ಕವಿಶೈಲದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಶಿವಮೊಗ್ಗದ ರೇವಣ್ಣ ಎಂಬ ಕಳ್ಳನನ್ನು ಬಂಧಿಸಲಾಗಿದೆ.
ನಾಡಿನ ಎಲ್ಲೆಡೆ ಆತಂಕಕ್ಕೆ ಕಾರಣವಾಗಿದ್ದ, ಸರ್ಕಾರದ ವಿರುದ್ಧ ಸಾತ್ವಿಕ ಆಕ್ರೋಶ ಉಂಟುಮಾಡಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಶಿವಮೊಗ್ಗದ ರೇವಣ್ಣ ಹಲವಾರು ವರ್ಷಗಳಿಂದ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದಾನೆ. ಕಳ್ಳತನ ಮಾಡಿ ಕುವೆಂಪು ಅವರ ಬದುಕಿನ ಮುಖ್ಯ ಎನ್ನಲಾದ ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪದಕಗಳನ್ನೇ ಎಗರಿಸಿದ್ದ |
ವಿಶ್ವ ಕವಿಯ ಮನೆಯ ಕದ್ದವಗೆ,,,,,,
ನಮ್ಮೆಲ್ಲರ ಸಾತ್ವಿಕ ಕೋಪ ತಟ್ಟದಿರುವುದೇ !!
ಋಷಿಕವಿ, ಜಗದ ಕವಿ, ಯುಗದ ಕವಿ, ರಾಷ್ಟ್ರ ಕವಿ, ರಸ ಋಷಿ – “ಮನುಜ ಮತ”ವನು ಹಿಡಿದು “ವಿಶ್ವ ಪಥ”ದಲಿ ನಡೆದು ಇದುವರೆಗೂ ಯಾರೂ ಸಾರದಂತಹ “ವಿಶ್ವ ಮಾನವ” ಸಂದೇಶವನ್ನು ಸಾರಿದ ವಿಶ್ವಕವಿಯ ಮನೆಯಲ್ಲಿ ಕಳ್ಳತನ. ಇದು ಕಳ್ಳನ ತಪ್ಪಲ್ಲ. ಸೂಕ್ತ ಭದ್ರತೆ ಒದಗಿಸುವಲ್ಲಿ ಸರ್ಕಾರದ ವಿಫಲತೆಯನ್ನು ಪ್ರಸಂಗ ಎತ್ತಿತೋರಿಸುತ್ತದೆ. ಇದು ಆ ಮಹಾಚೇತನಕ್ಕೆ ತೋರಿದ ಅಗೌರವ. ಅಜಾಗರೂಕ ಭದ್ರತಾ ಸಿಬ್ಬಂದಿಯು ಮಹಾಕವಿಗೆ ಮಾಡಿದ ಅವಮಾನ. ಇದು ಅಕ್ಷಮ್ಯ ಅಪರಾಧ.