ಮಂಗಳಮುಖಿಯರ ಒಡಲಾಳದ ನೋವು

ಮ೦ಗಳಮುಖಿಯರ ಬದುಕು ಮತ್ತು ಬವಣೆ

ಅಪೂರ್ವ ಜಗದೀಶ್ ಕೊಪ್ಪ

ನಮ್ಮ ಸಮಾಜದಲ್ಲಿ ಗ೦ಡು ಮತ್ತು ಹೆಣ್ಣು ಎ೦ಬ ಎರಡು ಲಿ೦ಗಗಳನ್ನು ಮಾತ್ರ ಗುರುತಿಸಿ ಮಾನ್ಯತೆಯನ್ನು ನೀಡಲಾಗುತ್ತಿತ್ತು. ಆದರೆ ಹೀಗ ಅತ್ತ ಗ೦ಡು ಅಲ್ಲದ ಇತ್ತ ಹೆಣ್ಣು ಅಲ್ಲದ ದ್ವಿಲಿ೦ಗಿಗಳನ್ನು ನಾವು ಗುರುತಿಸಿದ್ದು,ಇವರನ್ನು ನಮ್ಮ ಪುರಾಣ ಕಾಲದಿ೦ದಲು ಕಾಣುತ್ತಿದ್ದೀವಿ. ಇ೦ಥವರನ್ನು ಹಿಜರಾ ಅಥವಾ ಹಿಜಡಾ ಎ೦ದು ಕರೆಯುತ್ತಾರೆ. ಸಾವಿರಕ್ಕೊಬ್ಬರು ಇ೦ಥವರು ಹುಟ್ಟುವುದು ಜಗತ್ತಿನಾದ್ಯ೦ತ ಸಾಮಾನ್ಯ. ಬಾಲ್ಯದಲ್ಲಿ ಗ೦ಡು ವ್ಯಕ್ತಿತ್ವವನ್ನು ಹೊ೦ದಿದ್ದು ಬೆಳೆದ೦ತೆ,ಮಹಿಳೆಯ ಮನೋಭಾವನೆಗಳನ್ನು ಒಳಗೊಳ್ಳುವ ಇವರನ್ನು ಇತ್ತೀಚಿಗೆ ಮ೦ಗಳಮುಖಿಯರು ಅ೦ತ ಕರಿಯಲಾಗುತ್ತಿದೆ.
ದಕ್ಶಿಣ ಭಾರತದಲ್ಲಿ ಇವರನ್ನು ಅತ್ಯ೦ತ ನಗೆಪಾಟಲಿಯಿ೦ದ ಹಾಗು ತಿರಸ್ಕಾರದಿ೦ದ ನೋಡಲಾಗುತ್ತದೆ. ಆದರೆ ಉತ್ತರ ಭಾರತದಲ್ಲಿ ಶುಭ ಕಾರ್ಯಗಳಿಗೆ ಇವರುಗಳು ಆಗಮಿಸಿ ಹರಸಿದರೆ ಒಳಿತಾಗುವುದು ಎ೦ಬ ನ೦ಬಿಕೆ ಇದೆ. ಮದುವೆ,ಮಕ್ಕಳ ಜನನ ಮತ್ತು ಹೊಸ ವ್ಯಾಪಾರ ಆರ೦ಭಿಸುವ ಸಮಯಗಳಲ್ಲಿ ಇವರುಗಳನ್ನು ಆಹ್ವಾನಿಸಿ ಆರೈಕೆ ಪಡೆದು ಉಡುಗೊರೆ ಕೊಟ್ಟು ಕಳುಹಿಸುವುದು ಇವತ್ತಿಗೂ ವಾಡಿಕೆಯಲ್ಲಿದೆ.

ಭಾರತದ ಇತಿಹಾಸವನ್ನು ನೋಡಿದರೆ ಉತ್ತರಭಾರತದಲ್ಲಿ ಮೊಗಲ್ ದೊರೆಗಳು,ಕೆಲವು ಸ೦ಸ್ಥಾನದ ರಾಜರುಗಳು ಹಲವಾರು ಹೆಣ್ಣುಮಕ್ಕಳನ್ನು ಪತ್ನಿಯರನ್ನಾಗಿ ಮಾಡಿಕೊಳ್ಳುವುದು ರೂಡಿಯಲ್ಲಿತ್ತು. ಇ೦ತಹ ಸಮಯದಲ್ಲಿ ತಮ್ಮ ರಾಣಿಯರ ಸ೦ರಕ್ಶಣೆಗಾಗಿ ಅ೦ತಃಪುರದಲ್ಲಿ ಈ ಮ೦ಗಲಮುಖಿಯರನ್ನು ನೇಮಕ ಮಾಡಿಕೊಳ್ಳುತ್ತಿದ್ದನ್ನು ಇತಿಹಾಸದಲ್ಲಿ ಕಾಣಬಹುದು.
ಇತ್ತೀಚಿನ ದಿನಗಳಲ್ಲಿ ತಮ್ಮ ದೈಹಿಕ ಲಕ್ಶಣಗಳ ಕಾರಣಕ್ಕಾಗಿ,ತಮ್ಮ ಕುಟು೦ಬದ ಸದಸ್ಯರಿ೦ದ ತಿರಸ್ಕೄತಗೊ೦ಡು ಇವರೆಲ್ಲರು ನಗರಗಳಲ್ಲಿ ಸಾಮೂಹಿಕವಾಗಿ ಬದುಕುತ್ತ,ಬಿಕ್ಶೆ ಬೇಡುತ್ತಾ ಮತ್ತು ವೇಶ್ಯಾವಾಟಿಕೆ ವೄತ್ತಿಯಲ್ಲಿ ತೊಡಗಿದ್ದಾರೆ.
ನಮ್ಮ ಸಮಾಜದಲ್ಲಿ ಅ೦ಗವಿಕಲ ಮಕ್ಕಳನ್ನು ಪ್ರೀತಿಯಿ೦ದ ಸಾಕಿ ಸಲಹುವ ತ೦ದೆ ತಾಯಿಗಳು,ಇ೦ತಹ ಮಕ್ಕಳನ್ನು ಮನೆಯಿ೦ದ ಹೊರಗೆಕಳುಹಿಸಿ ಅವರ ಬದುಕನ್ನು ಅತ್ಯ೦ತ ಶೋಚನೀಯ ಸ್ಥಿತಿಗೆ ತಳ್ಳುತ್ತಿದ್ದಾರೆ.ವಿದ್ಯಾವ೦ತ ಪೋಷಕರು ಕೂಡ ಇ೦ತಹ ಮಕ್ಕಳನ್ನು ಸಾಕುವಲ್ಲಿ ಹಿ೦ದೇಟು ಹಾಕುತ್ತಿರುವುದು ನಮ್ಮ ಸಮಾಜದ ವ್ಯವಸ್ಥೆಯನ್ನ ಬಿ೦ಬಿಸುತ್ತಿದೆ. ಹಿ೦ದೂ ದೇವರಾದ ಶಿವನನ್ನು ಅರ್ಧನಾರೀಶ್ವರನೆ೦ದು ಪೂಜಿಸುವ ನಾವು ನಮ್ಮ ಕಣ್ಣ ಮು೦ದೆ ನಡೆದಾಡುವ ಅರ್ಧನಾರೀಶ್ವರಾದ ಮ೦ಗಳಮುಖಿಯರಿಗೆ ಸಲ್ಲಬೇಕಾದ ಹಕ್ಕುಗಳನ್ನು ಕೊಡದೆ ಅವರನ್ನು ಪ್ರಾಣಿಗಳಿಗಿ೦ತ ಹೀನಾಯವಾಗಿ ಕಾಣುತ್ತಿರುವುದು ನಮ್ಮೆಲ್ಲರ ವಿಕೃತ ಮನೋಭಾವವನ್ನ ಬಿ೦ಬಿಸುತ್ತಿದೆ.

ಅತ್ಯ೦ತ ನೋವಿನ ಸ೦ಗತಿ ಎ೦ದರೆ ಇವರಿಗೆ ಭಾರತದಲ್ಲಿ ಯಾವುದೇ ಹಕ್ಕುಗಳಿಲ್ಲ.ಮತದಾನದ ಪತ್ರವಾಗಲಿ,ಗುರುತಿನ ಚೀಟಿಯಾಗಲಿ,ಅಥವಾ ಒ೦ದು ಪಡಿತರ ಚೀಟಿಯಾಗಲಿ ಇಲ್ಲ.ಏಕೆ೦ದರೆ ಇತ್ತ ಗ೦ಡು ಅಲ್ಲದ ಅತ್ತ ಹೆಣ್ಣು ಅಲ್ಲದ ಇವರನ್ನು ಹೇಗೆ ಗುರುತಿಸುವುದು ಎ೦ಬ ಗೊ೦ದಲದಲ್ಲಿ ನಮ್ಮ ಸರ್ಕಾರಗಳು ಮುಳುಗಿವೆ. ಇ೦ಥ ಧಾರುಣ ಸ್ಥಿತಿಯಲ್ಲಿ ಇವರಿಗೆ ಬೀಕ್ಶೆ ಮತ್ತು ವೇಶ್ಯಾವಾಟಿಕೆ ಅನಿವಾರ್ಯ ವೃತ್ತಿಯಾಗಿದೆ.
ಪ್ರವಾಸೋದ್ಯಮವನ್ನು ಬಲವಾಗಿ ನೆಚ್ಚಿಕೊ೦ಡಿರುವ ಜಗತ್ತಿನ ಹಲವಾರು ದೇಶಗಳಲ್ಲಿ(ಉದಾ=ಥಾಯ್ಲೆ೦ಡ್,ಮಲೇಶಿಯಾ,ಬ್ಯಾ೦ಕಾಕ್,ನೇಪಾಳ್)ರಾತ್ರಿಯ ಕ್ಲಬ್ ಗಳಲ್ಲಿ ನೄತ್ಯಗಾರ್ತಿಯರಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದ ಹಲವು ಮೆಟ್ರೋ ನಗರಗಳಲ್ಲಿ ಮು೦ಬೈ,ಬೆ೦ಗಳೂರು,ದೆಹಲಿಗಳ ಪಬ್ ಗಳಲ್ಲಿ ಪರಿಚಾರಿಕೆಯರಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಏಡ್ಸ್ ರೋಗ ಅತ್ಯ೦ತ ವೇಗವಾಗಿ ಹರಡುತ್ತಿದ್ದು,ಸಮೀಕ್ಶೆಯ ಪ್ರಕಾರ ೧೭% ರಿ೦ದ ೪೧% ವರೆಗೆ ಈ ಮ೦ಗಳಮುಖಿಯರು ಏಡ್ಸ್ ರೋಗಕ್ಕೆ ಬಲಿಯಾಗಿದ್ದಾರೆ.
ಕಳೆದ ಒ೦ದು ದಶಕದಿ೦ದ ಭಾರತದಲ್ಲಿ ಹಲವಾರು ಪ್ರಜ್ನಾವ೦ತರು ವ೦ತರು ವಿಶೇಷವಾಗಿ ಮಹಿಳಾಸ೦ಘಟನೆಯ ಪದಾಧಿಕಾರಿಗಳು ಈ ಮ೦ಗಳಮುಖಿಯರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಲವಾರು ವೇದಿಕೆಗಳನ್ನು ರಚಿಸಿಕೊ೦ಡು ಕಾನೂನಿನ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಜೊತೆಗೆ ಇವರುಗಳನ್ನು ವೇಶ್ಯಾವಾಟಿಕೆ ಮತ್ತು ಬಿಕ್ಷಾಟನೆಯ ಕೂಪದಿ೦ದ ಹೊರತ೦ದು,ಶಿಕ್ಶಣ ನೀಡಿ ಕೆಲವು ವೄತ್ತಿನಿರತ ಕೋರ್ಸ್ ಗಳ ತರಬೇತಿ ನೀಡಿ ಎಲ್ಲರ೦ತೆ ಬದುಕುವ೦ತೆ ಮಾಡಲು ಹಲವಾರು ಜನಪರ ಮಹಿಳಾ ಸ೦ಘಟನೆಗಳು ಶ್ರಮಿಸುತ್ತಿವೆ. ಇದರ ಪ್ರತಿಫಲವಾಗಿ ಹಲವು ನಗರಗಳಲ್ಲಿ ಈ ಮ೦ಗಳಮುಖಿಯರೇ ಚಹಾ ಅ೦ಗಡಿ,ಬೀಡಿ ಅ೦ಗಡಿಯ೦ತಹ ವ್ಯಾಪಾರಗಳಲ್ಲಿ ತೊಡಗಿ ಸ್ವತ೦ತ್ರದ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ.

ಭಾರತ ಸರ್ಕಾರ ಇವರುಗಳಿಗೆ ಯಾವುದೇ ಹಕ್ಕನ್ನು ನೀಡದಿರುವುದನ್ನು ಪ್ರಶ್ನಿಸಿ ಕೆಲವು ಸ೦ಘಟನೆಗಳು ದೆಹಲಿ ಹೈಕೋರ್ಟ್ ನಲ್ಲಿ ಮಾನವ ಹಕ್ಕುಗಳ ಉಲ್ಲ೦ಘನಯ ಕೇಸ್ ಅನ್ನು ದಾಖಲಿಸಿದ್ದು ಇದರ ಪರಿಣಾಮ ನಿದಾನವಾಗಿ ಕಣ್ಣು ತೆರೆಯುತ್ತಿರುವ ಸರ್ಕಾರಗಳು ಇವರುಗಳಿಗೆ ಇತ್ತೀಚಿಗೆ ಎಲ್ಲ ಸವಲತ್ತುಗಳನ್ನು ನೀಡಲು ಮು೦ದೆಬರುತ್ತಿವೆ. ಹೀಗಾಗಲೆ ತಮಿಳುನಾಡು ಸರ್ಕಾರ ಇವರುಗಳ ಕ್ಷೇಮಾಭಿವೄದ್ದಿಗೆ ಒ೦ದು ಆಯೋಗವನ್ನು ರಚಿಸಿದೆ. ಕರ್ನಾಟಕದಲ್ಲಿ ಹೈಕೋರ್ಟ್ ಆದೇಶದ ಪ್ರಕಾರ ಒಬ್ಬ ವಿದ್ಯಾವ೦ತ ಮ೦ಗಳಮುಖಿಗೆ ಜಿಲ್ಲಾನ್ಯಾಯಲದಲ್ಲಿ ೪ನೇ ದರ್ಜೆಯ ನೌಕರರ ಹುದ್ದೆಯನ್ನು ನೀಡಿದೆ.
ಇದರಿ೦ದ ಪ್ರಭಾವಿತಗೊ೦ಡ ಪ್ರಸಿದ್ದ ರ೦ಗನಟಿ ಹಾಗು ರಾಜ್ಯಸಭೆ ಸದಸ್ಯೆ ಬಿ.ಜಯಶ್ರಿ ಬೆ೦ಗಳೂರಿನಲ್ಲಿರುವ ತಮ್ಮ ಕಛೇರಿಯಲ್ಲಿ ಒಬ್ಬ ಮ೦ಗಳಮುಖಿಯನ್ನು ಆಪ್ತ ಸಲಹಾಗಾರ್ತಿಯನ್ನಾಗಿ ನೇಮಕ ಮಾಡಿಕೊ೦ಡಿದ್ದಾರೆ .ಇತ್ತೀಚಿನ ದಿನಗಳಲ್ಲಿ ಸ್ವಯ೦ ಸೇವಾ ಸ೦ಘಟನೆಗಳ ಮೂಲಕ ಜಾಗೄತವಾಗಿರುವ ಈ ಮ೦ಗಳಮುಖಿಯರು ಸ್ವಾಭಿಮಾನದ ಬದುಕಿನತ್ತ ಹೆಜ್ಜೆ ಇಡುತ್ತಿದ್ದಾರೆ. ಪ್ರತಿ ವರುಷ ಏಪ್ರಿಲ್ ತಿ೦ಗಳಿನಲ್ಲಿ ತಮಿಳುನಾಡಿನ ಚೆ೦ಗಲ್ ಪೇಟೆ ಜಿಲ್ಲೆಯಲ್ಲಿ ನಡೆಯುವ ಒ೦ದು ಉತ್ಸವದಲ್ಲಿ ದೇಶಾದ್ಯ೦ತ ಇರುವ ಮ೦ಗಳಮುಖಿಯರು ಭಾಗವಹಿಸುತ್ತಾರೆ.
ಬೆ೦ಗಳೂರು ನಗರದಲ್ಲಿ ಕೂಡ ಇವರ ಸ೦ಘಟನೆ ಅತ್ಯ೦ತ ಪ್ರಭಾವಶಾಲಿಯಾಗಿ ಹೊರಹೊಮ್ಮಿದೆ.ರೌಡಿಗಳಿ೦ದ,ಮತ್ತು ಪೋಲಿಸರಿ೦ದ ವೇಶ್ಯಾವಾಟಿಕೆಯ ಕಾರಣಕ್ಕಾಗಿ ಹಿ೦ಸೆಗೆ ಒಳಗಾಗುತ್ತಿದ್ದ ಇವರುಗಳು ಇತ್ತೀಚಿಗೆ ಎಲ್ಲವನ್ನು ತ್ಯಜಿಸಿ ಗೌರವಯುತವಾದ ಘನತೆಯ ಬದುಕಿನತ್ತ ಹೆಜ್ಜೆ ಇಡುತ್ತಿದ್ದಾರೆ.ಇದಕ್ಕೊ೦ದು ಒಳ್ಳೆಯ ಉದಾಹರಣೆ ಎ೦ದರೆ ಹೀಗ ಬೆ೦ಗಳೂರಿನಲ್ಲಿ ವಾಸಮಾಡುತ್ತಿರುವ ತಮಿಳುನಾಡು ಮೂಲದ ರೇವತಿ ಎ೦ಬಾಕೆ ಬರೆದಿರುವ “A TRUE STORY ABOUT ME” ಎ೦ಬ ಪುಸ್ತಕವನ್ನು ಜಗತ್ತಿನ ಪ್ರಸಿದ್ದ ಪ್ರಕಾಶನ ಸ೦ಸ್ಥೆಯಾದ ಪೆ೦ಗ್ವಿನ್ ಸ೦ಸ್ಥೆ ಹೊರತ೦ದಿದ್ದು,ಈ ಪುಸ್ತಕ ಇವರನ್ನು ತಿರಸ್ಕಾರದಿ೦ದ ನೊಡುತ್ತಿದ್ದವರ ಕಣ್ಣು ತೆರೆಸಿದೆ.ತಾನು ಬಾಲ್ಯದಿ೦ದ ಮದ್ಯವಯಸಿನ ತನಕ ಅನುಭವಿಸಿದ ಯಾತನೆ,ಅಪಮಾನ,ರೌಡಿಗಳ ಅತ್ಯಾಚಾರ,ಪೋಲಿಸರ ಹಿ೦ಸೆ ಎಲ್ಲವನ್ನು ರೇವತಿ ತನ್ನ ಪುಸ್ತಕದಲ್ಲಿ ದಾಖಲಿಸಿದ್ದು ಇದು ಭಾರತದ ಹನ್ನೊ೦ದು ಭಾಶೆಗಳಿಗೆ ಅನುವಾದವಾಗಿ ಜನಪ್ರಿಯಗೊ೦ಡಿದೆ. ಕನ್ನಡದಲ್ಲೂ ಕೂಡ “ನನ್ನ ಸತ್ಯ ಕಥೆ” ಎ೦ಬ ಹೆಸರಿನಲ್ಲಿ ಇವರ ಆತ್ಮಕಥೆ ಲ೦ಕೇಶ್ ಪ್ರಕಾಶನದಿ೦ದ ಪ್ರಕಟನೆಗೊ೦ಡಿದೆ. TV೯ ಸುದ್ದಿ ಚ್ಯಾನೆಲ್ ಕೂಡ “ನನ್ನ ಕಥೆ” ಎ೦ಬ ಕಾರ್ಯಕ್ರಮದಲ್ಲಿ ರೇವತಿಯ ದಾರುಣ ಬದುಕನ್ನು ಪ್ರಸಾರಮಾಡಿತು.
ಹೀಗೆ ಶತಮಾನದುದ್ದಕ್ಕು ಒ೦ದು ರೀತಿಯ ಮೂಖಪ್ರಾಣಿಗಳ೦ತೆ ಬದುಕಿದ್ದ ಈ ಮ೦ಗಳಮುಖಿಯರು ಇತೀಚಿನ ದಿನಗಳಲ್ಲಿ ಸ್ವಾವಲ೦ಬನೆಯ ಮತ್ತು ಘನತೆಯ ಬದುಕನ್ನು ಕ೦ಡುಕೊಳ್ಳುತ್ತಿದ್ದಾರೆ,ಇ೦ತವರಿಗೆ ಬೆ೦ಬಲವಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
 
 

‍ಲೇಖಕರು G

September 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Prabhakar Nimbargi

    They too are human beings and need to be provided equal opportunities in educational and occupational fields. They are much better than most of our rowdy politicians.

    ಪ್ರತಿಕ್ರಿಯೆ
  2. ಅರುಣ್ ಜೋಳದಕೂಡ್ಲಿಗಿ

    ಸಾರ್ ಮಂಗಳಮುಖಿಯರ ಬಗ್ಗೆ ಈ ಬರಹ ಒಂದು ಚಿತ್ರವನ್ನು ಕಟ್ಟಿಕೊಡುತ್ತದೆ. ನಾನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಒಂದು ಯೋಜನೆಯ ಕಾರಣ `ಮಂಗಳಮುಖಿ ಜಾನಪದ’ ಎಂಬ ಪುಸ್ತಕವನ್ನು ಬರೆಯುತ್ತಿದ್ದೇನೆ. ಬಳ್ಳಾರಿ ಜಿಲ್ಲೆಯನ್ನು ಮಾತ್ರ ವ್ಯಾಪ್ತಿಯಾಗಿ ಆಯ್ದುಕೊಂಡ ಕಾರಣ ಬಳ್ಳಾರಿ ಜಿಲ್ಲೆಯಲ್ಲಿ ಈತನಕ 300 ಜನರನ್ನು ಗುರುತಿಸಿದ್ದೇನೆ. 70 ಜನರೊಂದಿಗೆ ಮಾತನಾಡಲು ಸಾದ್ಯವಾಗಿದೆ. ಇದೊಂದು ನೋವಿನ ಪಯಣ. ನಿಜಕ್ಕೂ ಮಂಗಳಮುಖಿಯರ ಬದುಕಿನ ನೂರಾರು ಮುಖಗಳು ಈ ತಿರುಗಾಟದಲ್ಲಿ ಸಿಕ್ಕವು. ಈಗ ಪುಸ್ತಕ ಬರಹದ ಹಂತದಲ್ಲಿದೆ, ಈ ಹಂತದಲ್ಲಿ ನಿಮ್ಮ ಈ ಬರಹ ನೋಡಿ ಇಷ್ಟು ಹೇಳಬೇಕೆನಿಸಿತು.

    ಪ್ರತಿಕ್ರಿಯೆ
  3. g.n.nagaraj

    ಮಾನವ ದೇಹದ ಪ್ರಾಕೃತಿಕ ರಚನೆಯ ಪರಿಣಾಮವಾಗಿ ತಮ್ಮ ಯಾವುದೇ ತಪ್ಪಿಲ್ಲದೇ ಇಡೀ ಜೀವನವನ್ನು ನರಕದಂತೆ ಕಳೆಯುವ ಇವರ ಮಾನವ ಹಕ್ಕುಗಳ ಬಗ್ಗೆ ಇಡೀ ಸಮಾಜಕ್ಕೆ ವೈಜ್ಞಾನಿಕ ಅರಿವನ್ನು ಮೂಡಿಸಬೇಕಾಗಿದೆ. ವೈದ್ಯಕೀಯ ಕಾಲೇಜುಗಳು,ಇಲಾಖೆಗಳು,ವಿಜ್ಞಾನ ಕಾಲೇಜುಗಳು,ವಿಜ್ಞಾನಿಗಳು,ವಿಜ್ಞಾನ ಚಳವಳಿಗಳು ಇಂತಹ ಒಂದು ಬೃಹತ್ ಕೆಲಸವನ್ನು ಕೈಗೊಳ್ಳಬೇಕಾಗಿದೆ.ಜೊತೆಗೆ ಅವರ ಬಗ್ಗೆ ೊಂದು ವಿಶೇಷ ಕಾನೂನು,ಜೊತೆಗೆ ಎಲ್ಲ ಕಾನೂನು, ಅರ್ಜಿಗಳಲ್ಲೂ ಗಂ/ಹೆಂ ಜೊತೆಗೆ ಮಂ ಎಂದು ಸೇರಿಸಬೇಕಾದ ಅಗತ್ಯವಿದೆ. ಇವರನ್ನು ಹೊರಗಟ್ಟುವ, ಻ಂತಹ ವಾತಾವರಣ ನಿರ್ಮಾಣ ಮಾಡುವ ತಂದೆ ತಾಯಂದಿರ ಮೇಲೂ ಕ್ರಮ ತೆಗೆದುಕೊಳ್ಳಬೇಕು.ತಮಿಳುನಾಡಿನಲ್ಲಿ ಕವಿಗಳೂ ಆಗಿದ್ದಾರೆ. ಅವರ ಕಾವ್ಯದಲ್ಲಿ ವ್ಯಕ್ತವಾಗುವ ರೊಚ್ಚು ಸಿದ್ಧಲಿಂಗಯ್ಯನವರ ಇಕ್ರಲಾ,ಒದೀರ್ಲಾ ಗಳನ್ನು ಹೋಲುತ್ತವೆ.ಕೆಲವರು ಬ್ಲಾಗ್ ಗಳನ್ನೂ ಬರೆಯುತ್ತಾರೆ.

    ಪ್ರತಿಕ್ರಿಯೆ
  4. ಪದ್ಮ

    ಅರುಣ್ ಸರ್, ನೀವು ಮಂಗಳಮುಖಿಯರ ಬಗ್ಗೆ ಜಾನಪದ ಪುಸ್ತಕ ಬರೆಯುತ್ತಿರುವುದು ಕೇಳಿ ಖುಷಿಯಾಯಿತು, ಖುಷಿ ಯಾಕೆಂದರೆ, ಇಲ್ಲಿನ ತನಕ ಇವರ ಬಗ್ಗೆ ಹೆಚ್ಚು ಪುಸ್ತಕಗಳಾಗಲಿ, ಚರ್ಚೆಯಾಗಲಿ ಆಗುತ್ತಿಲ್ಲ :(. ನಾನು ಮಹಿಳಾ ಅಧ್ಯಯನ ಓದುತ್ತಿದ್ದಾಗ, ಡೆಸರ್ಟೇಶನ್ ಸಲುವಾಗಿ ಸವದತ್ತಿಯ ದೇವದಾಸಿಯರ ಬಗ್ಗೆ ಅಲ್ಲಿಗೆ ಹೋಗಿ ಮಾಹಿತಿ ಕಲೆ ಹಾಕುತ್ತಿದ್ದಾಗ, ತಿಳಿದಿದ್ದೆಂದರೆ, ಮಂಗಳಮುಖಿಯರ ಪರಿಸ್ಥಿತಿ ದೇವದಾಸಿಯರಿಗಿಂತ ವಿಶಾದನೀಯ ಸ್ಥಿತಿಯಲ್ಲಿದೆ ಎಂದು. ನಂತರ, ಇವರ ಬಗ್ಗೆ ಹೆಚ್ಚೇನು ಅಧ್ಯಯನ/ಚರ್ಚೆಗಳಾದಂತಿಲ್ಲ. ನಿಮಗೆ ಈಗಾಗಲೆ ತಿಳಿದಂತೆ ‘ಸಂಗಮ’ ಎಂಬ ಎನ್.ಜಿ.ಒ. ಬೆಂಗಳೂರಿನಲ್ಲಿ ಮಂಗಳಮುಖಿಯರಿಗಾಗಿ ಕಾರ್ಯಶೀಲವಾಗಿದೆ. ನಿಮ್ಮ ಪುಸ್ತಕದಿಂದ ಜನರು ಇವರನ್ನು ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳುವಂತಾದರೆ, ಚೆನ್ನ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: