ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಮ್ಮ’ ಪ್ರಶಸ್ತಿಯಲ್ಲಿ ಕಾವ್ಯಕ್ಕೆ ಬಂಪರ್!

ಐವರು ಕವಿಗಳಿಗೆ ಇದೇ ಮೊತ್ತ ಮೊದಲ ಬಾರಿ ಅಮ್ಮ ಪ್ರಶಸ್ತಿ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ ಘೋಷಣೆಯಾಗಿದ್ದು ಇದರಲ್ಲಿ ಕಾವ್ಯ ಕೃತಿಗಳೇ ಸಿಂಹಪಾಲು ಪಡೆದಿವೆ.

ಇದೆ ಮೊದಲ ಬಾರಿಗೆ ಪ್ರಶಸ್ತಿಯನ್ನು ಐದರಿಂದ ೧೫ ಮಂದಿಗೆ ಏರಿಕೆ ಮಾಡಲಾಗಿದ್ದು, ಈ ಪೈಕಿ ಐದು ಕವನ ಸಂಕಲನಗಳು ಬಹುಮಾನ ಪಡೆದಿವೆ.

ಕಾವ್ಯ : ಜೀರೋ ಬ್ಯಾಲೆನ್ಸ್ (ಡಾ.ಶ್ರುತಿ ಬಿ ಆರ್), ರತಿಯ ಕಂಬನಿ (ನಂದಿನಿ ಹೆದ್ದುರ್ಗ), ಮೈ ಮುಚ್ಚಲೊಂದು ತುಂಡುಬಟ್ಟೆ (ಶ್ರೀದೇವಿ ಕೆರೆಮನೆ), ಸರಹದ್ದುಗಳಿಲ್ಲದ ಭೂಮಿಯ ಕನಸು (ನಿರ್ಮಲಾ ಶೆಟ್ಟರ್), ಬಿರಿದ ನೆಲದ ಧ್ಯಾನ (ಸಹದೇವ ಯರಗೊಪ್ಪ) ಈ ಕೃತಿಗಳು .

ಉಳಿದಂತೆ ಕಾದಂಬರಿ : ಮಾಯಾಕಿನ್ನರಿ (ಡಾ.ಭೈರಮಂಗಲ ರಾಮೇಗೌಡ)- ಒಳ್ಕಲ್ಲ ಒಡಲು(ಕಾವ್ಯಶ್ರೀ ಮಹಾಗಾಂವಕರ್), ಕಥೆ : ಕರಕೀಯ ಕುಡಿ(ಡಾ.ಆನಂದ ಋಗ್ವೇದಿ)-ಇಂಜಿಲಗೆರೆ ಪೋಸ್ಟ್ (ಸುನೀತಾ ಕುಶಾಲನಗರ), ಪ್ರವಾಸ : ನಕ್ಷತ್ರಗಳ ಸುಟ್ಟ ನಾಡಿನಲ್ಲಿ(ಭಾರತಿ ಬಿ ವಿ)-ಕೋಟಿ(ಡಾ.ಅಶೋಕ ನರೋಡೆ), ಸಂಕೀರ್ಣ: ಮಹಾತ್ಮರ ಚರಿತಾಮೃತ (ಪ್ರಭು ಚೆನ್ನಬಸವ ಸ್ವಾಮೀಜಿ ಅಥಣಿ – ಕರೋನಾ ಮುಕ್ತೆಯ ಕಥನ (ಡಾ.ಕೆ.ಆರ್.ಸಂಧ್ಯಾರೆಡ್ಡಿ), ಸಂಶೋಧನೆ: ಲೋಕರೂಢಿಯ ಮೀರಿ (ಚೇತನ್ ಸೋಮೇಶ್ವರ), ಹಿಂದೂಸ್ತಾನಿ ಸಂಗೀತ ವಾಹಿನಿ (ಲಕ್ಷ್ಮಿ ಶಂಕರ ಜೋಶಿ) ಪ್ರಶಸ್ತಿಗೆ ಪಾತ್ರವಾಗಿವೆ.

ಈ ಬಾರಿ ೫೨೪ ಕೃತಿಗಳು ಬಂದಿದ್ದು ಅಮ್ಮ ಪ್ರಶಸ್ತಿ ಪ್ರತಿಷ್ಠಿತ ಗೌರವ ಪಡೆದಿರುವುದಕ್ಕೆ ಸಾಕ್ಷಿ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಇದೇ ನವೆಂಬರ್ ೨೬ ರಂದು ಸಂಜೆ ೫.೩೦ಕ್ಕೆ ಸೇಡಂ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಅಮ್ಮ ಪ್ರಶಸ್ತಿಗೆ ೨೧ನೇ ವರ್ಷದ ಸಂಭ್ರಮ : ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ಅಮ್ಮ ಪ್ರಶಸ್ತಿ’ಗೆ ಈಗ ೨೧ ನೇ ವರ್ಷದ ಸಂಭ್ರಮ.

‍ಲೇಖಕರು avadhi

12 November, 2021

1 Comment

  1. ಲಲಿತಾ ಸಿದ್ಧಬಸವಯ್ಯ

    ಅಮ್ಮ – ಧನ್ಯವಾದಗಳು. ಕಾವ್ಯಕ್ಕೆ ಮಹತ್ತು ಸಿಕ್ಕಿದ್ದು ಅಪರಿಮಿತ ಖುಷಿ.

    ಇದರಲ್ಲಿ ಎಂಟು ಕೃತಿಗಳನ್ನು ಓದಿರುವೆ ಎಂಬುದು ನನ್ನ ಖುಷಿ. ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading