ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನ ಪುಸ್ತಕ ಬಿಡುಗಡೆ ಮಾಡಿದ ಅಪರೂಪದ ಮಕ್ಕಳು…

ಹ ರಾ ಮಹಿಶ ಬುದ್ಧ

ಚಳವಳಿಯ ಒಡನಾಡಿ ಯುವ ಹೋರಾಟಗಾರ ವಕೀಲ ಸೋದರ ಸುನೀಲ ಕುಮಾರ ಗುನ್ನಾಪುರ ಹಾಗು ಯುವಲೇಖಕ ಕಥೆಗಾರ ಅನಿಲ ಕುಮಾರ ಗುನ್ನಾಪುರ ಅವರ ತಾಯಿಯವರಾದ ಲೇಖಕಿ ಶೋಭಾ ಗುನ್ನಾಪುರ ಅಮ್ಮನವರ “ಭೂಮಿಯ ಋಣ” ಕಥಾಸಂಕಲನ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನೆನ್ನೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ಜರುಗಿತು.

ನಮ್ಮ ಹಿರಿಯ ತಲೆಮಾರು ಓದಿಲ್ಲದಿರಬಹುದು ಅಥವಾ ಕಡಿಮೆ ಓದಿರಬಹುದು ಆದರೆ ಹೆಚ್ಚು ಓದಿದವರಿಗಿಂತ ಹೆಚ್ಚು ಜ್ಞಾನ ಹೆಚ್ಚು ಹೆಚ್ಚು ತಿಳುವಳಿಕೆ ಹೆಚ್ಚು ಬದ್ಧತೆ ಹೆಚ್ಚು ಜೀವನ ಪ್ರೀತಿ ಇರುತ್ತದೆ. ಜೊತೆಗೆ ತನ್ನ ಮುಂದಿನ ತಲೆಮಾರನ್ನೂ ತಿದ್ದುವ ಅಪಾರ ಜೀವನ ಪ್ರೀತಿ ಇರುತ್ತದೆ. ಅದಕ್ಕೆ ಸಾಕ್ಷಿ ಶೋಭಾ ಅಮ್ಮ. ತನ್ನಂತೆ ತನ್ನ ಮಕ್ಕಳನ್ನೂ ಉತ್ತಮ ಹಾದಿಯಲ್ಲಿ ಬೆಳೆಸುವ ಸವಾಲಿನ ಕೆಲಸದಲ್ಲಿಯೂ ಶೋಭ ಅಮ್ಮ ಗೆದ್ದಿದ್ದಾರೆ..! ಅವರ ಬೆನ್ನಿಗೆ ನಿಂತ ಅವರ ಪತಿ ಹಾಗು‌ ಕುಟುಂಬ ವರ್ಗದವರಿಗೆ ಹಾಗು ಅಮ್ಮನ ಪುಸ್ತಕವನ್ನು ಬಿಡುಗಡೆಗೆ ಅಣಿಗೊಳಿಸಿದ ಅವರ ಪ್ರೀತಿಯ ಮಕ್ಕಳಿಗೆ ಆ ಸುಂದರ ಕಾರ್ಯಕ್ರಮಕ್ಕೆ ನಾವೂ ಸಾಕ್ಷಿಯಾಗುವಂತೆ ಮಾಡಿದ ಎಲ್ಲರಿಗೂ ಧನ್ಯವಾದಗಳ ಸಮರ್ಪಣೆ..

ಶೋಭಾ ಅಮ್ಮಾ… ಅಭಿನಂದನೆಗಳು ನಿಮಗೆ ಧನ್ಯವಾದಗಳು ನಿಮಗೆ. ಇನ್ನೂ ಹೆಚ್ಚೆಚ್ಚು ಬರೆಯಿರಿ ನಮಗೆಲ್ಲಾ ಹರಸುತ್ತಾ ಮಾರ್ಗದರ್ಶನ ಮಾಡುತ್ತಾ ಹೆಚ್ಚಕಾಲ ಆರೋಗ್ಯ ನೆಮ್ಮದಿಯಿಂದ ಬದುಕಿ.

‍ಲೇಖಕರು Admin

18 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading