ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮೆರಿಕಾದಲ್ಲಾಗಿದ್ದು ಭಾರತದಲ್ಲಾಗೋಕೆ 20 ವರ್ಷಗಳಾದ್ರೂ ಬೇಕು ಬಿಡಿ

ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಆರಂಭಿಸಿದ್ದೇವೆ.

ಮೊದಲ ಕಂತು ಅಮೆರಿಕಾದ ವೃತ್ತಪತ್ರಿಕೆಗಳ ಇಂದಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿತ್ತು. ಅಮೆರಿಕ ಪತ್ರಿಕೆಗಳ ಓದುಗರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪತ್ರಿಕಾ ಸಂಸ್ಥೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ ಎಂಬುದರತ್ತ ಲೇಖನ ಗಮನ ಸೆಳೆದಿತ್ತು.

ಈ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಮಾಧ್ಯಮದ ಬಗೆಗಿನ ಒಂದು ಆರೋಗ್ಯಕರ ಚರ್ಚೆ ಆರಂಭವಾಗಿದೆ. ಬನ್ನಿ ಭಾಗವಹಿಸಿ-

waste_paper

ಅಜಯ್-

ಅಮೆರಿಕಾದಲ್ಲಾಗಿದ್ದು ಭಾರತದಲ್ಲಾಗೋಕೆ ಅನಂತರ ಇಪ್ಪತ್ತು ವರ್ಷಗಳಾದ್ರೂ ಬೇಕು ಬಿಡಿ

ಮಡಿವಂತ ಪತ್ರಿಕೋದ್ಯಮ ಎಂದು ಹಳೆಯದನ್ನು ಹೀನೈಸುವುದು ಈಗಿನ ಪತ್ರಿಕೋದ್ಯಮದವರ ಫ್ಯಾಷನ್ ಇರಬಹುದು. ಆದರೆ ಅದರಲ್ಲಿ ನಿಜವಾದ ವೃತ್ತಿಪರತೆ ಇತ್ತು, ಪತ್ರಿಕಾ ಧರ್ಮವಿತ್ತು. ಈಗಿನಂತೆ ಸುದ್ದಿಗಿಂತ ಜಾಹೀರಾತೇ ಮುಖ್ಯ ಎನ್ನುವ ಮನೋಭಾವವಿರಲಿಲ್ಲ. ಒಂದು ಮಿತಿ ಇತ್ತು. ಪತ್ರಿಕೆಗಳಿಗೆ ಒಂದು ಸಾಮಾಜಿಕ ಜವಾಬ್ದಾರಿ ಇತ್ತು. ಈಗಿನ ಪತ್ರಿಕೆಗಳ ಸುದ್ದಿ ಹಾದರದಿಂದ ಇನ್ನು ಸ್ವಲ್ಪ ವರ್ಷದಲ್ಲಿ ಪತ್ರಿಕೆಗಳೂ, ಮಾಧ್ಯಮಗಳೂ ಜನರ ನಂಬಿಕೆ ಕಳೆದುಕೊಳ್ಳುವುದಂತೂ ಗ್ಯಾರಂಟಿ. ಬೆತ್ತಲೆ ಚಿತ್ರ ಹಾಕುವುದು, ಅಸಂಬದ್ಧ ಹೆಡ್ಡಿಂಗು ಕೊಡುವುದು, ವೇಸ್ಟ್ ಸುದ್ದಿಯನ್ನು ಹೈಲೈಟು ಮಾಡುವುದು – ಇದನ್ನೇ ’ಬದಲಾವಣೆ’ ಎಂದುಕೊಂಡಿದ್ದಾರೆನೋ ಈಗಿನ ಪತ್ರಿಕೋದ್ಯಮದವರು ಅಂತ ಆತಂಕವಾಗುತ್ತಿದೆ!

ರವಿ ಹೆಗಡೆ-

@ ಅಜಯ್,

1. ಹೌದು. ಅಮೆರಿಕದಲ್ಲಾದದ್ದು ಭಾರತದಲ್ಲಿ ಆಗಲು ಇಪ್ಪತ್ತು ವರ್ಷಗಳಾದರೂ ಬೇಕು ಅಂದಿದ್ದೀರಿ. ನನಗೂ ಹೆಚ್ಚು ಕಡಿಮೆ ಹಾಗೇ ಅನ್ನಿಸುತ್ತಿದೆ. ಅಲ್ಲದೇ, ಹಿಂದಿ, ತಮಿಳು, ತೆಲುಗು, ಮಲೆಯಾಳಂ, ಬೆಂಗಾಲಿಯಂಥ ಕೆಲವು “ಆರ್ಥಿಕ-ಸಬಲ”ಭಾರತೀಯ ಭಾಷೆಯ ಪತ್ರಿಕೆಗಳು ಅಷ್ಟು ಬೇಗ ಅಳಿಯುವುದಿಲ್ಲ. ಆದರೆ ಕನ್ನಡದಂಥ “ಆರ್ಥಿಕ-ಬಲಹೀನ” ಭಾಷೆಯ ಪತ್ರಿಕೆಗಳು ಬೇಗನೆ ಸೊರಗುವ ಸಂಭವ ಇಲ್ಲದಿಲ್ಲ.

2. ಪ್ರಾಡಕ್ಟ್ ಲೈಫ್ ಸೈಕಲ್‌ನಲ್ಲಿ, ಅವಸಾನ ಎಂದರೆ, Zero-existence ಅಂತ ಅರ್ಥ ಅಲ್ಲ. Insignificant presence ಅಂತ ಅರ್ಥ. ಉದಾಹರಣೆಗೆ, ಇವತ್ತು ಗ್ರಾಮಾಫೋನ್ ಡಿಸ್ಕ್ ಅವಸಾನಗೊಂಡಿದೆ. ಹಾಗಂತ ಅದು ಅಲ್ಲೋ ಇಲ್ಲೋ ಒಂದಷ್ಟು ಇದ್ದೇ ಇರುತ್ತದೆ. ಈಗ ಕ್ಯಾಸೆಟ್ ಬಹುತೇಕ ಅವಸಾನಗೊಂಡಿದೆ. ಹಾಗಂತ ಗ್ರಾಮಾಂತರ ಪ್ರದೇಶಗಳಲ್ಲಿ ಕ್ಯಾಸೆಟ್ ಇನ್ನೂ ಇದೆ. ಇತ್ತೀಚೆಗೆ ಬೆಂಗಳೂರಿನ ಆನಂದ್ ಆಡಿಯೋ ಮಾಲಿಕ ಹೇಳುತ್ತಿದ್ದರು “ಬೆಂಗಳೂರಿನಲ್ಲಿ ಕ್ಯಾಸೆಟ್ ಮಾರಾಟವಾಗೋದೇ ಇಲ್ಲ. ಆದರೆ, ಸ್ಮಾಲ್ ಟೌನಲ್ಲಿ ಇನ್ನೂ ಸ್ಪಲ್ಪ ಡಿಮಾಂಡ್ ಇದೆ. ಅದಕ್ಕೇ ಸ್ಪಲ್ಪ ಸ್ವಲ್ಪ ಕ್ಯಾಸೆಟ್ಟೂ ಬಿಡುಗಡೆ ಮಾಡ್ತಿದೀವಿ” ಅಂತ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ಯಾಸೆಟ್ಟಿಗೆ ಡಿಮಾಂಡೇ ಇಲ್ಲ. ಅಂದರೆ, ಕ್ಯಾಸೆಟ್ ಇಂದು Insignificant ಆಗಿದೆ. ಅವಸಾನದ ಹಂತದಲ್ಲಿರುವ ಮುಂದಿನ ಮಾಧ್ಯಮ ಸೀಡಿಗಳು… ನಂತರದಲ್ಲಿ ಡಿವಿಡಿಗಳು…

ಪತ್ರಿಕೆಯ ಅವಸಾನವೂ ಹಾಗೇ… ಅಂತ ನನ್ನ ಸ್ಪಷ್ಟನೆ.

3. ಮಡಿವಂತಿಕೆ ಎಂದು ನಾನು ಹೇಳಿದ್ದನ್ನು ತಾವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. (ಅಥವಾ ನನ್ನ ಲೇಖನದಲ್ಲಿ ಈ ಕುರಿತ ಸ್ಪಷ್ಟ ವಿವರಣೆ ಇಲ್ಲ.) ಮಡಿವಂತಿಕೆ ಅಂದರೆ, ನಾನು ಸೆಕ್ಸು, ಗ್ಲಾಮರ್ರು ಕುರಿತು ಹೇಳಿದ್ದಲ್ಲ. ಅದನ್ನೆಲ್ಲ ತೋರಿಸುವುದರಲ್ಲಿ, ಅಮೆರಿಕದ ಪತ್ರಿಕೆಗಳೇನೂ ಕಡಿಮೆಯಿಲ್ಲ. (ಆದರೂ, ಭಾರತೀಯ ಇಂಗ್ಲಿಷ್ ಪತ್ರಿಕೆಗಳಷ್ಟು ಬೇಕಾಬಿಟ್ಟಿಯಲ್ಲ ಎಂಬುದು ನಿಜ.) ನಾನು ಬರೆದದ್ದು ಪತ್ರಿಕೆಯ News presentation ಹಾಗೂ News Chemistry ಕುರಿತು. ಉದಾಹರಣೆಗೆ – ಚಾರ್ಲಿ ಚಾಪ್ಲಿನ್ ಚಿತ್ರಗಳು ಕಳಪೆ ಎಂದು ನಾನು ಹೇಳುವುದೇ ಇಲ್ಲ. ಆದರೆ, ಸ್ಪೀಲ್ ಬರ್ಗ್ ಚಿತ್ರ ನಿರ್ಮಾಣ ತಂತ್ರಗಳು ಹಾಗೂ ಚಿತ್ರದ ಪ್ರಸೆಂಟೇಶನ್ ಈಗ ಎಷ್ಟೋ ಬದಲಾಗಿದೆ. ಹಾಗಂತ ಚಾಪ್ಲಿನ್ ಬಳಸುತ್ತಿದ್ದ ಪದ್ಧತಿಯೇ ಸರಿ. ಸ್ಪೀಲ್ ಬರ್ಗ್ ಪದ್ಧತಿ ತಪ್ಪು ಎಂದು ಹೇಳಲಾಗುವುದಿಲ್ಲ. ಇಂಥ ಚೇಂಜ್ ಅಮೆರಿಕದ ಅನೇಕ ಪತ್ರಿಕೆಗಳಲ್ಲಿ ಇತ್ತೀಚಿನವರೆಗೂ ಇರಲಿಲ್ಲ. ಅವು ಟೀವಿ ಯುಗವನ್ನು ಮರೆತು ಸುದ್ದಿಯನ್ನು ಹಳೆಯ ಕಾಲದ ಶೈಲಿಯಲ್ಲೇ ಪ್ರಸ್ತುತಪಡಿಸುತ್ತಿದ್ದವು. ಪತ್ರಿಕೆಯಲ್ಲಿ ಬಣ್ಣಗಳು ಹಾಗೂ ವಿನ್ಯಾಸಕ್ಕೆ ಹಳೆಯ ಮಡಿವಂತಿಕೆ ಸೂತ್ರಗಳನ್ನೇ ಬಳಸುತ್ತಿದ್ದವು. ಮುಖಪುಟದಲ್ಲಿ ಜಾಹೀರಾತು ಹಾಕುವುದು ತಪ್ಪು ಎಂಬುದು ಅಮೆರಿಕದ ಅನೇಕ ಪತ್ರಿಕೆಗಳ ವಾದವಾಗಿತ್ತು. ಈ ಸೂತ್ರಗಳನ್ನು ಬಳಸದ ಪತ್ರಿಕೆಗಳನ್ನು ಮೂದಲಿಸುವುದು, ಕೀಳಾಗಿ ನೋಡುವುದು ಅಮೆರಿಕದ ಅನೇಕ ಪತ್ರಿಕಾದೊರೆಗಳ ಧೋರಣೆಯಾಗಿತ್ತು. ಈ ಹಿನ್ನೆಲೆಯಲ್ಲೇ, ಯುಎಸ್‌ಎ ಟುಡೇ ಪತ್ರಿಕೆಯನ್ನು ಅವರು ಮೂದಲಿಸುತ್ತಿದ್ದರು.

ನಮ್ಮ “ದಿ ಹಿಂದೂ” ಪತ್ರಿಕೆಯ ಉದಾಹರಣೆ ತೆಗೆದುಕೊಳ್ಳಿ. ಈಗ 4-5 ವರ್ಷಗಳ ಹಿಂದೆ ಈ ಪತ್ರಿಕೆ ಮರುವಿನ್ಯಾಸ ಪಡೆದಾಗ ಅದರ “ಶೀಲ ಹಾಳಾಯಿತು” ಅಂತ ಮರುಗಿದವರು ಎಷ್ಟೋ ಜನ! ಆದರೆ, ಈ ಧೋರಣೆ ಬದಲಾಗದ ಹೊರತೂ ಪತ್ರಿಕೆಗಳಿಗೆ ಉಳಿಗಾಲವಿಲ್ಲ ಎಂಬುದನ್ನು ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯೂ ಅರಿತುಕೊಂಡಿದೆ. ನಾನು ಮಡಿವಂತಿಕೆ ಅಂತ ಹೇಳಿದ್ದು ಈ ಧಾಟಿಯಲ್ಲಿ

waste_paper

ಶ್ರೀನಿವಾಸಗೌಡ-

ನೀವು ಹೇಳ್ತಾ ಇರೋದು ನಿಜ ರವಿ ಹೆಗ್ಗಡೆ ಅವರು ನಾನು ಮೊನ್ನೆ ತಾನೆ ಟಿಲಿವಿಶನ್ ಸ್ಟೋರಿ ಐಡಿಯಾ ಇದೇಯಾ, ನಂಗೊದ್ದು ಅರ್ಜಂಟ್ ಸ್ಟೋರಿ ಐಡಿಯೈ ಬೇಕು ಅಂತಾ ಗೂಗಲ್ ಸರ್ಚ್ ನಲ್ಲಿ ಹುಡುಕಿದ್ದೆ, ಇಂಟರ್ನೆಟ್ ನ ಬಳಕೆ ಹೆಚ್ಚಾದಂತೆ ಎಲ್ಲದನ್ನು ಅಲ್ಲಿಂದಲೇ ಕಂಡುಕೊಳ್ಳಲು ಯತ್ನಿಸುವುತ್ತೇವೆ ಕಾಣ್ತದೆ, ನೀವು ಕಾಮೆಂಟಿನಲ್ಲಿ ದಾಖಲಿದಂತೆ ನ್ಯೂಸ್ ಪೇಪರ್ ಇಲ್ಲವೇ ಇಲ್ಲ ಆನ್ನೊ ಸ್ಥಿತಿಗಿಂತಾ ಪಾಪುಲಾರಿಟಿ ಕಮ್ಮಿ ಆಗಬಹುದು…

SB-

ನಮ್ಮ ದೈನಂದಿನ ಜೀವನ ತೀವ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದ ಮೇಲೆ ತುಂಬಾ ಅವಲಂಬಿಸಿರುವುದರಿಂದ ಮಾಧ್ಯಮಗಳ ಸ್ವರೂಪ ಕೂಡಾ ಅಷ್ಟೇ ತೀವ್ರಗತಿಯಲ್ಲಿ ಬದಲಾಗುವುದು ಅನಿವಾರ್ಯವಷ್ಟೇ ಅಲ್ಲ, ಅವಶ್ಯಕ ಕೂಡಾ. ಆ ಅನಿವಾರ್ಯಯತೆಯನ್ನು ಯಾವ ಪತ್ರಿಕೆಗಳು ಒಪ್ಪಿಕೊಂಡು ತಾವೂ ಬದಲಾಗುತ್ತವೋ ಆ ಪತ್ರಿಕೆಗಳು ಬದುಕುಳಿದು ಬೆಳೆಯುತ್ತವೆ. ಇದು Information Age ಹಾಗಾಗಿ ಸುದ್ದಿಮಾಧ್ಯಮಗಳು ತಮಗೇ ಅರಿವಿಲ್ಲದಂತೆ ಈ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿವೆ. ಅವು ಹೊಸ ಹೊಸ business model-ಗಳನ್ನು ಕಂಡುಕೊಳ್ಳದೆ ಇದ್ದರೆ ಉಳಿವು ಸಾಧ್ಯವಿಲ್ಲ. ಅದಕ್ಕೋಸ್ಕರ ನಮ್ಮಲ್ಲಿನ ಸಾಕಷ್ಟು ಪತ್ರಿಕೆಗಳ ಹಾಗೆ ಪತ್ರಿಕೋದ್ಯಮದ ಧರ್ಮವನ್ನೇ ಹರಾಜು ಹಾಕುವ ಅವಶ್ಯಕತೆಯೂ ಇಲ್ಲ.

ಈಗ ಇಂಟರನೆಟ್ ಹೊಸ ವಿಷಯ ಅಲ್ಲವೇ ಅಲ್ಲ. ಹಾಗೆ ನೋಡಿದರೆ, ಕಂಪ್ಯೂಟರ್ ಮುಂದೆ ಕೂತು ಪತ್ರಿಕೆಯನ್ನು ಓದುವುದು ಜನಕ್ಕೆ ಒಂದು ನಿರ್ಬಂಧವಾಗಿ ತೋರುತ್ತಿದೆ. ಈಗಿನ ಅವಶ್ಯಕತೆ mobility! ಕಾಗದದ ಪತ್ರಿಕೆಗಳು ಕೂಡಾ ಈ ‘ಜಂಗಮ’ತನಕ್ಕೆ ಪೂರಕವಾಗೇ ಇದ್ದದ್ದು. ಈಗಲೂ ಹಾಗೇ ಇರಬೇಕಾಗಿದೆ – ಕಾಗದವನ್ನು ಬಿಟ್ಟು ಇಲೆಕ್ಟ್ರಾನನ್ನು ಅವಲಂಬಿಸಬೇಕಾಗಿದೆ ಅಷ್ಟೆ. Subscription-based personalized news is probably what will catch on. Amazon-ನವರ Kindle-ಅನ್ನು ನೋಡಿದ್ದೀರಾ?

‍ಲೇಖಕರು avadhi

16 July, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading