ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಣ್ಣಾ ಹಜಾರೆಯನ್ನು ಬೆಂಬಲಿಸಿ…

ಜನಾಂದೋಲನಗಳ ರಾಷ್ಟ್ರೀಯ ಸಮನ್ವಯ ಕರ್ನಾಟಕ

ಜನ ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ

ಅಣ್ಣ ಹಜಾರೆ ಮತ್ತು ಇತರ ಜನಪರ ಹೋರಾಟಗಾರರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ

ಉಪವಾಸ ಸತ್ಯಾಗ್ರಹ

ದಿನಾಂಕ: ಏಪ್ರಿಲ್ 5ರಿಂದ 9ರವರೆಗೆ, ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು

ಬ್ರಷ್ಟಾಚಾರ ನಿರ್ಮೂಲನದ ಉದ್ಧೇಶವುಳ್ಳ ಜನ ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಅಣ್ಣ ಹಜಾರೆ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಅನಿರ್ಧಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ ಆರಂಭವಾಗಿದೆ. ದೇಶದಲ್ಲಿ ಬ್ರಷ್ಠಾಚಾರವು ನಾನಾ ಸ್ವರೂಪದಲ್ಲಿ ಅತಿರೇಕದ ಹಂತ ತಲಪಿದ್ದು ಈ ಘಟ್ಟದಲ್ಲಿ ಇದರ ವಿರುದ್ಧ ಹೋರಾಟವು ಅನಿವಾರ್ಯವಾಗಿದೆ. ಬ್ರಷ್ಟಾಚಾರ ತಡೆ ಕಾನೂನು ಇದ್ದರೂ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸಿ ಪರಿಣಾಮಕಾರಿಯಾಗಿ ಬ್ರಷ್ಟಾಚಾರ ನಿಗ್ಪ್ರಹ ಮಾಡಬಲ್ಲ ಸಾರ್ವಜನಿಕ ಸಂಸ್ಥೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಲೋಕಪಾಲ ಮಸೂದೆಯಲ್ಲಿ ಬದಲಾವಣೆ ಬಯಸಿ ಜನ ಲೋಕಪಾಲ ಮಸೂದೆಯನ್ನು ಜಾರಿಗೆ ತರುವಂತೆ ಮಾಡುತ್ತಿರುವ ಉಪವಾಸ ಸತ್ಯಾಗ್ರಹವಿದು.

 

ಶಾಂತಿಭೂಷಣ್ ಅವರು ಭಾರತೀಯ ಬ್ರಷ್ಟಾಚಾರ ವಿರೋಧಿ ಚಳುವಳಿಯ ನೇತಾರರು ಮತ್ತು ಕಿರಣ್ ಬೇಡಿ, ನ್ಯಾಯಮೂರ್ತಿ ಸಂತೋಷ ಹೆಗ್ಡೆ, ವಕೀಲ ಪ್ರಶಾಂತ್ ಭೂಷಣ್, ಎಮ್.ಲಿಂಗ್ಡೋ ಮುಂತಾದ ಹಿರಿಯರು, ನಾಗರಿಕ ಸಮಾಜದ ಗಣ್ಯರೊಂದಿಗೆ ಸಮಾಲೋಚನೆ ಮಾಡಿ ಜನಲೋಕಪಾಲ ಕರಡು ಮಸೂದೆಯ ಕರಡನ್ನು ಸಿದ್ಧಪಡಿಸಿದ್ದಾರೆ. ಈ ಮಸೂದೆಯು ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತರನ್ನು ನೇಮಕ ಮಾಡುವ ಪ್ರಸ್ತಾಪಗಳನ್ನೊಳಗೊಂಡಿದೆ.

 

ಮೊದಲ ಲೋಕಪಾಲ ಮಸೂದೆಯು 1969ರಲ್ಲಿ 4 ನೇ ಲೋಕ ಸಭೆಯಲ್ಲಿ ಮಂಡಿಸಲ್ಪಟ್ಟರೂ ರಾಜ್ಯ ಸಭೆಯಲ್ಲಿ ಮಂಡಿತವಾಗಲಿಲ್ಲ. 1971, 1977, 1985, 1989, 1996, 1998, 2001, 2005 ಮತ್ತು 2008ರಲ್ಲಿ ಪದೇ ಪದೇ ಮಸೂದೆಯು ಮಂಡಿತವಾದರೂ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾಯಿದೆಯಾಗಲಿಲ್ಲ.

 

ಜನಲೋಕಪಾಲ ಮಸೂದೆಯ ಪ್ರಕಾರ ಲೋಕಪಾಲ ಸಂಸ್ಥೆಯು ಸಿಬ್ಬಂದಿ ಮತ್ತು ಪದಾಧಿಕಾರಿಗಳು ಸೇರಿದಂತೆ ಹತ್ತು ಜನರನ್ನು ಒಳಗೊಂಡಿರುತ್ತದೆ. ಕಾಯಿದೆಯಾಗಿ ಆರು ತಿಂಗಳ ಒಳಗಾಗಿ ಅದರ ಅಧ್ಯಕ್ಷರು ಮತ್ತು ಸದಸ್ಯರುಗಳು ನೇಮಕಗೊಳ್ಳಬೇಕು. ಪಧಾದಿಕಾರಿಗಳು ನಿವೃತ್ತಿಯಾಗುವ ಮೂರು ತಿಂಗಳ ಮೊದಲೇ ನೇಮಕಗೊಳ್ಳಬೇಕಿದ್ದು ಯಾವತ್ತೂ ಲೋಕಪಾಲ ಸಂಸ್ಥೆಯು ಪೂರ್ಣ ಪ್ರಮಾಣದಲ್ಲಿ ಅಸ್ಥಿತ್ವದಲ್ಲಿರುವಂತೆ ನೋಡಿಕೊಳ್ಳಬೇಕಾಗಿದೆ.

ಪ್ರಸ್ತಾಪಿತ ಕರಡು ಮಸೂದೆಯಂತೆ ಲೋಕಪಾಲದ ಕನಿಷ್ಟ ನಾಲ್ಕು ಸದಸ್ಯರು ಕಾನೂನು ಹಿನ್ನಲೆಯಿಂದಲೇ ಬಂದವರಾಗಿರಬೇಕು. ನೈತಿಕ ಉನ್ನತೆಯನ್ನು ಕಾಪಾಡಿಕೊಳ್ಳುವ ದೃಷ್ಠಿಯಿಂದ ಇಂಡಿಯನ್ ಪಿನಲ್ ಕೋಡ್ ಅಡಿಯಲ್ಲಿ ಅಥವಾ ಬ್ರಷ್ಟಾಚಾರ ತಡೆ ಕಾದೆಯಡಿಯಲ್ಲಿ ಆರೋಪಿತ ವ್ಯಕ್ತಿಗಳು ಇದರ ಪದಾಧಿಕಾರಿಗಳಾಗಿ ನೇಮಕವಾಗುವಂತಿಲ್ಲ.

ಮೇಲ್ಮನೆ ಮತ್ತು ಕೆಳಮನೆಯ ಸಭಾಧ್ಯಕ್ಷರುಗಳು, ಸುಪ್ರೀಂಕೋಟರ್ಿನ ಎರಡು ಹಿರಿಯ ನ್ಯಾಮಮೂರ್ತಿಗಳು, ಭಾರತ ರತ್ನ, ನೊಬೆಲ್, ಮ್ಯಾಗಸೇಸೆ ಮುಂತಾದ ಪ್ರಶಸ್ತಿ ಪಡೆದವರು, ರಾಷ್ಟ್ರಿಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಭಾರತದ ಆಡಿಟರ್ ಜನರಲ್, ಮುಖ್ಯ ಚುನಾವಣಾ ಆಯುಕ್ತರು ಮುಂತಾದವರು ಆಯ್ಕೆ ಸಮಿತಿಯಲ್ಲಿರಲು ಅವಕಾಶವಿದೆ. ಸುಪ್ರೀಂಕೋರ್ಟ್ ನ ಅತಿ ಹಿರಿಯ ನ್ಯಾಯಮೂರ್ತಿಗಳು ಆಯ್ಕೆ ಸಮಿತಿಯ ಅಧ್ಯಕ್ಷರಾಗಬಹುದು. ಜನ ಲೋಕಪಾಲ ಮಸೂದೆಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರುಗಳ ಆಯ್ಕೆಯನ್ನು ಪಾರದರ್ಶಕವಾಗಿ ಮಾಡುವ ವಿಧಾನಗಳನ್ನೂ ವಿವರಿಸಲಾಗಿದೆ .

 

ಲೋಕಪಾಲ ಸಂಸ್ಥೆಗೆ ಬ್ರಷ್ಟಾಚಾರ ತಡೆ ಕಾಯಿದೆಯಡಿಯಲ್ಲಿ ಜನರಿಂದ ದೂರುಗಳನ್ನು ಸ್ವೀಕರಿಸುವ, ದುರು ನೀಡಿದವರಿಗೆ ರಕ್ಷಣೆ ನೀಡುವ, ದೂರುಗಳ ಕುರಿತು ವಿಚಾರಣೆ ನಡೆಸುವ ಅಧಿಕಾರಗಳಿರುತ್ತವೆ.

 

ಜನ ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಅಣ್ಣ ಹಜಾರೆ ಮತ್ತು ಇತರ ಜನಪರ ಹೋರಾಟಗಾರರ ನೇತೃತ್ವದಲ್ಲಿ ನಡೆಯುತ್ತಿರುವ ಈ ಉಪವಾಸ ಸತ್ಯಾಗ್ರಹಕ್ಕೆ ಜನಾಂದೋಲನಗಳ ರಾಷ್ಟ್ರೀಯ ಸಮನ್ವಯದ ಕರ್ನಾಟಕ ವಿಭಾಗವು ಮತ್ತು ಅದರ ಎಲ್ಲಾ ಸದಸ್ಯರು, ಸದಸ್ಯ ಸಂಘಟನೆಗಳು ಈ ಮೂಲಕ ಬೆಂಬಲ ನೀಡುತ್ತವೆ.

ಬನ್ನಿ ಬ್ರಷ್ಟಾಚಾರವನ್ನು ತೆಡಯೋಣ. ನಮ್ಮ ಬದುಕನ್ನು ಕಿತ್ತು ತಿನ್ನುವ ಖಳರ ಹಲ್ಲು ಮುರಿಯೋಣ.

 

ಫೋನ್ : 9945716052

 

 

‍ಲೇಖಕರು G

7 April, 2011

9 Comments

  1. H.LAKSHMANA RAO

    khandita nammelaara bembala sahakaara ide.

  2. RJ

    ಈ ಸತ್ಯಾಗ್ರಹ ಒಂದು ಹೊಸ ಕ್ರಾಂತಿಗಾಗಿ ನಾಂದಿಯಾಗಲಿ ಎಂದು ಹಾರೈಸುವೆ.
    -RJ

  3. Dr.Nagesh

    I support anna,its not ur fight, billion people fight against million people.

  4. ಎಚ್ಚೆಸ್ವಿ

    ಶ್ರೀ ಅಣ್ಣಹಜಾರೆಯವರನ್ನು ಬೆಂಬಲಿಸುವುದು ನಮ್ಮೆಲ್ಲರ ಆದ್ಯ ಕರ್ತ್ವ್ಯವಾಗಿದೆ.
    -ಎಚ್ಚೆಸ್ವಿ

  5. purushotham kalale

    Navella ondagi serona.

  6. kanam nagaraju

    annaa hajaareyavaru obba praamaanika vykti. avaru iduvarevigu nadesiruva horaatagala moolaka tilidu bandiruva vichaaravidu. bhrashtaachara nirmoolavaagabekennuvudaralli eradu maatilla. bhrashtaachaara nirmoola maadalu anusarisa bekaagiruva kramada bagge hajaare mattu avara sangadigaru roopisiruva vichaaragalanuu/sootragalannu janara mundhe mandisabeku. naavu prajaaprabhutva vyavastheyannu roopisikondiddeve. prajaaprabhutva vayvasthegu brashtachaarakku sambandha irabahudu. haagaagi vyavastheya riperi maadabekaagi barabahudu. jotege prajaaprabhutvadalli kelavaru ondu vichaarada bagge tammade aada parihaaravannu soochisi ottaya heruvudu eshtaramattige sari? naavu aayke maadiruva jana pratinidhigalu sookata vedikeyalli idara saadaka baadakagala bagge vivaravaaagi parisheelane nadesabekallave? adannu maadi endu naavu ottaaya tarabekallade naavu heluttiruvudannu jaarige tanni endu hata hidiyuvudu prajaaprabhutvadalli sariye? hajaareyavara joteyalli kaanisikolluttiruva kaavidhaarigalu ondalla ondu pakshada jote gurutisikondavarallave? avara bagge naavu echcharadindirabekallave? yaarondige charchisabeko avarondige maate aaduvudilla ennuvudu prajaasattatmkave? hallu muriyona,hallu keelona embudella aaveshada maatugalaaguttave. vyaktigalannu gurimaadikondu nadesuva horaata bahalakaala nilluvudilla. haage maadiddara phalavannu naavu anubhavisuttiddevalla. tatvagalannu guriyaagittukondu,hata bittu horaata nadesona. bhrashtachaara nammolagoo irabahudu. naavu parishuddaremba bhrameyalli udvegakke olagaaguvudu salla. bhrshtachaara nirmoolavaagali.
    kanam

  7. umashankar

    brastacharnirmulan.genammabembala.suchisutteve

  8. basareddy

    we have support anna hajare .and we to demand for take back of blak money in swissbank ammount of india

  9. yathish acharya

    ಪ್ರೀಯ ಬ೦ದುಗಳೆ ಯಾವುದೆ ಕಾರಣಕ್ಕೂ ಕೊಪಿಸಿಕೊಳ್ಳಬೆಡಿ ಯಾಕ೦ದ್ರೆ ‘ಒ೦ದು ನಿಮಿಷದ ಸಿಟ್ಟು ಅರ್ದ ಗ೦ಟೆಯ ಆನ೦ದವನ್ನು ಹಾಳುಮಾಡುತ್ತದೆ’

    ನಮಸ್ತೆ ಸಾರ್,

    ನನ್ನ ಹೆಸರು ಯತೀಶ್… ಜಗತ್ತಿನಲ್ಲಿ ಎನೆನೊ ನಡಿತಾ ಇದೆ ಎಲ್ಲಿ ಎನಾಗ್ತಿದೆ ಅ೦ತ ಉಹೆ ಮಾಡೊದಿಕ್ಕು ಆಗಲ್ಲಾ ,ಈಗ್ಲಾದ್ರು ಜನ ಎಲ್ಲಾ ಎಚೆತ್ಕೊ೦ಡ್ರು ಅದ್ರಲ್ಲಿ ನಾನು ಒಬ್ಬ ಅ೦ದ್ಕೊಳ್ಲಿ…ಆದ್ರೆ ಎಲ್ಲಾ ಸರಿ ಬರೇ ಈವಾಗ ಆಡಳೀತ ಮಾಡುವವರಗೆ ಯಾಕೆ, ಈ ಹಿ೦ದೆ ಆಡಳೀತ ಮಾಡಿದವರ ಮೇಲೂ ದಾಳಿ ಮಾಡಬಹುದಲ್ವ ಅದೆಷ್ಟೋ ಬಕಪಕ್ಶಿಗಳು ಏಷ್ಟೋ ಕೋಟಿ ಹಣ ಹೊಡ್ಕೊ೦ಡು ಇವಾಗ ಐಷಾರಾಮಿ ಜೀವನ ನಡೆಸ್ತಿಲ್ವ ಅವ್ರ್ ಮೆಲೂ ದಾಳಿ ಮಾಡಿ ಅವ್ರ್ಣನ್ನು ಜೈಲಿಗೆ ತಳ್ಳಿ ದೇಶದ ಪೃತಿಯೊಬ್ಬ ರಾಜಕಾರಣಿ,ದೊಡ್ದ ದೊಡ್ಡ ಉದ್ಯಮಿಗಳ ಮನೆಗೆ ದಾಳಿ ಮಾಡಿ ಅವರನ್ನು ವಿಚಾರಿಸಿ…ಸ್ವಲ್ಪ ಯೊಚನೆ ಮಾಡಿ ರಾಜಕಾರಣಿಗಳು ಅವರಿಗೆ ಬರುವ ಸ೦ಬಳದಿ೦ದ ದೊಡ್ದ ದೊಡ್ದ ಬ೦ಗಲೆಗಳನ್ನು ಕಟ್ಟಲು ಸಾದ್ಯವೇ ,ಐಷಾರಾಮಿ ಜೀವನ ನಡೆಸಲು ಸಾದ್ಯವೆ..ಬ್ರಷ್ಟಾಚಾರ ತಡೆಯೋಡದು ಅ೦ದರೆ ಮೂದಲು ಅದರ ಬೆರನ್ನು ಮೂದಲು ಕಿತ್ತೂಗೆಯಬೆಕು ಇದರಿ೦ದ ಸಾದ್ಯವೆ ಹೊರತು ಇತ್ತಿಚೆಗೆ ಬ೦ದ ಸಚಿವರುಗಳು,ಅಧಿಕಾರಿಗಳನ್ನು ಹಿಡಿದರೆ ಏನು ಉಪಯೊಗಕ್ಕೆ ಬರಲ್ಲ ಸರಕಾರ ಅರ೦ಭವಾದ ದಿನದಿ೦ದ ಪ್ರತಿಯೊ೦ದು ಕಡತಗಳ ಪರಿಶಿಲಿಸಬೆಕು ಅವಾಗ ಮಾತ್ರ ನಡೆದಿರುವ ಅವ್ಯವಹಾರ,ನಡೆಯುತ್ತಿರುವ ಅವ್ಯವಹಾರ ಬೆಳಕಿಗೆ ಬರುವುದು.ಈ ರೀತಿಯಾಗಿ ವಿಚಾರಣೆ ಮಾಡಿದಾಗ ಮಾತ್ರ ಮು೦ದೆ ಆ ಸ್ತಾನದಲ್ಲಿ ಬರುವ ವ್ಯಕ್ತಿಗಳಿಗೆ ಭಯ ಹುಟ್ಟುವುದು ಇದರಿ೦ದ ನ್ಯಾಯಸಮ್ಮತವಾದ ಅಡಳಿತ ನೆಲೆಯೂರಲು ಸಾದ್ಯವಗುವುದು

    ಪ್ರತಿಯೊಬ್ಬ ನಾಗರಿಕನು ಬ್ರಷ್ಟಾಚರ ರಹಿತ ಜೀವನ ನಡೆಸಬೆಕು ಇದರಿ೦ದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ದೊರಕಿಸಿಕೊಟ್ಟ೦ತಾಗುವುದು.
    ನಾವು ಬ್ರಷ್ಟಾಚರದ ಕಡೆ ಯಾಕೆ ಮುಖ ಮಾಡಬೆಕು ನಿಯತ್ತಿನಿ೦ದ ದುಡಿದು ಜೀವನ ನಡೆಸಲು ಸಾದ್ಯವಿಲ್ಲವೆ?

    ನಿಮ್ಮ ಗೆಳೆಯ ಅನ೦ದುಕೊಳ್ಳಿ,
    ಯತೀಶ್ ಆಚಾರ್ಯ.
    ಸ೦ದೇಶಕ್ಕೆ-yathish.ach@rediffmail.com

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading