ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಕು ಬರ್ತಿದಾಳೆ ರಂಗಶಂಕರಕ್ಕೆ

ರಂಗಮಂಟಪ

ರಂಗಮಂಟಪ ರಂಗಭೂಮಿಯನ್ನು ನಂಬಿಕೊಂಡಿರುವ ಒಂದು ಸಾಮೂಹಿಕ ಕನಸು. ಬದುಕನ್ನು ತೀವ್ರವಾಗಿ ಪ್ರೀತಿಸುವುದನ್ನು ಕಲಿಸುವುದು ರಂಗಭೂಮಿ. ತರತಮಗಳ ಸಮಾಜದಲ್ಲಿ ಸಂಬಂಧಗಳ ಅರ್ಥವಂತಿಕೆಯನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಕಲೆಗಳು ಮಾಡಬೇಕೆನ್ನುವ ಹಲವು ಕನಸಿಗರು ಸೇರಿ ಅಸ್ತಿತ್ವಕ್ಕೆ ತಂದ ತಂಡವೇ ರಂಗಮಂಟಪ. ಮೊದಲ ಹೆಜ್ಜೆಯಾಗಿ ಹಿರಿಯ ರಂಗತಜ್ಞ ವಿ. ರಾಮಮೂರ್ತಿಯವರ ನೇತೃತ್ವದಲ್ಲಿ ಬೆಳಕಿನ ಕಾರ್ಯಾಗಾರದ ಮೂಲಕ ತನ್ನ ಚಟುವಟಿಕೆಯನ್ನು ಪ್ರಾರಂಭಿಸಿತು. ರಂಗಮಂಟಪ ವಿದ್ಯಾರ್ಥಿಗಳಿಗಾಗಿ ರಂಗ ಶಿಬಿರಗಳು, ಬೀದಿ ನಾಟಕಗಳು, ನಾಟಕ ರಚನಾ ಕಮ್ಮಟಗಳ ಬಗ್ಗೆ ವಿಶೇಷ ಆಸ್ಥೆ ಹೊಂದಿದೆ.
ನಮ್ಮ ಸುತ್ತಲಿನ ಸಮುದಾಯಗಳು ಮಾನವೀಯತೆಯ ಸ್ಪರ್ಶಗಳಿಂದ ದೂರ ಸರಿಯುತ್ತಿರುವ ಆತಂಕವನ್ನು ಅನುಭವಿಸುತ್ತಿವೆ. ಈ ವರ್ತಮಾನವನ್ನು ಮುಖಾಮುಖಿಯಾಗಲು ರಂಗಮಂಟಪ ಎಚ್. ನಾಗವೇಣಿ ಅವರ ಕಾದಂಬರಿಯನ್ನು `ಗಾಂಧಿಬಂದ’ ಕಾದಂಬರಿಯನ್ನು ನಾಟಕವಾಗಿಸುವ ಮೂಲಕ ಜನರ ಅಂತರಂಗದಲ್ಲಿ ಸಂವಾದವೊಂದನ್ನು ಹುಟ್ಟು ಹಾಕಿತು. ಈ ನಾಟಕ ನಾಡಿನ ಒಳ ಹೊರಗೂ ಪ್ರಸಿದ್ಧಿಯನ್ನು ಪಡೆಯಿತು. ರಂಗಮಂಟಪದ ಗೆಳೆಯರು ರಂಗಗೀತೆಗಳ ತಂಡವನ್ನು ರೂಪಿಸಿಕೊಂಡಿದ್ದು ಹತ್ತು ಹಲವು ರಂಗಸಂಜೆಗಳನ್ನು ನಡೆಸಿಕೊಂಡು ಬಂದಿದೆ. ಮಕ್ಕಳಿಗಾಗಿ ನಾಟಕಗಳನ್ನು ತಯಾರಿಸುವುದರ ಜೊತೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ನಾಟಕೋತ್ಸವವನ್ನು ಏರ್ಪಡಿಸುವ ಕನಸನ್ನು ತಂಡ ಇಟ್ಟುಕೊಂಡಿದೆ. ನಾಟಕ ಮಾತ್ರವಲ್ಲದೆ ರಂಗಾಭಿರುಚಿ ಬೆಳೆಸುವ ಕಮ್ಮಟಗಳನ್ನು ನಡೆಸುವ ಉದ್ದೇಶವೂ ಇದೆ. ಇಂತಹ ವಿಶಿಷ್ಟ ಕಾರ್ಯಕ್ರಮಗಳಲ್ಲಿ ಒಂದು ನಾಟಕವರ್ಷ ಎನ್ನುವ ಹೆಸರಿನ ರಂಗ ಸಂಭ್ರಮ. ಈ ರಂಗೋತ್ಸವವನ್ನು ಪ್ರತಿವರ್ಷವೂ ನಡೆಸುವ ಬದ್ಧತೆಯಿಂದ ಆರಂಭಿಸಿಲಾಗಿದೆ. ರಂಗಭೂಮಿ ಜೀವ ಪಡೆಯುವುದೇ ಇಂತಹ ಚಟುವಟಿಕೆಗಳಿಂದ ಎಂಬ ನಮ್ರ ವಿನಯವೇ ತಂಡದಆಶಯ. ಎಂಬತ್ತಕ್ಕೂ ಹೆಚ್ಚು ನಟನಟಿಯರ ಬಳಗ ರಂಗಮಂಟಪದ ಬಲ.
ಅಕ್ಕು- ಆತ್ಮಾವಲೋಕನದತ್ತ ಪುಟ್ಟ ಹೆಜ್ಜೆ
ಅಕ್ಕು, ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು, ಅಮ್ಮಚ್ಚಿಯ ನೆನಪುಗಳು ಈ ಮೂರು ಕಥೆಗಳನ್ನು ಆದರಿಸಿ ಹೆಣೆದ `ಅಕ್ಕು’ ಸೂಕ್ಷ್ಮ ಸಂವೇದನೆಯ ವಿಭಿನ್ನ ಸಂಭಾಷಣೆಯ ಒಂದು ರಂಗಕೃತಿ. ನಮ್ಮ ಸಮಾಜದಲ್ಲಿ ಹೆಣ್ಣು ತನ್ನ ಅಸ್ತಿತ್ವಕ್ಕಾಗಿ ನಿರಂತರ ಹೋರಾಟ ನಡೆಸುವ ವಿವಿಧ ಸ್ತರಗಳನ್ನು ತಣ್ಣನೆಯ ಅಭಿವ್ಯಕ್ತಿಗಳ ಮೂಲಕ ವಿವರಿಸುವ ಪ್ರಯತ್ನ ಈ ನಾಟಕದ ಮುಖ್ಯ ಆಶಯ. ಒಂದು ಕುಟುಂಬದ ಚೌಕಟ್ಟಿನಲ್ಲಿ ಅಕ್ಕು ತನ್ನ ಅಸ್ಮಿತೆಗಾಗಿ ನಡೆಸುವ ಹೋರಾಟವನ್ನು ಬುದ್ಧಿ ಭ್ರಮಣೆಯನ್ನಾಗಿ ನೋಡುವ ಪರಿ ಒಂದೆಡೆ. ಮಾನಸಿಕವಾಗಿ ದೈಹಿಕವಾಗಿ ದೌರ್ಜನ್ಯ ಮಾಡುತ್ತಾ ಮಹಿಳೆಯನ್ನು ಉಪಭೋಗಿ ವಸ್ತುವಾಗಷ್ಟೇ ಸೀಮಿತಗೊಳಿಸಿ, ತಮಗೆ ಬೇಕಾದಂತೆ ಆಡಿಸುವ, ನಿಯಂತ್ರಿಸುವ ನಾಟಕ ದ ಪುರುಷ ಪಾತ್ರಗಳು, ಪುರುಷ ಪ್ರಧಾನ ವ್ಯವಸ್ಥೆಯ ಭಿನ್ನ ಭಿನ್ನ ಮುಖಗಳ ಸಮ್ಮಿಳಿತ ರೂಪಗಳಾಗಿ ಕಾಡುತ್ತವೆ. ಹೆಣ್ಣು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾಣದ ಸೂತ್ರದ ಬಂಧಗಳಲ್ಲಿ ಉಸಿರುಗಟ್ಟಿ ನರಳುತ್ತಿರುವ ಈ ವರ್ತಮಾನದಲ್ಲಿ `ಅಕ್ಕು’ ಬಿಡುಗಡೆಯ ಹಕ್ಕಿಯಾಗಿ ಗೋಚರಿಸುತ್ತಾಳೆ.
ರಂಗವನ್ನೇರುತ್ತಿರುವ ಅಕ್ಕು ನಾಟಕಕ್ಕೆ ವೈದೇಹಿಅವರ ವಿಶಿಷ್ಟ ಸಂಭಾಷಣೆಯ ಮೆರುಗು, ಭಾಷಾ ಸೊಗಡು ನಾಟಕದ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಚಂಪಾಶೆಟ್ಟಿ
ಎಚ್. ನಾಗವೇಣಿ ಅವರ ಪ್ರಸಿದ್ದ `ಗಾಂಧಿಬಂದ’ ಕಾದಾಂಬರಿಯನ್ನು ಚಂಪಾಶೆಟ್ಟಿ ರೂಪಾಂತರಿಸಿ ನಾಟಕವನ್ನು ಶೀರ್ಷಿಕೆಯಡಿ ನಿರ್ದೇಸಿದ್ದಾರೆ. ಈಗ ಕನ್ನಡ ಸಾಹಿತ್ಯದ ಮಹತ್ವದ ಮತ್ತೊಬ್ಬ ಲೇಖಕಿ ವೈದೇಹಿ ಅವರ ಅಕ್ಕು, ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು, ಅಮ್ಮಚ್ಚಿಯ ನೆನಪುಗಳು ಈ ಮೂರು ಕಥೆಗಳನ್ನು ಹೆಣೆದು `ಅಕ್ಕು’ ಶೀರ್ಷಿಕೆ ಅಡಿಯಲ್ಲಿ ನಿರ್ದೇಶಿಸಿದ್ದಾರೆ.

ರಂಗದ ಮೇಲೆ
ಯಶಸ್ವಿನಿ ರಾವ್
ಚೈತನ್ಯ
ಅಧಿತಿ ಆರ್. ಉರಾಳ
ಹಿತ. ಎಸ್
ಅಂಜನ್ ಭಾರದ್ವಾಜ್
ರಾಧಾಕೃಷ್ಣ ಉರಾಳ
ಗೀತಾ ಸುರತ್ಕಲ್
ವಿಶ್ವನಾಥ್ ಉರಾಳ
ರಾಮಕೃಷ್ಣ ಬಿ.ಜಿ
ರಾಜಕುಮಾರ್.ಎಸ್
ಅವನಿ ಪಿ. ಶೆಟ್ಟಿ
ದಿವ್ಯ ಕಾರಂತ
ರಾಜೇಶ್ ಕಶ್ಯಪ್
ದಿಲೀಪ್ ಶೆಟ್ಟಿ
ರೇಖಾ ಶ್ರೀವತ್ಸ
ಉಷಾ ಶ್ರೀನಿವಾಸ್
ಭಾರತಿ ಡಿ. ಪೈ
ತೇಜಸ್ವಿ ಮರಕಿಣಿ
ಸಿದ್ದರಾಮಪ್ಪ ಐದ್ನಾಳ್
ಜಯಶ್ರೀ ಶ್ರೀನಿವಾಸ್
ವರ್ಣ ಮಾಚರ್ಲ
ಮುರಳೀಧರ ನಾವಡ
ಶಿವರಾಮ್
 
ರಂಗದ ಹಿಂದೆ
ಸಂಗೀತ : ಕಾಶೀನಾಥ್ ಪತ್ತಾರ್
ಹಾಡಿದವರು : ವರ್ಷಾ, ರಶ್ಮಿ
ರಂಗಸಜ್ಜಿಕೆ : ಪ್ರಕಾಶ್ ಪಿ. ಶೆಟ್ಟಿ
ಸಹಾಯ : ಪವನ್ ಡಿ. ಪೈ, ಅಜಯ್
ಕಲೆ : ಪ.ಸ. ಕುಮಾರ್
ಪ್ರಚಾರ : ಕೃಷ್ಣ ರಾಯಚೂರು
ಬೆಳಕು ವಿನ್ಯಾಸ : ಅರುಣ್ ಮೂರ್ತಿ
ಸಹಾಯ : ಐಸಿರಿ ಪಿ. ಶೆಟ್ಟಿ
ವಸ್ರ್ತ ವಿನ್ಯಾಸ : ರಮಾದೇವಿ
ಸಹಾಯ : ರೇಖಾ ಶ್ರೀವತ್ಸ
ನಿರ್ವಹಣೆ : ಭಾರತಿ ಡಿ. ಪೈ
ರಂಗಪರಿಕರ : ವೇಣು ನೆಪೋಲಿಯನ್
ಪ್ರಸಾದನ: ರಾಮಕೃಷ್ಣ ಬೆಳ್ತೂರು
ತಾಂತ್ರಿಕ ಸಹಾಯ : ವಿಕಾಸ್ ಮಾಚರ್ಲ
ಸಹ ನಿದರ್ೆಶನ: ಜಯಶ್ರೀ ಶ್ರೀನಿವಾಸ್
ಕಥೆ : ವೈದೇಹಿ
 
ವಿನ್ಯಾಸ/ನಿರ್ದೇಶನ : ಚಂಪಾಶೆಟ್ಟಿ
 
 

‍ಲೇಖಕರು G

20 January, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading