ಬೇಲೂರು ರಘುನಂದನ್
ಆಯತಾರ ಸಂತೇಲಿ ಹತ್ತುಸೇರು ಪುರೀನ ಮುನ್ನಾ ಸಾಬ್ರಹತ್ರ ರುಪಾಯಿಗೊಂದು ಲೀಟರಂಗೆ ತಂದಿದ್ದು ಎಲ್ಲಾ ಖಾಲಿ. ಪುರಿಯ ಸಿಲ್ವಾರದ ಡಬ್ಬ ತಳಸೇರಿ ಗಷ್ಟ, ಕರಿಮಣ್ಣು, ಹೆಂಟೆ ತುಂಬ್ಕಂಡಿದೆ. ದರಿದ್ರ ಸೂಡ್ರು ಕಾಲ ಬೇರೆ ಶುರುವಾಗಿ ಮೈಯಲ್ಲಾ ಹೊಟ್ಟೆ. ಎಷ್ಟು ತಿಂದ್ರು ತಿಂದ ಅರ್ಧಗಂಟೆಗೆ ಹೊಟ್ಟೆ ಚುರುಕ್ ಅನ್ನುತ್ತೆ. ಬೆಳಗ್ಗೆ ಆದ್ರೆ ಹೊಟ್ಟೆ ಕಾಟ ರಾತ್ರಿ ಆದ್ರೆ ಚಳಿಯ ಗೋಳು ಅಂತ ತನ್ನಷ್ಟಕ್ಕೆ ತಾನೇ ಗೊಣಗಿಕೊಳ್ಳುತ್ತಿದ್ಳು ಸೀತಕ್ಕ. ಬೆಳಬೆಳಿಗೇನೆ ಒಲೆಮುಂದೆ ಕೂತ್ಕಂಡು ಇರೋ ಪುಳ್ಳೆ ಕಡ್ಡೀನ ಎಲ್ಲ ಜೋಡಿಸಿಕೊಂಡು ಒಲೆ ಹತ್ಸೋಕೆ ಸೀಮೆಣ್ಣೆ ಬುಡ್ಡಿಯಲ್ಲಿ ಎಣ್ಣೇನ ಸುರ್ಕಳಕೆ ಹೋದ್ಲು. ಇದ್ದ ಬದ್ದ ಸೀಮೇಣ್ಣೆನ ಎಲ್ಲಾ ಸೀಮೇಣ್ಣೆಬುಡ್ಡಿ ಸ್ವಾಹ ಮಾಡಿ ಒಂಚೂರು ತೇವ ಬಿಡದ ಹಾಗೆ ಹೀರಿಕೊಂಡು, ಬತ್ತಿಗೆ ಅಂತ ಹಾಕಿದ್ದ ಪಂಚೆಬಟ್ಟೇನೂ ಸೀಸದ ಮುಚ್ಚಳಕದ ತಳಕ್ಕೆ ಸೇರಿ ಸೀದು ಹೋಗೋತರ ಹತ್ಕಂಡು ಉರಿದುಹೋಗಿತ್ತು. ತೆಂಗಿನ ಕರಟಕ್ಕೆ ರಾತ್ರಿ ಉರ್ದು ಆರೋಗಿದ್ದ ಮೇಗಳ ಹಗುರವಾದ ಬೂದಿನ ತುಂಬಿ ಉಳಿದ ಹಳೇಬೂದಿನ ಇದ್ದಿಲು ಚೂರನ್ನ ಒಲೆಬಾಯಿಂದ ತೆಗ್ದು, ಒಲೆ ಬಳ್ದು, ರಂಗೋಲೆ ಬಿಟ್ಳು. ಬೂದಿ ತುಂಬಿಟ್ಟಿದ ತೆಂಗಿನ ಕರಟದ ಸಮೇತ ಅಟ್ಟಿಗೆ ಬಂದು ಸೀತಕ್ಕ ತನ್ನ ವಾರಗಿತ್ತಿ ಮನೆ ಎದುರಿಗೆ ನಿಂತು
ಪದ್ಮಿ, ಪದ್ಮಿ ಅಂತ ಕೂಗುದ್ಲು. ಬೆಳಗಿನ ತಿಂಡಿಗೆ ಅಂತ ರೊಟ್ಟಿಗೆ ರಾತ್ರಿ ನೆನಸಿಟ್ಟಿದ್ದ ಅನ್ನನ ಮಿದಿತಿದ್ದ ಪದ್ಮಿ ಕೈನೂ ತೊಳೀದಂಗೆ ಆಚೆಗೆ ಬಂದು ಓ! ಏನಕ್ಕ
ಒಂಚೂರು ಸೀಮೇಣ್ಣೆ ಕೊಡೆ ಒಲೆಹತ್ಸೊಕ್ಕೆ, ಒಂದ್ನಾಕು ತೊಟ್ಟು ಸಾಕು ಮಕ್ಕಳಿಗೆ ಬರಗಾಪಿನಾದ್ರು ಮಾಡ್ಕೊಡ್ತೀನಿ. ಬೆಲ್ಲ ಕಾಫಿಪುಡಿ ಇದೆ.
ಏನೂ ಮಾತಾಡದ ಪದ್ಮಿ ಸೀತಕ್ಕನ ಮೇಲೆ ತುಸು ಗೌರವ ಪ್ರೀತಿ ಇದ್ದಿದ್ರಿಂದ ಅಂದು ಏನೂ ಮಾತನಾಡದೇ, ಮುಖದ ಛಾಯೆಯನ್ನು ಸ್ವಲ್ಪ ಬದಲಿಸಿಕೊಂಡು ಸೀಮೇಣ್ಣೆ ಬುಡ್ಡಿಯಿಂದ ಚಿಪ್ಪಲ್ಲಿದ್ದ ಬೂದಿಗೆ ಸುರುದ್ಲು. ಪದ್ಮಿಯ ಮುಖಭಾವವನ್ನು ಕಂಡ ಸೀತಕ್ಕ ಮನುಷ್ಯ ಅಂತ ಇದ್ಮೇಲೆ ನಾಕ್ಕಾಸು ಜೊತೇಲಿ ಇರಬೇಕು ಇಲ್ಲ ಅಂದ್ರೆ ಎಲ್ರೂ ಹೀಗೆ ಮುಖ ಮೂತಿ ತಿರುಗುತ್ತೆ. ಯಾರಿಗೆ ಏನು ಅನ್ಯಾಯ ಮಾಡಿದ್ನೋ ಏನೋ ನಾನು ನನ್ಮಕ್ಳು ಈ ಕೊಂಪೆಗೆ ಸೇರಿಕೊಂಡು ಅನುಭವಿಸುತ್ತಾ ಇದ್ದೇವೆ. ಅಂತ ತನ್ನ ಅದೃಷ್ಟವನ್ನು ನಿಂದಿಸಿಕೊಳ್ಳುತ್ತಾ ಸೀತಕ್ಕ ಮನೆ ಸೇರಿದಳು.
ಸೀತಕ್ಕನ ಮನೆ ಇದ್ದ ಅಟ್ಟೀಲಿ ಒಟ್ಟು ನಾಲ್ಕು ಮನೆ ಇದ್ವು. ಸೀತಕ್ಕೆ ಸೇರಿದ ಮನೆ ಇದ್ದಿದ್ದು ಸುತ್ತಾ ಕಾಡಿರೊ ಊರಿಗೆ. ಊರ ಹೆಸರು ಸೂರಾಪುರ. ಸೀತಕ್ಕ ಸೇರಿದಂತೆ ಅವಳ ಗಂಡನ ಅಣ್ಣತಮ್ಮಗಳ ಮನೆ ಇತ್ತು. ಅತ್ತೆ ಮಾವನ ತಲೆ ಉರುಡಿ ಬರೋ ಮಾರನಾಮಿಗೆ ಎಂಟು ವರ್ಷ ಆಗಿತ್ತು. ಹೇಳಕೊಳಕ್ಕೆ ಯಾವುದರಲ್ಲೂ ಮುಂದಿರದ ವಂಶ. ಹೆಸರಿಗಷ್ಟೆ ಅಂತ ಗಂಡು ಮಕ್ಳು. ಬಂದವರು ಬುದ್ದಿವಂತರಾಗಿ ತನ್ನ ಗಂಡಂದಿರಿಗೆ ಲಗಾಮು ಹಾಕಿ ದಾರಿಗೆ ತಂದುಕೊಂಡಿದ್ರು. ಆ ವಂಶದ ಉಳಿದ ಮೂವರು ಗಂಡುಹುಳಗಳು ಗೆಯ್ಯಕೆ ಅಂತ ನೆಪ ಇಟ್ಕೊಂಡು ಚಿಕ್ಕಮಳೂರಿಗೋ ಹಾಸನಕ್ಕೊ ಹೋಗಿ ನಾಲ್ಕಾಸು ತಂದು ಮೂರೊತ್ತು ಉಣ್ಣುತ್ತಿದ್ರು. ಇನ್ನು ಹುಟ್ಟು ಹುಟ್ಟುತ್ತಾ ದಾಯಾದಿಗಳು ಅನ್ನೊ ಮಾತು ಇವರ ವಂಶಕ್ಕೆ ಸರಿಯಾಗಿತ್ತು. ವಾರಗಿತ್ತಿಯರು ಒಳಗಿನ ಹುಳುಕು ತೋರಿಸಿಕೊಳ್ಳದೆ ಎದ್ರು ಬದ್ರು ಸಿಕ್ಕುದ್ರೆ ಸಂಸ್ಕಾರಕ್ಕಾದ್ರು, ನಗುತ್ತಿದ್ರು. ಹಬ್ಬಕ್ಕೆ ಹುಣ್ಮೆ ಅಂತ ಯಾವುದಕ್ಕೂ ಸೇರ್ತಿರಲ್ಲಿಲ್ಲ. ಮಗನ್ನ ಮಾರಿ ಆದ್ರು ಮಾರನಾಮಿ ಹಬ್ಬ ಮಾಡು ಅಂತ ಗಾದೆ ಇರೋದ್ರಿಂದ ನಾಲ್ಕು ಜನ ಸೇರಿ ಸೀತಕ್ಕನ ಮನೇಲಿ ಎಡೆ ಇಕ್ಕುತ್ತಿದ್ರು. ಉಂಡುತಿಂದು ಎಲ್ಲಾ ಆದಮೇಲೆ ಉಳಿದ ಅಚ್ಚೇರಕ್ಕಿ, ಅರಪಾವು ಕಾರಾಪುಡಿ, ತಳಸೇರಿದ ಸಾರನೂ ಬಿಡದಂತೆ ಡಬ್ಬಕ್ಕೆ ತುಂಬಿಕೊಂಡು ಹೊಗುತ್ತಿದ್ರು. ವರ್ಷ ವರ್ಷ ಮಾರನಾಮಿ ಹಬ್ಬನೂ ಹಾಗೆ ಆಗ್ತಾ ಇತ್ತು. ಸೀತಕ್ಕ ಹಿರಿಸೊಸೆ ಆಗಿದ್ದರಿಂದ ಹಬ್ಬವೆಲ್ಲಾ ಸೀತಕ್ಕನ ಮನೇಲೆ ಆಗ್ತಿತ್ತು.
ಪ್ರತೀ ವರ್ಷದಂಗೆ ಈ ಸಲದ ಮಾರ್ನಾಮೆ ಹಬ್ಬ ಒಂದು ವಾರ ಇದೆ ಅಂತ ಸೀತಕ್ಕನ ಎರಡನೆ ಮೈದ ಅವಳ ಮನೆ ಹತ್ರ ಒಂದು ಹಬ್ಬದ ಬಾಬ್ತು ಅಂತ ಐವತ್ತುರುಪಾಯಿ ಕೊಟ್ಟುಹೋಗಿದ್ದ. ದೊಡ್ಡವರಿಂದ ಹಿಡಿದು ಚಿಕ್ಕವರ ತನಕ ಎಲ್ರೂ ಹಬ್ಬಕ್ಕೆ ಇರಬೇಕು. ಎಲ್ರೂ ಹಿರಿಯರಿಗೆ ಧೂಪ ಹಾಕಬೇಕು ಅನ್ನೊದು ಅವರ ನಂಬಿಕೆ. ಅದನ್ನು ಚಾಚು ತಪ್ಪದ ಹಾಗೆ ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದಿದ್ರು. ಸೀತಕ್ಕನ ಅತ್ತೆ ಚಂದ್ರಮ್ಮ ಒಂದ್ಸಲ ಮಾರನಾಮಿ ಹಬ್ಬ ಗಂಡನ್ಮನೇಲಿ ಮಾಡದಲೇ ತೌರು ಮನೆಗೆ ಹೊಗಿದ್ದರಿಂದ ಮುಂದಿನ ಮಾರನಾಮಿ ಹಬ್ಬದಷ್ಟೊತ್ತಿಗೆ ನೆಗೆದು ಬಿದ್ದಿದ್ಲು ಅಂತ ಇವರೆಲ್ಲ ನಂಬಿದ್ರು. ಹಂಗಾಗಿ ಯಾರುಯಾರಿಗೂ ಹೆದರದಿದ್ರು ಮಾರನಾಮಿ ಹಬ್ಬಕ್ಕೆ ಹೆದರಿ ನಿಷ್ಟೆಯಿಂದ ಎಲ್ರೂ ಸೇರಿ ಹಬ್ಬ ಮಾಡಿ ತಿಂದು ತೇಗಿ ಅವರವರ ಮನೆ ಸೇರ್ಕೊತಿದ್ರು. ಬಟ್ಟೆ ಬರೆ ತಿಂಡಿ ತಿನಸು, ಹೆಂಡ ಎಲ್ಲಾ ಅವರವರದ್ದು ತಂದು ಎಡೆ ಇಟ್ಟಿ ತಿಂದು ತೇಗಿ ಮತ್ತೆ ತಗಂಡು ಹೋಗ್ತಿದ್ರು. ಸೀತಕ್ಕ ಮಾತ್ರ ತೊಳೆಯೊದು, ಬಳಿಯೊದ್ರಿಂದ ಹಿಡಿದು, ಮಸಾಲೆರುಟ್ಟಿ ಒಲೆಮುಂದೆ ನಿಂತ್ಕೊಳೋತನಕ ಎಲ್ಲಾ ಒಬ್ಬಳೆ ನಿಬಾಯಿಸ್ತಿದ್ಲು. ಅವಳು ಮದ್ವೆ ಆದಾಗಿಂದ್ಲೂ ಒಂದು ರವಿಕೆ ಕಣನಾಗ್ಲಿ, ಒಂದು ಚೌಕನಾಗ್ಲಿ ತಂದು ಅವಳ ಗಂಡ ಎಡೆಗೆ ಇಟ್ಟಿರರಿಲ್ಲ.
ಸೀತಕ್ಕ ಸೂರಾಪುರದ ಹಿರೀಸೊಸೆ ಮಲಸೀಮೆ ಹೆಣ್ಣು. ಅವಳ ಗಂಡ ರಾಮಯ್ಯ ಒಂಚೂರು ಜವಾಬ್ದಾರಿ ಇಲ್ಲದ ವ್ಯಕ್ತಿ. ಸೀತಕ್ಕನಿಗೆ ಪುಟ್ಟ ಮತ್ತು ಗೌರ ಅಂತ ಇಬ್ಬರು ಮಕ್ಕಳು. ಹಿರೀಸೊಸೆ ಆದ್ರೂ ಹಿರೀತನ ಅನ್ನೊದು ಯಾವುದು ಉಳಿದಿರಲ್ಲಿಲ್ಲ ಅವಳಿಗೆ. ಇರೋಕೆ ಒಂದು ಹೆಸರಿಗೆ ಅಂತ ಮನೆ ಇತ್ತು. ತೂತುತೂತಾಗಿರೊ ಹಂಚಿನ ಮನೆ ಸಗಣೀಬಳದ ನೆಲ. ಅಡುಗೆ ಕೋಣೆಗೂ ನಡುಮನೆಗೆ ನಡುವೆ ಇರೊ ಒಂದು ಅಡ್ಡಗೋಡೆ. ಹಿತ್ತಲಲ್ಲಿ ಗರಿ ಬಚ್ಚಲು, ನೀರಂಡೆ, ಬಟ್ಟೆಕಲ್ಲು, ಮನೆಸುತ್ತ ಕಾಡೋಕಾಡು. ಅಟ್ಟೀಲಿ, ನಾಲ್ಕೈದು ಮಾರು ಬಿಟ್ಟು ಬಿಟ್ಟು ಹೋದ್ರೆ ಉಳಿದ ಮೂರು ಮನೆ ಸಿಕ್ಕುತ್ತೆ. ದೊಡ್ಡ ಅಂಗಳದಲ್ಲಿ ಸೀತಕ್ಕ ಮನೆ ಇತ್ತು. ಸೀತಕ್ಕನ ಮನೆ ನೀರು ಕಾಯಿಸೋ ಹಂಡೆಗೆ ನೂರು ವರ್ಷದ ಇತಿಹಾಸ ಇದೆಯಂತೆ. ಗುಡಾಣದ ತರ ಇರೊ ಮಣ್ಣಿನ ಹಂಡೆ ಅದು. ಸಿಲ್ವಾರದ ಮರದ ಕಾವಿಗೂ ಒಡೆಯದ ಗಟ್ಟಿಹಂಡೆ. ಸೀತಕ್ಕನ ಹಿಸ್ಸೆ ಬಾಬ್ತಾಗಿ ಈ ಹಂಡೆ ಧಾರಾಳವಾಗಿ ಬಂದಿತ್ತು. ಹಿತ್ತಾಳೆಹಂಡೆ ಕಂಡ ಸೀತಕ್ಕನ ವಾರಗಿತ್ತಿಯರು ಈ ಗುಡಾಣವನ್ನು ಮೂಸುನೋಡದೆ ಬಿಟ್ಟಿದ್ರು. ಅರಗಾಗ್ಲಿ, ತಳ ಆಗ್ಲಿ ಮಳೆಗೆ, ಬಿಸಿಲಿಗೆ, ಗಾಳಿಗೆ ಏನೂ ಆಗದೆ ನೂರು ವರ್ಷಗಳಿಂದ ನೀರು ಕಾಯ್ಸಿ ಕಾಯ್ಸಿ ಕೊಟ್ಟಿತ್ತು ಈ ಹಂಡೆ. ಸೀತಕ್ಕನ ಮನೇಲಿ ಈಗ್ಲೂ ನಿಷ್ಟಾವಂತವಾಗಿ ಗೈಯ್ತಿದೆ ಈ ಗಟ್ಟಿ ಹಂಡೆ. ಸೀತಕ್ಕ ಎಷ್ಟೋ ಸಲಾ ಈ ಹಂಡೆನ ಮುಂಗಟ್ಕಂಡು ತನ್ನ ನೋವು, ಸಂಕಟ, ಪ್ರೀತಿ, ಎಲ್ಲಾ ತೋಡ್ಕತಿದ್ಲು. ಎಲ್ಲವನ್ನು ಸುಮ್ನೆ ನೋಡಿಕೊಂಡು ಬಂದಿದ್ದ ಹಂಡೆ ಸೀತಕ್ಕನ ಯಾವ ಭಾವಗಳಿಗೂ ಸ್ಪಂದಿಸದೆ ನಿಭರ್ಾವುಕವಾಗಿ ಮೂರು ಕಲ್ಲಿನ ಮೇಲೆ ಗುಡಗುಪ್ಪನೆ ಕುಂತಿತ್ತು. ಮನಸ್ಸು, ಮೈ, ತಣ್ಣಗಾದ ಮೇಲೆ ಏನೂ ಮಾತಾಡದೆ ಬಚ್ಚಲ್ಗೋಗಿ ನೀರುಹುಯ್ಕಬೇಕಾದ್ರೆ `ಕಾದು ಕಾದು ನೀರು ಕಾಸಿ ನಮ್ಮ ಮೈನ ಕೊಳೆ ತೆಗಿತೀಯ,,, ಮನಸ್ಸು ಮೈನ ಉಲ್ಲಾಸಗೊಳಿಸ್ತೀಯಾ,,, ಒ0ದಿನಾನು ಒಂಚೂರು, ಬೈದೇ, ಮುನಿಸಿಕೊಳ್ಳದೇ, ಬೇಸರಮಾಡಿಕೊಳ್ಳದೆ ನಿನ್ನ ಕೆಲ್ಸ ನೀನು ಚಾಚು ತಪ್ಪದೆ ಮಾಡ್ಕೊಂಡು ಬಂದಿದ್ದಿಯಾ,,,’ ಅಂತ ಹಂಡೆಜೊತೇಲಿ ಮಾತಾಡುತ್ತಾ, ನಾವು ಮನುಷ್ಯರೇ ಇಷ್ಟು ಇಲ್ಲದ್ದನ ಬೇಕು ಅಂತಿವೀ, ಇರೋದನ್ನ ಬೇಡ ಅಂತೀವಿ ಬೇಕೋ ಬೇಡವೋ ಅನ್ನೋದನ್ನ ಯೋಚ್ನೆ ಮಾಡೋ ಅಷ್ಟೊತ್ತಿಗೆ ಜೀವನ ಓಡೋಗಿರುತ್ತೆ,,, ಕೆಲ್ಸಾ ಮಾಡ್ದೇ, ಬದುಕನ್ನು ನೋಡ್ದೆ ಕೈಚೆಲ್ಲಿ ಕುತ್ಕೊಂಡು ಬಿಡ್ತಿವೀ.. ಅಂತ ತನ್ನಷ್ಟಕ್ಕೆ ತಾನೇ ಮಾತಾಡ್ಕೊತಿದ್ಲು ಸೀತಕ್ಕ. ಯಾರು ಬರ್ಲಿ ಯಾರು ಇರ್ಲಿ ಯಾರ ಹೋಗ್ಲಿ,,, ನೀನಂತು ನೀರು ಕಾಯ್ಸೊ ಕೆಲ್ಸ ಬಿಡಲ್ಲ. ನಾನ್ ನೋಡು ನಾಕದಿವಸದಿಂದ ಕಟ್ಕಂಡವ್ನ ಮಖ ಕಾಣ್ದೆ ಸಾಯ್ತಾ ಇದ್ದೀನಿ ಅಂತ ಕಣ್ಣಲ್ಲಿ ನೀರು ಹಾಕ್ಕಂಡ್ಳು. ಅವಳ ಕಣ್ಣೀರಿನ ಬಿಸಿ ಹಂಡೆ ನೀರಿನ ಬಿಸಿಜೊತೆ ಸೇರ್ಕಂಡು ಹೋಗಿತ್ತು.
ಅಷ್ಟೊತ್ತಿಗೆ ಒಲೆಮೇಲಿದ್ದ ಬರಗಾಪಿಗೆ ಅಂತ ಇಟ್ಟಿದ ನೀರು ಚರುಕ್ಲ ತಳ ಸೇರಿತ್ತು. ಒಲೆ ಉರಿ ತಣ್ಣಗಾಗಿತ್ತು…. ಒಲೇಲಿದ್ದ ಎರಡ್ಮೂರು ಕೆಂಡನೆಲ್ಲಾ ಸೇರಿಸಿ ಪುಳ್ಳೆ ಜೋಡಿಸಿ ಕೊಳಪೆನಲ್ಲಿ ಉದೋಕೆ ಶುರುಮಾಡಿದ್ಲು ಗೌರ. ಅವಳ್ಗೆ ಆಗಿನ್ನು ಏಳು ವರ್ಷ ಪ್ರಾಯ…. ಅವಳ್ಗಿಂತ ಮೂರು ವರ್ಷ ದೊಡ್ಡವನಾದ ಪುಟ್ಟ ಗೋಡೆಪಕ್ಕ ಚಳಿಗೆ ಗೂಡಿಸ್ಕಂಡು ಮಲಗಿದ್ದ. ಅವನಜ್ಜಿ ಹೊಲೆದುಕೊಟ್ಟಿದ್ದ ಕೌದಿ, ಮೇಲೊಂದು ಹಳೇ ಹರಕಲು ದಟ್ಟ, ಅದರ ಮೇಲೊಂದು ಗೋಣೆಯನ್ನು ಹೊದ್ದು ಕಾಲು ಸಂದಿಯಲ್ಲಿ ನುಗ್ಗುತ್ತಾ ಇದ್ದ ತಣ್ಣಗಿನ ಗಾಳಿಯನ್ನು ಬೈಯ್ಕಳ್ತಾ ಗೊಣಗ್ತಾ ಘಂಟೆ ಒಂಬತ್ತಾದ್ರು ಮಲ್ಗೇ ಇದ್ದ. ಅವ್ನು ಇನ್ನೂ ಹಾಸ್ಗೆಯಿಂದ ಎದ್ದಿಲ್ದೇ ಇದ್ದುದನ್ನು ನೋಡಿದ ಸೀತಕ್ಕ,
ನಿಮ್ಮಪ್ಪ ಅಂತೂ ನಾಕುದಿನದಿಂದ ನಾಪತ್ತೆಆಗೋಗಿದ್ದಾನೆ. ಇದ್ದಾಗ ಹಿಡಿ ಅನ್ನಕ್ಕೆ ದಾರಿ ಮಾಡಿಲ್ಲಿಲ. ಮಾಡೋಕ್ಕೆ ಕ್ಯಾಮಿಲ್ಲ ತಿನ್ನೋಕೆ ಅನ್ನವಿಲ್ಲ. ಕೂತು ಕೂತು ಕಾಲಹಾಕಿ ವತ್ತು ಹುಟ್ಟಿದ ಕೂಡ್ಲೆ ವಾರಗಟ್ಲೆ ಪುರಿ ತಿನ್ನಕಂಡು, ಬರಗಾಪಿ ಕುಡ್ಕಂಡು ಜೀವನ ಮಾಡೋಹಂಗೆ ಮಾಡ್ಬಿಟ್ಟ…. ಕಟ್ಕಂಡಾಗಿನಿಂದ ರೂಪಾಯಿ ದುಡೀಲಿಲ್ಲ. ನಾನಾದ್ರೂ ಅಕ್ಕಪಕ್ಕ ತೋಟಕ್ಕೊಗಿ ಕೂಲಿ ಮಾಡ್ತೀನಿ ಅಂದ್ರೆ ಅದ್ಕು ಬಿಡ್ಲಿಲ್ಲ. ನಾನು ದೊಡ್ಡ ರೂಪಾವತಿ ಅಂತ. ಈಗ ನೋಡು ನನ್ನಣೇಬರ ಬೇಡಿ, ಬಳದು ಸಾಕಾಗಿ ಹೋಗಿದೆ ನಂಗೆ…. ನಿನ್ನ ಆಸರೆ ಅಂತ ನಂಬಿದ್ರೆ ಇನ್ನೂ ಹರಕ್ಲುಹಾಸ್ಗೆ ಸುತ್ಕಂಡು ಮಲಗಿದ್ದೀಯ…. ? ಇನ್ನೇನಾದ್ರೂ ಪಲ್ಲಂಗ ಕೊಟ್ರೆ ಮಂದಾರವಲ್ಲಿ ಆಗ್ಬಿಡ್ತಿಯಾ.. ಅಂತ ತನ್ನ ಅಸಹಾಯಕತೆಯನ್ನು ಬದುಕಿನ ಆಸರೆಗೆ ಇರುವ ಆಶಾಕಿರಣವನ್ನು ಬೈಯುತ್ತ ದರದರ ಅಂತ ಬಂದು ಹೊದ್ದುಕೊಂಡಿದ್ದ ಹೊದಿಕೆಗಳನ್ನು ಕಿತ್ತು ಮೂಲೆಗೆ ಬಿಸಾಡಿದ್ಲು.

ಗಾಳಿಗೆ ಮೈಬಿಟ್ಟ ಪುಟ್ಟ ಚಳಿಯಿಂದ ತತ್ತರಿಸುತ್ತಾ, ಅವ್ವ ಹೇಳಿದ ಯಾವ ಮಾತು ಗ್ರಹಿಸದೆ ಹೊದ್ದ ಹೊದಿಕೆಗಳನ್ನು ಕಿತ್ತು ಹಾಕಿದ ಸಿಟ್ಟಿಗೆ ” ಏನಮ್ಮೊ,,,, ಅದು,,, ನಂಗೆ ಚಳಿಗೆ ಹೊಟ್ಟೆ ಜಾಸ್ತಿ ಹಸಿತಾ ಇದೆ,,,, ಬಿಸಿನೀರೋ ಬರಗಾಪಿ ಕೊಟ್ಟಮೇಲೆ ಎದ್ದೇಳೋಣ ಅಂತ ಸುಮ್ಮನೆ ಹೊದ್ದುಕೊಂಡು ಮಲಗಿದ್ದೆ ಕಣಮ್ಮ ರಾತ್ರಿ ನೀನು ಕೊಟ್ಟ ಎರಡು ಹಿಡಿ ಪುರಿ ಮಧ್ಯರಾತ್ರಿಗೆ ಕರಗಿ ಹೋಗಿತ್ತು”,,,,
ಪುಟ್ಟನ ಮಾತುಗಳನ್ನು ಕೇಳಿದ ಸೀತಕ್ಕನ ಕಣ್ಣಲ್ಲಿ ನೀರು ತುಂಬಿ ಕೆಳಗೆ ಜಾರಿ ಬೀಳುವ ಒಳಗೆ ದಿಢೀರನೆ ಎದ್ದು ಅಡುಗೆ ಕೋಣೆಗೆ ದಾವಿಸಿದಳು…. ಅಷ್ಟೊತ್ತಿಗಾಗಲೆ ಒಲೆಮುಂದೆ ಆರಿಹೋಗಿದ್ದ ಒಲೆಯನ್ನು ಕೊಳಪೆಯಿಂದ ಊದುತ್ತಿದ್ದ ಗೌರಾಳ ಮುಖದಲ್ಲಿ ಹಸಿವು ಎದ್ದು ಕುಣಿದು ತಾಂಡವವಾಡುತ್ತಿತ್ತು…. ಅಮ್ಮನೊಂದಿಗೆ ಏನೂ ಮಾತನಾಡದೆ ಒಲೆ ಹತ್ತಿಸುವ ಕೆಲಸದಲ್ಲಿ ಮಗ್ನನಳಾಗಿದ್ದ ಗೌರಳನ್ನು ನೋಡಿ ಸೀತಕ್ಕನಿಗೆ ಮತ್ತಷ್ಟು ದು:ಖ ಉಮ್ಮಳಿಸಿ ಗೋಡೆಗೊರಗಿ ಕುಂತಳು,,,, ಸುದಾರಿಕೊಂಡು ಎದ್ದು ಪುರಿಯಡಬ್ಬದಲ್ಲಿ ತಳ ಸೇರಿ ಪುರಿಯನ್ನು ಮರಕ್ಕೆ ಹಾಕಿಕೊಂಡು ಕೇರಿ ಕೇರಿ ಧೂಳು ತೆಗೆದು ಜರಡಿ ಆಡಿ ಕಲ್ಲು ಮಣ್ಣು ಹೆಂಟೆ ತೆಗೆದು ಎರೆಡು ಸೇರಿನಷ್ಟು ಪುರಿಯನ್ನು ಬೆಳಗಿನ ತಿಂಡಿಗೆ ಅಣಿಗೊಳಿಸಿದಳು, ಜೊತೆಗೆ ಹಾಲಿಲ್ಲದ ಬಿಸಿ ಬಿಸಿ ಬರಿಗಾಪಿಯನ್ನು ಆರು ಕಂಚು ತಯಾರು ಮಾಡಿ ನಡುಮನೆಗೆ ತಂದ್ಳು. ಒಂದು ಕಂಚು ಸುಮಾರು ಅರ್ಧಲೀಟರ್ ಹಿಡಿಸಬಹುದಾದಷ್ಟು ಉದ್ದನೆಯ ಕಂಚಿನ ಲೋಟ. ಒಂದು ಕಂಚು ಕಾಪಿ ಕುಡಿದರೆ ಅದು ಮದ್ಯಾಹ್ನದವರೆಗಾದ್ರೂ ತಡೆಯುತ್ತೆ ಅಂತ ಸೀತಕ್ಕ ಎಂದಿಗಿಂತ ಸ್ವಲ್ಪ ಜಾಸ್ತಿನೇ ಬರಗಾಪಿಯನ್ನು ತಯಾರು ಮಾಡಿದ್ಲು. ಮೂರು ಜನ ನಡುಮನೆಯಲ್ಲಿ ಬೆಳೆಗ್ಗೆ ಸುಮಾರು ಹತ್ತು ಘಂಟೆಯ ಹೊತ್ತಿಗೆ ಬೆಳಗಿನ ತಿಂಡಿಗೆ ತಯಾರಾದರು. ಪುಟ್ಟ ಅರ್ಧ ಕಂಚು ಕಾಪಿ ಕುಡ್ದು ಉಳಿದ ಕಾಪಿಗೆ ಪುರಿಯನ್ನು ಅದಕ್ಕೆ ತುಂಬಿಸಿಕೊಂಡು ಬರಿಗಾಪಿಯಲ್ಲಿ ನೆನೆಸಿಕೊಂಡು ತಿನ್ನಲು ಆರಂಭಿಸಿದ,,,, ಅದನ್ನು ನೋಡುತ್ತಿದ್ದ ಗೌರ ಕೂಡಾ ಅದೇ ವಿಧಾನವನ್ನು ಅನುಸರಿಸಿ ಹಸಿವಿನ ಹಾವಿಗೆ ಕಾಪಿಯ ತನಿ ಎರೆದರು.
ಬೆಳಗಿನ ಹೊಟ್ಟೆ ಪಾಡು ಮುಗಿಸಿದ ಪುಟ್ಟ, ಗೌರ ಇಬ್ರೂ ಕಾಡಿನ ಕಡೆ ಆಡೋಕೆ ಅಂತ ಹೊರಟ್ರು ದಸರ ಬಂದಿದ್ರಿಂದ ಶಾಲೆನೂ ಇಲ್ದೆ ಆಟನೇ ಅವರ ಲೋಕವಾಗಿತ್ತು. ಆಡಿಕೊಂಡು ಕುಣಿದುಕೊಂಡು ಕಾಡೆಲ್ಲ ಅಣ್ಣ ತಂಗಿ ಇಬ್ರೆ ಸುತ್ತಾಡಿದ್ರು. ಸೀಮೆಸೀಗೆ ಹೂವನ ಒಂದರ ಬಾಯಿಗೆ ಒಂದು ಜೋಡಿಸಿ ಪುಟ್ಟ ಗೌರಾಳಿಗೆ ಬಣ್ಣದ ಸರ ಮಾಡಿಕೊಟ್ಟಿದ್ದ. ಮುಳ್ಳಪೊದೆಲೀ ಬೆಳೆದಿದ್ದ ಚೊಟ್ಟೆಹಣ್ಣು ಕಿತ್ತುಕೊಳ್ಳೋಕೆ ಹೋಗಿ ಇಬ್ರು ಮುಳ್ಳು ಚುಚ್ಚಿಸಿಕೊಂಡು ರಕ್ತಬರಿಸಿಕೊಂಡಿದ್ರು. ಮಧ್ಯಾಹ್ನದ ಹಸಿವಿನ ಕಲ್ಪನೆ ಇದ್ದ ಪುಟ್ಟ, ಕಾಡಲಸು ಬಕ್ಕಲಸನ್ನು ಹುಡುಕೋಕೆ ಶುರುಮಾಡಿದ್ದ ಘಮಗುಡುವ ಬಕ್ಕಲಸೊಂದನ್ನು ಹುಡುಕಿ ಬಗದು ಬಗದು ಇಬ್ರೂ ತಿಂದಿದ್ರು…. ಎಷ್ಟೋ ಜನರ ಹಸಿವನ್ನು, ಆಸೆಯನ್ನ ನಿವಾರಿಸುತ್ತಿರೋ ಈ ಕಾಡು ಈ ಎಳೇ ಹುಡುಗರ ಹಸಿವಿಗೂ ದಾರಿಮಾಡಿಕೊಡ್ತು. ರಾತ್ರಿಗೆ ಪುರಿ ಇಲ್ದಿದಿದ್ರೂ, ಹಲಸು ರಾತ್ರಿಗೆ ಹಸಿವಾಗದಂತೆ ಹೊಟ್ಟೆಯಲ್ಲಿ ಜಾಂಡಾ ಹೂಡಿತ್ತು. ಕುಣಿದು ಕುಪ್ಪಳಿಸಿ ಸಂಜೆನಾಲ್ಕಾಗಿದ್ದು ಇಬ್ರಿಗೂ ಗೊತ್ತಾಗ್ಲೇ ಇಲ್ಲ. ಸೂರ್ಯ ಕೆಂಪಾಗಿದ್ದನ್ನು ಕಂಡು ಇಬ್ಬರೂ ಮನೆಕಡೆಗೆ ನಡೆದ್ರು.
ದಾರಿಲೀ ಹೆಜ್ಜೆ ಹಾಕಬೇಕಾದ್ರೆ ಗೌರ ಪುಟ್ಟನಿಗೆ “ಅಣ್ಣಯ್ಯ ಯಾಕೆ ಅಮ್ಮ ಒಂಥರ ಇದ್ಲು,,,?
ಅವಳಿಗೆ ಹುಷಾರಿಲ್ವೇನೋ ಗೌರ,,,
ಅಡುಗೆ ಕೋಣೆಯ ಗೋಡೆಗೆ ಒರಗಿ ಜೋರಾಗಿ ಅಳುತಿದ್ಲು
ಅಪ್ಪ ಎಲ್ಲೋದ ಅಂತ ಯೊಚನೆ ಇರಬೇಕು.
ಹೌದಣ್ಣಯ್ಯ ನಾಲ್ಕುದಿನದ ಹಿಂದೆ ಶಾಲೆಗೆ ಹೋಗ್ಬೇಕಾದ್ರೆ ನಂಗೆ ಒಂದು ಕಡ್ಡಿಮಿಠಾಯಿ ಕೊಡ್ಸಿ ಹೋದ.
ಎಲ್ಲಿಗೊದ ಏನಾದ್ರು ಹೇಳುದ್ನ?
ಇಲ್ಲ ಅಣ್ಣ, ಆದ್ರೆ ಅವ್ನ ಕೈಯಲ್ಲಿ ಬಿಳಿಗೋಣಿ ಬ್ಯಾಗು ಇತ್ತು.
ಹಂಗಾದ್ರೆ ಯಾವ್ದೊ ಊರ್ಗೆ ಹೋಗಿರ್ಬೇಕು.
ಹೋಗಿದ್ದೆ ಒಳ್ಳೆದಾಯ್ತಲ್ಲ ಅಣ್ಣ, ಪಾಪ ಅಮ್ಮ ರಾತ್ರಿಯೆಲ್ಲಾ ಹೊಡ್ಸಿಕೊಳ್ಳೊದು, ಬೈಸಿಕೊಳ್ಳೊರು ತಪ್ತು.
ಹೂ ಗೌರ ಅವನು ಹೋಗಿದ್ದರಿಂದ ಒದೆ ಇಲ್ದೆ, ಹಿಂಸೆ ಇಲ್ದೆ, ಅಳ್ದೆ ಅಮ್ಮ ನಾನು ನೀನು ಕೌದಿ ಹೊತ್ಕೊಂಡು ನೆಮ್ಮದಿಯಾಗಿ ಮಲಗಬಹುದು. ಹಸಿವನ್ನ ಬೇಕಾದ್ರು ತಡ್ಕೊಳ್ಬೊದು ಅಮ್ಮನ್ನ ನಿನ್ನ ಹೊಡೆಯೊದು ನೋಡೊಕೆ ಆಗಲ್ವೆ ಗೌರ.
ಹೌದಣ್ಣ, ಅವನು ಬೆಳಬೆಳಗ್ಗೆ ನಿನಗೆ ಸಿಮೆಂಟಿನ ಚೀಲದಿಂದ ಹೊಲ್ದಿರೊ ಕೈಚೀಲಕೊಟ್ಟು ಅಜ್ಜಿ ಮನೆ ಮನೆಗೆ ಅಕ್ಕಿ, ಬೇಳೆ, ತರಕಾರಿ ಇಸ್ಕೊಂಡು ಬಾ ಅಂತ ಕಳಸ್ತಿದ್ನಲ್ಲ,,,, ಆಗ ನೀನು ಚೀಲ ತುಂಬಿಸುಕೊಂಡು ಬಂದ್ರೆ ಸುಮ್ನೆ ಬಿಡ್ತಿದ್ದ ಇಲ್ಲ ಅಂದ್ರೆ ಬೇಲಿ ಬರ್ಲಲ್ಲಿ ಬಾಸುಂಡೆ ಬರೋತನಕ ಹೊಡೀತಿದ್ದುದ್ದನ್ನ ನೋಡಿ ನಂಗೂ ಅಳು ಬರ್ತಿತ್ತು ಅಣ್ಣಯ್ಯ.
ಸೀತಕ್ಕನ ತೌರುಮನೆ ಸೂರಾಪುರದಿಂದ ಐದು ಮೈಲಿ, ಏರಿಹತ್ತಿ, ಹಳ್ಳದಾಟಿ ಒಂದು ದಾರಿ ಕಾಡು ನಡುದ್ರೆ ನಿಂಗಾಪುರ ಸಿಕ್ಕುತ್ತಿತ್ತು. ತುಂಬ ಅನುಕೂಲ ಇಲ್ಲ ಅಂದ್ರೂ ಸೀತಕ್ಕನ ತೌರು ಮನೆಯವರು ಹೊಟ್ಟೆಗೂ ಬಟ್ಟೆಗೂ ನೇರವಾಗಿದ್ರು. ಆದ್ರೂ ಸೀತಕ್ಕನ ಅಮ್ಮ ಜಯಮ್ಮಂಗೆ, ಅವಳ ಅಣ್ಣಗೊಳು ಇಬ್ಬರಿಗೆ ಸೀತಕ್ಕನ ಕಂಡ್ರೆ, ಅವಳ ಮಕ್ಕಳನ್ನ ಕಂಡ್ರೆ ಈ ಮೂರು ಜನಕ್ಕೆ ಪಂಚಪ್ರಾಣ. ಆದ್ರೆ ಬಂದವರು ಇಷ್ಟನ ಇಷ್ಟಪಡದಂಗೆ ಮಾಡಿದ್ರು. ಸೀತಕ್ಕನ ಮದ್ವೆ ಆದ್ಮೇಲೆ ಅವಳಿಗೆ ತೌರಲ್ಲಿ ಕೊಟ್ಟಿದ್ದ ಏಳಕಲ್ಲಿನ ವಾಲೆ ಒಂದೆಳೆ ಜಿಲೇಬಿ ಸರಾನ ಮಾರ್ಕಂಡು ಅವ್ಳ ಗಂಡ ತಿಂದಿದ್ದ. ಮಕ್ಕಳಾದ ಮೇಲೆ ಸೀತಕ್ಕನ ಕಳ್ಸಿ ಕಳ್ಸಿ ಧವಸದಾನ್ಯ, ತರಕಾರಿ ತರಸಿಕೊಂಡು ಉಣ್ಣುತಿದ್ದ, ಇನ್ನೂ ಪುಟ್ಟ ಒಂದನೇ ತರಗತಿಗೆ ಹೋಗೋ ಹೊತ್ಗೆ ದಿನ ಬೆಳಗಾದ್ರೆ ಚೀಲಕೊಟ್ಟು ಅವನ ಅವ್ವ ಇದ್ದ ಮನೆಗೆ ದಿನಸಿ ಇಸ್ಕೊಂಡು ಬಾ ಅಂತ ಕಳುಸುತ್ತಿದ್ದ. ಮೊನ್ನಮೊನ್ನೆವರ್ಗೂ ಹಿಂಗೆ ಮಾಡಿಕೊಂಡು ಹೊಟ್ಟೆ ಹೊರ್ಕಂಡಿದ್ದ.
ಜಯಮ್ಮ ಚೀಲ ತಂದ ಮಗೀನ ನೋಡಿ ಕಳ್ಳು ಚುರುಕು ಅಂದು ಸೇರಕ್ಕಿ ಮುಳಗಾಯಿ ಎರಡು ಈರುಳ್ಳಿ ಟೆಮೋಟೊ, ಹಸಿಮೆಣಸಿನಕಾಯಿ ಬೇಳೆ ಒಂಚೂರು ಸಕ್ಕರೆ ಕಾಪಿಹುಡಿ ಕಾರ್ದುಡಿ ಎಲ್ಲ ಚೀಲಕ್ಕೆ ತುಂಬಿ ಮಕ್ಕಳಿಗೆ,ಸೊಸೇರ್ಗೆ ಕಾಣ್ದಂಗೆ ಕಳ್ಸ್ತಿದ್ಲು. ಜಯಮ್ಮನಿಗೆ ಇಬ್ರು ಸೊಸೇರು ಬಂದಮೇಲೆ ತಲಬಾಗ್ಲಲ್ಲಿ ಬರ್ತಿದ್ದ ಪುಟ್ಟ ಹಿತ್ಲು ಬಾಗ್ಲಿಗೆ ಬಂದು ಯಾರ್ಗೂ ಕಾಣ್ದಂಗೆ ಅಜ್ಜಿ ಚೀಲಕ್ಕೆ ತುಂಬಿಸುಕೊಟ್ಟ ಪದಾರ್ಥ ತಗಂಡು ಹೋಗ್ತಿದ್ದ. ಚೀಲ ತುಂಬಿದ್ರೆ ಪುಟ್ಟ ಮನೇಲಿ ಬಚಾವಾಗ್ತಿದ್ದ. ಇಲ್ಲ ಅಂದ್ರೆ ಅವತ್ತು ಅವನಿಗೆ ಅವ್ನ ಅಪ್ಪ ಹೊಡ್ದು ಹೊಡ್ದೂ ಹುಟ್ಟಿದ ಹಬ್ಬ ಕಾಣುಸ್ತಿದ್ದ. ಇಡೀ ಸೀತಕ್ಕನ ಕುಟುಂಬ ಮೊನ್ನೆ ನಾಕುದಿನದ ಮುಂಚೆವರೆಗೂ ಯಾವತ್ತೂ ಕಣ್ತುಂಬ ನಿದ್ದೆ ಮಾಡಿರಲಿಲ್ಲ. ರಾತ್ರಿ ಪೂರ ರಾಮಯ್ಯನ ರಾಮಾಯಣಕ್ಕೆ ಎಲ್ರೂ ಬಲಿಯಾಗಿದ್ರು…. ಎಷ್ಟೋ ಸಲ ಸೀತಕ್ಕ ಮಾಡಿಟ್ಟಿದ್ದ ಸಾರನ್ನು ತಲೆ ಮೇಲೆ ಸುರ್ದಿದ್ದ ಮಾರಾಯ. ಇಷ್ಟೆಲ್ಲಾ ಆದ್ರೂ ಅವನಜೊತೆ ಏಗಿಕೊಂಡು ಜೀವನ ಸಾಗ್ಸಿದ್ಲು ಸೀತಕ್ಕ.
ಕಾಡು ಸುತ್ಕೊಂಡು ಮನೆಗೆ ಪುಟ್ಟನೂ ಗೌರನೂ ಬರೋಹೊತ್ಗೆ ಅವರ ಚಿಕ್ಕಪ್ಪಂದಿರು ಮಾರನಾಮಿ ಹಬ್ಬದ ಬಗ್ಗೆ ಮಾತಾಡ್ತ ರಾಮಯ್ಯನ ವಿಚಾರ ಕೇಳಿದ್ರು…. ಕೇಳಿಯು ಏನೂ ಗೊತ್ತಿಲ್ಲದವರಂಗೆ ಹಬ್ಬದ ತಯಾರಿನ ಬಗ್ಗೆ ಮಾತಾಡಿ ಮನೆ ಕಡೆ ಹೊರಟ್ರು. ಎಲ್ರೂ ಹೋದ ಮೇಲೆ ಸೀತಕ್ಕನಿಗೆ ಹಬ್ಬ ಮುಂದಿಟ್ಟುಕೊಂಡು ಎಲ್ಲೋದ ರಾಮಯ್ಯ ಧೂಪ ಹಾಕದಿದ್ರೆ ಸತ್ತೋಗತ್ತನಲ್ಲ ಅಂತ ಯೋಚ್ನೆ ಶುರು ಆಯ್ತು. ಜೊತೆಗೆ ಹಬ್ಬದ ತನ್ನ ಪಾಲಿನ ಖಚರ್ಿನ ಬಾಬ್ತು ಹೇಗೆ ಹೊಂದ್ಸೋದು ಅಂತಾನು ಚಿಂತೆ ಕಾಡೋಕೆ ಆರಂಭವಾಯ್ತು. ಸೀತಕ್ಕ ತನ್ನಷ್ಟಕ್ಕೆ ತಾನೆ ಮಾತನಾಡಿಕೊಳ್ಳುತ್ತ.
`ಇಷ್ಟುದಿನ ಹೆಸರಿಗೆ ಅಂತನಾದ್ರು ಗಂಡ ಇದ್ದ. ಉಡುಸ್ಲಿಲ್ಲ, ಉಣ್ಣುಸ್ಲಿಲ್ಲ ಅಂದ್ರೂ ಗಂಡು ದಿಕ್ಕು ಅಂತ ಇತ್ತು. ಎಲ್ಲೊದ್ನೋ ನಾಕ್ಕುದಿನ್ದಿಂದ ಅವನ ಸುಳಿವೇ ಇಲ್ಲ. ಕಂಠಪೂತರ್ಿ ಕುಡ್ದು ಎಲ್ಲಿ ಬಿದ್ದು ಸತ್ನೋ ಗೊತ್ತಾಗ್ತಿಲ್ಲ. ಕಣ್ಮುಂದೇನಾದ್ರು ಸತ್ತಿದ್ರೆ ಬಾಯಿಗೆ ತುಳಸಿ ನೀರು ಬಿಟ್ಟು ಸುಮ್ಮನಾಗಬಹುದಿತ್ತು. ಅಂತ ಕೊರಗೋಕೆ ಶುರುಮಾಡಿದ್ಲು ಸೀತಕ್ಕ. ಮೂಡಿಗೆರೆಗೆ ಹೋಗಿ ಶಾಸ್ತ್ರ ಕೇಳಿದ್ಲು.ಕಳಸಿನ ಕೆರೆ ಭೂತಕ್ಕೆ ಹರಕೆ ಹೊತ್ಲು…. ಹೊಟ್ಟೆಯಾತ್ನೆ ಜೊತೆಗೆ ಗಂಡನ ಯೋಚ್ನೆ ಸೀತಕ್ಕನ ಮನಸ್ಸನ್ನು ಸಿಡುಬುರೋಗಕ್ಕೆ ತುತ್ತು ಮಾಡಿತು. ಇದನ್ನೆಲ್ಲ ಪುಟ್ಟ, ಗೌರ ಮೂಕ ಪ್ರೇಕ್ಷಕರಾಗಿ ನೋಡ್ತಿದ್ರು.
ಮಾರನಾಮಿ ಹಬ್ಬಕ್ಕೆ ಒಂದು ದಿನ ಬಾಕಿ ಇತ್ತು. ಹಬ್ಬದ ಒಟ್ಟು ಖಚರ್ು ಇನ್ನೂರು ರೂಪಾಯಿ. ಸೀತಕ್ಕನ ಬಾಬ್ತು ಐವತ್ತುರೂಪಾಯಿ. ಇದ್ದ ಹತ್ತುರೂಪಾಯಿನ ಮೂಡಿಗೆರೆಗೆ ಹೋಗಿ ಖಚರ್ುಮಾಡಿ ಬಂದಿದ್ಲು. ಐವತ್ತು ಹೊಂದ್ಸೋಕೆ ಬೇರೆ ದಾರಿ ಇಲ್ದೆ ಪುಟ್ಟನ ಕರದು “ಅಜ್ಜಿ ಹತ್ರ ಹೋಗಿ ಐವತ್ತು ರೂಪಾಯಿ ಇಸ್ಕಂಡು ಬಾ, ಕೂಲಿನೋ ನಾಲಿನೋ ಮಾಡಿ ಅಮ್ಮ ಕೊಡ್ತಳಂತೆ ಅಂತಹೇಳು ಅವಳಿಗೆ” ಅಂದ್ಲು. ಜೊತೆಗೆ ದಿನ ಕೊಡುತ್ತಿದ್ದ ಕೈ ಚೀಲವನ್ನು ಪುಟ್ಟನ ಕೈಗೆ ಕೊಟ್ಳು.
ಅಮ್ಮ,,,, ಅಜ್ಜಿ ಚೀಲ ತುಂಬ್ಕೊಡ್ಲಿಲ್ಲ ಅಂದ್ರೆ ನೀನು ನಂಗೆ ಹೊಡೆಯಲ್ಲ ತಾನೆ? ಅಂತ ಪುಟ್ಟ ಕೇಳಿದ.
ಪುಟ್ಟಂಗೆ ಅಮ್ಮನ ಯಾವ ಭಾವನೆಗಳು ಅರ್ಥ ಆಗ್ದೆ ಹೊಡೆಯಲ್ಲ ಅನ್ನೋ ಮಾತೆ ಖುಷಿಯಾಗಿ ನಿಂಗಾಪುರದ ಕಡೆ ಸವಾರಿ ಬೆಳೆಸ್ದ. ಎಂದಿನಂತೆ ಹಿತ್ಲ ಬಾಗ್ಲ ಬಳಿ ಹೋಗಿ ಅಜ್ಜಿನ ಕೂಗ್ದ. ಪುಟ್ಟ ಬಂದ ವಾಸ್ನೆ ಹಿಡ್ದು ಅಜ್ಜಿ ಮನೆ ರಾಮು ನಾಯಿ ಪುಟ್ಟನ ಹತ್ರ ಬಂದು ಮೈಮೇಲೆಲ್ಲ ಎಗರಿ ನೆಗೆದು ಮುಖ ಮುಸುಡಿನೆಲ್ಲ ನೆಕ್ಕಿ ಹಾಕಿ ಅವನ ಪಕ್ಕನೇ ನಿಂತ್ಕೊಂಡು ಬಿಡ್ತು. ಪುಟ್ಟ ನಾಯಿ ತಲೆ ಸವರುತ್ತು
“ನಿಂಗೆ ನನ್ನ ಕಂಡ್ರೆ ಎಷ್ಟು ಇಷ್ಟ ಅಲ್ವ, ಗೌರನ್ನೂ ಹಿಂಗೇ ಇಷ್ಟಪಡು ನೀನು. ನಮ್ಮಪ್ಪನ ಹೆಸ್ರೂ ರಾಮಯ್ಯನೇ ಒಂದಿನಾನು ಅವನು ನಮ್ಮನ್ನ ಪ್ರೀತಿಯಿಂದ ಮಾತಾಡಿಲ್ಸ್ಲೇ ಇಲ್ಲ. ಚಿಕ್ಕಪ್ಪ ಅವನ ಮಗ ಹರೀಶಂಗೆ ದಿನಾಗ್ಲು ಬತ್ತಾಸು, ಉಸುರುಬಂಡೆ ಎಲ್ಲ ತಂದುಕೋಡ್ತಾನೆ ಆಮೇಲೆ ಆಚೇಲಿ ಅವರಿಬ್ರು ಚಿಣ್ಣಿದಾಂಡು ಲಗೋರಿ, ಎಲ್ಲ ಆಡ್ತಾರೆ. ನಂಗೆ ಆಟ ಆಡಕ್ಕೆ ಗೌರಿ ಮಾತ್ರ. ಅವಳಿಗೆ ಚಿಣ್ಣಿದಾಂಡು ಲಗೊರಿ ಏನು ಬರಲ್ಲ. ಅದುಕ್ಕೆ ಇಬ್ರೂ ಕಾಡಿಗೆ ಹೋಗಿ ಹಸಿರು ಮಧ್ಯ ಮರಕೋತಿ, ನೀರಾಟ ಆಡ್ತೀವಿ ಅಷ್ಟೆ ರಾಮು… ಮನೇಲಿ ಈಗ ನಮ್ಮ ಅಪ್ಪ ಇಲ್ಲ. ನನ್ನ, ಅಮ್ಮನ್ನ, ಗೌರನ್ನ ಹೊಡೆಯಕೆ ಮನೇಲಿ ಯಾರು ಇಲ್ಲ. ನೀನು ನನ್ನ ಜೊತೆ ಬಂದ್ರೆ ನಿಂಗೂ ಯಾರು ಹೊಡೆಯಲ್ಲ ನೀನು ನನ್ನ ಇಷ್ಟೋಂದು ಇಷ್ಟ ಪಡ್ತಿದ್ದೀಯಲ್ಲ ರಾಮು, ನಂಜೊತೆ ಸೂರಾಪುರಕ್ಕೆ ಬಾರೋ” ಅಂತ ನಾಯಿನ ಕರೆದ…. ನಾಯಿನ ಮಾತಾಡುಸ್ತಾ ಮಾತಾಡುಸ್ತಾ ಹಿತ್ಲ ಬಾಕ್ಲಕಡೆ ಬಗ್ಗಿ ಬಗ್ಗೀ ನೋಡುತ್ತಿದ್ದ ಪುಟ್ಟ. ಏನೂ ಅರಿಯದ ನಾಯಿ ಮುಖದಲ್ಲಿ ಮನುಷ್ಯನ ಭಾವಕ್ಕಿಂತಲೂ ಮಿಗಿಲಾದ ಭಾವವೊಂದು ಅದರ ಮುಖದಲ್ಲಿತ್ತು. ರಾಮು ಕಣ್ಣು ಕಾಂತಿಯುತವಾಗಿತ್ತು. ರಾಮು ಜೊತೆ ಮಾತಾಡ್ತಿದ್ದ ಪುಟ್ಟನ ಮಾತು ಕೇಳಿಸಿಕೊಂಡ ಜಯಮ್ಮ ಹಿತ್ಲು ಬಾಗ್ಲಿಗೆ ಬಂದ್ಲು.
ಮೊಮ್ಮಗನ ಮುಖ ನೋಡಿದ ಜಯಮ್ಮ ಎಂದಿಗಿಂತ ತುಸು ಬದಲಾದಂತೆ, ಆ ಎಳೆ ಮುಖದಲ್ಲಿ ಏನೋ ನೋವು ಸಂಕಟ ಇರೋತರ ಜಯಮ್ಮನಿಗೆ ಅನ್ನಿಸಿ “ಪುಟ್ಟ ಏನಾಯಿತು ರಾಜ…. ರಾತ್ರಿ ಉಂಡ್ರೊ ಇಲ್ವೋ. ನೆನ್ನೆ ರಾತ್ರಿ ನಿಮ್ಮವಂಗೆ ಬಡದ್ನಾ?” ಅವನ ಕೈಗೆ ಲಕ್ವಾನಾದ್ರೂ ಹೊಡುದ್ರೆ ಕಾಲುಮುರ್ಕಂಡು ಮೂಲೇಲಿ ಕುಂತ್ರೆ ಬಳದೊ ಬಾಚೋ ಅನ್ನಾ ಹಾಕ್ತಾಳೆ ನನ್ನ ಸೀತಿ. ಹೊರಗೋಗಿ ದುಡಿದ್ರೆ ಹೆಸರುಕಟ್ತಾನೆ ಹಾಳಾದೋನು. ತೋಟ ಇದೆ, ಕಾಫಿ ಬೆಳಿತೀವಿ ಅಂತ ಸುಳ್ಳೇಳಿ ಕಟ್ಟಂಡ. ಈಗ ಸೀತಿ, ಸೀತಿ ಮಕ್ಳು ಹಸ್ಕಂಡು ಸಾಯಂಗಾಯ್ತು…. ನಾನು ಏನಾರ ಮಾಡಾನ ಅಂದ್ರೆ ನನ್ನಮೆನ ಹಿಡಂಬೀರ ಕಾಟ. ನಾನ ಇರತನಕ ದಿನಕ್ಕು ಒಪ್ಪತ್ತಿಗಾದ್ರು ಕದ್ದೊ ಮುಚ್ಚೋ ಕಳುಸ್ತೀನಿ. ನಾನು ಹೋದಮೇಲೆ ಈ ಮಕ್ಳ ಕಥೆ ಏನು ಅಂತ ಕಣ್ಣಲ್ಲಿ ನೀರು ತುಂಬ್ಕಂಡು ಸುಮ್ನೆ ನಿಂತ್ಕಂಡು ತನ್ನಷ್ಟಕ್ಕೆ ತಾನೆ ಮಾತಾಡಿಕೊಂಡ್ಲು ಜಯಮ್ಮ.
ಜಯಮ್ಮನ ಮಾತನ್ನ ಕೇಳಿಸಿಕೊಂಡ ಪುಟ್ಟ “ಅವ್ವ ಅವ್ವ ವಾರದಿಂದ ನಾವು ಇಬ್ರೂ ಚೆನ್ನಾಗಿ ನಿದ್ದೆ ಮಾಡ್ತಾ ಇದ್ದೀವಿ. ಆದ್ರೆ ನೆನ್ನ ರಾತ್ರಿ ಉಣ್ಣಲಿಲ್ಲ ಕಣವ್ವ. ಒಂದುವಾರದಿಂದ ನಿಂಗಾಪುರಕ್ಕೆ ಬರದೆ ಬರಗಾಪಿ ಕುಡ್ದು ಪುರಿತಿಂದು ಹೊಟ್ಟೆ ತುಂಬುತಿತ್ತು ಕಣವ್ವ, ಮದ್ಯಾಹ್ನದ ಹೊತ್ತಿಗೆ ನಾನು ಗೌರ ಕಾಡಿಗೋಗಿ ಚೊಟ್ಟೆ ಹಣ್ಣು, ಬಕ್ಕಲಸುತಿಂದು ಆಟ ಆಡ್ಕಂಡು ಬರ್ತಿದ್ವಿ ಕಣವ್ವ” ಅಂತ ತುಸು ಖುಷಿಯಿಂದ್ಲೆ ಹೇಳಿದ ಪುಟ್ಟ. ಪುಟ್ಟು ಮಾತುಕೇಳಿದ ಜಯಮ್ಮಂಗೆ ದು:ಖ ಉಮ್ಮಳಿಸಿ ಬಂದು ಜೋರಾಗಿ ಬಿಗಿದಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಬಿಟ್ಳು. ಅತ್ತು ಅತ್ತು ಸುಮ್ಮನಾಗಿ ಮತ್ತೆ,,, ಮತ್ತೆ,,, ಚೀಲ ತಂದಿದಿಯ ಮಗ ಅಂತ ಕೇಳಿದಕ್ಕೆ ಪುಟ್ಟ “ಹೂ ತಂದಿದೀನಿ ಅಂದ. ಆಮೇಲೆ ಅವ್ವ, ಅಮ್ಮಂಗೆ ಮಾರನಾಮಿಗೆ ಐವತ್ತು ರೂಪಾಯಿಬೇಕಂತೆ, ಬಾಚೋ ಬಳಗೋ ವಾಪಸ್ ಕೊಡ್ತಾಳಂತೆ” ಅಂದ. ಪುಟ್ಟನ ಮಾತು ಕೇಳಿದ ಜಯಮ್ಮ ಅಟ್ಟದ ಮೇಲೋಗಿ ಟ್ರಂಕಲ್ಲಿಟ್ಟಿದ್ದ ಚಿಲ್ಲರೇ ಕಾಸನ್ನು ಒಂದು ಕಾಗ್ದದೊಳಗಿಟ್ಟು ಪಟ್ನ ಕಟ್ಟಿ ಪುಟ್ಟ ತಂದಿದ್ದ ಚೀಲಕ್ಕೆ ಎರಡು ಸೇರು ಕೆಂಪಕ್ಕಿ, ನಾಕುಚೂರು ಒಣಗಿದಮೀನು, ಹಸಿಮೆಣಸಿನಕಾಯಿ ಹತ್ತಿಪ್ಪತ್ತು, ಅರಪಾವು ಉಪ್ಪು, ಅರ್ಧಬಟ್ಲು ಎಣ್ಣೆ ಕಾರದಪುಡಿ ನಾಕ್ಕು ನಾಕ್ಕು ಈರುಳ್ಳಿ, ಬೆಳ್ಳುಳ್ಳಿ ಎಲ್ಲ ತುಂಬಿ ಹಿತ್ಲಿಗೆ ತಂದ್ಲು. ಏನೂ ಮಾತಾಡದೆ ಹಿತ್ಲ ಕಟ್ಟೆ ಮೇಲೆ ಕೂತಿದ್ದ ಪುಟ್ಟ, ರಾಮು ಜೊತೆ ಇದ್ದ. ಅಜ್ಜಿ ಮನೆ ಒಳಗೆ ಹೋಗಲಿಲ್ಲ ಅಂತ ಯಾವ ಬೇಸರವನ್ನು ವ್ಯಕ್ತ ಪಡಿಸದೇ ಅವನ ಪಾಡಿಗೆ ಅವನು ನಾಯಿ ಜೊತೆ ಆಟ ಆಡ್ತಿದ್ದ… ಜಯಮ್ಮನ ಮೆನೆ ಹಿತ್ಲ ಬಾಕ್ಲು ಎತ್ತರದ ಗೋಡೆಯಿಂದ ಕೂಡಿತ್ತು. ನಡುಮನೆಗೂ, ಅಡುಗೆ ಕೋಣೆಗೂ ಯಾವ ಸಂಪರ್ಕ ಇರಲಿಲ್ಲ. ಹಂಗಾಗಿ ಹಿತ್ಲಲ್ಲಿ ಏನೇ ನಡೆದ್ರೂ ಮನೇಲಿ ಇದ್ದ ಜನಕ್ಕೆ ಗೊತ್ತಾಗ್ತಿರ್ಲಿಲ್ಲ.
ಅಷ್ಟು ಗುಟ್ಟಾಗಿ ನಡೀತಿದ್ದ ಸೂರಾಪುರ ನಿಂಗಾಪುರದ ವ್ಯವಹಾರ ಜಯಮ್ಮನ ಸೊಸೇರಿಗೆ ಗೊತ್ತಾಗ್ತಿರ್ಲಿಲ್ಲ. ಜಯಮ್ಮ ಚೀಲ ತುಂಬ್ಕಳಕ್ಕೆ ಒಳಿಕ್ಕೆ ಬಂದಾಗ ಅವ್ಳ ನಡವಳಿಕೆ ಅಂದು ಸ್ವಲ್ಪ ಬದಲಾಗಿ ಹೋಗಿತ್ತು. ಅದ್ನ ನೋಡಿದ ಸೊಸೇರು ಜಯಮ್ಮನ ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರು. ಕ್ಷಣ ಕ್ಷಣಾನೂ ಜಯಮ್ಮನ ಹಿಂದೆ ಹಿಂದೆ ಹೋಗಿ ಎಲ್ಲವನ್ನು ನೋಡಿ ಯಾಕೆ ಎಲ್ಲ ಹೀಗೆ ಚೀಲಕ್ಕೆ ತುಂಬಿಕೊಳ್ಳುತಿದ್ದಾಳೆ ಇವಳು ಅಂತ ಪ್ರಶ್ನೆಗಳ ಸುರಿಮಳೆಯನ್ನು ಒಬ್ಬರಿಗೆ ಒಬ್ರು ಕೇಳಿಕೊಂಡ್ರು.
ಹಿತ್ಲ ಬಾಗ್ಲಿ ಹೋದ ಜಯಮ್ಮನನ್ನು ಕಂಡು ಇಬ್ರೂ ಅವ್ಳ ಹಿಂದೆ ಹೋಗಿ ಬಾಕ್ಲ ಹಿಂದೆ ಕದ್ದು ನಿಂತ್ರು. ಜಯಮ್ಮನ ಗ್ರಾಚಾರಾನು ಚೆನ್ನಾಗಿರಲಿಲ್ಲ. ಎರಡು ತಲೆ ಸೇರಿದ್ರು ಎರಡು ಜುಟ್ಟೂ ಸೇರಲ್ಲ ಅನ್ನೋ ಹಾಗೆ ಅತ್ತೇ ಸೊಸೇರ ಸಂಬಂದ ಅಷ್ಟಕ್ಕೆ ಅಷ್ಟೇ ಇತ್ತು. ಇನ್ನೂ ಜಯಮ್ಮನ ಮಕ್ಕಳು ಮೊದಲಿಗಿಂತ ಈಗ ಹೆಂಡತಿಯರ ಮಾತು ಕೇಳ್ಕೊಂಡು ಜಯಮ್ಮನ ಮೂಲೆಗೆ ಕೂರ್ಸಿದ್ರು. ಜಯಮ್ಮನ ಗಂಡ ಅಲ್ಪ ಸ್ವಲ್ಪ ಆಸ್ತಿ ಅಂತ ಮಾಡಿಕೊಟ್ಟು ಸ್ವರ್ಗ ಸೇರ್ಕಂಡಿದ್ರಿಂದ ಸೊಸೇರು ಮಕ್ಕಳು ಮೂರೊತ್ತು ನೀರು ನಿಡಿ ಅಂತ ನೋಡ್ತಿದ್ರು ಅಷ್ಟೇ. ಇಲ್ಲಾ ಅಂದ್ರೆ ಜಯಮ್ಮನ ಕತೇನೂ ಇಷ್ಟೊತ್ತಿಗೆ ಮುಗಿದು ಹೋದ ಕಥೆ ಆಗಿರ್ತಿತ್ತು.
ಪುಟ್ಟನ ನೋಡಿದ ಜಯಮ್ಮ ಮಗ ಮಗ ಇವತ್ತು ಚೀಲವಸಿ ಬಾರ ಇದೆ ಕಣೊ ಅಚ್ಚೇರಕ್ಕಿ ಜಾಸ್ತಿ ಹಾಕಿದ್ದೀನಿ. ಮಾರನಾಮಿ ದಿನನಾದ್ರು ಮೂರೊತ್ತು ಉಣ್ರಿ ಅಂತ”. ಮುಖದ ಸುಕ್ಕಿನ ನಡುವೆ ಜಯಮ್ಮನ ಕಣ್ಣೀರು ಯಾವ ಸುಕ್ಕಿನ ದಾರಿಯಲ್ಲಿ ಹರಿದು ಜಾರಿ ಹೋಗುತ್ತಿತ್ತು ಅಂತ ಗೊತ್ತಾಗುತ್ತಿರಲಿಲ್ಲ, ದು:ಖ ಪ್ರೀತಿ ಎರಡು ಸೇರಿ ಜಯಮ್ಮನ ಮನಸ್ಸು ಸೋತು ಹೋಗಿತ್ತು. ಪುಟ್ಟ ಅಜ್ಜಿ ಅಳೋದನ್ನ ನೋಡಿ
“ಯಾಕವ್ವ ಅಳ್ತಿದ್ದೀಯಾ ಅಮ್ಮನೂ ವಾರದಿಂದ ಸುಮ್ನೆ ಅಳ್ತಿದ್ದಾಳೆ”
ಉತ್ತರ ಕೊಡಲು ಆಗದೆ ಜಯಮ್ಮ ನಿಮ್ಮಪ್ಪ ಹೆಂಗಿದ್ದಾನೆ ಮಗ
ನಾನು ಆಗ್ಲೆ ಹೇಳುದ್ನಲ್ಲ ಅವ್ವ, ನಾವೆಲ್ಲ ವಾರದಿಂದ ಅಳದೆ, ನೆಮ್ಮದಿಯಾಗಿ ನಿದ್ದೇ ಮಾಡ್ತಿದೀವಿ ಅಂತ
ಅಂದ್ರೆ ನಿಮ್ಮ ಅಪ್ಪ ಮನೇಲಿ ಇಲ್ವ?
ಇಲ್ಲ
ಎಲ್ಲೊದ್ನಪ್ಪಾ
ಅವ್ವ ಅವ್ವ “ಅಪ್ಪಾ ಕಾಣೆಯಾಗಿದ್ದಾನೆ
ಅಂದ್ರೆ ಏನು ಮಗ?
ಎಲ್ಲೋದ್ನೊ ಗೊತ್ತಿಲ್ಲ
“ಅಪ್ಪಾ ಕಾಣೆಯಾಗಿದ್ದಾನೆ” ಅನ್ನೊ ಮಾತನ್ನು ಪುಟ್ಟನ ಬಾಯಲ್ಲಿ ಕೇಳಿದೊಡನೆ ಜಯಮ್ಮನ ಮನಸ್ಸು, ಕಣ್ಣು ಮೈಯ್ಯಲ್ಲ ಅದುರಿ ಹೋದ್ರು ತಕ್ಷಣ ಅವನು ಇಲ್ದಿರೋದೆ ಒಳ್ಳೇದಾಯ್ತು ಅಂತ ಅನ್ಕಂಡು “ಮಗ ಅವನು ಹೋದ್ರೆ ಹೋದ ನಾನು ಇದ್ದೀನಿ ನಿಮಗೆ”
ಅಂತ ಹೇಳೋಷ್ಟರಲ್ಲಿ ಈ ಸನ್ನಿವೇಶವನ್ನು ಗಮನಿಸುತ್ತಿದ್ದ ಜಯಮ್ಮನ ಸೊಸೇರು ಇಷ್ಟು ದಿನ ಅಕ್ಕಿ, ಉಳ್ಳಿಬೆಳ್ಳುಳ್ಳಿ, ಎಣ್ಣೆ ಎಲ್ಲ ಕಾಣೆ ಆಗ್ತಾ ಇತ್ತಲ್ಲ ಅದೆಲ್ಲ ದೈಯ ಹೊತ್ಕಂಡು ಹೋಗ್ತಿತ್ತು ಅಂತ ಹೇಳ್ತಿದ್ಲು ಮುದುಕಿ. ಈ ಮನೆಗೆ ಆಯ ಮುಗ್ದು ಹೋಗಿ, ಪೂಜೆ ಮಾಡಿ, ಆಯ ತೆಗೆಸುದ್ರೆ ಸರಿಯಾಗುತ್ತೆ ಅಂತಿದ್ಲು. ದೈಯ ಆಯ ಎಲ್ಲ ಇಲ್ಲೆ ಇದೆ ಅಂತ ಆಶಾಡದಲ್ಲಿ ಬೀಸೋ ಗಾಳಿಗೆ ಸಿಲ್ವಾರದ ಮರ ನೆಲಕ್ಕೆ ಬಗ್ಗಿ ಮತ್ತೆ ರಪ್ಪನೆ ಮೇಲೇಳೊ ತರ ಇಬ್ರೂ ದಡೀರನೆ ಹಿತ್ಲ ಬಾಗ್ಲು ಕಡೆ ನುಗ್ಗುದ್ರು.
ಓ ಪುಟ್ಟ ಮುಂದ್ಲ ಬಾಕ್ಲಲ್ಲಿ ಬರೋ ಲಕ್ಷ್ಮೀನ ಹಿಂದ್ಲ ಬಾಕ್ಲಲ್ಲಿ ನೀನೇ ಏನೋ ಕರ್ಕಂಡು ಸೂರಾಪುರಕ್ಕೆ ಹೋಗ್ತಿದಿದ್ದು
ಏನೂ ಗೊತ್ತಾಗದ ಪುಟ್ಟು ಅತ್ತೆಮ್ಮ ಅಂತ ತುಸು ನಕ್ಕು ಸುಮ್ಮನಾದ
ಹಿರಿ ಸೊಸೆ ಪುಟ್ಟನ ಕೈಲಿದ್ದ ಚೀಲ ನೋಡಿ ಏನ್ಲ ಅದು ಪುಟ್ಟ ಅಂತ ಕೇಳಿದಕ್ಕೆ ಪುಟ್ಟ ಮಾರನಾಮಿಗೆ…. ಅತ್ತೆಮ್ಮ! ಅಂದ. ಅಕ್ಕಿ ಉಪ್ಪು ಕಾರದುಡಿ ಅಷ್ಟೇ ಪುಟ್ಟನ ಮಾತು ಕೇಳಿ ಅದೇನಾಯ್ತೊ ಏನೋ ಮೈಮೇಲೆ ದೆವ್ವ ಬಂದವಳ ತರ ಆಡ್ತಾ, ಮುದುಕಿ ಸಾಯಿಲಿಲ್ಲ ಅಂತ ಗೊಣಗುತ್ತಾ ಪುಟ್ಟು ಕೈಲಿದ್ದ ಚೀಲಾನ ಕಿತ್ಕಂಡ ರಭಸಕ್ಕ ಚೀಲದಲ್ಲಿರ್ದ ಅಕ್ಕಿ, ಕಾರದಪುಡಿ, ಮೆಣಸಿನಕಾಯಿ, ಚಿಲ್ಲರೆ ಕಾಸು ಎಲ್ಲ ಚೆಲ್ಲಾಪಿಲ್ಲಿ ಆಗೋಯ್ತು. ಕಾರದಪುಡಿ ಪಟ್ಣ ಬಿಚ್ಕಂಡು ಪುಟ್ಟನ ಪಕ್ಕದಲ್ಲಿದ್ದ ರಾಮು ಕಣ್ಣಿಗೆ ಬಿದ್ದು ಕುಯ್ಯೋ ಕುಯ್ಯೋ ಅಂತ ರಾಗ ಹಾಡುತ್ತಾ ಪ್ರಜ್ಞೆ ತಪ್ಪಿ ಬಿತ್ತು. ಕಿರಿ ಸೊಸೆ ಒಂದೇ ಸಮ್ನೆ ಜಯಮ್ಮನ್ನ ತಿಂದು ಹಾಕೋತರ ದುರುಗುಟ್ಟಿಕೊಂಡು ನೋಡ್ತಿದ್ಲು. ನಡೀತಿದ್ದ ಸನ್ನಿವೇಷ ಮನೇಲಿರೋ ಜಯಮ್ಮನ ಗಂಡುಮಕ್ಕಳಿಗೂ ಗೊತ್ತಾಗಿ ಹಿತ್ಲ ಜಗಲಿ ಮೇಲೆ ಏನೂ ಮಾತಾಡ್ದೆ ನರ ಸತ್ತವರ ತರ ನಿಂತ್ಕಂಡಿದ್ರು.ಸುತ್ತ ಕಾಡು, ತೋಟ, ಹಕ್ಕಿಗಾನ, ಗಾಳಿ, ಎಲ್ಲ ಸುಮ್ಮನೆ ನೋಡುತಿದ್ವು. ಹಿತ್ಲು ಬಾಗಿಲು ಅರ್ಧ ಮುಚ್ಕಂಡಿತ್ತು.
ಪುಟ್ಟ ಅವನ ಅತ್ತೇರ ವ್ಯಾರ್ಘತನವ ನೋಡಿ, ಅತ್ತೆಮ್ಮ ಅಪ್ಪಾನೂ ರಾತ್ರಿಹೊತ್ತು ಹಿಂಗೇ ಆಡ್ತಿದ್ದ. ಈಗ ಒಂದು ವಾರದಿಂದ ರಾತ್ರಿಗೆ ನೆಮ್ಮದಿ ಬಂದಿದೆ. ಹೊಟ್ಟೆ ಹಸಿಯುತ್ತೆ ಅದುಕ್ಕೆ ಅಕ್ಕೀನಾ… ತರ್ಕಾರಿನ… ಇಸ್ಕಳನಾ ಅಂತ… ಎಲ್ಲ ಚೆಲ್ಬಿಟ್ರಲ್ಲ, ಮಾರನಾಮಿಗೆ ದುಡ್ಡು ಬೇಕು ಅಂದಿದ್ಲು ಅವ್ವ ಅದುಕ್ಕೆ ಬಂದೆ…..
ಪುಗ್ಶಟ್ಟೆ ಸಿಗುತ್ತೆ ಅಂದ್ರೆ ಎಲ್ಲಿಂದ ಎಲ್ಲಿಗೆ ಬೇಕಾದ್ರು ಹೊಗ್ತಾರೆ… ಬರ್ತಾರೆ ಜನ. ದುಡ್ಕಂಡು ತಿನ್ನಕ್ಕೆ ಏನು ರೋಗಾನೋ ನಿಮ್ಗೆ ? ನಿಮ್ಮಪ್ಪ ದಿಮ್ಮನಾಗಿದ್ದಾನೆ, ನಿಮ್ಮವ್ವನೂ ಗಟ್ಟು ಮುಟ್ಟಾಗಿದ್ದಾಳೆ… ಮಾಡಿದ್ದು ಮಟ್ಟಿದ್ದು, ನೋಡಿದ್ದು ನುಗುಚಿದ್ದು ಎಲ್ಲಾ ಮದುವೆ ಮಾಡಕೊಟ್ಟಾಗ್ಲೆ ಮುಗ್ದುಹೋಯ್ತು. ಎಲ್ಲೊ ನಿಮ್ಮಪ್ಪ,,,,? ಅಂದ್ಲು ಅತ್ತೆಮ್ಮ.
ಅತ್ತೆ ಹೇಳಿದ ಮಾತುಗಳನ್ನ ಕೇಳಿದ ಪುಟ್ಟುಗೆ ತನ್ನ ಮನೆಯ ನೋವು ಸಂಕಟದ ಪ್ರಜ್ಞೆ ಬಂದು ಮುಖ ಮುದುಡಿ, ತಲೆ ತಗ್ಗಿಸಿ, ಭಯ ಹುಟ್ಟಿ ಬೆವರುತ್ತ ತನ್ನ ಅಜ್ಜಿ ಮತ್ತು ಮಾವಂದಿರನ್ನು ನೋಡುತ್ತಾ ನಿಂತು.”ಅಪ್ಪ ಕಾಣೆಯಾಗಿದ್ದಾನೆ” ಅಂದ.
ಅವನ ಮಾತನ್ನ ಕೇಳಿದ ಸೊಸೆಯಂದಿರು ನಿಭರ್ಾವುಕವಾಗಿ, ಅತ್ತೆಯನ್ನು ಬೈದುಕೊಳ್ಳುತ್ತಾ, ಹಿಡಿಹಿಡಿ ಶಾಪ ಹಾಕಿ ಒಳನಡೆದರು. ಮಾವಂದಿರು ಏನೂ ಮಾತಾಡದೆ ತನ್ನ ಹೆಂಡತಿಯರನ್ನು ಹಿಂಬಾಲಿಸಿದರು.
ಅಕ್ಕಿ ಚಿಲ್ಲರೆ ಕಾಸು ಎಲ್ಲಾ ಹೆಣ ಹೊತ್ಕೊಂಡು ಹೋಗುವಾಗ ಹೆಣದಮೇಲೆ ಹಾಕೋತರ ನಾಯಿ ರಾಮು ಮೇಲೆ ಬಿದ್ದಿತ್ತು. ಮೆಣಸಿನಕಾಯಿ ಈರುಳ್ಳಿ ಎಲ್ಲಾ ಚಿಲ್ಲಾಪ್ಪಿಲ್ಲಿ. ಎಣ್ಣೆ, ಕಾರದಪುಡಿ ಹಿತ್ಲ ಚರಂಡಿಗೆ ಅರ್ಧ ಮಣ್ಣಿಗೆ ಅರ್ಧ ಚಲ್ಲಿಹೋಗಿತ್ತು. ಪುಟ್ಟ ಗಲ್ಡಗಂಬದ ತರ ನಿಂತ್ಕಂಡಿದ್ದ. ಕಣ್ಣಲ್ಲಿ ನೀರು ಹನಿಯಾಡುತ್ತಿತ್ತು ಸಣ್ಣಗೆ ತುಂತುರು ಶುರುಆಗಿ ಮಳೆ ಜಾಸ್ತಿ ಆಯ್ತು. ಕಾರದ ಪುಡಿ, ಅಕ್ಕಿ, ಎಣ್ಣೆ, ಉಪ್ಪು, ಎಲ್ಲ ಮಳೇ ನೀರಲ್ಲಿ ತೊಯ್ದು ಹೋಯ್ತು,,,,? ಮಳೇಲಿ ಪ್ರಜ್ಞೆ ತಪ್ಪಿದ ರಾಮು, ಜಯಮ್ಮ, ಪುಟ್ಟ ಮಾತ್ರ ಅಲ್ಲಾಡದಂಗೆ ನೆನ್ಕಂಡು ನಿಂತಿದ್ರು,,,,!!!
ಆಯತಾರ ಸಂತೇಲಿ ಹತ್ತುಸೇರು ಪುರೀನ ಮುನ್ನಾ ಸಾಬ್ರಹತ್ರ ರುಪಾಯಿಗೊಂದು ಲೀಟರಂಗೆ ತಂದಿದ್ದು ಎಲ್ಲಾ ಖಾಲಿ. ಪುರಿಯ ಸಿಲ್ವಾರದ ಡಬ್ಬ ತಳಸೇರಿ ಗಷ್ಟ, ಕರಿಮಣ್ಣು, ಹೆಂಟೆ ತುಂಬ್ಕಂಡಿದೆ. ದರಿದ್ರ ಸೂಡ್ರು ಕಾಲ ಬೇರೆ ಶುರುವಾಗಿ ಮೈಯಲ್ಲಾ ಹೊಟ್ಟೆ. ಎಷ್ಟು ತಿಂದ್ರು ತಿಂದ ಅರ್ಧಗಂಟೆಗೆ ಹೊಟ್ಟೆ ಚುರುಕ್ ಅನ್ನುತ್ತೆ. ಬೆಳಗ್ಗೆ ಆದ್ರೆ ಹೊಟ್ಟೆ ಕಾಟ ರಾತ್ರಿ ಆದ್ರೆ ಚಳಿಯ ಗೋಳು ಅಂತ ತನ್ನಷ್ಟಕ್ಕೆ ತಾನೇ ಗೊಣಗಿಕೊಳ್ಳುತ್ತಿದ್ಳು ಸೀತಕ್ಕ. ಬೆಳಬೆಳಿಗೇನೆ ಒಲೆಮುಂದೆ ಕೂತ್ಕಂಡು ಇರೋ ಪುಳ್ಳೆ ಕಡ್ಡೀನ ಎಲ್ಲ ಜೋಡಿಸಿಕೊಂಡು ಒಲೆ ಹತ್ಸೋಕೆ ಸೀಮೆಣ್ಣೆ ಬುಡ್ಡಿಯಲ್ಲಿ ಎಣ್ಣೇನ ಸುರ್ಕಳಕೆ ಹೋದ್ಲು. ಇದ್ದ ಬದ್ದ ಸೀಮೇಣ್ಣೆನ ಎಲ್ಲಾ ಸೀಮೇಣ್ಣೆಬುಡ್ಡಿ ಸ್ವಾಹ ಮಾಡಿ ಒಂಚೂರು ತೇವ ಬಿಡದ ಹಾಗೆ ಹೀರಿಕೊಂಡು, ಬತ್ತಿಗೆ ಅಂತ ಹಾಕಿದ್ದ ಪಂಚೆಬಟ್ಟೇನೂ ಸೀಸದ ಮುಚ್ಚಳಕದ ತಳಕ್ಕೆ ಸೇರಿ ಸೀದು ಹೋಗೋತರ ಹತ್ಕಂಡು ಉರಿದುಹೋಗಿತ್ತು. ತೆಂಗಿನ ಕರಟಕ್ಕೆ ರಾತ್ರಿ ಉರ್ದು ಆರೋಗಿದ್ದ ಮೇಗಳ ಹಗುರವಾದ ಬೂದಿನ ತುಂಬಿ ಉಳಿದ ಹಳೇಬೂದಿನ ಇದ್ದಿಲು ಚೂರನ್ನ ಒಲೆಬಾಯಿಂದ ತೆಗ್ದು, ಒಲೆ ಬಳ್ದು, ರಂಗೋಲೆ ಬಿಟ್ಳು. ಬೂದಿ ತುಂಬಿಟ್ಟಿದ ತೆಂಗಿನ ಕರಟದ ಸಮೇತ ಅಟ್ಟಿಗೆ ಬಂದು ಸೀತಕ್ಕ ತನ್ನ ವಾರಗಿತ್ತಿ ಮನೆ ಎದುರಿಗೆ ನಿಂತು

ಪದ್ಮಿ,,,,, ಪದ್ಮಿ,,,,, ಅಂತ ಕೂಗುದ್ಲು. ಬೆಳಗಿನ ತಿಂಡಿಗೆ ಅಂತ ರೊಟ್ಟಿಗೆ ರಾತ್ರಿ ನೆನಸಿಟ್ಟಿದ್ದ ಅನ್ನನ ಮಿದಿತಿದ್ದ ಪದ್ಮಿ ಕೈನೂ ತೊಳೀದಂಗೆ ಆಚೆಗೆ ಬಂದು
ಓ,,,,, ! ಏನಕ್ಕ
ಒಂಚೂರು ಸೀಮೇಣ್ಣೆ ಕೊಡೆ ಒಲೆಹತ್ಸೊಕ್ಕೆ, ಒಂದ್ನಾಕು ತೊಟ್ಟು ಸಾಕು ಮಕ್ಕಳಿಗೆ ಬರಗಾಪಿನಾದ್ರು ಮಾಡ್ಕೊಡ್ತೀನಿ. ಬೆಲ್ಲ ಕಾಫಿಪುಡಿ ಇದೆ.
ಏನೂ ಮಾತಾಡದ ಪದ್ಮಿ ಸೀತಕ್ಕನ ಮೇಲೆ ತುಸು ಗೌರವ ಪ್ರೀತಿ ಇದ್ದಿದ್ರಿಂದ ಅಂದು ಏನೂ ಮಾತನಾಡದೇ, ಮುಖದ ಛಾಯೆಯನ್ನು ಸ್ವಲ್ಪ ಬದಲಿಸಿಕೊಂಡು ಸೀಮೇಣ್ಣೆ ಬುಡ್ಡಿಯಿಂದ ಚಿಪ್ಪಲ್ಲಿದ್ದ ಬೂದಿಗೆ ಸುರುದ್ಲು. ಪದ್ಮಿಯ ಮುಖಭಾವವನ್ನು ಕಂಡ ಸೀತಕ್ಕ ಮನುಷ್ಯ ಅಂತ ಇದ್ಮೇಲೆ ನಾಕ್ಕಾಸು ಜೊತೇಲಿ ಇರಬೇಕು ಇಲ್ಲ ಅಂದ್ರೆ ಎಲ್ರೂ ಹೀಗೆ ಮುಖ ಮೂತಿ ತಿರುಗುತ್ತೆ. ಯಾರಿಗೆ ಏನು ಅನ್ಯಾಯ ಮಾಡಿದ್ನೋ ಏನೋ ನಾನು ನನ್ಮಕ್ಳು ಈ ಕೊಂಪೆಗೆ ಸೇರಿಕೊಂಡು ಅನುಭವಿಸುತ್ತಾ ಇದ್ದೇವೆ. ಅಂತ ತನ್ನ ಅದೃಷ್ಟವನ್ನು ನಿಂದಿಸಿಕೊಳ್ಳುತ್ತಾ ಸೀತಕ್ಕ ಮನೆ ಸೇರಿದಳು.
ಸೀತಕ್ಕನ ಮನೆ ಇದ್ದ ಅಟ್ಟೀಲಿ ಒಟ್ಟು ನಾಲ್ಕು ಮನೆ ಇದ್ವು. ಸೀತಕ್ಕೆ ಸೇರಿದ ಮನೆ ಇದ್ದಿದ್ದು ಸುತ್ತಾ ಕಾಡಿರೊ ಊರಿಗೆ. ಊರ ಹೆಸರು ಸೂರಾಪುರ. ಸೀತಕ್ಕ ಸೇರಿದಂತೆ ಅವಳ ಗಂಡನ ಅಣ್ಣತಮ್ಮಗಳ ಮನೆ ಇತ್ತು. ಅತ್ತೆ ಮಾವನ ತಲೆ ಉರುಡಿ ಬರೋ ಮಾರನಾಮಿಗೆ ಎಂಟು ವರ್ಷ ಆಗಿತ್ತು. ಹೇಳಕೊಳಕ್ಕೆ ಯಾವುದರಲ್ಲೂ ಮುಂದಿರದ ವಂಶ. ಹೆಸರಿಗಷ್ಟೆ ಅಂತ ಗಂಡು ಮಕ್ಳು. ಬಂದವರು ಬುದ್ದಿವಂತರಾಗಿ ತನ್ನ ಗಂಡಂದಿರಿಗೆ ಲಗಾಮು ಹಾಕಿ ದಾರಿಗೆ ತಂದುಕೊಂಡಿದ್ರು. ಆ ವಂಶದ ಉಳಿದ ಮೂವರು ಗಂಡುಹುಳಗಳು ಗೆಯ್ಯಕೆ ಅಂತ ನೆಪ ಇಟ್ಕೊಂಡು ಚಿಕ್ಕಮಳೂರಿಗೋ ಹಾಸನಕ್ಕೊ ಹೋಗಿ ನಾಲ್ಕಾಸು ತಂದು ಮೂರೊತ್ತು ಉಣ್ಣುತ್ತಿದ್ರು. ಇನ್ನು ಹುಟ್ಟು ಹುಟ್ಟುತ್ತಾ ದಾಯಾದಿಗಳು ಅನ್ನೊ ಮಾತು ಇವರ ವಂಶಕ್ಕೆ ಸರಿಯಾಗಿತ್ತು. ವಾರಗಿತ್ತಿಯರು ಒಳಗಿನ ಹುಳುಕು ತೋರಿಸಿಕೊಳ್ಳದೆ ಎದ್ರು ಬದ್ರು ಸಿಕ್ಕುದ್ರೆ ಸಂಸ್ಕಾರಕ್ಕಾದ್ರು, ನಗುತ್ತಿದ್ರು. ಹಬ್ಬಕ್ಕೆ ಹುಣ್ಮೆ ಅಂತ ಯಾವುದಕ್ಕೂ ಸೇರ್ತಿರಲ್ಲಿಲ್ಲ. ಮಗನ್ನ ಮಾರಿ ಆದ್ರು ಮಾರನಾಮಿ ಹಬ್ಬ ಮಾಡು ಅಂತ ಗಾದೆ ಇರೋದ್ರಿಂದ ನಾಲ್ಕು ಜನ ಸೇರಿ ಸೀತಕ್ಕನ ಮನೇಲಿ ಎಡೆ ಇಕ್ಕುತ್ತಿದ್ರು. ಉಂಡುತಿಂದು ಎಲ್ಲಾ ಆದಮೇಲೆ ಉಳಿದ ಅಚ್ಚೇರಕ್ಕಿ, ಅರಪಾವು ಕಾರಾಪುಡಿ, ತಳಸೇರಿದ ಸಾರನೂ ಬಿಡದಂತೆ ಡಬ್ಬಕ್ಕೆ ತುಂಬಿಕೊಂಡು ಹೊಗುತ್ತಿದ್ರು. ವರ್ಷ ವರ್ಷ ಮಾರನಾಮಿ ಹಬ್ಬನೂ ಹಾಗೆ ಆಗ್ತಾ ಇತ್ತು. ಸೀತಕ್ಕ ಹಿರಿಸೊಸೆ ಆಗಿದ್ದರಿಂದ ಹಬ್ಬವೆಲ್ಲಾ ಸೀತಕ್ಕನ ಮನೇಲೆ ಆಗ್ತಿತ್ತು.
ಪ್ರತೀ ವರ್ಷದಂಗೆ ಈ ಸಲದ ಮಾರ್ನಾಮೆ ಹಬ್ಬ ಒಂದು ವಾರ ಇದೆ ಅಂತ ಸೀತಕ್ಕನ ಎರಡನೆ ಮೈದ ಅವಳ ಮನೆ ಹತ್ರ ಒಂದು ಹಬ್ಬದ ಬಾಬ್ತು ಅಂತ ಐವತ್ತುರುಪಾಯಿ ಕೊಟ್ಟುಹೋಗಿದ್ದ. ದೊಡ್ಡವರಿಂದ ಹಿಡಿದು ಚಿಕ್ಕವರ ತನಕ ಎಲ್ರೂ ಹಬ್ಬಕ್ಕೆ ಇರಬೇಕು. ಎಲ್ರೂ ಹಿರಿಯರಿಗೆ ಧೂಪ ಹಾಕಬೇಕು ಅನ್ನೊದು ಅವರ ನಂಬಿಕೆ. ಅದನ್ನು ಚಾಚು ತಪ್ಪದ ಹಾಗೆ ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದಿದ್ರು. ಸೀತಕ್ಕನ ಅತ್ತೆ ಚಂದ್ರಮ್ಮ ಒಂದ್ಸಲ ಮಾರನಾಮಿ ಹಬ್ಬ ಗಂಡನ್ಮನೇಲಿ ಮಾಡದಲೇ ತೌರು ಮನೆಗೆ ಹೊಗಿದ್ದರಿಂದ ಮುಂದಿನ ಮಾರನಾಮಿ ಹಬ್ಬದಷ್ಟೊತ್ತಿಗೆ ನೆಗೆದು ಬಿದ್ದಿದ್ಲು ಅಂತ ಇವರೆಲ್ಲ ನಂಬಿದ್ರು. ಹಂಗಾಗಿ ಯಾರುಯಾರಿಗೂ ಹೆದರದಿದ್ರು ಮಾರನಾಮಿ ಹಬ್ಬಕ್ಕೆ ಹೆದರಿ ನಿಷ್ಟೆಯಿಂದ ಎಲ್ರೂ ಸೇರಿ ಹಬ್ಬ ಮಾಡಿ ತಿಂದು ತೇಗಿ ಅವರವರ ಮನೆ ಸೇರ್ಕೊತಿದ್ರು. ಬಟ್ಟೆ ಬರೆ ತಿಂಡಿ ತಿನಸು, ಹೆಂಡ ಎಲ್ಲಾ ಅವರವರದ್ದು ತಂದು ಎಡೆ ಇಟ್ಟಿ ತಿಂದು ತೇಗಿ ಮತ್ತೆ ತಗಂಡು ಹೋಗ್ತಿದ್ರು. ಸೀತಕ್ಕ ಮಾತ್ರ ತೊಳೆಯೊದು, ಬಳಿಯೊದ್ರಿಂದ ಹಿಡಿದು, ಮಸಾಲೆರುಟ್ಟಿ ಒಲೆಮುಂದೆ ನಿಂತ್ಕೊಳೋತನಕ ಎಲ್ಲಾ ಒಬ್ಬಳೆ ನಿಬಾಯಿಸ್ತಿದ್ಲು. ಅವಳು ಮದ್ವೆ ಆದಾಗಿಂದ್ಲೂ ಒಂದು ರವಿಕೆ ಕಣನಾಗ್ಲಿ, ಒಂದು ಚೌಕನಾಗ್ಲಿ ತಂದು ಅವಳ ಗಂಡ ಎಡೆಗೆ ಇಟ್ಟಿರರಿಲ್ಲ.
ಸೀತಕ್ಕ ಸೂರಾಪುರದ ಹಿರೀಸೊಸೆ ಮಲಸೀಮೆ ಹೆಣ್ಣು. ಅವಳ ಗಂಡ ರಾಮಯ್ಯ ಒಂಚೂರು ಜವಾಬ್ದಾರಿ ಇಲ್ಲದ ವ್ಯಕ್ತಿ. ಸೀತಕ್ಕನಿಗೆ ಪುಟ್ಟ ಮತ್ತು ಗೌರ ಅಂತ ಇಬ್ಬರು ಮಕ್ಕಳು. ಹಿರೀಸೊಸೆ ಆದ್ರೂ ಹಿರೀತನ ಅನ್ನೊದು ಯಾವುದು ಉಳಿದಿರಲ್ಲಿಲ್ಲ ಅವಳಿಗೆ. ಇರೋಕೆ ಒಂದು ಹೆಸರಿಗೆ ಅಂತ ಮನೆ ಇತ್ತು. ತೂತುತೂತಾಗಿರೊ ಹಂಚಿನ ಮನೆ ಸಗಣೀಬಳದ ನೆಲ. ಅಡುಗೆ ಕೋಣೆಗೂ ನಡುಮನೆಗೆ ನಡುವೆ ಇರೊ ಒಂದು ಅಡ್ಡಗೋಡೆ. ಹಿತ್ತಲಲ್ಲಿ ಗರಿ ಬಚ್ಚಲು, ನೀರಂಡೆ, ಬಟ್ಟೆಕಲ್ಲು, ಮನೆಸುತ್ತ ಕಾಡೋಕಾಡು. ಅಟ್ಟೀಲಿ, ನಾಲ್ಕೈದು ಮಾರು ಬಿಟ್ಟು ಬಿಟ್ಟು ಹೋದ್ರೆ ಉಳಿದ ಮೂರು ಮನೆ ಸಿಕ್ಕುತ್ತೆ. ದೊಡ್ಡ ಅಂಗಳದಲ್ಲಿ ಸೀತಕ್ಕ ಮನೆ ಇತ್ತು. ಸೀತಕ್ಕನ ಮನೆ ನೀರು ಕಾಯಿಸೋ ಹಂಡೆಗೆ ನೂರು ವರ್ಷದ ಇತಿಹಾಸ ಇದೆಯಂತೆ. ಗುಡಾಣದ ತರ ಇರೊ ಮಣ್ಣಿನ ಹಂಡೆ ಅದು. ಸಿಲ್ವಾರದ ಮರದ ಕಾವಿಗೂ ಒಡೆಯದ ಗಟ್ಟಿಹಂಡೆ. ಸೀತಕ್ಕನ ಹಿಸ್ಸೆ ಬಾಬ್ತಾಗಿ ಈ ಹಂಡೆ ಧಾರಾಳವಾಗಿ ಬಂದಿತ್ತು. ಹಿತ್ತಾಳೆಹಂಡೆ ಕಂಡ ಸೀತಕ್ಕನ ವಾರಗಿತ್ತಿಯರು ಈ ಗುಡಾಣವನ್ನು ಮೂಸುನೋಡದೆ ಬಿಟ್ಟಿದ್ರು. ಅರಗಾಗ್ಲಿ, ತಳ ಆಗ್ಲಿ ಮಳೆಗೆ, ಬಿಸಿಲಿಗೆ, ಗಾಳಿಗೆ ಏನೂ ಆಗದೆ ನೂರು ವರ್ಷಗಳಿಂದ ನೀರು ಕಾಯ್ಸಿ ಕಾಯ್ಸಿ ಕೊಟ್ಟಿತ್ತು ಈ ಹಂಡೆ. ಸೀತಕ್ಕನ ಮನೇಲಿ ಈಗ್ಲೂ ನಿಷ್ಟಾವಂತವಾಗಿ ಗೈಯ್ತಿದೆ ಈ ಗಟ್ಟಿ ಹಂಡೆ. ಸೀತಕ್ಕ ಎಷ್ಟೋ ಸಲಾ ಈ ಹಂಡೆನ ಮುಂಗಟ್ಕಂಡು ತನ್ನ ನೋವು, ಸಂಕಟ, ಪ್ರೀತಿ, ಎಲ್ಲಾ ತೋಡ್ಕತಿದ್ಲು. ಎಲ್ಲವನ್ನು ಸುಮ್ನೆ ನೋಡಿಕೊಂಡು ಬಂದಿದ್ದ ಹಂಡೆ ಸೀತಕ್ಕನ ಯಾವ ಭಾವಗಳಿಗೂ ಸ್ಪಂದಿಸದೆ ನಿಭರ್ಾವುಕವಾಗಿ ಮೂರು ಕಲ್ಲಿನ ಮೇಲೆ ಗುಡಗುಪ್ಪನೆ ಕುಂತಿತ್ತು. ಮನಸ್ಸು, ಮೈ, ತಣ್ಣಗಾದ ಮೇಲೆ ಏನೂ ಮಾತಾಡದೆ ಬಚ್ಚಲ್ಗೋಗಿ ನೀರುಹುಯ್ಕಬೇಕಾದ್ರೆ `ಕಾದು ಕಾದು ನೀರು ಕಾಸಿ ನಮ್ಮ ಮೈನ ಕೊಳೆ ತೆಗಿತೀಯ,,, ಮನಸ್ಸು ಮೈನ ಉಲ್ಲಾಸಗೊಳಿಸ್ತೀಯಾ,,, ಒ0ದಿನಾನು ಒಂಚೂರು, ಬೈದೇ, ಮುನಿಸಿಕೊಳ್ಳದೇ, ಬೇಸರಮಾಡಿಕೊಳ್ಳದೆ ನಿನ್ನ ಕೆಲ್ಸ ನೀನು ಚಾಚು ತಪ್ಪದೆ ಮಾಡ್ಕೊಂಡು ಬಂದಿದ್ದಿಯಾ,,,’ ಅಂತ ಹಂಡೆಜೊತೇಲಿ ಮಾತಾಡುತ್ತಾ, ನಾವು ಮನುಷ್ಯರೇ ಇಷ್ಟು ಇಲ್ಲದ್ದನ ಬೇಕು ಅಂತಿವೀ, ಇರೋದನ್ನ ಬೇಡ ಅಂತೀವಿ ಬೇಕೋ ಬೇಡವೋ ಅನ್ನೋದನ್ನ ಯೋಚ್ನೆ ಮಾಡೋ ಅಷ್ಟೊತ್ತಿಗೆ ಜೀವನ ಓಡೋಗಿರುತ್ತೆ,,, ಕೆಲ್ಸಾ ಮಾಡ್ದೇ, ಬದುಕನ್ನು ನೋಡ್ದೆ ಕೈಚೆಲ್ಲಿ ಕುತ್ಕೊಂಡು ಬಿಡ್ತಿವೀ.. ಅಂತ ತನ್ನಷ್ಟಕ್ಕೆ ತಾನೇ ಮಾತಾಡ್ಕೊತಿದ್ಲು ಸೀತಕ್ಕ. ಯಾರು ಬರ್ಲಿ ಯಾರು ಇರ್ಲಿ ಯಾರ ಹೋಗ್ಲಿ,,, ನೀನಂತು ನೀರು ಕಾಯ್ಸೊ ಕೆಲ್ಸ ಬಿಡಲ್ಲ. ನಾನ್ ನೋಡು ನಾಕದಿವಸದಿಂದ ಕಟ್ಕಂಡವ್ನ ಮಖ ಕಾಣ್ದೆ ಸಾಯ್ತಾ ಇದ್ದೀನಿ ಅಂತ ಕಣ್ಣಲ್ಲಿ ನೀರು ಹಾಕ್ಕಂಡ್ಳು. ಅವಳ ಕಣ್ಣೀರಿನ ಬಿಸಿ ಹಂಡೆ ನೀರಿನ ಬಿಸಿಜೊತೆ ಸೇರ್ಕಂಡು ಹೋಗಿತ್ತು.
ಅಷ್ಟೊತ್ತಿಗೆ ಒಲೆಮೇಲಿದ್ದ ಬರಗಾಪಿಗೆ ಅಂತ ಇಟ್ಟಿದ ನೀರು ಚರುಕ್ಲ ತಳ ಸೇರಿತ್ತು. ಒಲೆ ಉರಿ ತಣ್ಣಗಾಗಿತ್ತು…. ಒಲೇಲಿದ್ದ ಎರಡ್ಮೂರು ಕೆಂಡನೆಲ್ಲಾ ಸೇರಿಸಿ ಪುಳ್ಳೆ ಜೋಡಿಸಿ ಕೊಳಪೆನಲ್ಲಿ ಉದೋಕೆ ಶುರುಮಾಡಿದ್ಲು ಗೌರ. ಅವಳ್ಗೆ ಆಗಿನ್ನು ಏಳು ವರ್ಷ ಪ್ರಾಯ…. ಅವಳ್ಗಿಂತ ಮೂರು ವರ್ಷ ದೊಡ್ಡವನಾದ ಪುಟ್ಟ ಗೋಡೆಪಕ್ಕ ಚಳಿಗೆ ಗೂಡಿಸ್ಕಂಡು ಮಲಗಿದ್ದ. ಅವನಜ್ಜಿ ಹೊಲೆದುಕೊಟ್ಟಿದ್ದ ಕೌದಿ, ಮೇಲೊಂದು ಹಳೇ ಹರಕಲು ದಟ್ಟ, ಅದರ ಮೇಲೊಂದು ಗೋಣೆಯನ್ನು ಹೊದ್ದು ಕಾಲು ಸಂದಿಯಲ್ಲಿ ನುಗ್ಗುತ್ತಾ ಇದ್ದ ತಣ್ಣಗಿನ ಗಾಳಿಯನ್ನು ಬೈಯ್ಕಳ್ತಾ ಗೊಣಗ್ತಾ ಘಂಟೆ ಒಂಬತ್ತಾದ್ರು ಮಲ್ಗೇ ಇದ್ದ. ಅವ್ನು ಇನ್ನೂ ಹಾಸ್ಗೆಯಿಂದ ಎದ್ದಿಲ್ದೇ ಇದ್ದುದನ್ನು ನೋಡಿದ ಸೀತಕ್ಕ,
ನಿಮ್ಮಪ್ಪ ಅಂತೂ ನಾಕುದಿನದಿಂದ ನಾಪತ್ತೆಆಗೋಗಿದ್ದಾನೆ. ಇದ್ದಾಗ ಹಿಡಿ ಅನ್ನಕ್ಕೆ ದಾರಿ ಮಾಡಿಲ್ಲಿಲ. ಮಾಡೋಕ್ಕೆ ಕ್ಯಾಮಿಲ್ಲ ತಿನ್ನೋಕೆ ಅನ್ನವಿಲ್ಲ. ಕೂತು ಕೂತು ಕಾಲಹಾಕಿ ವತ್ತು ಹುಟ್ಟಿದ ಕೂಡ್ಲೆ ವಾರಗಟ್ಲೆ ಪುರಿ ತಿನ್ನಕಂಡು, ಬರಗಾಪಿ ಕುಡ್ಕಂಡು ಜೀವನ ಮಾಡೋಹಂಗೆ ಮಾಡ್ಬಿಟ್ಟ…. ಕಟ್ಕಂಡಾಗಿನಿಂದ ರೂಪಾಯಿ ದುಡೀಲಿಲ್ಲ. ನಾನಾದ್ರೂ ಅಕ್ಕಪಕ್ಕ ತೋಟಕ್ಕೊಗಿ ಕೂಲಿ ಮಾಡ್ತೀನಿ ಅಂದ್ರೆ ಅದ್ಕು ಬಿಡ್ಲಿಲ್ಲ. ನಾನು ದೊಡ್ಡ ರೂಪಾವತಿ ಅಂತ. ಈಗ ನೋಡು ನನ್ನಣೇಬರ ಬೇಡಿ, ಬಳದು ಸಾಕಾಗಿ ಹೋಗಿದೆ ನಂಗೆ…. ನಿನ್ನ ಆಸರೆ ಅಂತ ನಂಬಿದ್ರೆ ಇನ್ನೂ ಹರಕ್ಲುಹಾಸ್ಗೆ ಸುತ್ಕಂಡು ಮಲಗಿದ್ದೀಯ…. ? ಇನ್ನೇನಾದ್ರೂ ಪಲ್ಲಂಗ ಕೊಟ್ರೆ ಮಂದಾರವಲ್ಲಿ ಆಗ್ಬಿಡ್ತಿಯಾ.. ಅಂತ ತನ್ನ ಅಸಹಾಯಕತೆಯನ್ನು ಬದುಕಿನ ಆಸರೆಗೆ ಇರುವ ಆಶಾಕಿರಣವನ್ನು ಬೈಯುತ್ತ ದರದರ ಅಂತ ಬಂದು ಹೊದ್ದುಕೊಂಡಿದ್ದ ಹೊದಿಕೆಗಳನ್ನು ಕಿತ್ತು ಮೂಲೆಗೆ ಬಿಸಾಡಿದ್ಲು

0 Comments