ಒಮ್ಮೆ ಹೆಮಿಂಗ್ವೆ ಸೂಟ್ ಕೇಸ್ ತುಂಬ..

Charles Bukowski

ಚಿದಂಬರ ನರೇಂದ್ರ 

 

ಎಲ್ಲೋ ಓದಿದ್ದು.
ಒಮ್ಮೆ ಹೆಮಿಂಗ್ವೆ ಸೂಟ್ ಕೇಸ್ ತುಂಬ
ಹಸ್ತಪ್ರತಿಗಳನ್ನು ರೈಲಿನಲ್ಲಿ
ಕಳೆದುಕೊಂಡುಬಿಟ್ಟನಂತೆ ;
ಎಷ್ಟು ಹುಡುಕಾಡಿದರು ಅವು ಮತ್ತೆ ಸಿಗಲಿಲ್ಲ.
ನನ್ನ ಸಂಕಟ ಅಷ್ಟು ದೊಡ್ಡದಲ್ಲ
ಆದರೂ ಕೇಳಿ ;
ಮೊನ್ನೆ ರಾತ್ರಿ ಮೂರು ಪುಟಗಳ
ಕವಿತೆಯೊಂದನ್ನು ಬರೆದೆ
ಕೀ ಬೋರ್ಡ್ ಜೊತೆ ಉಡಾಫೆಯಿಂದ
ಆಟ ಆಡುತ್ತಿದ್ದಾಗ ಅಚಾತುರ್ಯದಿಂದ
ಆ ಕವಿತೆಯನ್ನ ಡಿಲೀಟ್ ಮಾಡಿಬಿಟ್ಟೆ
ನನ್ನನ್ನ ನಂಬಿ
ಮೊದಲ ಬಾರಿ ನೀರಿಗಿಳಿದ
ಹುಡುಗ ಕೂಡ ಇಂಥ ತಪ್ಪು ಮಾಡುವುದಿಲ್ಲ
ನಾನು ಮಾಡಿಬಿಟ್ಟೆ.
ಹಾಗಂತ
ನನ್ನ ಈ ಮೂರು ಪುಟಗಳ ಕವಿತೆಯೇನೂ
ಅಂಥ ಅಮರ ಕಾವ್ಯವಲ್ಲ
ಆದರೂ ಅಲ್ಲಲ್ಲಿ ಕೆಲ ರೋಚಕ ಸಾಲುಗಳಿದ್ದವು
ಅವು ಮಾತ್ರ ಈಗಿಲ್ಲ
ಆ ಹೊಸ ಸ್ಪರ್ಶ
ಹೊಸ ವಾಸನೆ ಮುಖ್ಯ ನನಗೆ
ಹೊಸ ವೈನ್ ಬಾಟಲ್ ಒಂದನ್ನ
ಓಪನ್ ಮಾಡಿ ಮೂಸಿ ನೋಡಿದಂತೆ,
ನಾಲಿಗೆಯ ಮೇಲಿಟ್ಟು ಕಣ್ಣು ಮುಚ್ಚಿದಂತೆ.
ಈ ಸುದ್ದಿಯನ್ನ ಹೀಗೆ
ರೋಚಕವಾಗಿ ಬರೆಯುವುದು
ಒಳ್ಳೆಯ ಕವಿತೆಯ ಲಕ್ಷಣ ಅಲ್ಲ
ಆದರೂ ನನಗ್ಯಾಕೋ ಇದು ನಿಮಗೆ
ಇಂಟರೆಸ್ಟಿಂಗ್ ಅನಿಸಬಹುದು ಎಂದೆನಿಸುತ್ತಿದೆ.
ಉಹೂಂ
ಅಂಥ ಸೀನ್ ಏನೂ ಇಲ್ಲ ಅಂತೀರಾ
ಹೇಗೂ ಇಲ್ಲಿವರೆಗೆ ಓದಿದ್ದೀರಾ
ನಿಮಗೂ ಬೇರೆ ಮುಖ್ಯವಾದ ಕೆಲಸಗಳಿರಬಹುದು
ಲೆಟ್ಸ್ ಹೋಪ್ ಸೋ
ಹೌದು
ಮುಖ್ಯ ಕೆಲಸಗಳಿರಲೇ ಬೇಕು
ನನ್ನ ಒಳಿತಿಗೂ
ನಿಮ್ಮ ಉದ್ಧಾರಕ್ಕೂ.

‍ಲೇಖಕರು Admin

December 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Krishna

    Hahaha…Amazing & Astonishing & Absurd!…’All at the same time’… A true tribute to Hemingway though…;-)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: