ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವ್ರು ನಮ್ಮ್ ಎಮ್ಮೆಲ್ಲೆ.. ಪುಟ್ಟಣ್ಣಯ್ಯ ಅಂತ'

ಒಂದು ನಾಟಕದ ಡಿಸೈನ್ ಮಾಡಲು ಹೊರಟಿದ್ದಾಗ ಕ್ಯಾತನಹಳ್ಳಿ ಎಂಬ ಊರಿನಲ್ಲಿ ನಾಲ್ಕೈದು ಸಾಮಾನ್ಯ ಹಳ್ಳಿಜನ ಬರಿ ನೆಲದಲ್ಲಿ ಕೂತು ಪಿಚ್ಚೆ (ಪಿಚ್ಚೆ ಅಂದರೆ ಕವಡೆಯಾಟ. ಮೈಸೂರಿನ ಶುದ್ದ ಗ್ರಾಮೀಣ ಭಾಷೆ) ಆಡುತ್ತಿದ್ದರು ಹಾಗೂ ಸರೀ ಮಜಾ ಮಾಡುತ್ತಿದ್ದರು.
ನಾನೂ ಹತ್ತಿರ ಹೋಗಿ ಅವರು ಆಟ ಆಡುವುದನ್ನೇ ನೋಡಿ ಮಜಾ ಮಾಡುತ್ತಿದ್ದೆ.
ಅಷ್ಟರಲ್ಲಿ ನನ್ನನ್ನು ಬರಮಾಡಿಕೊಳ್ಳಲು ಬಂದ ಹಳ್ಳಿ ಯುವಕರಲ್ಲಿ ಒಬ್ಬರು, ಆಟ ಆಡುತ್ತಿದ್ದ ಗುಂಪಿನೆಡೆಗೆ ತೋರಿಸುತ್ತ “ಚಡ್ಡಿ ಬನಿಯನ್ ಹಾಕ್ಕೊಂಡು ತೊಡೆ ಮೇಲೆ ಕೂತ ಸೊಳ್ಳೆ ಓಡಿಸುತ್ತ ಆಟ ಆಡ್ತಾವ್ರಲ್ಲಾ…ಅವ್ರು ನಮ್ಮ್ ಎಮ್ಮೆಲ್ಲೆ…ಪುಟ್ಟಣ್ಣಯ್ಯ ಅಂತ” ಅಂದರು.
ಸಿಂಪಲ್!
-ಬಾದಲ್ ನಂಜುಂಡಸ್ವಾಮಿ 
ಆಗ ನಾನಿನ್ನು 8 ರ ಚಿಕ್ಕವಳು ಊರಿಗೆ ‘ಸರಳ ವಿವಾಹ’ ನುಗ್ಗಿಬಿಟ್ಟಿತ್ತು.. ನನ್ನ ಇಬ್ಬರು ಚಿಕ್ಕಮಂದಿರು ಹಾಗು ಅವರಿವರ ಸರಳ ಮದುವೆಯಲ್ಲಿ ಮಜ ಓ ಮಜಾ ಮಂತ್ರ ಮಾಂಗಲ್ಯದಲ್ಲಿ ತಾಳಿ ಕಟ್ಟಿಸಿ ,ಹಿರಿಯರ ಹಿತನುಡಿಯೊಂದಿಗೆ ಬಾತು-ಮೊಸರನ್ನ-ಮೈಸೂರ್ ಪಾಕ್ ಜೊತೆಗೆ ಮದುವೆ ಮುಗಿದೇ ಬಿಡ್ತಿತ್ತು… ಮನೇಲಿ ಸಾಲದ ಬಾದೆ ಮತ್ತು ಒತ್ತಡವಿಲ್ಲದೆ ಎಲ್ಲರು ನೆಮ್ಮದಿಯಾಗಿರ್ತಿದ್ರು ಅದಕ್ಕೆ ಕಾರಣ ಪುಟ್ಟಣ್ಣಯ್ಯ ..ಆಗಲೇ ಸರಳ ಮದುವೆಯ ಕ್ರಾಂತಿ ಶುರುವಾಗಿದ್ದು.ಆಗಲಿಂದ ನಾನು ಮಂತ್ರ ಮಾಂಗಲ್ಯನೇ ಆಗ್ತೀನಿ ಇವರೇ ಮಾಡಿಸಬೇಕು ಅಂತ ಯೋಚಿಸಿದ್ದೆ ಅಷ್ಟೇ ಅವತ್ತಿನ ನನ್ನ ಯೋಚನೆ ಬದಲಾಗಲೇ ಇಲ್ಲ ಅದಕ್ಕೆ ಕಾರಣ ಪುಟ್ಟಣ್ಣಯ್ಯರ ಹೋರಾಟ ನಡೆ ನುಡಿ ಸಿದ್ದಂತ ಮತ್ತು ಅವರ ಯೋಚನೆ ಯೋಜನೆಯಲ್ಲಿದ್ದ ಪ್ರಾಮಾಣಿಕತೆ …… ಹೀಗೆ ಹೇಳ್ತಾ ಹೋದ್ರೆ ಒಂದಾ ಎರಡ….. We miss you sir
ಅಕ್ಷತಾ ಎಂ ಪಾಂಡವಪುರ 

 

‍ಲೇಖಕರು avadhi

21 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading