿ ಚಚರ್ಿಸುತ್ತಿದ್ದ.
ಸರ್ ಅಲೆಗ್ಜಾಂಡರ್ ಕೊಡರ್ಾ ಬಳಿ ತಾನು ನಿಮರ್ಿಸಬೇಕೆಂದಿರುವ ಪ್ರೇಮಚಿತ್ರದ ಕಥಾವಸ್ತು ಕುರಿತು ಪ್ರಸ್ತಾಪಿಸಿದ. ದ್ವಿತೀಯ ಮಹಾಯುದ್ಧದಿಂದಾಗಿ ಇಡೀ ಜಗತ್ತು ಹಾಹಾಕಾರದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಚಾಪ್ಲಿನ್ನಂಥ ಶಕ್ತಿಶಾಲಿ ನಿದರ್ೆಶಕ ಪ್ರೇಮ ಕುರಿತು ಯೋಚಿಸುತ್ತಿರುವುದು ಕಂಡು ಕೊಡರ್ಾ ನಕ್ಕುಬಿಟ್ಟ. ಚಾಲರ್ಿ ಮತ್ತು ಹಿಟ್ಲರ್ ನಡುವೆ ಸಾಮ್ಯ ಇರುವುದರ ಕಡೆ ಚಾಪ್ಲಿನ್ನ ಗಮನವನ್ನು ಕೊಡರ್ಾ ಸೆಳೆದ. ಒಂದೇ ವ್ಯಕ್ತಿತ್ವವನ್ನು ಹೋಲುವ ಎರಡು ಪಾತ್ರಗಳ ಮೂಲಕ ಸವರ್ಾಧಿಕಾರಿ ದೌರ್ಜನ್ಯವನ್ನು ಜಾಗತಿಕವಾಗಿ ಅನಾವರಣಗೊಳಿಸುವುದರಿಂದ ಚಿತ್ರ ಖಂಡಿತ ಜನಪ್ರಿಯವಾಗುತ್ತದೆ ಎಂದು ಕೊಡರ್ಾ ಅಭಿಪ್ರಾಯಪಟ್ಟ. ಟ್ರಾಂಪ್ ಹಾಸ್ಯ, ವಿಡಂಬನೆ ಮೂಲಕ ಹಿಟ್ಲರ್ನನ್ನು ಅನಾವರಣಗೊಳಿಸುವುದೊಂದು ಒಳ್ಳೆಯ ಆಲೋಚನೆ ಎಂದುಕೊಂಡ ಚಾಪ್ಲಿನ್.
ಅವನು ಕೂಡಲೆ ಹಾಲಿವುಡ್ ತಲುಪಿ ಹಿಟ್ಲರ್ ಕುರಿತ ಚಿತ್ರದ ಸ್ಕೆಚ್ ತಯಾರಿಸತೊಡಗಿದ. ಚಿತ್ರದ ಆರಂಭಿಕ ದೃಶ್ಯವನ್ನು ಪ್ರಥಮ ಮಹಾಯುದ್ಧದ ತುಣುಕುಗಳೊಂದಿಗೆ ಆರಂಭಿಸಿದರೆ ಹೇಗೆ ಇರುತ್ತದೆ ಎಂದು ಯೋಚಿಸಿದ. ತನ್ನ ಈ ಚಿತ್ರದಲ್ಲಿ ಪೌಲೆಟ್ ಇರಲೇಬೇಕು ಎಂದುಕೊಂಡ; ಆಕೆ ಕಳೆದ ಎರಡು ವರ್ಷಗಳಿಂದ ಪ್ಯಾರಾಮೌಂಟ್ ಕಂಪನಿಯ ಚಿತ್ರಗಳೊಂದಿಗೆ ಬಿಜಿಯಾಗಿಬಿಟ್ಟಿರುವಳು ಬೇರೆ. ವಿವಾಹಪೂರ್ವದಲ್ಲಿ ತಮ್ಮ ನಡುವೆ ಇದ್ದಂಥ ಆ ಮಧುರ ಬಾಂಧವ್ಯ ವಿವಾಹ ನಂತರದ ದಿನಗಳಲ್ಲಿ ಸಂಪೂರ್ಣ ಸ್ಥಗಿತಗೊಂಡು ಬಿಟ್ಟಿರುವುದು; ಆದ್ದರಿಂದ ತಾನು ಆಕೆಯನ್ನು ಮುಂದಿನ ಚಿತ್ರದುದ್ದಕ್ಕೂ ಸಂಪೂರ್ಣ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದ.
ಹೀಗೆ ಚಾಪ್ಲಿನ್ ಸ್ಟುಡಿಯೋದಲ್ಲಿ ಕೂತು ಯೋಚಿಸುತ್ತಿರುವಾದ ಪೌಲೆಟ್ ಇದ್ದಕ್ಕಿದ್ದಂತೆ ಒಬ್ಬ ತರುಣನೊಂದಿಗೆ ಡ್ರೆಸ್ಸಿಂಗ್ ರೂಂ ಪ್ರವೇಶಿಸಿದಳು. ಅವರಿಬ್ಬರ ಅನಿರೀಕ್ಷಿತ ಪ್ರವೇಶದಿಂದ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದ ಚಾಪ್ಲಿನ್ಗೆ ಬೇಸರವಾಯಿತು. ಆ ತರುಣನನ್ನು ತನ್ನ ಏಜೆಂಟೆಂದು ಚಾಪ್ಲಿನ್ಗೆ ಪರಿಚಯಿಸಿದಳು. ಅವನು `ಮಾಡನರ್್ ಟೈಮ್ಸ್’ ಚಿತ್ರದಿಂದ ಪೌಲೆಟ್ಗೆ ಸಂದಾಯವಾಗಬೇಕಿರುವ ಸಾಪ್ತಾಹಿಕ ಗೌರವಧನ ಎರಡು ಸಾವಿರೈದುನೂರು ಡಾಲರನ್ನು ಕೂಡಲೆ ಚುಕ್ತಾ ಮಾಡಬೇಕೆಂದು ತರಲೆ ಶುರುಮಾಡಿದ. ಒಂದು ಕ್ಷಣ ಚಾಪ್ಲಿನ್ಗೆ ಅವನ ವಾದದ ಉದ್ದೇಶವೇ ಅರ್ಥವಾಗಲಿಲ್ಲ. ತನ್ನ ಇಡೀ ಚರಾಸ್ತಿ ಸ್ಥಿರಾಸ್ತಿಗೆ ಒಡತಿಯಾಗಿರುವ ಅಧರ್ಾಂಗಿನಿ, ಮೂರನೇ ವ್ಯಕ್ತಿ ಮೂಲಕ ಜುಜುಬಿ ಗೌರವಧನ ಕುರಿತು ಪ್ರಸ್ತಾಪಿಸುವುದೆಂದರೇನು? ಚಾಪ್ಲಿನ್ಗೆ ನೋವು ಮತ್ತು ಬೇಸರವಾಯಿತು. ಅವನು ಗದರಿಸಿ ಅವರಿಬ್ಬರನ್ನು ಹೊರಗೆ ಕಳಿಸಿ ತಲೆ ಮೇಲೆ ಕೈಹೊತ್ತುಕೊಂಡು ಕೂತ.
ಚಾಪ್ಲಿನ್ ಹಲವು ದಿನಗಳ ಕಾಲ ಪಟ್ಟಾಗಿ ಕೂತು ಚಿತ್ರಕಥೆಯನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ. ಆದರೆ ಅಷ್ಟರಲ್ಲಿ ಯುನೈಟೆಡ್ ಆಟರ್ಿಸ್ಟ್ ಆಫೀಸಿನಿಂದ ಕಹಿ ಸುದ್ದಿ ಬಂತು. ಹಿಟ್ಲರ್ ಬಗ್ಗೆ ಚಾಪ್ಲಿನ್ ತಯಾರಿಸಬೇಕೆಂದಿರುವ ಚಿತ್ರ ಸೆನ್ಸಾರ್ ಸಮಸ್ಯೆಯಿಂದಾಗಿ ಬಿಡುಗಡೆಯಾಗದೆ ಹೋಗಬಹುದೆಂಬ ವಾತರ್ೆಯನ್ನು ಹೇ ಆಫೀಸ್ ಮೂಲಗಳು ಯುಎ ಆಫೀಸಿಗೆ ಕಳಿಸಿದ್ದವು.
ಅಂಥ ಚಿತ್ರ ಇಂಗ್ಲೆಂಡಿನಲ್ಲಿ ಬಿಡುಗಡೆಯಾಗದೆ ಹೋಗಬಹುದೆಂಬ ವಾತರ್ೆ ಇಂಗ್ಲೆಂಡ್ ಕಡೆಯಿಂದ ಬಂತು. ಬಂಡವಾಳ ಹೂಡಿಕೆದಾರರು ಕೂಸಿಗೆ ಪ್ರಾಧಾನ್ಯ ಕೊಡದೆ ಕುಲಾಯಿ ಕುರಿತು ಯೋಚಿಸಲು ಶುರುಮಾಡಿರುವುದು ಕಂಡು ಅವನಿಗೆ ನಗಬೇಕೋ? ಅಳಬೇಕೋ? ಒಂದೂ ಅರ್ಥವಾಗಲಿಲ್ಲ.
ಯಾವನು ಬಂಡವಾಳ ಹೂಡಿದರೇನು? ಬಿಟ್ಟರೇನು? ತಾನು ಮಾತ್ರ ದಿ ಗ್ರೇಟ್ ಡಿಕ್ಟೇಟರ್ ಚಿತ್ರವನ್ನು ನಿಮರ್ಿಸಲೇಬೇಕೆಂದು ಚಾಪ್ಲಿನ್ ಕೃತುನಿಶ್ಚಯ ಮಾಡಿದ. ಹಗಲಿರುಳು ಕೂತು ಸುಮಾರು ಮುನ್ನೂರು ಪುಟದಷ್ಟು ಗಾತ್ರದ ಚಿತ್ರಕಥೆ, ಸಂಭಾಷಣೆಯನ್ನು ಸಿದ್ಧಪಡಿಸಿದ; ದಿ ಗ್ರೇಟ್ ಡಿಕ್ಟೇಟರ್ ಚಿತ್ರದಲ್ಲಿ ತನ್ನ ಟ್ರಾಂಪ್ ದ್ವಿಪಾತ್ರ ವಹಿಸಲಿರುವುದರಿಂದ ಅವನು ಚಿತ್ರಕಥೆ ಬಗ್ಗೆ ವಿಶೇಷ ಮುತುವಜರ್ಿ ತೋರಿಸಬೇಕಾಯಿತು. ತನಗೆ ಮಾಡನರ್್ ಟೈಮ್ಸ್ ಚಿತ್ರದಿಂದ ಬರಬೇಕಾಗಿರುವ ಗೌರವ ಧನ ಚುಕ್ತಾ ಮಾಡೋವರೆಗೆ ತಾನು ಮುಂದಿನ ಚಿತ್ರದಲ್ಲಿ ನಟಿಸುವುದಿಲ್ಲವೆಂದು ಚಂಡಿ ಹಿಡಿದಿದ್ದ ಪ್ರೀತಿಯ ಹುಡುಗಿ ಪೌಲೆಟ್ಟಳ ಮೂಗು ಹಿಡಿದು ದಿ ಗ್ರೇಟ್ ಡಿಕ್ಟೇಟರ್ ಚಿತ್ರಕ್ಕೆ ಚಾಪ್ಲಿನ್ ಕರೆತರುವ ಸಾಹಸ ಮಾಡಿದ.
ಚಿತ್ರೀಕರಣವನ್ನು ಶುರುಮಾಡಿದ ನಂತರ ಒಂದಲ್ಲಾ ಒಂದು ಕಂಟಕಗಳು ನಾಮುಂದು, ತಾಮುಂದು ಅಂತ ಎದುರಾಗತೊಡಗಿದವು. ಅವನಿಗೆ ಫೋನ್ ಮೂಲಕ ಮುಸುಗುವೀರರು ಬೆದರಿಕೆ ಹಾಕತೊಡಗಿದರು. ಸಿನಿಮಾ ನಡೆಯೋ ಥೇಟರುಗಳನ್ನು ಡೈನಾಮಿಟ್ ಇರಿಸಿ         ಸ್ಫೋಟಿಸುತ್ತೇವೆ ಎಂದು ಒಂದು ಕರೆಬಂದರೆ, ಇನ್ನೊಂದು ಕರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತು… ಹೀಗೆ ಅಸಂಖ್ಯಾತ ಬೆದರಿಕೆಯ ಕರೆಗಳು.
ಚಾಪ್ಲಿನ್ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ನಾಝಿ ವಿರೋಧಿ ಸಂಘದ ಮುಖ್ಯಸ್ಥ ಹ್ಯಾರಿ ಬ್ರಿಡ್ಮೆಸ್ನನ್ನು ಸಂಪಕರ್ಿಸಿ ಸಹಾಯ ಯಾಚಿಸಿದ. ಚಿತ್ರ ಚೆನ್ನಾಗಿದ್ದಲ್ಲಿ ಮುಂದೆ ಪ್ರೇಕ್ಷಕರೇ ನಾಝಿ ಬೆಂಬಲಿಗರಿಗೆ, ಗೊಡ್ಡು ಭಯೋತ್ಪಾದಕರಿಗೆ ಬುದ್ಧಿ ಕಲಿಸುವರೆಂದೂ, ಅದರಿಂದ ವಿಚಲಿತನಾಗದೆ ಚಿತ್ರಮಾಡಿ ಮುಗಿಸು ಎಂದು ಅವನು ಚಾಪ್ಲಿನ್ಗೆ ಸಲಹೆ ನೀಡಿದ.
ಚಾಪ್ಲಿನ್ ಮತ್ತೆ ಚಿತ್ರೀಕರಣ ಮುಂದುವರಿಸಿದ. ತನ್ನ ಮನಸ್ಸಿಗೆ ತೃಪ್ತಿ ಆಗುವವರೆಗೆ ಶೂಟಿಂಗ್ ಮಾಡಿದ್ದೇ ಮಾಡಿದ್ದು. ಒಂದೊಂದು ಶಾಟ್ ಐವತ್ತರಿಂದ ನೂರಾರು ಟೇಕ್ಸ್ವರೆಗೆ. ಕಲಾವಿದರ ಜಿಪುಣತನ, ಸೋಮಾರಿತನ ಚಾಪ್ಲಿನ್ ಬಳಿ ನಡೆಯುತ್ತಿರಲಿಲ್ಲ. ಸ್ವತಃ ತನ್ನ ಹೆಂಡತಿ ಪೌಲೆಟ್ಳನ್ನೇ ಗೋಳಾಡಿಸದೆಬಿಟ್ಟವನಲ್ಲ ಆ ಭೂಪ.
ಚಿತ್ರೀಕರಣದ ನಡುವೆಯೇ ಚಾಪ್ಲಿನ್ ಯುದ್ಧದ ಆಗುಹೋಗುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ. ಪ್ರತಿಕ್ರಿಯಿಸುತ್ತಿದ್ದ ಇದ್ದಕ್ಕಿದ್ದಂತೆ ಚಿತ್ರಕಥೆ ಬದಲಾಯಿಸಿಬಿಡುತ್ತಿದ್ದ, ಅದಕ್ಕನುಸಾರವಾಗಿ ಮತ್ತೆ ರೀ-ಶೂಟ್ ಮಾಡುತ್ತಿದ್ದ.
ಶೂಟಿಂಗ್ ನಡೆಯುತ್ತಿದ್ದ ಲೊಕೇಷನ್ನಿಗೆ ಕೆಲವು ಮಂದಿ ಆತ್ಮೀಯರು ಭೆಟ್ಟಿ ಕೊಡುತ್ತಿದ್ದರು. ಡಗ್ಲಾಸ್ ಫೇರ್ ಬ್ಯಾಂಕ್ಸ್ ತನ್ನ ದ್ವಿತೀಯ ಪತ್ನಿ ಸಿಲ್ವಿಯಾಳೊಂದಿಗೆ ಬಂದು ಶೂಟಿಂಗ್ ನೋಡಿ ಸಂತೋಷಪಟ್ಟು `ಸಿನಿಮಾ ನೋಡಲು ತುದಿಗಾಲಲ್ಲಿ ಕಾಯ್ತಿರ್ತೀನಿ ಆದಷ್ಟು ಬೇಗ್ನೆ ಮುಗಿಸು… ಯಾರ ಬೆದರಿಕೆಗೂ ಜಗ್ಗಬೇಡ’ ಎಂದು ಹೇಳಿ ಹೋದ.
ಚಾಪ್ಲಿನ್ ಎರಡು ಲಕ್ಷದ ಹದಿನೈದು ಸಹಸ್ರ ಅಡಿ ಫಿಲಂನಲ್ಲಿ ದಿ ಗ್ರೇಟ್ ಡಿಕ್ಟೇಟರ್ ಶೂಟಿಂಗ್ ಮಾಡಿ ಮುಗಿಸಿದಾಗ ಹಿಟ್ಲರ್ ಇಡೀ ಏಷ್ಯಾ ಖಂಡವನ್ನು ಕಂಕುಳಲ್ಲಿಟ್ಟುಕೊಳ್ಳಲು ಒಂದೊಂದೇ ಹೆಜ್ಜೆ ಮುಂದೆ ಇಡುತ್ತಿದ್ದ ಸಂದರ್ಭದಲ್ಲಿಯೇ ಚಾಪ್ಲಿನ್ ಸ್ಟುಡಿಯೋದ ಕತ್ತಲ ಎಡೆಟಿಂಗ್ ಕೋಣೆಯಲ್ಲಿ ಕೂತು ದಿ ಗ್ರೇಟ್ ಡಿಕ್ಟೇಟರ್ ಚಿತ್ರವನ್ನು ಒಂಬತ್ತು ಸಹಸ್ರ ಅಡಿಗಳಿಗೆ ಭಟ್ಟಿ ಇಳಿಸಿದ.
ಅಂತೂ ಅಪಾರ ಶ್ರಮದ ಫಲವಾಗಿ `ದಿ ಗ್ರೇಟ್ ಡಿಕ್ಟೇಟರ್’ ಪ್ರದರ್ಶನಕ್ಕೆ ತಯಾರಾಯಿತು. 1940, ಸೆಪ್ಟೆಂಬರ್ 6ರಂದು ಆಯ್ದ ಮಂದಿಯೊಂದಿಗೆ ತನ್ನ ಚಿತ್ರವನ್ನು ತಾನು ನೋಡಿದಾಗ ಕೆಲವು ದೃಶ್ಯಗಳು ಚಾಪ್ಲಿನ್ಗೆ ಹಿಡಿಸಲಿಲ್ಲ. ಅದಕ್ಕೆ ಅವನು ಆ ದೃಶ್ಯಗಳಿಗಾಗಿ ಮತ್ತೆ ಚಿತ್ರೀಕರಣ ನಡೆಸಿದ.
ಅಂತೂ ತನ್ನ ಮಹತ್ವಾಕಾಂಕ್ಷೆಯ `ದಿ ಗ್ರೇಡ್ ಡಿಕ್ಟೇಟರ್’ ಟಾಕಿ ಚಿತ್ರ ಅಂತಿಮವಾಗಿ ಪ್ರದರ್ಶನಕ್ಕೆ ಸಿದ್ಧಗೊಂಡಿತು. ಅದರ ಪ್ರದರ್ಶನಕ್ಕೆಂದೇ ನ್ಯೂಯಾಕರ್್ನ ಆಸ್ಟರ್ ಮತ್ತು ಕ್ಯಾಪಿಟೋಲ್ ಎಂಬೆರಡು ಚಿತ್ರಮಂದಿರಗಳನ್ನು ಬಾಡಿಗೆಗೆ ಪಡೆಯಲಾಯಿತು.
ಆಸ್ಟರ್ ಚಿತ್ರಮಂದಿರದಲ್ಲಿ `ದಿ ಗ್ರೇಟ್ ಡಿಕ್ಟೇಟರ್’ ವೀಕ್ಷಿಸಲು ಸರಕಾರ ಮತ್ತು ಸಮಾಜದ ಕೆಲವು ಗಣ್ಯವ್ಯಕ್ತಿಗಳನ್ನು, ಪತ್ರಕರ್ತರನ್ನು ವಿಶೇಷವಾಗಿ ಆಮಂತ್ರಿಸಲಾಯಿತು. ಅಮೆರಿಕದ ಅಧ್ಯಕ್ಷ ರೂಸ್ವೆಲ್ಟ್ರ ಮುಖ್ಯ ಸಲಹೆಗಾರ ಹ್ಯಾರಿ ಹಾಪ್ಕಿನ್ಸ್ ಕುತೂಹಲದಿಂದ ಬಂದು ಚಿತ್ರ ನೋಡಿದ. ಗಣ್ಯರೆಲ್ಲ ಸಾಮಾನ್ಯರಂತೆ ನಕ್ಕು ಚಿತ್ರದ ಪ್ರತಿಯೊಂದು ದೃಶ್ಯವನ್ನು ಆನಂದಿಸಿದರು.
ಚಿತ್ರ ಮುಗಿದ ನಂತರ ಹ್ಯಾರಿ ಚಾಪ್ಲಿನ್ನನ್ನು ಸಂತೋಷದಿಂದ ಅಪ್ಪಿಕೊಂಡು ನೀವು ಅದ್ಭುತವಾದ ಚಿತ್ರ ಮಾಡಿದ್ದೀರಿ… ಎಂದು ಅಭಿನಂದಿಸಿದರು. ಹಾಗೆಯೇ ಖಚರ್ಾಗಿರುವ ಅಪಾರ ಹಣ ಮತ್ತು ಸಮಯ ಕುರಿತು ಪ್ರಸ್ತಾಪಿಸಿದರು.
ಹೌದು! ಅವರು ಅನುಮಾನಿಸಿದ್ದು ಸಹಜ.
ಚಾಪ್ಲಿನ್ ಎರಡು ವರ್ಷಗಳ ಅವಧಿಯಲ್ಲಿ ಸುಮಾರು ಇಪ್ಪತ್ತು ಲಕ್ಷ ಡಾಲರ್ ಹಣ ಖಚರ್ು ಮಾಡಿ ದಿ ಗ್ರೇಟ್… ಚಿತ್ರ ನಿಮರ್ಿಸಿದ್ದ.
ಎಲ್ಲರ ಬಾಯಲ್ಲು ದಿ ಗ್ರೇಟ್ ಡಿಕ್ಟೇರ್… ದಿ ಗ್ರೇಟ್ ಡಿಕ್ಟೇರ್…
ಹಣಗಳಿಕೆಯಲ್ಲಿ ಹೊಸ ದಾಖಲೆ ಸ್ಥಾಪಿಸುತ್ತಿದ್ದ ದಿ ಗ್ರೇಟ್ ಡಿಕ್ಟೇಟರ್… ಪತ್ರಿಕೆಗಳು ಸದರಿ ಚಿತ್ರ ಕುರಿತು ಸಮಾಜಕ್ಕೆ ಸರಿಯಾದ ಮಾಹಿತಿ ನೀಡುವುದಿಲ್ಲ. ಕಮ್ಯುನಿಜಂ ಬೋಧಿಸಲಿಕ್ಕೆಂದೇ ಚಾಪ್ಲಿನ್ ಈ ಚಿತ್ರ ತೆಗೆದಿದ್ದಾನೆಂದು ಬರೆದವು. ಇದರಲ್ಲಿ ಚಾಲರ್ಿ ಮಾಡಿದ ಅದ್ಭುತ ಉಪನ್ಯಾಸದ ವಿರುದ್ಧ ಕೆಲವರು ಅಪಸ್ವರ ಎತ್ತಿದರು. ಆ ಭಾಷಣ ಹಿಟ್ಲರ್ ರೂಪದಲ್ಲಿರುವ ಕ್ಷೌರಿಕ ಮಾಡಿದ್ದಲ್ಲ… ಚಾಪ್ಲಿನ್ನೇ ಮಾಡಿದ್ದು… ಎಂದು ಜನರನ್ನು ದಾರಿತಪ್ಪಿಸಲು ಪ್ರಯತ್ನಿಸಿದರು. ಆದರೆ ಪ್ರೇಕ್ಷಕರು ಯಾರೊಬ್ಬರೂ ಮಾತನ್ನು ಕಿವಿಮೇಲೆ ಹಾಕಿಕೊಳ್ಳದೆ ಸಿನಿಮಾ ನೋಡಿ ಆನಂದಿಸಿದರು. ಕೇವಲ ಸಾಮಾನ್ಯ ಮಂದಿಯಷ್ಟೇ ಅಲ್ಲ. ಎಲ್ಲಾ ವರ್ಗದ ಎಲ್ಲಾ ವಯೋಮಾನದ, ಜಾಯಮಾನದ ಅಷ್ಟೇ ಅಲ್ಲ ನಾಝಿಜಂ ಸಮರ್ಥಕರೂ, ಬೆಂಬಲಿಗರೂ ಕಳ್ಳತನದಿಂದ ಸಿನಿಮಾ ನೋಡಿ ಆನಂದಿಸಿದರು.
`ದಿ ಗ್ರೇಡ್ ಡಿಕ್ಟೇಟರ್’ ಎಂಬ ಶೀಷರ್ಿಕೆಯೆ ಹೇಳುವಂತೆ ಹಿಟ್ಲರ್ನ ನಿರಂಕುಶ ಮನೋಭಾವವನ್ನು, ಸವರ್ಾಧಿಕಾರ ದೌರ್ಜನ್ಯವನ್ನು ಅನಾವರಣ ಮಾಡುತ್ತದೆ; ಈ ಚಿತ್ರದಲ್ಲಿ ಚಾಲರ್ಿ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಅವೆರಡೂ ಪಾತ್ರಗಳು ಸ್ವಭಾವತಃ ತದ್ವಿರುದ್ಧ. ಒಂದು ಯಹೂದಿ ಜನಾಂಗದ ಕ್ಷೌರಿಕನ ಪಾತ್ರ, ಎರಡನೆಯದು ಹಿಟ್ಲರನ ಪಾತ್ರ. ಈ ಪಾತ್ರದ ಮೂಲಕ ಹಿಟ್ಲರನನ್ನು ಭೌತಿಕವಾಗಿ, ಮಾನಸಿಕವಾಗಿ, ಅವಹೇಳನ ಮಾಡುತ್ತಾನೆ. ಪ್ರಪಂಚದ ಪ್ರತಿ ಸವರ್ಾಧಿಕಾರಿಯನ್ನು ಉದ್ದೇಶಿಸಿ, ಅವರ ಪಾಶವೀ ಕೃತ್ಯಗಳನ್ನು ಖಂಡಿಸಿ, ಚಾಲರ್ಿ ಅದ್ಭುತವಾಗಿ ಮಾತನಾಡುತ್ತಾನೆ. ಪ್ರಪಂಚವನ್ನು ಬೇಕಾಬಿಟ್ಟಿ ಆಳುವ ಹಕ್ಕು ಶುದ್ಧ ರಕ್ತದ ಆರ್ಯರದ್ದು ಎಂದು ಚಾಲರ್ಿ ಲೇವಡಿ ಮಾಡುತ್ತಾನೆ. ಇಡೀ ಪ್ರಪಂಚವನ್ನು ಗೆಲ್ಲಬೇಕೆಂದು ಹಿಟ್ಲರ್ ಗ್ಲೋಬಿನೊಂದಿಗೆ ಆಡಿಕೊಳ್ಳುವುದು, ತನ್ನ ಕನಸು ನುಚ್ಚು ನೂರಾದಂತೆ ರಬ್ಬರ್ ಗ್ಲೋಬ್ ಸ್ಫೋಟಿಸಿ ನುಚ್ಚುನೂರಾಗುವುದು ಇಂಥ ವ್ಯಂಗ್ಯ ವಿಡಂಬನೆಗಳಿಂದ ಕೂಡಿದ ಅರ್ಥಪರಂಪರೆಯ ದೃಶ್ಯಗಳಿಗೆ ಚಿತ್ರದಲ್ಲಿ ಬರವಿಲ್ಲ, ಈ ಚಿತ್ರದಲ್ಲಿ ಅಡಾಲ್ಫ್ ಹಿಟ್ಲರ್ ಅಡೆನಾಯ್ಡ ಹೈಂಕಲ್ ಆಗಿದ್ದಾನೆ, ಮುಸುಲೋನಿ ಬೆಂಜಿನೋ ನಪಲೋನಿ ಆಗಿದ್ದಾನೆ. ಇಲ್ಲಿ ಜರ್ಮನ್ ಬೆಕ್ಟೀರಿಯಾ ಆಗಿದೆ.
ಹಿಟ್ಲರ್, ಯಹೂದಿ ಕ್ಷೌರಿಕ ಇವರಿಬ್ಬರ ಭೌತಿಕ ಸ್ವರೂಪ ಒಂದೇ ತರ. ಆದುದರಿಂದ ಸೈನಿಕ ಮುಖಂಡರು ಕ್ಷೌರಿಕನನ್ನು ಹಿಟ್ಲರ್ನೆಂದು ಭ್ರಮಿಸುತ್ತಾರೆ. ಸೈನಿಕ ಕವಾಯತ್ತನ್ನು ಉದ್ದೇಶಿಸಿ ಭಾಷಣ ಮಾಡುವಂತೆ ಕೋರುತ್ತಾರೆ. ಬೇರೆ ಮಾರ್ಗವಿಲ್ಲದೆ ಕ್ಷೌರಿಕ(ಚಾಪ್ಲಿನ್) ಅದ್ಭುತವಾದ ಭಾಷಣ ಮಾಡುತ್ತಾನೆ. ಜಗತ್ತಿನ ಯಾವತ್ತೂ ಮಾನವ ಕುಲ ಹಿಟ್ಲರ್ನಂಥ ಸವರ್ಾಧಿಕಾರಿಗಳ ವಿರುದ್ಧ ಬಂಡೇಳಬೇಕೆಂದು ಅವನು ತನ್ನ ಶಾಂತಿ ಸಂದೇಶದಲ್ಲಿ ಇಡೀ ಜಗತ್ತಿಗೆ ಕರೆ ನೀಡುತ್ತಾನೆ.
ಅವನ ಉಪನ್ಯಾಸ ಹೀಗಿದೆ…
“ಕ್ಷಮಿಸಿ, ನಾನೋರ್ವ ಚಕ್ರವತರ್ಿ ಆಗಬೇಕೆಂದು ಬಯಸುತ್ತಿಲ್ಲ. ನಾನು ಯಾರನ್ನಾದರೂ ಗೆಲ್ಲಬೇಕೆಂದಾಗಲೀ, ಆಳಬೇಕೆಂದಾಗಲೀ ಕೋರಿಕೊಳ್ಳುತ್ತಿಲ್ಲ. ಅದು ನನ್ನ ವೃತ್ತಿ ಅಲ್ಲ. ಯಹೂದಿಗಳಿಗೆ, ಕಪ್ಪು ಮಂದಿಗೆ, ಬಿಳಿ ಮಂದಿಗೆ ಸಹಾಯ ಮಾಡಬೇಕೆಂದು ಬಯಸುವವನು ನಾನು. ನಾವೆಲ್ಲ ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂದುಕೊಳ್ಳುತ್ತೇವೆ. ಅದು ಮನುಷ್ಯನ ಲಕ್ಷಣ. ನಾವೆಲ್ಲರೂ ಪ್ರತಿಯೊಬ್ಬರ ಆನಂದಕ್ಕಾಗಿ ಬದುಕುತ್ತೇವೆ. ಆದರೆ ಇನ್ನೊಬ್ಬರ ದುಃಖಕ್ಕಾಗಿ ಅಲ್ಲವೇ ಅಲ್ಲ. ನಾವು ಇನ್ನೊಬ್ಬರನ್ನು ನೋಡಿ ಅಸಹ್ಯ ಪಡಲಿಕ್ಕಾಗಲೀ, ಮೋಸ ಮಾಡಲಿಕ್ಕಾಗಲೀ ಆಸೆ ಪಡೋದಿಲ್ಲ. ಈ ಪ್ರಪಂಚದೊಳಗೆ ಪ್ರತಿಯೊಬ್ಬರಿಗೂ ಅಸ್ತಿತ್ವ ಇದೆ… ಈ ಭೂಮಿ ಎಲ್ರಿಗೂ ಅವರವರಿಗೆ ಬೇಕಾಗಿರೋ ಸಕಲ ಸೌಭಾಗ್ಯವನ್ನು ವಿತರಿಸಬಲ್ಲದು.
ನಮ್ಮ ಜೀವನ ಸ್ವಾತಂತ್ರ್ಯ, ಸುಖ, ಸಂತೋಷದಿಂದ ಇರಬಹುದು, ಆದರೆ ನಾವು ದಾರಿ ತಪ್ಪಿದ್ದೇವೆ. ದುರಾಶೆ ಮಾನವಾತ್ಮಗಳನ್ನು ವಿಷಪೂರಿತ ಮಾಡಿದೆ, ದ್ವೇಷದ ಗೋಡೆಗಳನ್ನು ನಿಮರ್ಿಸಿದೆ. ದುಷ್ಟತನ ನಮ್ಮೊಳಗೆ ನೆಲೆ ಪಡೆದು ರಕ್ತಪಾತಕ್ಕೆ ವಿಷಾದಕ್ಕೆ ದಾರಿ ಮಾಡಿಕೊಟ್ಟಿದೆ. ನಾವು ವೇಗವನ್ನು ಹೆಚ್ಚಿಸಿಕೊಂಡಿದ್ದೇವೆ. ನಮ್ಮನ್ನು ನಾವೇ ಬಂಧಿಸಿಕೊಂಡಿದ್ದೇವೆ. ಕೈಗಾರಿಕೆಗಳಿಂದ ಎಲ್ಲಾ ಸವಲತ್ತುಗಳು ದೊರಕಿದ್ದರೂ ನಾವು ದಾರಿದ್ರ್ಯದಲ್ಲೇ ಬದುಕುತ್ತಿದ್ದೇವೆ. ಅವುಗಳಿಂದ ನಾವು ನಿವರ್ಿರ್ಯರಾಗಿದ್ದೇವೆ. ನಮ್ಮ ಬುದ್ಧಿ, ಪ್ರತಿಭೆಗಳೇ ನಮ್ಮನ್ನು ಸಿನಿಕರನ್ನಾಗಿ ಮಾಡಿವೆ, ನಾವು ಒರಟರಾಗುತ್ತಿದ್ದೇವೆ, ಅಮಾನವೀಯರಾಗುತ್ತಿದ್ದೇವೆ, ಹೆಚ್ಚು ಯೋಚಿಸುತ್ತ ಕಡಿಮೆ ಅನುಭವಿಸುತ್ತೇವೆ; ಯಂತ್ರಗಳಿಗಿಂತ ಅಗತ್ಯ ಇರುವುದು ಮಾನವೀಯತೆ, ಬುದ್ಧಿವಂತಿಕೆಗಿಂತ ಹೆಚ್ಚಾಗಿ ನಮಗೆ ಬೇಕಾಗಿರುವುದು ದಯಾಪರತೆ ಮತ್ತು ಮೃದುತ್ವ. ಇವುಗಳಿಲ್ಲದಿದ್ದಲ್ಲಿ ಬದುಕು ಹಿಂಸಾತ್ಮಕವಾಗುತ್ತದೆ, ನಾವು ಎಲ್ಲವನ್ನು ಕಳೆದುಕೊಳ್ಳುತ್ತೇವೆ.
ವಿಮಾನ ಮತ್ತು ರೇಡಿಯೋಗಳಿಂದ ನಾವು ಪರಸ್ಪರ ಹತ್ತಿರಾಗಿದ್ದೇವೆ, ಅವೆಲ್ಲ ಮನುಷ್ಯನೊಳಗಿನ ಒಳ್ಳೆಯತನವನ್ನು ಹೇಳುತ್ತೇವೆ. ವಿಶ್ವಮಾನವ ಸೋದರತ್ವ, ಐಕ್ಯತೆಗಳಿಗಾಗಿ ತಹತಹಿಸುತ್ತಿರುವವೆಂದು ಹೇಳುತ್ತೇವೆ. ನನ್ನ ಮಾತು ಪ್ರಪಂಚದ ಪ್ರತಿಯೊಬ್ಬರನ್ನು ತಲುಪುತ್ತದೆ, ಲಕ್ಷಗಟ್ಟಲೆ ಅಸಹಾಯಕ ಮಂದಿ ಸ್ತ್ರೀಪುರುಷರು, ಮಕ್ಕಳು ಮರಿಗಳು ಇಂದಿನ ಈ ಜೀವನ ಶೈಲಿಗೆ ಬಲಿಯಾಗುತ್ತಿವೆ. ಹಿಂಸೆಗೆ ಗುರಿಯಾಗುತ್ತಿವೆ; ಜೈಲುಪಾಲಾಗಿರುವ ಅಮಾಯಕರಿದ್ದಾರೆ; ಅವರೆಲ್ಲರನ್ನು ನಿಸ್ಸಹಾಯಕರೆಂದು ಭಾವಿಸಕೂಡದೆಂದು ಪ್ರಾಥರ್ಿಸುತ್ತಿದ್ದೇವೆ. ಇಂದು ಪಸರಿಸಿರುವ ವಿಷಾದ ಛಾಯೆಗಳು, ದುರಾಶೆಯ ನೆರಳುಗಳು, ಮಾನವಕುಲ ಅಭಿವೃದ್ಧಿ ಹೊಂದುತ್ತದೆ ಎಂದು ಹೆದರಿ ಕೆಲವರು ನಡೆಸುತ್ತಿರುವ ಧಿಮಾಕು ಬಹಳ ದಿನ ನಡೆಯೋದಿಲ್ಲ… ಸವರ್ಾಧಿಕಾರಿಗಳು ಸಾಯುತ್ತಾರೆ, ಪ್ರಜೆಗಳಿಂದ ಕಿತ್ತುಕೊಂಡಿರುವ ಪ್ರಜಾಧಿಕಾರ ಮತ್ತೆ ಪ್ರಜೆಗಳನ್ನು ಸೇರುತ್ತದೆ; ಮನುಷ್ಯರ ಆತ್ಮಾರ್ಪಣಗಳು, ವೀರಮರಣಗಳು ತ್ಯಾಗ ಬಲಿದಾನಗಳು ನಿರರ್ಥಕವಾಗುವುದಿಲ್ಲ. ಸ್ವೇಚ್ಛೆ ಸ್ವಾತಂತ್ರ್ಯಗಳೆಂದೂ ನಾಶ ಆಗೋದಿಲ್ಲ.
ಸೈನಿಕರೇ, ಈ ದುಷ್ಟರಿಗೆ ಸಹಾಯ ಮಾಡಬೇಡಿ, ಅವರು ನಿಮ್ಮ ಕಡೆ ಕೀಳಾಗಿ ನೋಡುತ್ತಿದ್ದ್ಜಾರೆ; ಅವರು ನಿಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ; ನಿಮ್ಮ ಜೀವನಗಳೊಂದಿಗೆ ಆಟವಾಡಿಕೊಳ್ಳುತ್ತಿದ್ದಾರೆ; ನೀವೇನು ಮಾಡಬೇಕೆಂಬುದನ್ನು ಏನಾಲೋಚಿಸಬೇಕೆಂಬುದನ್ನು, ಹೇಗಿರಬೇಕೆಂಬುದನ್ನು ಶಿಸ್ತಿನಿಂದ ಕಲಿಸುತ್ತಾರೆ, ನಿಮಗಿಷ್ಟು ಹಾಕುತ್ತಾರೆ, ನಿಮ್ಮನ್ನು ಪಶುಗಳಂತೆ ನೋಡಿಕೊಳ್ಳುತ್ತಾರೆ, ನಿಮ್ಮನ್ನು ಫಿರಂಗಿಗಳಂತೆ ಉಪಯೋಗಿಸಿಕೊಳ್ಳುತ್ತಾರೆ, ಈ ವಿಚಿತ್ರ ಆಡಳಿತಗಾರರಿಗೆ ಸಹಕರಿಸಬೇಡಿ; ಅವರು ಯಂತ್ರ ಮಾನವರು; ಅವರಿಗಿರುವ ಯಂತ್ರದ ಹೃದಯಗಳೊಂದಿಗೆ ನೀವು ಸಹಕರಿಸಬೇಡಿ; ನೀವು ಯಂತ್ರಗಳಲ್ಲ, ನೀವು ಮನುಷ್ಯರು; ಮಾನವೀಯ ಹೃದಯದ ತುಂಬ ಪ್ರೇಮ ವಾತ್ಸಲ್ಯ ತುಂಬಿಕೊಂಡಿರುವವರು, ಪ್ರೇಮದ ನೀವು ಅಸಹ್ಯಪಟ್ಟುಕೊಳ್ಳಲಾರಿರಿ, ಪ್ರೇಮದಿಂದ ವಂಚಿತಗೊಂಡಿರುವವರು ಮಾತ್ರ ಪ್ರೇಮಿಸುವವರ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತಾರೆ.
ಸೈನಿಕರೇ, ಗುಲಾಮೀ ವ್ಯವಸ್ಥೆಗಾಗಿ ಹೋರಾಡಬೇಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಸಂತ ಲ್ಯೂಕ್ನ ಹದಿನೇಳನೆ ಅಧ್ಯಾಯದಲ್ಲಿ ಭಗವಂತನ ಸಾಮ್ರಾಜ್ಯ ನಮ್ಮೊಳಗೇ ಇದೆ ಎಂದು ಬರೆಯಲಾಗಿದೆ. ಒಬ್ಬನಲ್ಲಿ ಅಲ್ಲ… ಒಬ್ಬನಿಗಾಗಿ ಅಲ್ಲ, ಪ್ರತಿಯೊಬ್ಬರಲ್ಲಿದೆ ಆ ಸಾಮ್ರಾಜ್ಯ ನಿಮ್ಮೊಳಗೂ ಇದೆ… ನಿಮ್ಮೆಲ್ಲರಿಗೂ ಅದರ ಮೇಲೆ ಅಧಿಕಾರವಿದೆ… ಯಂತ್ರಗಳನ್ನು ನಿಮರ್ಿಸುವ ಶಕ್ತಿ ಇದೆ… ಆನಂದವನ್ನು ಸೃಷ್ಟಿಸುವ ಶಕ್ತಿ ಇದೆ… ನಮ್ಮ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳೋಣ; ಎಲ್ಲರೂ ಒಗ್ಗಟ್ಟಾಗಿ, ಪ್ರತಿಯೊಬ್ಬರಿಗೂ ಉದ್ಯೋಗ, ಭವಿಷ್ಯ, ವೃದ್ಧಾಪ್ಯದಲ್ಲಿ ರಕ್ಷಣೆ ದೊರಕುವಂಥ ನೂತನ ಪ್ರಪಂಚವನ್ನು ರೂಪಿಸಲು ನಾವು ಒಗ್ಗಟ್ಟಿನಿಂದ ಹೋರಾಡೋಣ.
ಇವೆಲ್ಲ ನಿಮಗೆ ಕಲ್ಪಿಸಿಕೊಡುವುದಾಗಿ ವಾಗ್ದಾನ ನೀಡಿಯೇ ಈ ದುಷ್ಟರು ಅಧಿಕಾರಕ್ಕೆ ಬರುತ್ತಾರೆ. ಅವರು ಸುಳ್ಳುಗಾರರು, ಅವರೆಂದೂ ನುಡಿದಂತೆ ನಡೆಯಲಾರರು. ಸವರ್ಾಧಿಕಾರಿಗಳು ಸ್ವತಂತ್ರ್ಯವಾಗಿರುತ್ತಾರಲ್ಲದೆ ಪ್ರಜೆಗಳನ್ನು ಗುಲಾಮರನ್ನಾಗಿ ಪರಿವತರ್ಿಸುತ್ತಾರೆ. ಈಗ ನಾವು ಒಗ್ಗಟ್ಟಿನಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡೋಣ, ಸಮಾನತೆಗೆ ಅಡ್ಡ ಇರುವ ಅಡ್ಡಿಆತಂಕಗಳನ್ನು ಕಿತ್ತೆಸೆಯೋಣ. ದುರಾಸೆ, ಕ್ರೌರ್ಯ, ಅಸಮಾನತೆಗಳನ್ನು ಓಡಿಸೋಣ, ವೈಚಾರಿಕ ಲೋಕದ ಅಸ್ತಿತ್ವಕ್ಕಾಗಿ ಹೋರಾಡೋಣ, ಈ ಲೋಕದಲ್ಲಿ ವಿಜ್ಞಾನ ಮಾನವನ ಸುಖ ಸಂತೋಷಕ್ಕೆ ದಾರಿ ತೋರಿಸುತ್ತದೆ ಸೈನಿಕರೇ ಪ್ರಜಾಪ್ರಭುತ್ವದ ಹೆಸರಿನಲ್ಲಿ ಐಕ್ಯತೆಯನ್ನು ಸಾಧಿಸೋಣ.
ಹನ್ನಾ… ಮೇಲೆ ನೋಡು! ಮೇಲೆ ನೋಡು ಹನ್ನಾ… ಕಾಮರ್ೊಡಗಳು ಚದುರಿ ಹೋಗುತ್ತಿವೆ. ಸೂಯರ್ೊದಯ ಆಗುತ್ತಿದೆ, ಕತ್ತಲೆಯಿಂದ ಬೆಳಕಿನೆಡೆಗೆ ಧಾವಿಸುತ್ತಿದ್ದೇವೆ, ನಾವು ಹೊಸ ಪ್ರಪಂಚದೊಳಗೆ ಕಾಲಿಸುತ್ತಿದ್ದೇವೆ. ಅದು ದಯಾಮಯ ಲೋಕ… ಅಲ್ಲಿರುವವರೆಲ್ಲ ದುರಾಶೆ, ಹಿಂಸೆ, ಕ್ರೌರ್ಯಗಳನ್ನು ಮೆಟ್ಟಿ ನಿಂತಿರುವವರೆ, ಮೇಲೆ ನೋಡು ಹನ್ನಾ… ಮಾನವಾತ್ಮಕ್ಕೆ ರೆಕ್ಕೆಗಳು ಬಂದಿವೆ. ಬಹಳ ಕಾಲದ ನಂತರ ಮನುಷ್ಯ ಹಾರುತ್ತಿದ್ದಾನೆ. ಕಾಮನಬಿಲ್ಲನ್ನು ದಾಟಿ ಬೆಳಕಿನೆಡೆಗೆ ಧಾವಿಸುತ್ತಿದ್ದಾನೆ… ಮೇಲೆ ನೋಡು ಹನ್ನಾ ಮೇಲೆ ನೋಡು.”
ದಿ ಗ್ರೇಟ್ ಡಿಕ್ಟೇಟರ್ನ ಕೊನೆ ದೃಶ್ಯದಲ್ಲಿ ಬರುವ ಈ ಭಾಷಣದಿಂದ ಚಾಪ್ಲಿನ್ ವಿಶ್ವಮಾನವನಾದ. ಸವರ್ಾಧಿಕಾರಿಗಳನ್ನು, ನಿರಂಕುಶಮತಿಗಳನ್ನು ಸಾರಾಸಗಟ ತಿರಸ್ಕರಿಸಿದ. ಮನುಷ್ಯರನ್ನು ಮಾನವೀಯತೆಯನ್ನು ಸಮಥರ್ಿಸಿದ.. ಅಬ್ರಹಾಂ ಲಿಂಕನ್ನರು ಗೆಟ್ಟಿಸ್ಬಗರ್್ನಲ್ಲಿ ಮಾಡಿದ ಅಮೋಘ ಭಾಷಣಕ್ಕೆ ಸರಿಸಾಟಿಯಾದ ಭಾಷಣವೆಂದು ಅನೇಕರು ಅಭಿಪ್ರಾಯಪಟ್ಟರು.

‍ಲೇಖಕರು avadhi

24 March, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading