
-ಕೇಶವ್ ಪ್ರಶಾಂತ್
ಮತ್ತದೇ ಮುದ್ದು ಮುಖ. ಇವತ್ತು ಪಕ್ಕದಲ್ಲೇ. ಬರೀ ಎರಡು ಹೆಜ್ಜೆ ದೂರದಲ್ಲಿ. ಆವಾಗ್ಲೇ ಕೋರಮಂಗಲ ಕೆನರಾ ಬ್ಯಾಂಕ್ ಸ್ಟಾಪ್ ಬಂದಾಗಿದೆ.
ಮಾತನಾಡಿಸಲಾ? ಹೇಗೆ ಪ್ರಾರಂಭಿಸಲಿ?
“Hi ನಾನು … ” – no.no..
“ನೀನ್ಯಾರಾದ್ರೂ ನನಗೇನು” ಎಂದು ಬಿಟ್ಟರೆ?
ಇನ್ನೆರಡು ನಿಮಿಷಕ್ಕೆ Sony world Signal ಬಂದು ಬಿಡುತ್ತದೆ. ಅಲ್ಲಿ ಇಳಿದುಬಿಡ್ತಾಳಾ? ಲಾಸ್ಟ್ ಟೈಮ್ ಅವಳು ಅಲ್ಲೇ ಇಳ್ಕೊಂಡಿದ್ದು.
“ನಿಮ್ಮನ್ನು ಆವಾಗ್ಲೇ ಎಲ್ಲೋ ನೋಡಿದ ಹಾಗಿದೆ. ಎಲ್ಲಿ ಅಂಥಾ ಗೊತ್ತಾಗ್ತಾ ಇಲ್ಲ” ಅನ್ನಲಾ?
“ಎಲ್ಲಿ ನೋಡಿದ್ರಿ? ಸರಿಯಾಗಿ ನೆನಪು ಮಾಡ್ಕೊಂಡು ಹೇಳಿ” ಅಂದು ಬಿಟ್ಟರೆ?
ನೋಡಿದ್ರೆ ಅಷ್ಟೊಂದು ಒರಟಾಗಿ ಮಾತಾಡೋ ಥರಾ ಕಾಣಲ್ಲ.
Wait wait. Let me think how to start the conversation.
“ಥಥ್, ಇದೇ ಆಯ್ತು ನಿನ್ನ ಗೋಳು. ಸರಿಯಾಗಿ ಒಂದು ಹುಡುಗಿ ಜೊತೆ ಮತಾಡಕ್ಕೂ ಬರಲ್ಲ” ನನ್ನನ್ನು ನಾನೆ ಉಗಿದುಕೊಂಡೆ.
ಏನು ಹೇಳಿದ್ರೆ ಚೆನ್ನಾಗಿರ್ಬೋದು…..???
********************************************************
ಅವತ್ಯಾಕೋ ಬೆಳಗ್ಗೇನೇ (ಬೆಳಗ್ಗೆ ಅಂದ್ರೆ ಒಂಥರಾ 11 ಗಂಟೆ ಹೊತ್ತು) ಸಣ್ಣಗೆ ಮಳೆ. ನನ್ನ ಹತ್ರ ರೈನ್ ಕೋಟ್ ಬೇರೆ ಇಲ್ಲ. ಬೈಕ್ ನಲ್ಲಿ ಹೋಗಿ ಒದ್ದೆ ಆಗಿ ಮತ್ತೆ ಇಡೀ ದಿವಸ ಆಫೀಸಿನಲ್ಲಿ ಚಳಿಗೆ ಸಾಯೋ ಕೆಲಸ ಬೇಡ ಅಂಥಾ BTS ದೇವರಿಗೆ ನಮಸ್ಕಾರ ಮಾಡಿ 360B ಹತ್ತಿದೆ.
Oxford College ಪಕ್ಕದ ಬಸ್ ಸ್ಟಾಪ್ ನಲ್ಲಿ ಅವಳು ನಿಂತಿದ್ಲು. ಜೊತೆಗೆ 3-4 ಜನ ಹುಡ್ಗೀರು ಇದ್ರು, ಫ್ರೆಂಡ್ಸ್ ಇರ್ಬೇಕು. ಗುಂಪಿನಲ್ಲಿ ಯಾಕೋ ನನಗೆ ಮೊದ ಮೊದಲು ಕಂಡಿದ್ದು ಅವಳೇ. ಸ್ನಿಗ್ಢ ಮುಖ. Energetic and bubbly. ನೋಡಿದ ಕೂಡಲೇ ಹನಿ ಹನಿ ಮಳೆ ಬಂದಂತೆ, ತಂಪು ಗಾಳಿ ಬೀಸಿದಂತೆಲ್ಲಾ feeling. ಅವಳು ಫ್ರೆಂಡ್ಸ್ ಜೊತೆ ದೀರ್ಘ ಸಮಾಲೋಚನೆಯಲ್ಲಿ ತಲ್ಲೀನ. ಬಸ್ ಏರುತ್ತಾಳೇನೋ ಅಂಥ ಕಾದೆ. ಅವಳು ಬರ್ಲಿಲ್ಲ. ನಮ್ ಬಸ್ ಡ್ರೈವರ್ ತುಂಬಾ ಹೊತ್ತು ಅಲ್ಲಿ ನಿಲ್ಲಿಲ್ಲ.
ಮೋಸ್ಟಾಗಿ Oxford College ನಲ್ಲೇ ಓದುತ್ತಾ ಇರ್ಬೇಕು. Exam ಮುಗಿಸಿ ಮನೆಗೆ ಹೋಗ್ತಾ ಇರ್ಬೇಕು. ಅಥವಾ hall ticket ತಗೊಳಕ್ಕೆ ಕಾಲೇಜ್ ಗೆ ಹೋಗಿ ವಾಪಾಸ್ ಬರ್ತಿರಬೇಕು. ಹುಚ್ಚನ ತಲೆಯಲ್ಲಿ ಓಡೋ ಯೋಚನೆಗಳಂತೆ ನನ್ ತಲೆಯಲ್ಲಿ ನೂರಾರು permutations and combinations.
ಮಡಿವಾಳ ಬಂತು, ಬಸ್ ಇಳಿದು 201 ಗೆ ಕಾಯ್ತಾ ಇದ್ದೆ. ಸ್ವಲ್ಪ ಸಮಯಕ್ಕೆ ಮತ್ತದೇ ಹುಡ್ಗೀರ ಗುಂಪು ಅಲ್ಲಿ ಪ್ರತ್ಯಕ್ಶ. ಯಾವಾಗ ಬಂದ್ರು ಯಾವ ಬಸ್ಸಲ್ಲಿ ಬಂದ್ರು ಗೊತ್ತಿಲ್ಲ. ಈ ಸಲ ಸರಿಯಾಗಿ ನೋಡಿದೆ ಅವಳನ್ನ. ಮುದ್ದಾದ ಮುಖ. ಕೆನ್ನೆ ಮೇಲೆ ಬೇಕೊ ಬೇಡವೋ ಎಂಬಂತೆ ಬೀಳುತ್ತಿದ್ದ ಮುಂಗುರುಳು. ಚೂಯಿಂಗ್ ಗಮ್ ಜಗಿಯುತ್ತಿದ್ದಳು. ಬಿಳಿ ಟಿ ಶರ್ಟ್ ಮೇಲೊಂದು ಗುಲಾಬಿ ಬಣ್ಣದ ಸ್ವೆಟರ್. ಸ್ವಲ್ಪ ಮಬ್ಬಾದ ನೀಲಿ ಜೀನ್ಸ್, ಕಪ್ಪು ಫ್ಲೋಟರ್ಸ್. ಸ್ವೆಟರ್ ಬಣ್ಣಕ್ಕೆ ಹೊಂದಿಕೊಂಡ ಗುಲಾಬಿ ಬಣ್ಣದ ಬ್ಯಾಗ್.
She was beautiful. ಅಥವಾ ನನಗೆ ಹಾಗೆ ಕಾಣಿಸುತ್ತಿದ್ದಳೋ..
ಅವಳ ಫ್ರೆಂಡ್ಸ್ ಯಾವುದೋ ಬಸ್ ಹತ್ತಿಕೊಂಡು ಹೋದ್ರು, ಅವಳು ಅಲ್ಲೇ ಇದ್ದಳು. “ದೊಮ್ಮಲೂರು” ಅಂತ ಬೋರ್ಡ್ ಹೊತ್ತ ಬಸ್ ಒಂದು ಬಂತು. ಡ್ರೈವರ್ ಆತನ ಎಂದಿನ ಅಭ್ಹ್ಯಾಸದಂತೆ ಬಸ್ ಸ್ಟಾಪ್ ಮುಂದೆ ಬಸ್ ನಿಲ್ಲಿಸದೆ ಹತ್ತು
ಮಾರು ದೂರ ಕೊಂಡು ಹೋಗಿ ನಿಲ್ಲಿಸಿದ. 15-20 ಜನ ಬಸ್ ಹಿಂದೆ ಓಡಿ ಹೋದರು, ಸೀಟ್ ಹಿಡಿಯಲು. ಆ ಗುಂಪಿನ ಜೊತೆ ರೇಸ್ ಬೇಡವೆಂದು ಅವಳು ಬಸ್ ಕಡೆಗೆ ನಿಧಾನವಾಗಿ ನಡೆದು ಹೋದಳು. ಅವಳು ಹೋಗಬೇಕಾಗಿದ್ದ ಬಸ್ ಅದಲ್ಲ ಅನ್ಸತ್ತೆ ಅಥವಾ ಜನ ಜಾಸ್ತಿ ಇದ್ದ್ರು ಅಂಥಾನೋ ಏನೋ ವಾಪಾಸ್ ಬಂದಳು.
ದೂರದಲ್ಲಿ ಸಿಲ್ಕ್ ಬೋರ್ಡ್ ಫ್ಲೈ ಓವರ್ ಕಡೆಯಿಂದ 201G ತನ್ನ ಕೊಳೆ ಕೊಳೆಯಾದ ಮೂತಿ ತೋರಿಸುತ್ತಾ ಬಂತು, ಕೆಟ್ಟದಾದ ಇಂಜಿನ್ ಶಬ್ದದೊಂದಿಗೆ. ನಾನು 201G ಹತ್ತಿ ‘ಹೀರೋ ಹೋಂಡಾ ಶೋ ರೂಮ್’ ಗೆ ಒಂದು ಟಿಕೆಟ್ ತಗೊಂಡೆ. ಏನಾಶ್ಚರ್ಯ! ಅವಳು ಕೂಡಾ ಅದೇ ಬಸ್ ಹತ್ತಿಕೊಳ್ಳಬೇಕೇ? ನನಗಿಂತ ಎರಡೇ ಸೀಟ್ ಮುಂದೆ. ಮಾತನಾಡಲು ಧೈರ್ಯ ಬರಲಿಲ್ಲ.
I was just admiring her looks..
ಫೋನ್ ನಲ್ಲಿ ಯಾರ ಜೊತೆಗೋ ಮಾತನಾಡಿದಳು. ಸ್ವಲ್ಪ ಹೊತ್ತಿನ ನಂತರ ಅದೇ ಫೋನ್ ಗೆ ಒಂದು ear phone ತುರುಕಿ ಹಾಡು ಕೇಳತೊಡಗಿದಳು. Casually ಎಂಬಂತೆ she turned back once. Just for a fraction of second ಅಂಥಾರಲ್ಲಾ, ಆ ಥರಾ – ಸೆಕೆಂಡ್ ನ ಹತ್ತನೇ ಒಂದು ಭಾಗದಷ್ಟು ಹೊತ್ತು – our eyes met each other.
ಏನಂದುಕೊಂಡ್ಳೋ ಏನೋ?
Sony World Signal ನಲ್ಲಿ ಬಸ್ ಇಳಿದಳು. ಸಿಗ್ನಲ್ ಕ್ಲಿಯರ್ ಆಗೋ ತನಕಾನೂ ಅವಳನ್ನೇ ನೋಡ್ತಾ ಇದ್ದೆ.
************************************************************************
ಇದಾಗಿ ಆವಾಗಲೇ ಎರಡು ತಿಂಗಳಾಗಿರಬೇಕು. ಮತ್ತೊಂದೆರಡು ಸಲ ಬಸ್ ನಲ್ಲಿ ಬಂದಿದ್ದೆನಾದರೂ ಅವಳ ದರ್ಶನವಾಗಿರಲಿಲ್ಲ. ಕ್ರಮೇಣ ನಾನೂ ಮರೆತು ಬಿಟ್ಟಿದ್ದೆ.
ಇವತ್ತು. ಅದೇ ಬಸ್, ಮತ್ತೆ ಅವಳು. ನೆನಪಿನ ಲಹರಿಯಿಂದ ಹೊರ ಬರುವ ಹೊತ್ತಿಗೆ “ಈಜೀ ಪುರ, ಈಜೀ ಪುರ” ಎಂದು ಕಂಡಕ್ಟರ್ ನ ಕರ್ಕಶ ಸ್ವರ ಕೇಳಿ ಬಂತು.
Oh my god.. Sony World ಕಳೆದು ಮುಂದಿನ ಸ್ಟಾಪ್ ಬಂದಾಗಿತ್ತು. ಅವಳಾಗಲೇ ಇಳಿದು ಹೋಗಿದ್ದಳು.
ಮತ್ತೆ ಬರ್ತಾಳಾ? ಗೊತ್ತಿಲ್ಲ. ಸಿಕ್ತಾಳಾ?
May be some other day.. ನಾನು ಮಾತಾಡಿಸ್ತೀನಾ..?..??? ಆಗತ್ತಾ??
Hope…







the title will attract anyone who is suffering from severe overflow of testosterone. if only the same amount of intelligence had been imbued throughout the write up also…
oh yeah, there is another thing that i liked here, which i somehow like and got to hear (read) after a long time i.e. the word “ಸ್ನಿಗ್ಧ.” instead of the automated phrase “ಸ್ನಿಗ್ಧ ಸೌಂದರ್ಯ,” which should come to a normal mind, it takes me to Tejasvi’s Karvalo. if i’m not wrong, Tejasvi has used something like “ಸ್ನಿಗ್ಧ ದ್ರವ,” referring to the thick, undiluted, viscous liquid (now give a break to your dirty imagination) popularly known as ‘honey.’ 😛 anyways, before any of my comment-followers certify this as a desperate attempt to grab some attention, lemme make it clear that mind is such a tricky entity that it always tries to relate the totally unrelated.
all in all, this is a work that almost-exactly reflected the way i used to imagine when i was 16. or may be, even today’s teens in their 16s might be seeing things the same way, you never know! who knows, it might have been impossible even for time to change certain things! 🙂
“Those were the best days of my life!”
….well, those were certainly not the best days. gosh, how i hated early morning tuitions and that damned teacher. just remembered the line that did sound worthy to be mentioned 😉
regs,
-r
@Rankusa,
Thanks for the read and comment. Since I am not 16, I will take it as a constructive criticism.
And to add on to it, the title isn’t an effort to grab attention. It just flashed on the flow that’s all.
my goodness! you are not even sixteen!? wow! that’s what i call a wise wise head on young shoulders! lol
well, you know what, you didn’t get it. so, just forget it! my bad:)
tc
-r
nice..:-) u write nice
liked it bro…….