‘ಅಮ್ಮ ಪ್ರಶಸ್ತಿ ‘
ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಗೆ ಪ್ರಸಕ್ತ ಸಾಲಿಗೆ ಖ್ಯಾತ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಅನಾತ್ಮ ಕಥನ’, ಸಂಧ್ಯಾ ಹೊನಗುಂಟಿಕರ್ ಅವರ ಕಥಾ ಸಂಕಲನ ‘ಸೂರ್ಯಮುಖಿ’, ವೀರಣ್ಣ ಮಡಿವಾಳರ ಅವರ ‘ನೆಲದ ‘ ಅಕ್ಷತಾ ಕೆ ಅವರ ‘ಕಾಡು ತೊರೆಯ ಜಾಡು’ ಮತ್ತು ಪತ್ರಕರ್ತ ಶ್ರೀನಿವಾಸಗೌಡ ಅವರ ‘ಮೀಡಿಯಾ ಡೈರಿ’ ಕೃತಿಗಳನ್ನು ಈ ಸಾಲಿನ ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದೇ ನವೆಂಬರ್ 26 ರಂದು ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಅಮ್ಮ ಗೌರವ ಪುರಸ್ಕಾರ : ಕಳೆದ ವರ್ಷದಿಂದ ಆರಂಭಗೊಂಡ, ‘ಅಮ್ಮ ಗೌರವ ಪುರಸ್ಕಾರ’ಕ್ಕೆ ಈ ಬಾರಿಯೂ ಹಿರಿಯರನ್ನು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸತ್ಕರಿಸಲಾಗುತ್ತಿದೆ.
ಈ ಬಾರಿ ಅಮ್ಮ ಗೌರ ಪುರಸ್ಕಾರ, ಹಿರಿಯ ಲೇಖಕ-ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಲಿಂಗಣ್ಣ ಸತ್ಯಂಪೇಟೆ ಶಹಾಪುರ, ಸುಬ್ಬು ಹೊಲೆಯಾರ್, ಲೇಖಕ ಜಿ.ಬಿ.ವಿಸಾಜಿ ಬೀದರ್, ಸುಜಾತಾ ಜಂಗಮಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗುವುದು.
ಇದು 11 ನೇ ವರ್ಷದ ‘ಅಮ್ಮ ಪ್ರಶಸ್ತಿ’ ಕಾರ್ಯಕ್ರಮ : ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿಗಾಗಿ ಸ್ಥಾಪಿಸಿದ ಅಮ್ಮ ಪ್ರಶಸ್ತಿಗೆ ಈಗ ಹನ್ನೊಂದನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮ ಪ್ರಶಸ್ತಿಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ, ಗೌರವಿಸಿದ್ದಾರೆ.
ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಅಮ್ಮ ಪ್ರಶಸ್ತಿ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪತ್ರಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ, ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ.
ದಶಮಾನದ ಸಂಭ್ರಮದಿಂದ ಆರಂಭಗೊಂಡ ಅಮ್ಮ ಗೌರವ ಪುರಸ್ಕಾರವನ್ನು ಈ ಬಾರಿಯೂ ಮುಂದುವರಿಸಲಾಗಿದೆ. ಐವರಿಗೆ ಅಮ್ಮ ಪ್ರಶಸ್ತಿ ಹಾಗು ಐದು ಜನರಿಗೆ ಅಮ್ಮ ಗೌರವ ಪುರಸ್ಕಾರ ನೀಡಲಾಗುತ್ತಿದೆ ಎಂದು ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.






priyare namaskara. ee varshada aayke
nijavaada pratibhegalige sandide.
nimma saahitya preeti khushi needuttide. Haarika shubhaashayagalu.
thanq. nimma preetiy haraike svikarisuve. sadhyavadre programme ge banni.
-mahipalreddy munnur
i am happy, congrats all of you. late to say, i was on medical leave.