ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರ ಕೈಯಲ್ಲಿ ರಿಸೀವರ್ ಹಾಗೇ ಇತ್ತು..

ಅನಿತಾ  ನರೇಶ್ ಮಂಚಿ

ವಿಶ್ವದ ಚರಿತ್ರೆಯಲ್ಲಿ ಒಂದು ಕಪ್ಪು ಚುಕ್ಕಿ ಬೋಪಾಲ್ ದುರಂತ .1984 ರ ಡಿಸೆಂಬರ್ 2 ಮಧ್ಯ ರಾತ್ರಿ ನಿದ್ರಿಸುತ್ತಿದ್ದ ಭೋಪಾಲ್ ಜನತೆ ಉಸಿರು ಕಟ್ಟುವಿಕೆಯಿಂದಾಗಿ ಎಚ್ಚೆತ್ತರು.ಸ್ವಲ್ಪವೇ ಹೊತ್ತು …. ಮತ್ತೆ ಚಿರನಿದ್ರೆ .. ವಿಷಾನಿಲದ

ಸೋರುವಿಕೆಯಿಂದ ಕೆಲವೇ ಗಂಟೆಗಳಲ್ಲಿ 8000 ಜನರು ಪ್ರಾಣ ಕಳೆದು ಕೊಂಡರು. ಈ ದುರಂತದ ವ್ಯಾಪ್ತಿಯನ್ನು ಕಡಿಮೆ ಮಾಡುವಲ್ಲಿ ಒಬ್ಬ ರೈಲ್ವೆ ಸ್ಟೇಷನ್ ಮಾಸ್ಟರ ಪಾತ್ರ ಬಹು ದೊಡ್ಡದು. ಈ ಸುದ್ಧಿಯು ಸ್ಟೇಷನ್ ನ ಪರಿಸರದಲ್ಲಿ ಬಹು ಬೇಗ ಹರಡಿತು.ಎಲ್ಲರೂ ಪ್ರಾಣದ ಉಳಿವಿಗಾಗಿ ಓಡುತ್ತಿದರೆ ಇವರು ಆಫೀಸಿನಲ್ಲೆ ಕುಳಿತರು.

ತನ್ನ ಜೀವ ಅಪಾಯದಲ್ಲಿರುವುದು ತಿಳಿದರೂ ಸಮೀಪದ ರೈಲ್ವೆ ಸ್ಟೇಷನ್ನುಗಳಿಗೆ ಫೋನ್ ಮಾಡಿ ” ಇದು ಭೋಪಾಲ್ ..ಇಲ್ಲಿ ವಿಷಾನಿಲ ಸೋರಿಕೆಯಾಗುತ್ತಿದೆ .ಒಂದು ರೈಲನ್ನು ಈ ಕಡೆಗೆ ಬಿಡಬೇಡಿ ” ಎಂದು ತಿಳಿಸುತ್ತ ಇದ್ದರು ..ಯಾಕೆಂದರೆ ರಾತ್ರಿ ವೇಳೆಯಲ್ಲಿ ಆ ದಾರಿಯಲ್ಲಿ ಅನೇಕ ರೈಲುಗಳು ಹೋಗುತ್ತಿದ್ದವು.ಸಾವಿನೊಂದಿಗೆ ಹೋರಾಡುತ್ತಲೇ ಎಲ್ಲಾ ಕಡೆಗೂ ಫೋನ್ ಮಾಡಿದರು.

ಎಲ್ಲಿಗೋ ಫೋನ್ ಮಾಡುತ್ತಿರುವಾಗಲೇ ಉಸಿರು ಕಟ್ಟಿ ಕುಸಿದು ಪ್ರಾಣ ತ್ಯಾಗ ಮಾಡಿದರು.ಅವರ ಕೈಯಲ್ಲಿ ರಿಸೀವರ್ ಹಾಗೆ ಇತ್ತು. ಅನೇಕರ ಜೀವ ರಕ್ಷಿಸಿದ ಆ ಮಹಾನ್ ಆತ್ಮ ವನ್ನು ನಾವು ನೆನೆಯೋಣ..

‍ಲೇಖಕರು G

3 December, 2012

3 Comments

  1. Sri

    Salute to the great soul. RIP.

  2. Gopaal Wajapeyi

    ಆ ಪುಣ್ಯಾತ್ಮ ಕಣ್ಣ ಮುಂದೆ ಬಂದ… ಅವನಿಗೊಂದು ನಮನ…

  3. Prasad V Murthy

    ಕಣ್ಣಾಲಿಗಳು ಒದ್ದೆಯಾದವು. ಅವರ ಶ್ರಮ ಮತ್ತು ಸೇವೆಗೆ ನಿಬ್ಬೆರಗಾಗಿದ್ದೇನೆ. ಅವರ ಆತ್ಮಕ್ಕೆ ಸಾಸ್ಟಾಂಗ ಪ್ರಣಾಮಗಳು. ಇ ಸತ್ಯವನ್ನು ಹಂಚಿಕೊಂಡಿದ್ದಕ್ಕೆ ನಿಮಗೂ ನಮನಗಳು ಅಕ್ಕಾ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading