ಜುಗಾರಿ ಕ್ರಾಸ್: ಲೇಖಕರಿಗೆ ರಾಜಕೀಯದಲ್ಲಿ ಪಾಲುಗೊಳ್ಳುವ ಎಲ್ಲ ಅಧಿಕಾರವಿದೆ

‘ಅವಧಿ’ಯಲ್ಲಿ  ಪತ್ರಕರ್ತ ಜಿ ಪಿ ಬಸವರಾಜು ಅವರು ಚುನಾವಣೆಯನ್ನ್ನು ಹಿನ್ನೆಲೆಯಾಗಿಟ್ಟುಕೊಂಡು ‘ಬರಹಗಾರರ ಹೊಣೆಗಾರಿಕೆ’ ಎನ್ನುವ ಅಂಕಣವನ್ನು ಬರೆದಿದ್ದರು. ಆ ಲೇಖನ ಇಲ್ಲಿದೆ. ಅದಕ್ಕೆ ನಾಡಿನ ಪ್ರಮುಖ ಚಿಂತಕರು ಇಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆಗೂ ಸ್ವಾಗತ

ಪಂಡಿತಾರಾಧ್ಯ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತಹಾಕುವಂತೆ ಮನವಿ ಮಾಡಿದ ಚಿಂತಕರ ಲೇಖಕರಲ್ಲಿ ನಾನೂ ಒಬ್ಬ. ಇದರ ಉದ್ದೇಶ ಗುಪ್ತವಾಗಿಲ್ಲ, ಇದ್ದುದು ಅತಂತ್ರ ವಿಧಾನಸಭೆಯ ಅಸಹಾಯಕತೆಯಿಂದ ಬಿಡುಗಡೆ ಪಡೆಯುವ ಸಾಧ್ಯತೆಗಳಲ್ಲಿ ಸಂಭಾವ್ಯ ಮಾರ್ಗದ ಆಯ್ಕೆ. ಇದನ್ನು ಅರ್ಥಮಾಡಿಕೊಳ್ಳದೆ ವರ್ತಿಸಿದರೆ ಈಗ ಗೆದ್ದವರ ವಿರುದ್ಧವೂ ಇದೇ ಅಸ್ತ್ರ ಪ್ರಯೋಗಿಸುವುದು ಅನಿವಾರ್ಯ.
ಪುಡಿ ಪಕ್ಷಗಳನ್ನು ಅರಿಸಿ ಅವರನ್ನು ಸಹಿಸಿಕೊಳ್ಳುವ ದುಃಸ್ಥಿತಿಯಿಂದ ಮುಕ್ತರಾಗಲು ಮತದಾರರು ಎರಡು ಪಕ್ಷಗಳ ವ್ಯವಸ್ಥೆಯ ದಿಕ್ಕಿನಲ್ಲಿ ಸಾಗುವ ಸೂಚನೆ. ಕರ್ನಾಟಕದ ಮತದಾರರು ಮತದಾನದ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ದೊಡ್ಡಸಾಧನೆ ಮಾಡಿಲ್ಲದಿರಬಹುದು. ಆದರೆ ಯಶಸ್ವಿಯಾಗಿ ಉತ್ತೀರ್ಣರಾಗಿರುವುದಕ್ಕೆ ಅವರನ್ನು ಅಭಿನಂದಿಸಲೇ ಬೇಕು. ರಾಜಧರ್ಮ ಪಾಲನೆ, ರಾಜ ನಿರ್ಮಾಪಕ, ನಾಯಕ, ಮುಂದಾಳು, ಮುಖಂಡ ಇತ್ಯಾದಿ ರಾಜಶಾಹಿ ಪರಿಭಾಷೆಯೂ ಇಲ್ಲವಾಗಿ ಜನಪ್ರತಿನಿಧಿ ಎಂಬ ಪ್ರಜ್ಞಾಪೂರ್ವಕ ಅರಿವು ಪ್ರಜೆ ಮತ್ತು ಪ್ರತಿನಿಧಿ ಇಬ್ಬರಲ್ಲಿಯೂ ಆಳಕ್ಕೆ ಇಳಿಯಬೇಕು.
ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಫಿ ಗೌರವಿಸುವ ಎಡ ಮತ್ತು ಬಲಪಂಥೀಯರಿಗೂ ಅವಕಾಶ ನೀಡಿದ್ದಾರೆ. ವಿವೇಚನೆಯಿಂದ ಮತ ಚಲಾಯಿಸುವಂತೆ ಮತದಾರರಿಗೆ ಮಾಡಿದ ಮನವಿಯ ಹಿಂದೆ ಗುಪ್ತ ಅಸೆಗಳಿವೆ ಎನ್ನುವುದು ಮನವಿಮಾಡಿದವರಿಗೆ ಮಾತ್ರವಲ್ಲ ಪ್ರಜ್ಞಾವಂತ ಮತದಾರರಿಗೂ ಮಾಡಿದ ಅಪಮಾನ.
**

ವಸಂತ್

Our literary people have done right thing in supporting Congress. There was no alternative in Karnataka. Only option to ousted communal forces was to extend support to Congress. They did that. People in academia and literary world should speak up at the time of crisis.
Karnataka was facing major political crisis, there was no accountability or responsibility from the ruling party at that time. They had taken people for a ride. They misused all the machinery to make money and favour their kith and kin including religious heads. It was major responsibility for the people of Karnataka to speak up and throw them out of the power. Our writers have done that.
They should speak up when congress government do misdeeds. It is moral right of the writers. Otherwise people will forget them and move on. Writers should have a political perceptions of their own. Lankesh all along in his career did this. Pragathiranga was a example for that.
**

ನಾ ದಿವಾಕರ

ಈ ವಿಷಯ ಕುರಿತು ಅವಧಿಯಲ್ಲಿ ನನ್ನ ಲೇಖನ ಪರ್ಯಾಯ ರಾಜಕಾರಣದ ಘಟಶ್ರಾದ್ಧ ಓದಿ.
**

ಉದಯಕುಮಾರ್ ಹಬ್ಬು

ಜನರಿಗೆ ಕುದುರೆ ಜೂಜಿನ ರಾಜಕಾರಣ ಹೇಸಿಗೆಯನ್ನುಂಟುಮಾದಿತ್ತು. ಸ್ಥಿರ ಸರಕಾರ ಬೇಕೆಂಬ ಮನಸ್ಸಿನಿಂದ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿದ್ದರೆ. ಭ್ರಷ್ಟಾಚಾರ. ಅಪರಾಧೀಕರಣ ಎಲ್ಲ ಪಕ್ಷದಲ್ಲಿಯೂ ಇವೆ. ಜನರು ಬುದ್ಧಿವಂತರು. ತಮಗೆ ಬೇಕಾದ ಸರಕಾರವನ್ನು ಆಯ್ಕೆ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕೋಮುವಾದಿ ರಾಜಕೀಯವನ್ನು ಜನರು ಸಹಿಸಲಿಲ್ಲ.
ಲೇಖಕರಿಗೆ ರಾಜಕೀಯದಲ್ಲಿ ಸಕ್ರಿಯ ಪಾಲುಗೊಳ್ಳುವ ಎಲ್ಲ ಅಧಿಕಾರವಿದೆ. ಕೋಮು ಗಲಭೆಯೆಂಬ ವಿಷಸರ್ಪವನ್ನು ನಿರ್ನಾಮ ಮಾಡುವುದೇ ಕೋಮು ಸೌಹಾರ್ದವನ್ನು ಜಾರಿಗೆ ತರಬೇಕೆಂಬುದೇ ಸಾಹಿತಿಗಳ ಉದ್ದೇಶವಾಗಿತ್ತು. ಹಾಗಾಗಿ ಜಂರ ಮನಸ್ಸು ಸಾಹಿತಿಗಳ ಮನಸ್ಸು ಒಂದಾದರೆ ಅದಕ್ಕೆ ನಾವು ಸಾಹಿತಿಗಳನ್ನು ಅಭಿನಂದಿಸಬೇಕಿದೆ. ಯಾರಿಗೆ ಯಾವ ಲಾಭ ಎನ್ನುವುದನ್ನು ಕಾಲನೆ ನಿರ್ಧರಿಸಲಿದ್ದಾನೆ.
ಎಡಪಂಥೀಯ ಪಕ್ಷವು ಜನಮಾನಸರಲ್ಲಿ ಇನ್ನೂ ಜಾಗವನ್ನು ಪಡೆಯಬೇಕಿದೆ. ಜನರು ಆ ಪಕ್ಷವನ್ನು ಇಷ್ಟಪಡುವಂತೆ ಎಡಪಂಥೀಯ ಪಕ್ಷವು ಪ್ರಯತ್ನಿಸಲಿ . ಲೇಖಕರ ಮೇಲೆ ಗೂಬೆ ಕೂಡಿಸುವದನ್ನು ಇನ್ನಾದರೂ ನಿಲ್ಲಿಸಿ. ಉದಯಕುಮಾರ ಹಬ್ಬು, ಕಿನ್ನಿಗೋಳಿ

ಎಂ.ಆರ್. ದತ್ತಾತ್ರಿ

ಕಾಂಗ್ರೇಸೋ ಬಿಜೆಪಿಯೋ ಎನ್ನುವ ನಮ್ಮ ಯೋಚನೆಯಲ್ಲೇ ತೊಂದರೆಯಿದೆ. ಈ ವಿಚಾರವಾಗಿ ಒಬ್ಬ ಓದುಗರು ಪ್ರಜಾವಾಣಿಯ ವಾಚಕರವಾಣಿಗೆ ಒಂದು ಪತ್ರವನ್ನು ಬರೆದಿದ್ದರು (ಅವರ ಹೆಸರನ್ನು ಮರೆತೆ). ಪಕ್ಷವನ್ನು ನೋಡದೆ ಅಭ್ಯರ್ಥಿಯ ಗುಣಗಳನ್ನು ಅವಲೋಕಿಸಿ ಮತ ಹಾಕಿ ಎನ್ನುವುದು ಅವರ ಪತ್ರದ ಸಾರಾಂಶ. ಅದನ್ನು ನಾನು ಒಪ್ಪುತ್ತೇನೆ, ಕಾಂಗ್ರೆಸೋ ಬಿಜೆಪಿಯೋ ಎನ್ನುವ ವಾದವನ್ನಲ್ಲ.
ಈ ರೀತಿಯ ಪಕ್ಷಪರವಾದವೇ, ಅಭ್ಯರ್ಥಿಯನ್ನು ಬಿಟ್ಟು ಪಕ್ಷವನ್ನು ಗೆಲ್ಲಿಸುವ ವಾದವೇ, ಶಿವರಾಮ ಕಾರಂತರನ್ನು ಸೋಲಿಸಿದ್ದು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಅಭ್ಯರ್ಥಿಗಳಿಗೆ ಮತವನ್ನು ನೀಡಿ ಆರಿಸುತ್ತೇವೆಯೇ ಹೊರತು ಪಕ್ಷವನ್ನಲ್ಲ. ಎರಡೂ ಪಕ್ಷಗಳು ಕ್ರಿಮಿನಲ್ ಹಿನ್ನೆಲೆಯುಳ್ಳ ಅನೇಕರನ್ನು ಚುನಾವಣೆಗೆ ನಿಲ್ಲಿಸಿದ್ದರಿಂದ ಪಕ್ಷ ಬೆಂಬಲಿಸಿದಲ್ಲಿ ಪರೋಕ್ಷವಾಗಿ ಒಂದು ಗುಂಪಿನ ಕ್ರಿಮಿನಲ್‍ಗಳನ್ನೂ ಬೆಂಬಲಿಸಿದಂತಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.
**

ಓದುಗ, ಬೆಂಗಳೂರು

ಸಾಹಿತಿಗಳು ರಾಜಕಾರಣ ಮಾಡಬಾರದು ಎನ್ನುವುದು ಸರಿಯಲ್ಲ, ಆದರೆ ಅವರು ಆ ರಾಜಕಾರಣಕ್ಕೆ ನ್ಯಾಯಮಾಡಬೇಕಾದುದು ಬಹಳ ಅನಿವಾರ್ಯ. ಕೇವಲ ಬೆಂಬಲಿಸಿ ಎಂದು ಜನತೆಗೆ ಕರೆಕೊಟ್ಟು, ಕಣ್ಣಮುಂದೆ ನಡೆಯುವ/ ನಡೆಯಬಹುದಾದ ಎಲ್ಲಾ ತರಹದ ರಾಜಕೀಯ ಕೆಡುಕುಗಳನ್ನು ಕಂಡು ಸುಮ್ಮನಿರುವುದು ಖಂಡಿತಾ ಸರಿಯಲ್ಲ; ಬದಲಾಗಿ ಉಗ್ರವಾಗಿ ಖಂಡಿಸಬೇಕಾದುದು “ಆ” ರಾಜಕಾರಣದ ಕರ್ತವ್ಯವಾಗಬೇಕು.
ಅದೇ ರೀತಿ ಪೂರ್ವಸಿದ್ಧತೆಯೆಂಬಂತೆ, ಸಾಹಿತಿಗಳು ತಮ್ಮ ಸ್ವಲ್ಪ ಸಾಹಿತ್ಯ ಶ್ರಮ ಹಾಗೂ ಪಾಂಡಿತ್ಯಗಳನ್ನು ರಾಜಕೀಯದ ಬಂಡವಾಳವಾಗಿರುವ ಸಾಮಾಜಿಕ ಕೆಡುಕುಗಳನ್ನು ನಿರ್ಮೂಲನಮಾಡಲು ವಿನಿಯೋಗಿಸಿದರೆ, ರಾಜಕೀಯದ ಕೊಳಚೆಗಿಳಿಯದೆ ತಮ್ಮ ಮಾತನ್ನು ಜನರಿಗೆ ತಲುಪಿಸಬಹುದೆಂದನಿಸುತ್ತದೆ.

ನಾಗರಾಜ್ ಹೆತ್ತೂರ್

ಯಾರ್ಯಾರು ಏನೇನು ಆಮಿಷಗಳನ್ನು ಇಟ್ಟುಕೊಂಡು ಸಾಹಿತಿಗಳು ಕಾಂಗ್ರೆಸ್ ಪರ ಪ್ರಚಾರ ಮಾಡಿದರೋ ಅದು ಸೆಕೆಂಡರಿ. ಆದರೆ ಪ್ರಜಾಪ್ರಭುತ್ವದ ಉಳಿವಿಗೆ ಸಾಹಿತಿಗಳು ಮುಂದಾಗಿ ಕನಿಷ್ಟ ದನಿ ಎತ್ತಿದ್ದಕ್ಕೆ ಹ್ಯಾಟ್ಸ್ ಎನ್ನಲೇಬೇಕು. ಆದರೆ ಅವರ ಕೆಲಸ ಮಾಡಬೇಕು. ಮತ್ತೊಬ್ಬರು ಸಿದ್ದಲಿಂಗಯ್ಯನವರಂತೆ ಆಗದಿದ್ದರೆ ಸಾಕು. ಯಡಿಯೂರಪ್ಪನನ್ನು ಬಸವಣ್ಣನಿಗೆ ಹೋಲಿಸಿದಂತೆ, ಸಿದ್ದರಾಮಯ್ಯನನ್ನು ಆಧುನಿಕ ಕನಕದಾಸ ಎಂಥಲೋ ದೇವರನ್ನಾಗಿ ಮಾಡಿದರೆ ಕಷ್ಟ.
ರಾಜಕೀಯದ ಜಂಜಾಟದಲ್ಲಿ ಸಿದ್ದಲಿಂಗಯ್ಯನವರು ಬರವಣಿಗೆಯನ್ನೇ ಮರೆತುಬಿಟ್ಟಂತಿದೆ. ಏನು ಮಾಡುವುದು.. ಆದರೂ ನಮ್ಮ ಸಾಹಿತಿಗಳು ರಾಜ್ಯ ರಾಜಕಾರಣದ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಬಾಯಿ ಬಿಟ್ಟಿದ್ದಾರೆ. ಒಳ್ಳೆಯ ಬೆಳವಣಿಗೆ. ಸಂವಿಧಾನದ ವಿರುದ್ಧ ಕೆಲಸ ಮಾಡುವ ಮಾಡುವ ಹಿತಾಸಕ್ತಿಗಳ ವಿರುದ್ಧ ಇದೊಂದು ಬೆಳವಣಿಗೆ ಅಗತ್ಯವಿತ್ತು. ಸಾಹಿತಿಗಳು ಹೇಳುವ ಮಾತುಗಳನ್ನು ಕೇಳುವವರೂ ಇದ್ದಾರೆ.
ಸಾಹಿತಿಗಳು ಕೇವಲ ಬರೆದುಕೊಂಡು ಕುಳಿತರೆ ಪ್ರಯೋಜನವಿಲ್ಲ. ಅಂತಹ ಸಂದರ್ಭದಲ್ಲಿ ಅವರ ಪಾತ್ರ ಮಹತ್ವದ್ದು. ಆದರೆ ಸಂಬಂಧವಿಲ್ಲದ ಅಧಿಕಾರದ ಬಗ್ಗೆ ಹಪಾಹಪಿ ಬೇಡ.ಸಾಹಿತಿಗಳು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲಿ….ಮತ್ತು ಬರೆವಣಿಗೆ ಮೂಲಕ ಎಚ್ಚರಿಸುತ್ತಲೇ ಇರಲಿ….

ಡಾ  ಬಿ ಆರ್ ಸತ್ಯನಾರಾಯಣ

* ತಮ್ಮ ಗುಪ್ತ ಕನಸು-ಹಿತಾಸಕ್ತಿಗಳನ್ನು ಹೊಟ್ಟೆಯಲ್ಲಿಟ್ಟುಕೊಂಡ ಬೆಂಗಳೂರು-ಮೈಸೂರು ಮೂಲದ, ಸಿದ್ಧರಾಮಯ್ಯಪರ ಪ್ರಗತಿಪರರಿಗೆ ಮಾತ್ರ ಕಾಂಗ್ರೆಸ್ ಅನಿವಾರ್ಯ ಆಯ್ಕೆಯಾಗಿದೆ.
* ಕಾಂಗ್ರೆಸ್ ಪರವಾದ ವೋಟಿನ ಕರೆಕೊಟ್ಟ ಬರಹಗಾರರು ಮತ್ತು ಚಿಂತಕರ ಪೈಕಿ ಯಾರ್ಯಾರಿಗೆ ಯಾವ ಯಾವ ಬಗೆಯ ವೈಯಕ್ತಿಕ ಗುಪ್ತ ಆಸೆಗಳಿದ್ದವು ಅಥವಾ ಇವೆ ಎಂಬುದು ಬಹಿರಂಗವಾಗಲು ಹೆಚ್ಚು ಕಾಲ ಕಾಯಬೇಕಾಗಿಲ್ಲ.
ನಿಮ್ಮ ಈ ಅಭಿಪ್ರಾಯಗಳು ಸಕಾರಣವಾಗಿಯೇ ಇವೆ. ಎರಡನೆಯ ಅಭಿಪ್ರಾಯಕ್ಕೆ ಈಗಾಗಲೇ ಒಂದೊಂದಾಗಿ ಸಾಕ್ಷಿಗಳು ಸಿಗಲಾರಂಬಿಸಿವೆ. (ಮಗನ ಮೇಲೆ FIR ಹಾಕಿದರೆಂಬ ಕಾರಣಕ್ಕೆ ಒಬ್ಬ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿರುವ ಬಗ್ಗೆ ಇದುವರೆಗೆ ಯಾವೊಬ್ಬ ಸಾಹಿತಿ ಚಿಂತಕರೂ ಧ್ವನಿ ಎತ್ತಿಲ್ಲ. ತಪ್ಪು ಮಾಡಿದಾಗ ತಿದ್ದುವ ಜನರು ಸಿದ್ಧರಾಮಯ್ಯನವರ ಸುತ್ತ ಇಲ್ಲದಿದ್ದಲ್ಲಿ, ಇವರಿಗೂ ಯಡಿಯೂರಪ್ಪನವರಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಈ ಘಟನೆಯನ್ನು, ಮಾನ್ಯ ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರರು ಹಾಗೂ ಹೊಸ ಅಡ್ವಕೇಟ್ ಜನರಲ್ ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೊ ಗೊತ್ತಿಲ್ಲ)
ಒಬ್ಬ ಬರಹಾಗರ ಪಕ್ಷಾತೀತವಾಗಿ, ಜಾತ್ಯತೀತವಾಗಿ ಇದ್ದರೆ ಸಾಹಿತ್ಯಕ ಲೋಕ ಆರೋಗ್ಯವಾಗಿರುತ್ತದೆ ಎಂದು ಭಾವಿಸಿರುವ ಓದುಗರಲ್ಲಿ ನಾನೂ ಒಬ್ಬ. ಆದರೆ ಕರ್ನಾಟಕದ ಪರಿಸ್ಥಿತಿಯಲ್ಲಿ ಬರಹಗಾರರಿಗೆ (ಎಲ್ಲರಿಗೂ ಅಲ್ಲ) ಕಾಂಗ್ರೆಸ್ ಅನಿವಾರ್ಯ ಅನ್ನಿಸಿರಬೇಕು. ಅದನ್ನು ವ್ಯಕ್ತಪಡಿಸಲು ಅವರು ಸ್ವತಂತ್ರರೂ ಕೂಡ. ಅದನ್ನು ಭಾಷಣದಲ್ಲೊ, ವಾಚಕರವಾಣಿಯಲ್ಲೊ ಪ್ರಸ್ತಾಪಿಸಿದ್ದರೆ ಸಾಕಿತ್ತು. ಆದರೆ, ದಿನಪತ್ರಿಕೆಗಳಲ್ಲಿ ಅಂತಹುದೊಂದು ತ್ರಿವರ್ಣದ ಜಾಹಿರಾತು ಕರ್ನಾಟಕದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಜಾಹಿರಾತು ವೆಚ್ಚ ಲಕ್ಷಗಟ್ಟಲೆ ಇರುತ್ತದೆ. ಅಷ್ಟೊಂದು ಹಣವನ್ನು ಭರಿಸುವ ಶಕ್ತಿ ಕನ್ನಡ ಬರಹಗಾರರಿಗೆ ಮತ್ತು ಚಿಂತಕರಿಗೆ ಇದೆಯೆ? (ಇದೆ ಅನ್ನುವುದಾದರೆ ಸಂತೋಷ.) ಇಲ್ಲದಿದ್ದರೆ ಆ ಹಣವನ್ನು ಭರಿಸಿದವರು ಯಾರು? ಅದು ಕಪ್ಪೆ? ಬಿಳುಪೆ? ತಿಳಿದುಕೊಳ್ಳುವ ಹಕ್ಕು ಮತದಾರನಿಗೆ ಇದೆ ಅಲ್ಲವೆ?
ಇನ್ನೂ ಒಂದು ಪ್ರಶ್ನೆ. ಆ ಜಾಹಿರಾತು ನೋಡಿ, ತಮ್ಮ ನಿರ್ಧಾರಗಳನ್ನು ಬದಲಾಯಿಸಿಕೊಂಡು ಎಷ್ಟು ಮಂದಿ ಕಾಂಗ್ರೆಸ್ಸಿಗೆ ಓಟು ಹಾಕಿದ್ದಾರೆ!? ನಿಜವಾಗಿಯೂ ಸಾಮಾನ್ಯ ಮತದಾರ, ಬರಹಗಾರರನ್ನು, ಚಿಂತಕರನ್ನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾನೆಯೆ? ಇದೊಂದು ಯಕ್ಷಪ್ರಶ್ನೆ! ಅದರ ಪರಿಣಾಮ ಮತದಾನದ ಮೇಲೆ ಏನೇ ಇರಲಿ. ಆದರೆ ಅಲ್ಪಸ್ವಲ್ಪ ಸಾಹಿತಿಗಳ ಬಗ್ಗೆ ತಿಳಿದುಕೊಂಡಿರುವ ನಗರದ ಸುಶಿಕ್ಷಿತ ಮತದಾರರ ಒಂದೆರಡು ಚರ್ಚೆಗಳನ್ನು ನಾನು ಸಂಜೆ ಪಾರ್ಕಿನಲ್ಲಿ ವಾಕಿಂಗ್ ಮಾಡುವಾಗ ಕೇಳಿಸಿಕೊಂಡಿದ್ದೇನೆ. (ಅದರ ಉಲ್ಲೇಖವಿರುವ ಲೇಖನವೇ ಬರುವುದರಿಂದ ಅದನ್ನು ಮತ್ತೊಮ್ಮೆ ಇಲ್ಲಿ ಪ್ರಸ್ತಾಪಿಸುವುದು ಬೇಡ).
ಸಾಮಾನ್ಯ ಜನರು ಸಾಹಿತಿ ಚಿಂತಕರ ಇಂತಹ ನಿರ್ಧಾರಗಳ ಬಗ್ಗೆ ಏನೇನು ಅಭಿಪ್ರಾಯ ಪಡುತ್ತಾರೆ ಎಂಬುದನ್ನು ಸ್ವತಃ ಸಾಹಿತಿ ಚಿಂತಕರೂ ತಿಳಿದುಕೊಳ್ಳಬೇಕು. ಆದರೆ, ಅಂತಹ ಪೀಡ್ ಬ್ಯಾಕ್ ವ್ಯವಸ್ಥೆ ನಮ್ಮಲ್ಲಿ ಇಲ್ಲದಿರುವುದು ದುರಂತ.

‍ಲೇಖಕರು G

May 29, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಉದಯಕುಮಾರ್ ಹಬ್ಬು

    ಸಾಮಾನ್ಯ ಜನರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಸಾಹಿತಿಗಳು ಬಸ್ ಸ್ಟೆಂಡಿನಲ್ಲಿ ಒಂದು ಗಳಿಗೆ ನಿಂತರೆ ಸಾಕು. ಭ್ರಷ್ಟಾಚಾರದ ಕುರಿತು ಜನರು ಹೇಳುವುದನ್ನು ಕೇಳಿ. “ಹಣ ಯಾರಿಗೆ ಕಹಿಯಾಗಿದೆ?? ನೀವು ಅಲ್ಲಿ ಹೋದರೂ ಮಾಡುವುದು ಅಷ್ಟೇ?” “ಜಾತಿ ಯಾರನ್ನು ಬಿಟ್ಟಿದೆ? ಜಾತ್ಯಾತೀತ ಎನ್ನುವುದು ಎಲ್ಲ ಬರೀ ಬೊಗಳೆ.” ನಮ್ಮ ದೇಶದಲ್ಲಿ ಪಕ್ಷಾಧಾರಿತ ರಾಜಕೀಯ ವ್ಯವಸ್ಥೆ ಇರುವಾಗ, ಪಕ್ಷಾತೀತರಾಗುವುದು ಹೇಗೆ? ಯಾವುದೇ ಪಕ್ಷವಿರಲಿ ಮಾಡುವುದು ಒಂದೇ. ಹಾಗಿರುವಾಗ ಇದ್ದುದರಲ್ಲಿಯೇ ಕಡಿಮೆ ಜಾತೀಯತೆ ಇರುವ ಪಕ್ಷ ಅರಿಸಬೇಕೆಂಬ ಸಾಹಿತಿಗಳ ನಿರ್ಧಾರ ತಪ್ಪೇ? ನಮ್ಮ ಸವಿಂಧಾನ ಏನನ್ನು ಹೇಳುತ್ತದೋ ಅದನ್ನೇ ಸಾಹಿತಿಗಳು ಮಾಡಿದ್ದಾರೆ. ವರ್ಡ್ಸ್ ವರ್ತ ಎಂಬ ಇಂಗ್ಲೀಷ್ ಕವಿ ಹೇಳುವುದು ಹೀಗೆ: poets are unacknowledged legislators of manakind.” ಸತ್ಯನಾರಾಯಣರು ಇದನ್ನು ಅರಿಯದಷ್ಟೂ ಹೆಡ್ಡರಲ್ಲ.

    ಪ್ರತಿಕ್ರಿಯೆ
  2. ಉದಯಕುಮಾರ್ ಹಬ್ಬು

    ದತ್ತಾತ್ರೇಯ ಅವರು ಕಾರಂತರು ಯಾಕೆ ಚುನಾವಣೆಯಲ್ಲಿ ಸೋತರು? ಎಂಬ ಪ್ರಶ್ನೆಗೆ ಅವರು ಹೇಳುವ ಉತ್ತರ ಕಾರಂತರು ಪಕ್ಷ ರಾಜಕಾರಣ ಮಾಡಿದ್ದಕ್ಕೆ ಎಂಬುದಾಗಿದೆ. ನಾನು ಆಗ ಕಾರವಾರದಲ್ಲಿಯೇ ಇದ್ದೆ. ನನಗೆ ಗೊತ್ತಿದ್ದ ಪ್ರಕಾರ ಅವರು ಪರಿಸರವಾದಿ ಪಕ್ಷ ಎಂಬ ನೂತನ ಪಕ್ಷದಿಂದ ಚುನಾವಣೆಗೆ ನಿಂತಿದ್ದರು. ಆಗ ಕಾಂಗ್ರೆಸ್ ಪಕ್ಷದ ಜನಪ್ರಿಯತೆಯಿಂದಾಗಿ ಸೋತುಹೋದರೂ ಹೊರತೂ ಪಕ್ಷ ರಾಜಕಾರಣ ಮಾಡಿದ್ದರಿಂದಾಗಿ ಅಲ್ಲ.ಜನರಿಗೆ ಆ ಪಕ್ಷ ಅಪರಿಚಿತವಾಗಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: