ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಪ್ಪಅವ್ವ ನೆನಪಾದರೆ ಈಗಲೂ ಅದೆ ಬಾವಿಯನ್ನು ಇಣುಕಿ ನೋಡುತ್ತೇನೆ'

– ತಿರುಪತಿ ಭಂಗಿ

ಅಪ್ಪನಗೋರಿಯ ಮೇಲೆ ನಾಯಿಯೊಂದುಉಚ್ಚಿ ಹೊಯ್ಯುತ್ತಿತ್ತು.ಅದನ್ನು ನೋಡುವುದೆತಡ ನೆಲದ ಮ್ಯಾಲ ಬಿದ್ದದಂಟತಗೊಂಡು ನಾಕು ವರ್ಷದಚಿಕ್ಕಣ್ಣ ನಾಯಿಗೆ ಹುಷಾ.. ಹುಷಾ..ಅಂತ ಹೊಡ್ಯಾಕಓಡಿದ.ಮಗುವನ್ನು ನೋಡಿದ ನಾಯಿ ಎದೆ ಉಬ್ಬಿಸಿ ನಡಿಯುವಯವ್ವನದ ಹುಡುಗಿಯಂತೆಗಂಬೀರವಾಗಿ ಹೆಜ್ಜೆಹಾಕುತ್ತ ಮುಂದೆ ಸಾಗಿತು.ನಾಯಿ ಉಚ್ಚಿ ಹೋದಜಾಗಕ್ಕೆ ಪುಟ್ಟ ಬಗಸೆತುಂಬ ಮಣ್ಣುಎತ್ತಿ ಹಾಕುವುದರಲ್ಲಿಚಿಕ್ಕಣ್ಣ ಕಳೆದುಹೋದ.’ಮಣ್ಣಾಗಆಡಬ್ಯಾಡೊ ಹುಚ್ಚನನ್ನ ಹಾಟ್ಯಾ’ ಅಂತಕಸಗುಡಿಸುತ್ತಿದ್ದ ಸಗರಿಗಂಟಲು ಹರಿದು ಹೋಗುವಂಗ ಕಿರಚಿದಳು.ಸಗರಿಯದನಿ ಕಿವಿ ಹೊಕ್ಕಾಗ ಚಿಕ್ಕಣ್ಣಚಡ್ಡಿ ಮ್ಯಾಲೇರಿಸುತ್ತ ನಾನಿದ್ದಲ್ಲಿಗೆ ದಾವಿಸಿದ.ಅಪ್ಪಾಅಪ್ಪಾಅಜ್ಜನ ಮ್ಯಾಲ ನಾಯಿ ಉಚ್ಚಿ ಹೋದೈತಿ. ನಾನು ಅದಕ ಮಣ್ಣ ಹಾಕಿ ತೋಳದ್ಯಾ..ಅಂತ ನನ್ನೆದರುತಿಪರ್ುನೀಡುವ ನನ್ನ ಮಗನನ್ನುಎತ್ತಿ ಮುದ್ದಾಡಿದೆ.ನನ್ನ ಮಗನಲ್ಲಿಅಪ್ಪನ ಹುಡುಕಲುಅದೆಷ್ಟೋ ಪ್ರಯತ್ನಿಸಿದೆ ಅಪ್ಪ ನನಗೆಕೋ ಗೊಚರಿಸಲಿಲ್ಲ. ಅದೆಕೋ ಆ ಹೊತ್ತುಕಣ್ಣುತುಂಬಿಕೊಂಡವು.ಗಂಟಲು ಬಿಗಿದುಕೊಂಡಿತು.ಹಿಂದಿನ ಅನೇಕ ನೆನಪುಗಳು ತೆಲೆಯೊಳಗೆ ಸುಳಿದಾಡಿ ಮನದೊಳಗೆ ಹರದಾಡಿದಂತಾಯಿತು.ಅಪ್ಪ ಒಳ್ಳೆವನೋ ಕೆಟ್ಟವನೋ, ಅನ್ನುವ ತರ್ಕವೊಂದು ಹೆಚ್ಚುಕಾಲ ನನ್ನೊಟ್ಟಿಗೆಜಿದ್ದಿಗೆ ಬಿದ್ದುಕಾಡತೊಡಗಿತು.

ಹರೆಯದ ಕಾಲಕ್ಕ ಎಲ್ಲಾಗಂಡಸರಂತೆಅಪ್ಪ ಮದುವೆ ಬೇಕೆ ಬೇಕು ಎಂದುಅಜ್ಜಅಜ್ಜಿಯಜೀವ ದಿನವಿಡಿತಿನ್ನುತ್ತಿದ್ದ. ಮಕ್ಕಳ ಮ್ಯಾಲ ಮದುವೆಯಾಕೋ.? ಬಂಗಾರದಂತ ಮಕ್ಕಳ ನೋಡು. ಅವುಗಳನ್ನ ನೋಡಿದ್ರ ಹೊಟ್ಟ್ಯಾಗಿನ ಹಳ್ಳ ಕರಗತೈತಿ. ಬೇಕಂದವರಿಗೆ ಮಕ್ಕಳು ಆಗೂದಿಲ್ಲ. ನಿನ್ನ ಪುಣ್ಯಕ್ಕ ಮಕ್ಕಳು ಹುಟ್ಟ್ಯಾವ. ಅವನ ನೋಡಿ ಸಂತೋಷ ಪಡು. ಹೆಂಡತಿ ಸತ್ತರೆ ಏನಾತು.ಅವಳ ಸ್ಥಾನದಲ್ಲಿ ಈಗ ನೀನಿದ್ದು ಆ ಮಕ್ಕಳಿಗೆ ನೀನೇ ತಾಯಿತಂದಿ ಪ್ರೀತಿ, ವಾತ್ಸಲ್ಯತೋರಸುಅಂತ ಇಳಿವಯಸ್ಸಿನ ಅಜ್ಜಅಜ್ಜಿಅಪ್ಪನ ಕಾಲ ಮ್ಯಾಲ ಬಿದ್ದ ಹೊಳ್ಯಾಡಿದರೂ ಅಪ್ಪನ ನಿಧರ್ಾರಾ ಬದಲಾಗಲಿಲ್ಲ. ಅಜ್ಜಅಜ್ಜಿ ವನಗಿದಕಣ್ಣಾಗಿಂದಉದರಿದಕಣೀರು ಭೂತಾಯಿ ಮಡಿಲ ಮುಟ್ಟದೆ ಮುದಡಿದ ರೆಪ್ಪೆಯೊಳಗೆ ಇಂಗಿಹೋದವು.

***

ಅಪ್ಪ ಏನೂ ತಿಳಿಲಾರದ ದಡ್ಡೇನೂಅಲ್ಲ. ಏಳನೇತೆ ಸಾಲಿ ಮುಗಿಸಿ, ಊರಮಂದಿಯಿಂದ ಬೆಷ್ಟ..! ಮನಸ್ಯಾ ಅನಿಸಿಕೊಂಡಿದ್ದ.ಚಿಕ್ಕವನಿರುವಾಗಲೇತತ್ವಪದ, ಭಜನಾಪದ, ಗೀಗಿಪದಾಅಂದ್ರ ಹಿಗ್ಗಿ ಸಾಯಿತಿದ್ದ.ದಾಸರ ಹನಪ್ಪನ ಸಂಗಾ ಮಾಡಿ ಭಜನೆಯ ಹುಚ್ಚು ಬೆಳಸಿಕೊಂಡು, ಊರಾಗಿರೋ ಏಳೆಂಟ ಮಂದಿ ಕೂಡಸ್ಕೊಂದಒಂದ ಭಜನಾ ಮ್ಯಾಳ ತಯಾರ ಮಾಡಕೊಂಡ, ಊರಜ್ಯಾತ್ರ್ಯಾಗ,ಶ್ರಾವನ ಮಾಸದಾಗ, ಸತ್ತಾಗಕೆಟ್ಟಾ ಭಜನೆ ಮಾಡಿ ಪೆಮಸ್ಅನಸ್ಕೊಂಡಿದ್ದ. ಅಪ್ಪ ಭಜನಾ ಹಾಡು ಹಾಡೋಕೆ ಸುರು ಮಾಡಿದ್ರೆ ಸಾಕು.. ಊರಾಗಿರೋ ಹಿರಿಯಾರುತಲಿ ತೂಗುತ್ತ ‘ಭಲೆ ಭಲೆ ಭಂಟಾ ಹುಟಿದ್ರ ನಿನ್ನಂತ ಬೀಜ ಹುಟ್ಟ ಬೇಕು’, ನಿನ್ನ ಹಡದಯಲ್ಲವ್ವ ಪುಣ್ಣ್ಯಾ ಮಾಡ್ಯಾಳು ಅಂತಉಮ್ಮಸದಿ ಮಾತ ಹೇಳುತ್ತ ಇಡೀಊರಿನ ಮಂದಿ ಅಪ್ಪನ ಹಾಡಿನೊಳಗೆ ಮುಳಗಿ ಹೋಗ್ತಿದ್ದರು.
ಅಪ್ಪನ ಹರೆಯ ಹೆಚ್ಚಾದಂತೆಲ್ಲ ಅವನ ವರ್ಚಸ್ಸು ಹೆಚ್ಚಿತು. ಸದಾ ಬಿಳಿ ಬಟ್ಟೆ ಧರಸಿ, ಹಣೆಮ್ಯಾಲ ನಯವಾಗಿ ವಿಭೂತಿ ಧರಿಸಿ, ಹಾಡೊಂದುಗುನುಗುಡುತ್ತ ಸಾಗಿದರೆ ಕೆಲವೂ ಮಳ್ಳ ಹೆಂಗಸರುಅಪ್ಪನನ್ನುಕದ್ದು ನೋಡುತ್ತಿದ್ದರು.ಅಪ್ಪನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ವಾಲಿಕಾರ ಲಕ್ಕಪ್ಪ ಒಂದಿನಾ ಅಜ್ಜಿಗೆಅಪ್ಪನ ಮದುವೆಯ ಪ್ರಸ್ತಾಪಮಾಡಿದ್ದ. ಹಂಗಾರಚಲೋದಒಂದ ಹುಡಗಿ ನೋಡಿ ಈ ವರ್ಷತುತ್ತೂರಿಊದ್ಸಿದ್ರಾತ ಅಂತ ತಿರ್ಮಾನ ಮಾಡಿದರು. ಅಪ್ಪಎಲ್ಲರಂತೆಕುಷಿಯಲ್ಲಿತೇಲಿದ.
ಮದುವೆಯಾದ ವರ್ಷದಲ್ಲಿಯೇ ನನ್ನವ್ವಒಂದು ಹೆಣ್ಣು ಮಗುವಿಗೆ ಜೀವ ನೀಡಿದ್ದಳು.ಹೆಣ್ಣು ಹುಟ್ಟಿದ್ದು ಹುಣ್ಣು ಹುಟ್ಟಿದಂತೆ ಎಂದುಅಪ್ಪಅರಿತು ಮೂರುದಿನ ಮನೆಗೂ ಬರದೆ, ಊಟಾನೂ ಮಾಡದೆ, ಅಲೆಮಾರಿಯಂತೆಅಲ್ಲಿಲ್ಲಿಅಲೆದಾಡಿ ನಾಕನೆ ದಿನಕ್ಕೆ ಮನಿಗೆ ಬಂದ. ಹೊರಸದ ಮೇಲೆ ಕುಳತಿದ್ದ ನನ್ನವ್ವಅಪ್ಪನ ಅವಸ್ಥೆ ಕಂಡು ಕಣ್ಣೀರಿಟ್ಟಿದ್ದಳು. ‘ದ್ಯಾವ್ರ ನನಗ್ಯಾಕ ಮೋಸಾ ಮಾಡಿದೆಗಂಡುಕೊಡಬಾರ್ದಾ’ ಅಂತ ಬಿಕ್ಕಿದಳು.ಅವ್ವನ ಸಂಕಟಯಾರಿಗೂಅರ್ಥವಾಗಲಿಲ್ಲ. ನಾಕು ತಿಂಗಳು ಅವ್ವನೊಂದಿಗೆಅಪ್ಪ ಮಾತು ಬಿಟ್ಟ.ಐದನೆ ತಿಂಗಳಿಗೆ ಅನಿವಾರ್ಯಇಲ್ಲದೆ ಮಾತು ಮುಂದುವರಸಿದ.ಎರಡು ವರ್ಷದ ನಂತರ ಹುಟ್ಟಿದವನೇ ನಾನು.ನಾನು ಹುಟ್ಟಿದಾಗಅಪ್ಪನಿಗೆ ಆಕಾಶ ಒಂದೇ ಗೇನು ಉಳದಿತ್ತಂತೆ.ಇಡೀಊರಿಗೆಅಪ್ಪ ಊಟಹಾಕಿಸಿ ಸಂಬ್ರಮಿಸಿದ್ದ.ಬಡವರಿಗೆಕೈಲಾದಷ್ಟುದಾನ ಮಾಡಿದ್ದ.ಮನೆದ್ಯಾವ್ರ ಮಲ್ಲಯ್ಯಗೆಕಾಲುನಡಿಗೆಲೆ ಸೇವೆಸಲ್ಲಿಸಿದ್ದ.ಅವ್ವನನ್ನು ಹೊತ್ತು ಸಂಭ್ರಮಿಸಿದ್ದ.ಅಜ್ಜಅಜ್ಜಿಯರೂ ಮಗನ ಉತ್ಸಾಹಕಂಡು ಹಿರಿ ಹಿರಿ ಹಿಗ್ಗಿದ್ದರು. ಬೀಗರು ಬಿಜ್ಜರು ಮನೆಗೆ ಬಂದು ಹೋದಾಗೊಮ್ಮೆ ನಿನ್ನ ಮಗಾ ಥೇಟ್..! ನಿನ್ನ ಹಾಗೆ ರೂಪದಲ್ಲಿ, ಮೂಗಂತು ಪೂತರ್ಿ ನಿನ್ನ ಹೋಲಿಕೆ ಅಂದಾಗಅಪ್ಪಅವ್ವನತ್ತತಿರುಗಿ ಮುಗಳ್ನಗೆ ಬೀರುತ್ತಿದ್ದ.ಅದೆಖುಷಿಯಲ್ಲಿ ಸೆಟ್ಟರಅಂಗಡಿಗೆ ಹೋಗಿ ಒಂದಕಟ್ಟಗಣೇಶಬೀಡಿತಗೊಂಡ, ಊರ ಹೊರಗಿರೊ ಪೂಜಾರತೋಟದಾಗಕುಂತ ‘ಬುಸ್ ಬುಸ್’ ಹುಗಿ ಎಬ್ಬಿಸಿ,ತನ್ನಷ್ಟಕ್ಕ ತಾನ ನಕ್ಕೋತ ಬರ್ತಿದ್ದ.
ಅಪ್ಪನನ್ನು ಸಂತೋಷದಿಂದಇರೊಕೆ ವಿಧಿ ಸುಮ್ಮನೆ ಬಿಡಲಿಲ್ಲ. ಅವ್ವ ಅವಳಿ ಜವಳಿ ಎರಡು ಹೆಣ್ಣು ಹೆತ್ತಳು. ಆಗ ಅಪ್ಪನ ಪಾಲಿಗೆ ಎಲ್ಲರೂ ಪರದೇಸಿಗಳು. ಹೆಣ್ಣು ಮಕ್ಕಳೆಂದರೆ ಅದೆಕೋ ಮುನಿಸು, ಎದೆಂಥದೊ ಸಿಟ್ಟು ಅವನಿಗೆ. ಅವ್ವತುಂಬಾ ಮಾನಸಿಕವಾದಳು .ಹುಚ್ಚಿಯಂತೆ ವತರ್ಿಸತೊಡಗಿದಳು. ಅಜ್ಜಅಜ್ಜಿ ನಮ್ಮನ್ನು ಸಾಕಲು ಹರಸಹಾಸ ಪಟ್ಟರೂಅಪ್ಪಒಂದು ದಿನವೂ ನಮ್ಮನ್ನುಎತ್ತಿಆಡಿಸಲಿಲ್ಲ. ಅವ್ವನ ಸ್ಥಿತಿ ಅವಲೋಕಿಸಲಿಲ್ಲ. ತನ್ನದೇ ಲೋಕದಲ್ಲಿ ವಿಹರಿಸುತಿದ್ದ.
ಒಂದು ದಿನ ಮಟ ಮಟ ಮದ್ಯಾನಅವ್ವ ಬಾವಿಗೆ ಬಿದ್ದು ಹೆಣವಾಗಿದ್ದಳು.ಊರಜನರೆಲ್ಲರೂಕೂಡಿಅವ್ವನ ಹೆಣಎತ್ತಲುತುಂಬಾ ಪ್ರಾಯಾಸ ಪಟ್ಟರು.ಪೋಲಿಸರಿಗೆ ಈ ವಿಷಯಗೊತ್ತಾಗದಂತೆಊರ ಹಿರಿಯರು ಕಾಳಜಿಯಿಂದ ಅವ್ವನ ಹೆಣಕ್ಕೆ ಬೆಂಕಿ ಇಟ್ಟಿದ್ದರು.ಅಪ್ಪ ಬುದ್ಧನಂತೆ ಮೌನಿಯಾಗಿದ್ದ.ನಾವು ಹಸುವಿನಿಂದಕಿರುಚುತ್ತಿದ್ದೆವು.ಅಜ್ಜಅಜ್ಜಿ ನಮ್ಮ ಹಸುವೆ ಹಿಂಗಿಸಲು ಚಡಪಡಿಸುತ್ತಿದ್ದರು.

***

ಕೆಲವು ದಿನಗಳಾದ ಮೇಲೆ ಹೊಸ ಅವ್ವನನ್ನುಅಪ್ಪಯಾರಿಗೂ ಹೇಳದೆ ಕೇಳದೆ ಮನೆಗೆ ಕರೆತಂದ. ಅಜ್ಜಅಜ್ಜಿಗೆ ದಿಕ್ಕೇ ತೋಚಲಿಲ್ಲ. ಹೊಸದಾಗಿ ಬಂದಅವ್ವಅಜ್ಜಅಜ್ಜಿ ಕಾಲಿಗೆ ನಯವಾಗಿ ನಮಸ್ಕರಿಸಿದಳು.ಮಂಡಚಡ್ಡಿಯಲ್ಲಿ ಕುಳತಿದ್ದ ನನ್ನ ಹತ್ತಿರಕ್ಕೆ ಬಂದು ನನ್ನಎತ್ತಿಕೊಂಡು ಮುದ್ದಾಡಿದಳು, ಆಗ ಅಜ್ಜಅಜ್ಜಿಒಬ್ಬರ ಮುಖ ಒಬ್ಬರು ನೋಡಿ ಸುಮ್ಮನಾದರು.ನನ್ನ ಪುಟ್ಟತಂಗಿಯರೂ ಹೊಸ ಅವ್ವನತೆಕ್ಕೆ ಸೇರಿದರು.ಆಗ ಅಪ್ಪನ ಮೊಗದಲ್ಲಿ ಮತ್ತೆ ಮಂದಹಾಸದ ನಗೆಯ ಸಡಗರ ಮೂಡಿತು.ಮತ್ತೆ ಮೊದಲಿನಂತೆ ಲವಲವಿಕೆಯಿಂದ ಹಾಡುಗುನುಗತೊಡಗಿದ.ಬಿಳಿ ಬಟ್ಟೆ ಇಸ್ತ್ರೀಮಾಡಿಕೊಂಡು ಊರು ಸುತ್ತತೊಡಗಿದ.
ಹೊಸ ಅವ್ವ ಮೊದ ಮೊದಲು ನಮ್ಮನ್ನು ಬಲು ಅಕ್ಕರೆಯಿಂದ ಮುದ್ದು ಮಾಡಿದಳು, ಥೇಟ.! ಹಳೆ ಅವ್ವನಂತೆಎದೆಗೆ ಹಚ್ಚಿಕೊಂಡು ವಾತ್ಸಲ್ಲದಅಮೃತ ಎರೆದಳು. ನೀಟಾಗಿ ಜಳಕ ಮಾಡಿಸಿ, ರುಚಿರುಚಿಅನ್ನಮಾಡಿತನ್ನಕೈಯಾರೆ ತಿನಿಸಿದಳು, ನಮ್ಮ ಹೊಟ್ಟೆ ನೆತ್ತಿನೋಡುತ್ತಿದ್ದ ಆ ಮಮತಾಯಿ ಕರುಣಾಳುಭಾವ ಕಂಡುಅಜ್ಜಅಜ್ಜಿ ಹಿರಿ ಹಿರಿ ಹಿಗ್ಗಿದರು.ನಾವು ಸತ್ತರುಕೂಡಾ ಈ ಹೆಣ್ಣು ಮೊಮ್ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂಬ ಭರವಸೆ ಮನದಲ್ಲಿ ಬರೆದುಕೊಂಡರು.
ದಿನ ಕಳೆದಂತೆ ಹೊಸ ಅವ್ವತನ್ನ ನೈಜರೂಪ ತೋರಿಸತೊಡಗಿದಳು. ಅಪ್ಪನಿಗೆಎದರು ಮಾತಾಡುವುದು, ನಮ್ಮನ್ನು ಹೊಡೆಯುವುದು ಬಡೆಯುವುದು, ತಿಂಗಳಾನುಗಟ್ಟಲೆ ತವರೂರಿಗೆ ಹೋಗುವುದು, ಕೆಲವೊಮ್ಮೆಅಜ್ಜಅಜ್ಜಿಯ ಮೇಲೂ ಕೈ ಎತ್ತಿದರುಅಪ್ಪ ಅವಳಿಗೆ ಏನೂ ಅನ್ನುತ್ತಿರಲಿಲ್ಲ, ಆಗ ಅಪ್ಪ ನನಗೆ ಹೇಡಿಯಂತೆ, ಕೈಲಾಗದವರಂತೆಕಾಣುತ್ತಿದ್ದ.
ನಾನು ಹೈಸ್ಕೂಲ ಓದುವ ಹೊತ್ತಿಗೆಅಪ್ಪ ಮನೆ ಬೇರೆ ಮಾಡಿಕೊಂಡ. ಹೊಸ ಅವ್ವನೊಂದಿಗೆಜೀವನ ಪುನರ್ ಪ್ರಾರಂಬಿಸಿದ. ಹತ್ತನೆತರಗತಿಓದು ಹೊತ್ತಿಗೆಅಜ್ಜನೂಅಗಲಿದ. ಅಜ್ಜಿನೂ ಹೆಚ್ಚುಕಾಲ ನಮ್ಮೊಂದಿಗೆಇರುವ ಸ್ಥಿತಿಯಲ್ಲಿರಲಿಲ್ಲ. ನನ್ನ ಪುಟ್ಟತಂಗಿಯರೊಟ್ಟಿಗೆ ನನ್ನ ಪರದೇಶಿ ಬದುಕು ಹೇಗೋ ಸಾಗಿತು.ಅಪ್ಪಅಪರಿಚಿತರಂತೆ ನಮ್ಮನ್ನುಕಾಣುತ್ತಿದ್ದ.ನನ್ನತಂಗಿಯರಂತೂ ಅವನ ಸನಿಹಕ್ಕೆ ಹೋಗುತ್ತಿರಲಿಲ್ಲ. ಕಣ್ಣೆತ್ತಿಯೂಅಪ್ಪನನ್ನು ನೋಡುತ್ತಿರಲಿಲ್ಲ, ನಾನು ಆಗಾಗ ಅಪ್ಪನನ್ನುದೂರದಿಂದಲೆ ನೋಡಿ ಕಣ್ಣತುಂಬಿಕೊಳ್ಳುತ್ತಿದ್ದೆ.ನನ್ನ ನೋಡಿದ ಆ ದೇವರುಯದ್ಧದಲ್ಲಿ ಸೋತಯೋಧನಂತೆತಲೆತಗ್ಗಿಸುತ್ತಿದ್ದ.
ವಿಪರೀತಕುಡಿಯಲು ಪ್ರಾರಂಬಿಸಿದ ಅಪ್ಪಎಲ್ಲಂದರಲ್ಲಿ ಬಿದ್ದು ಮೈ ಚರಂಡಿ ಮಾಡಿಕೊಳ್ಳುತ್ತಿದ್ದ.ಕುಡಿದುಕುಡಿದು ಸನಕಲಾಗಿದ್ದ.ಅಪ್ಪನನ್ನು ಹೊಸ ಅವ್ವಕುಡಿದಾಗ ಹೊಡೆಯುತ್ತಿದ್ದಳು.ಅವಾಚ್ಯ ಪದಗಳಿಂದ ಅಪ್ಪನ ವ್ಯಕ್ತಿತ್ವಕ್ಕೆ ಮಂಗಳಾರತಿ ಮಾಡುತ್ತಿದ್ದಳು.ಅಪ್ಪ ಹೊಸ ಅವ್ವನ ಬೈಗುಳ ಕೇಳುತ್ತ ಬುದ್ಧನಂತೆ ಮೌನಿಯಾಗಿರುತ್ತಿದ್ದ.ಅವನ ಆವಸ್ಥೆ ಕಂಡ ನನ್ನ ಪುಟ್ಟತಂಗಿಯರ ಕಣ್ಣಗಳು ಒದ್ದೆಯಾಗುತ್ತಿದ್ದವು.

***

ಶ್ರಾವನಮಾಸದ ಸಂಜೆ ಹಕ್ಕಿಗಳು ಸ್ವಚ್ಚಂದಆಗಸದಲ್ಲಿತಮ್ಮಗೂಡುಕಡೆ ಮೋತಿತಿರಿವಿಕೊಂಡು ವಿಮಾನ ವೇಗದಲ್ಲಿ ಹೋಗುತ್ತಿದ್ದವು. ಸೂರ್ಯದೇವತನ್ನ ಮೈ ಕೆಂಪೆರಿಸಿಕೊಂಡು ಪಡುವನದಅಂಚಿನಲ್ಲಿಜಾರುತ್ತಿದ್ದ. ಆ ಹೊತ್ತಿಗೆ ವೀರಭದ್ರನಗುಡಿ ಮ್ಯಾಲಿರೊ ಮೈಕು ಕೇ ಕೇ ಹಾಕಿ ನಗುತ್ತಿತ್ತು.ಭಕ್ತಿವಾದಿ ಜನ ವೀರಭದ್ರನಗುಡಿಯತ್ತ ಹೆಜ್ಜೆ ಹಾಕಿದರು.ಶ್ರಾವಣ ಮಾಸದಲ್ಲಿ ಪ್ರತಿ ವರುಷ ಪುರಾಣ ಹೇಳೊಕೆ ವೇಧ ಸಂಪನ್ನ ಸತ್ಯಾರ್ಥಗುರುಗಳು ಬರವುದು.ಒಂದು ತಿಂಗಳು ಪುರಾಣ ಹೇಳಿ, ಊರಭಕ್ತರುಇಚ್ಚೆಯಿಂದಕೊಟ್ಟ ಸೇವೆ ಸ್ವಿಕರಿಸುವುದು ವಾಡಿಕೆಇತ್ತು. ಪುರಾಣ ಸುರುವಾಗಿ ಹತ್ತು ಹದಿನೈದು ನಿಮಿಷಗಳಲ್ಲಿ ಹುಚ್ಚ ಮಲ್ಲ ‘ಲಬೋ ಲಬೋ’ ಹೊಯ್ಕೊಂತಗುಡಿಯತ್ತ ಬರುವುದುಎಲ್ಲರ ಗಮನಕ್ಕೆ ಬಂದರೂ ಅವನು ಹೇಳಿ ಕೇಳಿ ಹುಚ್ಚ ಎಂದು ತಿಳಿದ ಜನರುಅವನತ್ತ ಲಕ್ಷ ಹರಿಸಲಿಲ್ಲ. ಹುಚ್ಚ ಮಲ್ಲನಆವಾಂತರಜೋರಾಗಿಯೇ ಸಾಗಿದಾಗಜನರಿಗೆಕಿರಿಕಿರಿಉಂಟಾಗಿ ಗುಂಪಿನಲ್ಲಿದ್ದಒಬ್ಬಿಬ್ಬರುಅವನ್ನು ಹೊಡಯಲು ಮೇಲೆದ್ದರು. ಹುಚ್ಚಮಲ್ಲ ಬಾವಿಯತ್ತ ಕೈ ಮಾಡಿ ಏನೋ ತೋರಿಸಿದ..ಅಲ್ಲಿದ್ದಜನರಿಗೆ ಈ ಮಗಾ ಹಿಂಗ ಮಾಡ್ತಾನಅಂಥ ತಿಳದು ಬಾಯ್ ಮುಚ್ಚಲೇ ಅಂತಒಬ್ಬ ಗಧರಿಸಿದ.ಮತ್ತೂ ಹುಚ್ಚಮಲ್ಲಜೋರಾಗಿ ಹೊಯ್ಕೊಂಡು ಬಾವಿಯತ್ತಲೆಕೈದೋರಿದ. ಪತ್ತಾರಗೋವಿಂದಪ್ಪ ಹುಚ್ಚಮಲ್ಲನ ಸೂಕ್ಷ್ಮತೆಅರೆತುಟಾರ್ಚ ಬ್ಯಾಟರಿ ಹಿಡಿದು ಬಾವಿಯತ್ತ ದಾವಿಸಿದ. ಹುಚ್ಚಮಲ್ಲ ಅವನ ಮುಂದೆ ಮುಂದೆಓಡುತ್ತ ಹೋಗಿ ಬಾವಿ ಹತ್ತಿರ ನಿಂತ. ಹುಂ ಹುಂ ಅಂತ ಕೈ ಮಾಡಿಗೋವಿಂದಪ್ಪನಿಗೆ ಬಾವಿ ಕಡೆ ತೋರಿಸಿದಾಗ ಕುಂಬಿ ಮ್ಯಾಲ ಕೈ ಇಟ್ಟುಗೋವಿಂದಪ್ಪ ಬ್ಯಾಟ್ರಿ ಹಚ್ಚಿ ನೋಡಿದ ಬ್ಯಾಟ್ರಿಕತ್ತಲನ್ನು ಸೀಳಿ ಬಾವಿ ಪ್ರವೇಸಿದಾಗ ಅಲ್ಲಿಅಪ್ಪ ಹೆಣವಾಗಿತೇಲುತ್ತಿದ್ದ.
ಅವ್ವನ ಹೆಜ್ಜೆಗುರತು ಹಿಡಿದುಅಪ್ಪನೂಅದೇ ಬಾವಿಗೆ ತನ್ನ ಬದುಕನ್ನು ಅರ್ಪಿಸಿದ.
ನನಗೆ ಅಪ್ಪಅವ್ವ ನೆನಪಾದರೆ ಈಗಲೂ ಅದೆ ಬಾವಿಯನ್ನುಇಣುಕಿ ನೋಡುತ್ತೆನೆ. ಆಕಾಶದಲ್ಲಿರುವ ಸೂರ್ಯ ಬಾವಿಯಲ್ಲಿ ಮುಳುಗಿ ನನ್ನ ನೋಡಿ ನಗುತ್ತಿರುತ್ತಾನೆ..
 

‍ಲೇಖಕರು G

12 November, 2014

4 Comments

  1. shankar pujari

    ಮನ ಮುಟ್ಟುವ ಕಥೆ

    • tirupati bhangi

      DHANYAVADAGALU SIR.

  2. shivashankar

    Addbuta

  3. tirupati bhangi

    dhanyavadagalu shankar pujari avre

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading