ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಗಸೆಬಾಗಿಲು’…

ಮುರಳೀಧರ ಉಪಾಧ್ಯಾಯ ಹಿರಿಯಡಕ

ಶ್ರೀಮತಿ ಗಿರಿಜಾ (ಹೆಗಡೆ) ಗಾಂವ್ಕರ ಅವರ ಮೊದಲ ಸಂಕಲನ ‘ಅನಾವರಣ’ ಪ್ರಕಟವಾದದ್ದು 1997ರಲ್ಲಿ. ಮೊದಲ ಸಂಕಲನದ ಲೇಖಕರ ಮಾತಿನಲ್ಲಿ ಅವರು ಬರೆದಿರುವಂತೆ ‘ಪ್ರಕೃತಿಯ ಮಡಿಲಲ್ಲಿ ತಣ್ಣಗೆ ಮಲಗಿರುವ ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ನಾನು ಚಿಕ್ಕಂದಿನಿಂದಲೂ ಹೆಣ್ಣು-ಗಂಡಿನ ಬಗೆಗೆ ತೋರುವ ತಾರತಮ್ಯದ ವಿಚಾರವಾಗಿ ಚಿಂತಿಸುತ್ತ, ಹೀಗೇಕೆ? ಎಂಬ ಪ್ರಶ್ನೆಯೊಂದಿಗೇ ಬೆಳೆದದ್ದು! ನನ್ನಲ್ಲಿಯ ಬರಹಗಾರ್ತಿ ಸ್ವಲ್ಪಮಟ್ಟಿಗೆ ಜಾಗೃತಳಾಗಿದ್ದು ಕಥೆಗಾರ್ತಿಯಾಗಿ, ನಂತರದಲ್ಲೇ ಕಾವ್ಯಕನ್ನಿಕೆಯ ಸೆರಗ ಹಿಡಿದದ್ದು. ‘ದೊಡ್ಡವಳಾದ ಕರ್ಮ’ ‘ಸ್ಥಿತಿ’ ‘ಈ ಹುಡುಗಿಯರೇ ಹೀಗೆ!’ ‘ಕಟುವಾಸ್ತವಕ್ಕೆ ಕನಸು ಬೆಂದಾಗ’ -ಇವು ‘ಅನಾವರಣ’ ಸಂಕಲನದಲ್ಲಿ ನನಗೆ ಇಷ್ಟವಾದ ಕವನಗಳು. ಪುರುಷಪ್ರಧಾನ ಸಮಾಜದ ಲಿಂಗಾಧಾರಿತ ಅಸಮಾನತೆಯಿಂದಾಗಿ ಅಸಹಾಯಕರಾಗಿರುವ ಹೆಣ್ಣುಮಕ್ಕಳ ಅವಸ್ಥೆ ಈ ಕವನಗಳಲ್ಲಿವೆ. ಪೂರ್ಣ ಓದಿಗೆ : ಓದು ಬಜಾರ್]]>

‍ಲೇಖಕರು G

20 December, 2010

1 Comment

  1. malathi S

    Lovely cover!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading