‘ತಟ್ಟು ಚಪ್ಪಾಳೆ ಪುಟ್ಟ ಮಗು’ like page ಮಾಡಿರುವುದನ್ನು ಮೆಚ್ಚಿಕೊಳ್ಳುತ್ತಿದ್ದ ಹಿರಿಯರೊಬ್ಬರು ಮೊನ್ನೆ, Face Bookನಲ್ಲಿ ನಿತ್ಯ ಕಾಣಿಸಿದರೆ ‘over-dose ಆಗುತ್ತಿದೆಯಲ್ಲ ಎಂದರೆ, ಮತ್ತೊಬ್ಬರು ‘All these poems are out of date sir’ ಎಂದಿದ್ದಾರೆ. ಅವರ ಮಾತುಗಳು ಪೂರ್ತಿ ಸುಳ್ಳೇನೂ ಅಲ್ಲ. ‘ಗುಬ್ಬಿ’ ಎಂಬುದು ಒಂದು ಹಕ್ಕಿಯ ಪ್ರಭೇದವೆಂಬುದೂ ಗೊತ್ತಿರದ [i-Pad ಬಟನ್ ಗೊತ್ತಿರುವ] ಬೆಂಗಳೂರು ಮಕ್ಕಳಿಗೆ ‘ಗುಬ್ಬಿ’ ಪದವು ಹೇಗೆ ಅರ್ಥವಾಗುವುದಿಲ್ಲವೋ, ಹಾಗೆಯೇ, ನೀರ ‘ಬಾವಿ’ಯನ್ನು ನೋಡಿರದ ನನ್ನ ಪರದೇಶೀ [ಅಮೆರಿಕಾ, ಇಂಗ್ಲೆಂಡ್] ಮೊಮ್ಮಕ್ಕಳಿಗೆ ‘ಬಾವಿಯಲ್ಲಿ ಚಂದ್ರ’ ಪದ್ಯವೂ ರುಚಿಸುವುದಿಲ್ಲ. ಆದರೆ, ಅಪ್ಪ, ಅಮ್ಮ, ಅಣ್ಣ, ತಂಗಿ, ಪಾಪು, ಪೀಪಿಗಳ ಹಾಡುಗಳೆಲ್ಲ ನಿತ್ಯ ನೂತನವಲ್ಲವೇ?.
ಹಾಗಿದ್ದರೂ, ಬಾಲ್ಯದಲ್ಲಿ ನಾವು ಕಂಠಪಾಟ ಮಾಡಿದ್ದ ಹಾಡುಗಳೇ ಸರ್ವಶ್ರೇಷ್ಟವೆಂಬ ‘ಮೋಹ’ವೂ ಸರಿಯಲ್ಲ. ಒಂದೆರಡು ಸಾವಿರ ಮುದ್ರಿಸಿ 200-250 ರೂಪಾಯಿ ಬೆಲೆಯಿಟ್ಟರೆ, ಕೊಳ್ಳುವವರು ಅವುಗಳಿಗೆ ‘ಫಿದಾ’ ಆಗಿರುವ ಮೋಹಿತರು ಮಾತ್ರ. ಹಾಡುಗಳು ನಿಜವಾಗಿ ತಲುಪಬೇಕಾಗಿರುವುದು, ಹಳ್ಳಿ ಮೂಲೆಗಳಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ.
Like page ಮಾಡಿದರೆ, ನೂರಾರು ವರ್ಷಗಳ ಬಳಿಕವೂ, ಹಳ್ಳಿ ಮೂಲೆಯ ಕನ್ನಡ ಟೀಚರೊಬ್ಬರಿಗೆ, School Dayಗೆ ಅಭಿನಯ-ಗೀತೆ ಸಿದ್ಧಪಡಿಸಲು ಹಾಡು ಬೇಕೆಂದೆನಿಸಿದರೆ, ಆಗ ಜೀವಂತವಿರುವ ನಮ್ಮ ಮರಿಮಕ್ಕಳು, print out ತೆಗೆದು ವಿತರಿಸಬಹುದೇನೋ ಎಂಬ ಆಸೆ.
ಮುಂದಿನ ಕನ್ನಡ ಜನಾಂಗಕ್ಕೆ ಈ ಹಾಡುಗಳನ್ನು ಹಸ್ತಾಂತರಿಸುವ ಸಲುವಾಗಿಯಾದರೂ, ತಮ್ಮ Face Bookನ Notification ನಲ್ಲಿ, ಬೇಡ ಬೇಡವೆಂದರೂ ಮತ್ತೆ ಮತ್ತೆ ಕಾಣಿಸುವ ಈ ಹಿಂಸೆಯನ್ನು ಇನ್ನೊಂದು ವಾರದ ಕಾಲ ಸಹಿಸಿಕೊಳ್ಳಬೇಕೆಂದು ವಿನಂತಿಸುವೆ ಪ್ರಾರ್ಥಿಸುವೆ.
ಇದೇ ಕಾರಣದಿಂದ ದಿನವೊಂದರ 3 post ಮಾಡುತ್ತಿದ್ದವನು, ನಿನ್ನೆಯಿಂದ ನನ್ನ ಬೆರಳುಗಳನ್ನು ಹಿಂಸಿಸುತ್ತಾ 10ರಂತೆ ಟೈಪಿಸಿ, ಗೆಳೆಯ/ಗೆಳತಿಯರ ಹಿಂಸಾನುಭವದ ಅವಧಿಯನ್ನು ಕಡಿತಗೊಳಿಸುತ್ತಿರುವೆ.
ಬಹಳ ಹಿಂಸೆ ಅನ್ನಿಸಿದರೆ, ಸುಮ್ಮನೆ page like ಮಾಡಿ, ಪುರುಸೊತ್ತಾದಾಗ ಓದಿಕೊಳ್ಳಬೇಕೆಂದು ಮೊಮ್ಮಕ್ಕಳ ಪರವಾಗಿ ಪ್ರಾರ್ಥಿಸುವೆ.
https://www.facebook.com/tattuchappaaleputtamagu/?
0 ಪ್ರತಿಕ್ರಿಯೆಗಳು