ಕಲಬುರ್ಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 15ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ 2014-15ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ.
ಕಳೆದ 14 ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನೀಡಲಾಗುತ್ತಿರುವ ಈ ಪ್ರಶಸ್ತಿಗೆ ಈಗ 15 ರ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಗಾಗಿ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳ ಎರಡು ಪ್ರತಿಗಳ
ನ್ನು ಕಳುಹಿಸಬಹುದಾಗಿದೆ.
ನ್ನು ಕಳುಹಿಸಬಹುದಾಗಿದೆ.ಕೃತಿಗಳನ್ನು ಸ್ವೀಕರಿಸಲು ಅಕ್ಟೋಬರ್ 30, ಕೊನೆಯ ದಿನಾಂಕ
ಸಾಹಿತ್ಯದ ಪ್ರಕಾರಗಳಾದ ಕಥೆ, ಕಾದಂಬರಿ, ಕಾವ್ಯ, ನಾಟಕ, ಸಂಪಾದನೆ, ಸಂಶೋಧನೆ, ಅನುವಾದ, ವಿಮರ್ಶೆ, ಪ್ರಬಂಧ ಸೇರಿದಂತೆ ಯಾವುದೇ ಕೃತಿಗಳನ್ನು ಎರಡು ಪ್ರತಿ ಕಳುಹಿಸಬೇಕು. ಅಕ್ಟೋಬರ್ 30 ರ ನಂತರ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರಶಸ್ತಿಯಲ್ಲಿ ಐದು ಜನರಿಗೆ ಆಯ್ಕೆ ಮಾಡಲಾಗುವುದು. ತಲಾ 5000 ನಗದು ಪುರಸ್ಕಾರ ಸೇರಿದಂತೆ ಸತ್ಕಾರ, ಪ್ರಮಾಣ ಪತ್ರ ನೀಡಲಾಗುವುದು. ನವೆಂಬರ್ 26 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.ಕೃತಿಗಳನ್ನು ಕಳುಹಿಸಬೇಕಾದ ವಿಳಾಸ : ಮಹಿಪಾಲರೆಡ್ಡಿ ಮುನ್ನೂರು, ಸಂಸ್ಥಾಪಕ ಸಂಚಾಲಕ, ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ “ಅಮ್ಮ ಮನೆ”, ರಾಮಚಂದ್ರ ಬಡಾವಣೆ, ಜಿ.ಕೆ.ಕ್ರಾಸ್, ಊಡಗಿ ರಸ್ತೆ, ಸೇಡಂ-585 222. ಕಲಬುರಗಿ ಜಿಲ್ಲೆ. ಹೆಚ್ಚಿನ ವಿವರಗಳಿಗಾಗಿ, ಮೊಬೈಲ್ ಸಂಖ್ಯೆ: 9731666052 ಸಂಪರ್ಕಿಸಬಹುದು.





0 Comments