ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವುಗಳ ಜೊತೆ ಜೀವಿಸಿದ್ದೆ…

ಲಂಕೇಶ್ ಕವಿತೆ ಕಾಡುತ್ತಾ ಇದೆ. ಅವ್ವ ಕವಿತೆ ಮಾತ್ರವಲ್ಲ, ಅವರ ಕಾಡುವ ಕವಿತೆಗಳು ಬೊಗಸೆಯ ತುಂಬಾ ಇದೆ. ಆ ಕಾರಣಕ್ಕಾಗಿಯೇ ಇಲ್ಲಿ ಕನ್ನಡದ ಪ್ರಮುಖ ಬರಹಗಾರರು ಚರ್ಚೆ ಕೈಗೆತ್ತಿಕೊಂಡಿದ್ದಾರೆ. ಅವಧಿ ಪ್ರಕಟಿಸಿದ-ಕತೆಗಳಾ ಮಾರಾಣಿ ಐರಾವತಿ- ಮೂರು ಲಂಕೇಶ್ ಸಿನೆಮಾ ಕವಿತೆಗೆ ಬಂದ ಪ್ರತಿಕ್ರಿಯೆ ಇದು. 

ಕೆ.ಫಣಿರಾಜ್ | phanikottur@gmail.com

ಲಂಕೇಶ್ಗೆ ಇದ್ದ ಭಾಷೆಯ ಶಕ್ತಿಯನ್ನು ಈ ಪದ್ಯಗಳು ಮತ್ತೊಮ್ಮೆ “ನಮ್ಮ ಮುಖಕ್ಕೆ ರಾಚುತ್ತವ”. ಕೋಟ್ಸ್ ನಲ್ಲಿ ಕೊಟ್ಟಿದ್ದು ಯಾಕೆಂದರೆ, ಭಾಷೆಯಲ್ಲಿ ದೃಷ್ಯ ಹಾಗು ಭಾವವನ್ನು ಕಾಣುವ ಅಪೂರ್ವವಾದ ಶಕ್ತಿ ಇದ್ದದ್ದು ಲಂಕೇಶ್ ಗೆ ಮಾತ್ರ ಎಂಬ ವಾಸ್ತವವನ್ನು ಕನ್ನಡದ ಸಭ್ಯರು ಇಂದಿಗೂ ಒಪ್ಪಿಕೊಳ್ಳಲು ತಯಾರಿಲ್ಲ. ಆ ರೂಪಕ ಕಾವ್ಯಕ್ಕೆ ಲಂಕೇಶ್ ಯಾಕೆ ಆಷ್ಟು ಅಂಟಿಕೊಂಡಿದ್ದರು ಎನ್ನುವುದನ್ನು ಅವರ ಪ್ರತಿ ಪದ್ಯವೂ ತೋರುತ್ತದೆ, ಈ ಪದ್ಯಗಳೂ ತೋರುತ್ತವೆ. ’ಎಲ್ಲಿಂದಲೋ ಬಂದವರು’ ಸಿನಿಮ ನೋಡದ, ಹಾಡುಗಳನ್ನು ಕೇಳದ ಮಂದಿ ಕೂಡ ಈ ಪದ್ಯಗಳನ್ನು ಓದಿ ದೃಷ್ಯಗಳನ್ನು ಕಟ್ಟಿಕೊಳ್ಳಲು ಕಣ್ಮುಚ್ಚಿದರೆ, ಆ ಸಿನಿಮಾದ ಆ ಸೀನೂಗಳು ಹಾಗೆ ಕಣ್ ಮುಂದೆ ಬರುತ್ತವೆ. ಅದಲ್ಲವೇ ಭಾಷೆಯ, ಕಾವ್ಯದ ಶಕ್ತಿ!

* * *

ಜೋಗಿ | jogimane@gmail.com 

ಈ 3 ಹಾಡೂ ನನ್ನ ಫೇವರಿಟ್. ಅವುಗಳ ಜೊತೆ ತುಂಬಾ ಕಾಲ ಜೀವಿಸಿದ್ದೆ ನಾನು. ಥ್ಯಾಂಕ್ಯೂ ಸರ್, ಇಂಥ ಹಾಡುಗಳನ್ನು ನೆನಪಿಸುವ ಮೂಲಕ ನನ್ನನ್ನು ಮತ್ತೊಂದು ಕಾಲಕ್ಕೆ ಕೊಂಡೊಯ್ದಿದ್ದಕ್ಕೆ.

* * *

ಚೇತನಾ ತೀರ್ಥಹಳ್ಳಿ  

ನನಗೆ ಸಂಗೀತ ಕೇಳೋದಕ್ಕೆ ಮಾತ್ರ ಗೊತ್ತು.
ಈ ಗೀತೆಗಳನ್ನ ಓದಿದಾಗ ಹಾಡಿನ melody ಪದಗಳ ತೂಕವನ್ನ ಹಿಂದಿಕ್ಕಿಬಿಡುತ್ತಲ್ಲ ಅನಿಸಿತು.

ಅವಧಿ ಇಂಥ ಅಪರೂಪದ ಕೆಲಸ ಮತ್ತೆ ಮತ್ತೆ ಮಾಡುತ್ತಿರಲಿ.

‍ಲೇಖಕರು avadhi

5 February, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading