ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದೇನೆಂದು ನಾಳೆ ಹೇಳುತ್ತೇನೆ: ಉಷಾ ಕಟ್ಟೇಮನೆ

ಉಷಾ ಕಟ್ಟೇಮನೆ

ನಾನು ಒಬ್ಬರನ್ನು ತುಂಬಾ ಹಚ್ಚಿಕೊಂಡಿದ್ದೆ. ಅವರನ್ನು ನಾನೆಂದೂ ಮುಖತಃ ಬೇಟಿಯಾಗಿರಲಿಲ್ಲ. ಆದರೂ ನಾನವರಿಗೆ ಹೇಳಿದ್ದೆ ’ನೀವೆಂದರೆ ನನಗೆ ಇಷ್ಟ’ ಅದಕ್ಕವರು ಮುಗುಮ್ಮಾಗಿ ಕೇಳಿದ್ದರು. ’ನನ್ನಿಂದ ಏನು ನಿರೀಕ್ಷಿಸುತ್ತಿರಿ?’ ನಾನು ”ಗೊತ್ತಿಲ್ಲ’ ಅಂದಿದ್ದೆ. ನಿಮಗೆ ಗೊತ್ತಿಲ್ಲದಿದ್ದರೆ ನಾನೇನೂ ಮಾಡಲಾರೆ’ ಎಂದು ಅವರು ಪೋನ್ ಇಟ್ಟಿದ್ದರು.
ಮೊನ್ನೆ ಭಾನುವಾರ ನಾನು ತುಂಬಾ ಗೌರವಿಸುವ ಲಕ್ಷ್ಮೀಶ ತೋಳ್ಪಾಡಿಯವರ ’ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ…’ ಪುಸ್ತಕ ಬಿಡುಗಡೆಗೆ ಹೋಗಿದ್ದೆ. ಅಲ್ಲಿ ಅವರ ಭಾಷಣದಲ್ಲಿ ನನ್ನ ಗೊಂದಲಗಳಿಗೆ ಬಹುಮಟ್ಟಿಗೆ ಉತ್ತರ ಸಿಕ್ಕಿತ್ತು. ಅವರು ಹೇಳಿದರು..’ ಕೆಲವು ಸಂಬಂಧಗಳು ’ಆಗುವುದು’…ಅದು ಗೊತ್ತಿದ್ದರೆ ನಾವ್ಯಾಕೆ ಅವರನ್ನು ಹಚ್ಚಿಕೊಳ್ಳುತ್ತೇವೆ..ಅದು ಗೊತ್ತಿಲ್ಲದೆ ’ಪರವಶವಾಗುವುದು’…ಅವರು ವಿವರಿಸುತ್ತಾ ಹೋದರು…
ಆ ಪುಸ್ತಕ…. ಈಗ ಓದಲು ಕೈಗೆತ್ತಿಕೊಂಡಿದ್ದೇನೆ…
ಅದರ ಆರಂಭವೇ ಅದ್ಭುತವಾಗಿದೆ.ನೀವು ಮುದ್ರೆಗಳ ಬಗ್ಗೆ ಕೇಳಿರಬಹುದು..ಓದಿರಬಹುದು ಆದರೆ. ’ಭೂಮಿಸ್ಪರ್ಶಮುದ್ರಾ!’ ಇದರ ಬಗ್ಗೆ ಕೇಳಿದ್ದೀರಾ?
ಈ ಪುಸ್ತಕ ಆರಂಭವಾಗುವುದೇ ಇದರ ವಿವರಣೆಯಿಂದ….
ಅದೇನೆಂದು ನಾಳೆ ಹೇಳುತ್ತೇನೆ

‍ಲೇಖಕರು G

2 February, 2013

2 Comments

  1. D.Ravivarma

    naanu pustike tarisikonduhodabeku…..

  2. Sunil Rao

    “ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ”
    ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರ ಪುಸ್ತಕ ‘ನನ್ನನ್ನು’ ಹಿಡಿದುಹಾಕಿದೆ……(ಗೊತ್ತಾಗುತ್ತಿದೆ ಅದು)
    ಜೋಗಿ,ಉಷಾ ಕಟ್ಟೆಮನೆ ಇಬ್ಬರೂ ಬಹಳ ನಿರೀಕ್ಷೆ ಹುಟ್ಟಿಸಿದ್ದರು ಅದರ ಬಗ್ಗೆ ಮಾತನಾಡಿ
    ರಾತ್ರಿ ಓದಲು ಶುರು ಮಾಡಿ “ಮುಗಿಸಿದೆ”
    ಈಗ ಮತ್ತೊಮ್ಮೆ ಅದನ್ನೇ ಓದಲು “ಶುರು” ಮಾಡಿದೆ.
    ತೋಳ್ಪಾಡಿ ಅವರನ್ನು ಓದಲು ಒಂದು ದಿವ್ಯ ಮೌನ ಬೇಕು…ನನ್ನನ್ನು ಖಾಲಿ ಮಾಡಿಕೊಂಡು ಕೂರಬೇಕು…ಯಾವುದೇ ಅಡಚಣೆಗಳ ಮಧ್ಯೆ ಅವರನ್ನು ಓದಲು ಸಾಧ್ಯವಿಲ್ಲ, ಅವರ ವಿಚಾರದ ಒಂದೇ ಒಂದು ಎಳೆ ತಪ್ಪಿ ಹೋದರು…ಮಿಕ್ಯಾವುದು ಅರ್ಥವಾಗೋಲ್ಲ….ಮತ್ತೊಮ್ಮೆ ಮತ್ತೊಮ್ಮೆ ಜಿಡ್ಡುವನ್ನು ಓದಿದ ಪೂರ್ಣಾನುಭವ ಅನಿಸುತ್ತೆ ನನಗೆ.
    “ಅದೃಷ್ಟ”…”ಅರಾಜಕತೆ”….”ಪ್ರೀತಿ” ಇವೆಲ್ಲವನ್ನ ಅದೆಷ್ಟು ಎಳೆ ಎಳೆಯಾಗಿ ಅವರ ಮತ್ತು ಅವರ ಗುರುಗಳ ಚರ್ಚೆಯ ಮೂಲಕ ವಿಸ್ತರಿಸಿದ್ದಾರೆ ಅಂದರೆ ಅದ್ಭುತ ಅನಿಸುತ್ತದೆ.
    ಜಿಡ್ಡುವನ್ನು ಓದಿದಾಗಲೆಲ್ಲ ಮತ್ತು ನಾನು ಅದನ್ನು ಬೇರೆಯವರಿಗೆ ಸಜೆಸ್ಟ್ ಮಾಡಿದಾಗೆಲ್ಲ, ನನ್ನ ಮುಂದೆ ಬರುವ ಮೊದಲ ಪ್ರಶ್ನೆ ಹಾಗು ಎರಡನೇ ಪ್ರಶ್ನೆ ಅಂದರೆ “ನಮಗೆ ಇದು ಅರ್ಥವಾಗಲ್ಲ ಮಾರಾಯ”…..ಮತ್ತು “ಜೀವನವನ್ನು ಯಾಕಿಷ್ಟು ಕಾಂಪ್ಲೆಕ್ಸ್ ಮಾಡಿಕೊಂಡು ನೋಡಬೇಕು”??
    ಆದರೆ ನನಗೆ ಅನ್ನಿಸೊದೂ ಜಿಡ್ಡು ಮತ್ತು ತೋಳ್ಪಾಡಿ ಜೀವನದ ಸಮಷ್ಟಿ ಮತ್ತು ಅವುಗಳ ನಡುವೆ ಇರುವ ಜಟಿಲ ಸಂಬಂಧಗಳ ಎಳೆ ಎಳೆಯನ್ನು ಅನ್ವೇಷಣ ಮಾಡುತ್ತಾ ಹೋಗುತ್ತಾರೆ,(ತನ್ಮೂಲಕ ನಾವೂ ಅದಕ್ಕೆ ದೂಡಿಕೊಳ್ಳುತ್ತೇವೆ) ಬದುಕಿಗೆ ಅದರ ಅನಿವಾರ್ಯವಿದೆ, ಮುಂದಿನ ಬದುಕಿನ ಘರ್ಶಣೆಗಳಿಗೆ ಅದು ಉತ್ತರವಾಗುತ್ತೆ , ಬದುಕು ಮತ್ತು ಅದರ ಘರ್ಷಣೆಗಳ ನಡುವೆ ನಾವು ನಮ್ಮನ್ನು ಸಂಭಾಳಿಸುತ್ತ ಹೋಗುವ ನಿರ್ದಿಷ್ಟ ದಾರಿಗೆ ಅಥವಾ ಇನ್ಯಾವುದೇ ಅವಿಷ್ಕಾರಕ್ಕೆ ನಮ್ಮನ್ನ ದೂಡುತ್ತದೆ. ನಮ್ಮ ಅನಾಹತ ಪ್ರಶ್ನೆಗಳ ಮೂಲಕ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬಹುದು….
    “ಸತ್ಯ”ವನ್ನು ಇವರ್ಯಾರು ಪ್ರೇಂ ಹಾಕಿ ಕೂರಿಸೋಲ್ಲ ಅನ್ನೋದು ಇಷ್ಟವಾಗುವ ವಿಷ್ಯ. ಹಾಗಂದ ಮಾತ್ರಕ್ಕೆ ಇವರ ವಿಚಾರಗಳು ಸಮಸ್ಯೆಗಳ ಸಿದ್ಧ ಉತ್ತರವಂತೂ ಅಲ್ಲ…ಆದರೆ ಜೀವನದ ಪ್ರತಿ ಮಜಲನ್ನು ಪಾರದರ್ಶಕವಾಗಿ, ನಮ್ಮ ದರ್ಶನಕ್ಕೆ ನಿಲುಕುವಲ್ಲಿ ಸಹಾಯ ಮಾಡಬಹುದು…
    ಅಭಿರುಚಿ ಇರುವವರು ಪುಸ್ತಕ ಕೊಂಡು ದಯಮಾಡಿ ಓದಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading