ಆ ಒದ್ದಾಟವೇ ಈ ಹಾಡು, ನೋಡಿ..

ಪಂಪಾರೆಡ್ಡಿ ಅರಳಹಳ್ಳಿ 

ಅದು 1980ರ ದಶಕದ ತಮಿಳುನಾಡಿನ ಕುಗ್ರಾಮ.

ಮೇಲ್ಜಾತಿಯ ಜನ ಕೆಳಜಾತಿಯ ಜನ ಇಬ್ಬರೂ ಬೇರೆ ಬೇರೆ ವಾಸಿಸುತ್ತಿರೋ ಹಳ್ಳಿಯದು. ಕೆಳಜಾತಿಯ ಜನರಲ್ಲಿ ಯಾರಾದರೂ ಸತ್ತರೆ ಮೇಲ್ಜಾತಿಯ ಜನರ ಬೀದಿಯಲ್ಲಿ ಹೆಣ ಒಯ್ಯಬೇಕು. ಅದಕ್ಕೆ ಮೇಲ್ಜಾತಿ ಜನರ ಒಪ್ಪಿಗೆಯಿಲ್ಲ. ಆದ್ದರಿಂದ ಹಳ್ಳಿಯನ್ನು ಬಳಸಿಕೊಂಡು ಎಂಟ್ಹತ್ತು ಕಿಲೋಮೀಟರ್ ನಡೆದು ಹೆಣವನ್ನು ಸ್ಮಶಾನಕ್ಕೆ ಕೊಂಡೊಯ್ದು ಹೂಳಬೇಕು.

ಆ ಹಳ್ಳಿಯಿಂದ ದೂರದಲ್ಲಿರೋ ಕಾಲೇಜಿನಲ್ಲಿ ಎರಡೂ ವರ್ಗದ ಹುಡುಗ ಹುಡುಗಿಯರು ಓದುತ್ತಿದ್ದಾರೆ. ಅಲ್ಲಿ ಮೇಲ್ಜಾತಿಯ ಹುಡುಗಿಯೊಬ್ಬಳು ತನ್ನ ಜೊತೆಗೆ ಕುಳಿತುಕೊಳ್ಳಲು ಬಂದ ಹುಡುಗಿಯನ್ನು ಜಾತಿ ಕಾರಣಕ್ಕೆ ದೂರ ಕುಳಿತುಕೊಳ್ಳಲು ಹೇಳುತ್ತಾಳೆ. ಕೇಳಿಸಿಕೊಂಡ ಹುಡುಗಿ ನೊಂದುಕೊಂಡು ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಾಳೆ.

ಕಾಲೇಜು ಮುಗಿಸಿ ಜಾಲಿಮರದ ತೋಪಿನ ಮೂಲಕ ಹಳ್ಳಿಗೆ ವಾಪಸ್ಸಾಗುವಾಗ ಮೇಲ್ಜಾತಿಯ ಹುಡುಗಿಗೆ ಹಾವು ಕಚ್ಚುತ್ತದೆ. ಅಲ್ಲಿ ಕೆಳಜಾತಿಯ ಹುಡುಗರಷ್ಟೇ ಇದ್ದಾರೆ. ಹುಡುಗಿಯ ಜೀವ ಉಳಿಸಬೇಕೆಂದರೆ ಮೇಲುಕುಲದ ಹುಡುಗಿಯನ್ನು ಮುಟ್ಟಬೇಕು, ಮುಟ್ಟಿದರೆ ಹಳ್ಳಿಯ ಮೇಲುಕುಲದ ಜನ ಕೊಂದುಹಾಕುತ್ತಾರೆ ಅನ್ನೋ ಭಯದಲ್ಲಿ ಕೆಳಜಾತಿಯ ಹುಡುಗರು ದಿಕ್ಕು ತೋಚದೆ ನಿಂತುಬಿಡುತ್ತಾರೆ.

ಜೊತೆಗೆ ಇನ್ನೊಂದು ಸಂಕಷ್ಟ ಎದುರಾಗುತ್ತದೆ. ಆಸ್ಪತ್ರೆಗೆ ಹೋಗಬೇಕೆಂದರೆ ಮೇಲ್ಜಾತಿ ಜನರ ಬೀದಿಯಲ್ಲೇ ಹಾವು ಕಚ್ಚಿದ ಹುಡುಗಿಯನ್ನು ಒಯ್ಯಬೇಕು, ಇದಕ್ಕೆ ಅಲ್ಲಿನ ಜನರ ಒಪ್ಪಿಗೆಯಿಲ್ಲ, ಆರು ಮೈಲಿ ದೂರವಿರುವ ಆಸ್ಪತ್ರೆಗೆ ಹಳ್ಳಿಯನ್ನು ಬಳಸಿಕೊಂಡು ಒಬ್ಬರು ಇಬ್ಬರು ಆ ಯುವತಿಯನ್ನು ಹೊತ್ತೊಯ್ಯುವುದು ಅಸಾಧ್ಯ. ಇಂಥ ಸಂದರ್ಭದಲ್ಲಿ ಆ ಕೆಳಜಾತಿಯ ವಿದ್ಯಾರ್ಥಿಗಳು ಒಂದು ಪ್ಲಾನ್ ಮೊರೆ ಹೋಗುತ್ತಾರೆ. ಆ ಹುಡುಗಿಯ ಜೀವ ಉಳಿಸಲು ಒದ್ದಾಡುತ್ತಾರೆ.

ಆ ಒದ್ದಾಟವೇ ಈ ಹಾಡು. ನೋಡಿ. ಬ್ರಿಲಿಯಂಟಾಗಿದೆ.

‍ಲೇಖಕರು admin

January 3, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: