ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನು ಪಾವಂಜೆ ಕವಿತೆ: ನಿ೦ತಲ್ಲಿ ನಿಲ್ಲುತ್ತಿಲ್ಲ..ಮನಸು..

ಅನು ಪಾವಂಜೆ

ನಿ೦ತಲ್ಲಿ ನಿಲ್ಲುತ್ತಿಲ್ಲ….ಮನಸು…

ಕಳವಳಿಸುತ್ತಿದೆ….ಚಡಪಡಿಸುತ್ತಿದೆ….

ಬೆಟ್ಟದಿ೦ದಿಳಿದು ಬರೋ ಆ ನೀರ ತೊರೆ…

ಗಾಜಿನ೦ತಿರೋ ನೀರಲ್ಲಿ

ಕಾಲಿಳಿಸಿ…ಕೂತಲ್ಲೇ ಕಲ್ಲಾಗಲು…

ಕಳವಳಿಸುತ್ತಿದೆ….ಚಡಪಡಿಸುತ್ತಿದೆ….

ನಿ೦ತಲ್ಲಿ ನಿಲ್ಲುತ್ತಿಲ್ಲ….ಮನಸು…

ನಿನ್ನ ಆ ಕಳ್ಳನಗು ಸೂಸೋ

ಚಿನ್ನದ ಹೊಳಪಿನ ಬೆಳಕಿನ

ಮು೦ಜಾವಿನ ಸ್ತಬ್ದತೆಯಲಿ…

ಮಿ೦ದು ಮಾಯವಾಗಲು…

ಕಳವಳಿಸುತ್ತಿದೆ….ಚಡಪಡಿಸುತ್ತಿದೆ….

ನಿ೦ತಲ್ಲಿ ನಿಲ್ಲುತ್ತಿಲ್ಲ….ಮನಸು…

ನನ್ನೊಳಗಿನ ತು೦ಟ ಮಗು

ಹಠ ಹಿಡಿದು ಜಾತ್ರೆಗೆ ಹೋಗಿ…

ಅಲ್ಲಿಯ ಆಟಿಕೆಯ೦ಗಡಿಯೆದುರು

ತನ್ನೇ ಮರೆತು ಲೀನವಾದ೦ತಿರಲು…

ಕಳವಳಿಸುತ್ತಿದೆ….ಚಡಪಡಿಸುತ್ತಿದೆ….

ನಿ೦ತಲ್ಲಿ ನಿಲ್ಲುತ್ತಿಲ್ಲ….ಮನಸು…

 

 

‍ಲೇಖಕರು G

12 December, 2011

1 Comment

  1. Rankusa

    ಬೆಟ್ಟದಿ೦ದಿಳಿದು ಬರೋ
    ಆ ನೀರ ತೊರೆ…
    ಗಾಜಿನ೦ತಿರೋ ನೀರಲ್ಲಿ
    ಕಾಲಿಳಿಸಿ…ಕೂತಲ್ಲೇ ಕಲ್ಲಾಗಲು…

    {ಸೂಜಿ ಹಿಂದ ದಾರದ್ಹಾಂಗ
    ಕೊಳ್ಳದೊಳಗ ಜಾರಿದ್ಹಾಂಗ
    ಹೋತ ಹಿಂದ ಬಾರದ್ಹಾಂಗ
    ಹಿಂದ ನೋಡದ, ಗೆಳತಿ ಹಿಂದ ನೋಡದ}

    ನಿನ್ನ ಆ ಕಳ್ಳನಗು ಸೂಸೋ
    ಚಿನ್ನದ ಹೊಳಪಿನ ಬೆಳಕಿನ
    ಮು೦ಜಾವಿನ ಸ್ತಬ್ದತೆಯಲಿ…
    ಮಿ೦ದು ಮಾಯವಾಗಲು…

    {ಒಂದೇ ಬಾರಿ ನನ್ನ ನೋಡಿ
    ಮಂದ ನಗಿ ಹಾಂಗ ಬೀರಿ
    ಮುಂದ ಮುಂದ ಮುಂದ ಹೋದ
    ಹಿಂದ ನೋಡದ, ಗೆಳತಿ ಹಿಂದ ನೋಡದ}

    ನನ್ನೊಳಗಿನ ತು೦ಟ ಮಗು
    ಹಠ ಹಿಡಿದು ಜಾತ್ರೆಗೆ ಹೋಗಿ…
    ಅಲ್ಲಿಯ ಆಟಿಕೆಯ೦ಗಡಿಯೆದುರು
    ತನ್ನೇ ಮರೆತು ಲೀನವಾದ೦ತಿರಲು…

    {ನಂದ ನನಗ ಎಚ್ಚರಿಲ್ಲ
    ಮಂದಿ ಗೊಡವಿ ಏನ ನನಗ?
    ಒಂದೇ ಅಳತಿ ನಡದದ ಚಿತ್ತ
    ಹಿಂದ ನೋಡದ, ಗೆಳತಿ ಹಿಂದ ನೋಡದ}

    ….thoughts might be the same; but how different words impart a different feeling altogether!

    nice water-color on paper by the way! especially the shoot part and the color mix have come out well!

    regs,
    -r

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading