ಪೀಳಿಗೆ
ಎಂ ಆರ್ ಕಮಲ
ಕಲೆ : ಕೃಷ್ಣಾ ರಾಯಚೂರು
ಅಜ್ಜಿಗೆ,
ಕಿಟಕಿಯಿರದ
ನಿನ್ನ `ಚಿಕ್ಕ ಮನೆ’ ಪೆಟ್ಟಿಗೆಯಲ್ಲಿ ಸಿಕ್ಕಿದ್ದು:
ಬೆರಳಿಗೇರದ ಉಂಗುರ, ಅಂಚು ಕಪ್ಪಾದ ಸೀರೆ,
ಬೆಳ್ಳಿ ಕಂದಿದ ಕುಂಕುಮದ ಭರಣಿ,
ಹರಳಿರದ ಒಂಟಿ ನಕ್ಷತ್ರ ಓಲೆ.
ಕನಸಿತ್ತೆ ಕಬ್ಬಿಣದ ಪೆಟ್ಟಿಗೆಯಲ್ಲಿ?
ಮುಚ್ಚಿಟ್ಟ ಅಡುಗೆ ಹಾಗೆ ನಿಗೂಢ
ಪಕ್ವಾನ್ನದ ಪರಿಮಳ ಹಿಡಿದು ಊಹಿಸಿದ್ದಷ್ಟೆ!
ಅಮ್ಮನಿಗೆ,
ಅಗಲ ಕಿಟಕಿಯ
ನಿನ್ನ ವಾರ್ಡ್ ರೋಬಿನಲ್ಲಿ
ಹ್ಯಾಂಗ್ ಮಾಡಿದ ಕಸೂತಿ ಕಾಟನ್ ಸೀರೆ,
ಬ್ರೇಸ್ ಲೆಟ್, ಥರಾವರಿ ಇಯರ್ ರಿಂಗ್,
ಹಳೆಯ ಪ್ರೇಮ ಪತ್ರ, ಗೆಳೆಯನ ಭಾವಚಿತ್ರ
ಅರ್ಧ ಅರಳಿದ್ದ ಕನಸು, ಅರೆ ಬರೆ ಕವಿತೆ
ತೆರೆದಂತೆ ಕಂಡರೂ -ಎಲ್ಲವು ಅಸ್ಪಷ್ಟ
ಅಮ್ಮ,
ನನ್ನದು ಪೂರ್ವಕ್ಕೆ ತೆರೆದ ಕಿಟಕಿ
ನಿನ್ನ ಕಣ್ಣಲ್ಲಿ ಮುಚ್ಚಿಟ್ಟ
ಸೂರ್ಯನ ಹುಡುಕಿ ತರುವ ಛಲ
ಕತ್ತಲ ಕನಸುಗಳಿಗಿಲ್ಲಿ ಬೆಳಕು-ಬಣ್ಣ
ನಿಗೂಢ, ಅಮೂರ್ತತೆಗೀಗ ರೂಪ-ಸ್ಪಷ್ಟ







ಹೌದು, ಈ ಕಣ್ಣು ಅ’ಪೂರ್ವ. ಕವನವೂ! ಖುಷಿಯಾಯ್ತು ಓದಿ.
Lovely!
chandada kavite…
sangeetha raviraj
ಸೂಪರ್ ಆಗಿದೆ ಅಮ್ಮಾ 🙂
– ಪ್ರಸಾದ್.ಡಿ.ವಿ.
beautyfull….
nijavada ‘kavithe’.
ತುಂಬಾ ಮುದ್ದಾದ, ನೈಜತೆಯಿಂದ ಕೂಡಿದ ಕವಿತೆ ಕಮಲಾ!
ಸ್ಪರ್ಶಾ ಸ್ಪರ್ಶ ಇದಕ್ಕೆ ಇನ್ನೂ ಹೆಚ್ಚಿನ ಔಚಿತ್ಯಪೂರ್ಣತೆ ಮತ್ತು ಪ್ರಸ್ತುತತೆ ತಂದುಕೊಡುತ್ತದೆ ಅಂತ ನನ್ನ ಭಾವನೆ!