ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಮ್ಮ ಪ್ರಶಸ್ತಿ’ ಫೋಟೋ ಆಲ್ಬಮ್

ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಯಾದ ‘ಅಮ್ಮ ಪ್ರಶಸ್ತಿ’ಯನ್ನು ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಇತ್ತೀಚಿಗೆ ಹಬ್ಬದ ಸಡಗರದ ನಡುವೆ ವಿತರಿಸಲಾಯಿತು.

ಖ್ಯಾತ ಚಲನಚಿತ್ರ ಸಂಗೀತಗಾರ, ಗೀತೆ ರಚನಕಾರರಾದ ವಿ ಮನೋಹರ್ ಅವರು ಪ್ರಶಸ್ತಿಗಳನ್ನು ವಿತರಿಸಿದರು.

ಕಲಬುರ್ಗಿ ವಿಶ್ವವಿದ್ಯಾಲಯದ ಕುಲಪತಿ ಡಾ ಪರಿಮಳ ಅಂಬೆಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಶಸ್ತಿ ಸಮಿತಿಯ ಅಧ್ಯಕ್ಷೆ ರತ್ನಕಲಾ ರೆಡ್ಡಿ, ಪತ್ರಕರ್ತ ಮಹಿಪಾಲ ರೆಡ್ಡಿ, ಜಿ ಎನ್ ಮೋಹನ್, ಪ್ರಭಾಕರ ಜೋಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ಎಲ್’ ಕಾದಂಬರಿಗಾಗಿ ಜೋಗಿ ಅವರಿಗೆ, ‘ನಿಜ ರಾಮಾಯಣದ ಅನ್ವೇಷಣೆ’ ಗಾಗಿ ಜಿ ಎನ್ ನಾಗರಾಜ್ ಅವರಿಗೆ, ‘ಬಕುಲದ ಬಾಗಿಲಿನಿಂದ’ ಕೃತಿಗೆ ಸುಧಾ ಆಡುಕಳ ಅವರಿಗೆ, ‘ಟ್ರಯಲ್ ರೂಮಿನ ಅಪ್ಸರೆಯರು’ ಕೃತಿಗಾಗಿ ಭುವನಾ ಹಿರೇಮಠ ಅವರಿಗೆ, ‘ಏಕತಾರಿ’ಗಾಗಿ ಚನ್ನಪ್ಪ ಕಟ್ಟಿ ಅವರಿಗೆ, ‘ಮಾಸ್ತರರ ನೆರಳಾಗಿ’ ಕೃತಿಗಾಗಿ ಪ್ರಭಾಕರ ಸಾತಖೇಡ ಅವರಿಗೆ ಅಮ್ಮ ಪ್ರಶಸ್ತಿಯನ್ನು ವಿತರಿಸಲಾಯಿತು.

ಕನ್ನಡ ನಾಡು ನುಡಿ ಸೇವೆಗಾಗಿ ವಿಲಾಸವತಿ ಖೂಬಾ, ಎ ಕೆ ರಾಮೇಶ್ವರ್, ಜೀವನರಾಮ ಸುಳ್ಯ, ಲಿಂಗಾರೆಡ್ಡಿ ಶೇರಿ, ಪ್ರೊ ದೇವರಕೊಂಡಾ ರೆಡ್ಡಿ ಅವರಿಗೆ ಪ್ರಶಸ್ತಿ ನೀಡಲಾಯಿತು.

ಇಡೀ ಕಾರ್ಯಕ್ರಮದ ಸಂಭ್ರಮದ ನೋಟ ಇಲ್ಲಿದೆ.

ಮಹೇಶ ಮತ್ತು ಮುತ್ತು ಕಂಡಂತೆ 

 

 

 

 

‍ಲೇಖಕರು avadhi

30 November, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading