ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್

**

ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತು. ಕಲಾವಿದರು ಯಾರ್ಯಾರು ಇದ್ದಾರೆಂದು ಮುಖಪುಟದಲ್ಲಿ ನಿರ್ದೇಶಕರಾದ ಲಕ್ಷ್ಮಣ್ ಕೆ.ಪಿ ಅವರು ಪೋಸ್ಟರ್ ಪ್ರಕಟಿಸಿದ್ದರು. ರಚನೆ ಖ್ಯಾತ ಲೇಖಕಿ ದು.ಸರಸ್ವತಿ ಅಂತ ತಿಳಿದು ನಾಟಕ ನೋಡಲು ಹೋದೆ. ಅಲ್ಲಿ ಕಲಾವಿದರು ಅಶ್ವಿನಿ ಬೋಧ್, ನಮ್ಮ ರಾಯಚೂರಿನ ಖ್ಯಾತ ಯುವ ರಂಗಕಲಾವಿದ ಭರತ್ ಡಿಂಗ್ರಿ ಅಣ್ಣ ಇದ್ದರು. ಆದರೆ ಲಕ್ಷ್ಮಣ್ ಕೆ.ಪಿ ಮಾತ್ರ ಬಂದಿರಲಿಲ್ಲ ಅವರು ಇದ್ದಿದ್ರೆ ನಾಟಕ ಇನ್ನೂ ಚೊಲೋ ಆಗ್ತಿತ್ತು.

ಈಗ ವಿಷಯಕ್ಕೆ ಬರೋಣ, ನಾಟಕದ ಹೆಸರು ಪೊರಕೆಯ ಹಾಡು ಅದು ಪೌರಕಾರ್ಮಿಕರ ನಾಟಕ ಅಂತ ನೇರವಾಗಿ ಕರೆದರೂ ತಪ್ಪೇನಿಲ್ಲ. ಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆ ಭರತ್ ಡಿಂಗ್ರಿ ವೇದಿಕೆ ಮೇಲೆ ಬಂದು ಆಕಡೆ-ಈಕಡೆ ನೋಡಿ ವೀಕ್ಷಕರನ್ನು ನೋಡುತ್ತಾ ನಗುತ್ತಾರೆ. ಪ್ರೇಕ್ಷಕರು ಉಲ್ಲಾಸದಲ್ಲಿ ನಗುತ್ತಾ ಶಾಕ್! ಅವರು ನಗುವ ಆ ಅದ್ಭುತ ಶೈಲಿ ತುಂಬಾ ಚೆಂದ, ಹಾಡು ಹಾಡೋಕೆ ನಿಂತರೆ ಜನರಿಗೆ ಬೇಸರವೇ ಆಗುವುದಿಲ್ಲ. ತಮಟೆ ಬಾರಿಸುವುದು ಇನ್ನೂ ರೋಮಾಂಚನಾ ಅದನ್ನು ದಕ್ಲಕಥಾ ದೇವಿ ನಾಟಕದಲ್ಲಿ ನೋಡಿದ್ದೆ. ಆದರೆ ಈ ನಾಟಕದಲ್ಲಿ ತಮಟೆ ಬಾರಿಸುವುದು ಭರತ್‌ಗೆ ಬೇಡ ಅಶ್ವಿನಿ (ಲಾಜವಂತಿ) ಬೋಧ್‌ ಅವರಿಗೆ ನೀನೆ ತಮಟೆ ಬಾರಿಸಬೇಕೆಂದು ಒತ್ತಾಯದಿಂದ ನಿರ್ದೇಶಕ ಕೆ ಪಿ ಲಕ್ಷ್ಮಣ್ ಹೇಳಿದ್ದಾರೆಂದು ನಾಟಕದ ರಚನೆಕಾರರಾದ ದು.ಸರಸ್ವತಿ ಸಂವಾದದಲ್ಲಿ ತಿಳಿಸಿದರು.

ನಾಟಕದ ಆಶಯ ನಮ್ಮಲ್ಲಿ ಜಾತಿಪದ್ದತಿ ಇನ್ನೂ ಹೋಗಿಲ್ಲ ಅಂದ್ರೆ ಅವರು ಮೇಲು-ಇವರು ಕೀಳು ಅನ್ನುವುದರಲ್ಲೇ ಈ ಜಾಗತೀಕರಣದಲ್ಲೂ ಇನ್ನೂ ಅಲ್ಲೇ ಇದೀವಿ ಅದರಿಂದ ಹೊರ ಬಂದಿಲ್ಲ ಕೆಲವರು ಹೊರ ಬಂದಿದ್ದಾರೆ ಅವರ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ನಾಟಕದಲ್ಲಿ ಹೇಳುತ್ತಾರೆ: ಮ್ಯಾನುಯಲ್ ಸ್ಕ್ಯಾವೆಂಜಿಂಗ್ ತುಂಬಿರೋದನ್ನು ಸ್ವಚ್ಛ ಮಾಡಲು ಹೋಗಿ ಸುಮಾರು 15-16 ಅಡಿ ಅದು ಆಳ ಇದ್ದು ಅದರೊಳಗೆ ಬಿದ್ದು ಸತ್ತು ಹೋಗುತ್ತಾನೆ. ಆ ಸತ್ತ ಪೌರಕಾರ್ಮಿಕನ ಕುಟುಂಬ ತುಂಬಾ ಚಿಕ್ಕದು ಅಷ್ಟೇ ತುಂಬಾ ಬಡತನದ ಕುಟುಂಬ ಅಂದ್ರೆ ತಾಯಿ, ಹೆಂಡತಿ ಇರುತ್ತಾರೆ. ಹೆಂಡತಿಗೆ ಹೆರಿಗೆಯಾಗಿ ಎರಡ್ಮೂರು ದಿನ ಆಗಿರುತ್ತೆ. ಸತ್ತವನ ತಾಯಿ ಮತ್ತು ಸಾಮಾಜಿಕ ಹೋರಾಟಗಾರರು ಸೇರಿ ನಮಗೆ ನ್ಯಾಯ ಸಿಗುವವರೆಗೂ ಹೆಣನ ಎತ್ತಲ್ಲ ಮತ್ತು ಪರಿಹಾರದನ ಹತ್ತುಲಕ್ಷ ಕೊಡಬೇಕೆಂದು ಧರಣಿಯಲ್ಲಿ ಕೂಗುತ್ತಾರೆ ಅಲ್ಲಿ ಅಧಿಕಾರಿಯ ಕೆಳಗಿರೋನು ಬಂದು ನಿಮಗೆ ಹತ್ತು ಲಕ್ಷ ಬೇಕಾ?ಅದ್ಯಾವುದು ಆಗಲ್ಲ, ಈಗ ಕೊಟ್ಟಷ್ಟೇ ಸರಿ ಮಾಡಿ. ಸುಮ್ಮನೆ ಹೆಣನ ಎತ್ತಿಬಿಡಿ ಇಲ್ಲಂದ್ರೆ ಸರಿ ಇರಲ್ಲ ನೋಡಿ ಅಂತಾ ಜೋರು ಮಾಡ್ತಾನೆ. ಆಗ ಸತ್ತವನ ತಾಯಿ ನ್ಯಾಯ ಸಿಗುವವರೆಗೂ ಹೆಣನ ಎತ್ತಲ್ಲ ಅಂದಾಗ, ಹೆಣನ ಎತ್ತಲ್ಲನಾ? ಅಂತ ಅವ ಆ ಮುದುಕಿಗೆ ಎರಡೇಟು ಹೊಡೆದು ಬಿಡುತ್ತಾನೆ ಆಗ ಸತ್ತ ಹೆಣಕ್ಕೆ ನ್ಯಾಯ ಸಿಗಲಿಲ್ಲವೆಂದು ಹೆಣನ ಎತ್ತಿ ಮನೋಜ್ಞವಾಗಿ ನೋವಿನಿಂದ ಭರತ್ ಡಿಂಗ್ರಿ ಹಾಡುತ್ತಾ ಹೊರಡುತ್ತಾರೆ.

ಕ್ರಾಂತಿಕಾರಿ ಕವಿ ಆರ್. ಮಾನಸಯ್ಯ ರಚಿತ ಈ ಮಳೆರಾಯನ ಹಾಡು

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು
ನೇಮಾ ತುಂಬಿದ ಭೂಮಿಗೋ||2||

ಮಣ್ಣು ಮುಟ್ಟದ ಜನ ಕುಳಿತು ಉಣ್ಣುತ್ತಾರೇ
ಬೆವರು ಸುರಿಸದೇನೆ ಬೆಣ್ಣೆ ತಿನ್ನುತ್ತಾರೇ
ಪ್ರೀತಿ ಪ್ರೇಮ ಮರೆತು ಜಾತಿ ಕಟ್ಟುತ್ತಾರೆ
ಬರಲಾರೆ ಬರಲಾರೆ ಭೂಮಿಗೇ||2||

ನೀ ಬರದೇ ಹೋದರೆ ಬದುಕಲಾರೇವು ನಾವು
ಮರಿಬ್ಯಾಡೋ ಮಳೆರಾಯ, ಮುನಿಬ್ಯಾಡೋ
ಮರಿಬ್ಯಾಡೋ ಮಳೆರಾಯ, ಮುನಿಬ್ಯಾಡೋ ದಯಮಾಡಿ!

ಹಾಗಾಗಿ ಬಡವರು, ಕಾನೂನು ಗೊತ್ತಿಲ್ಲದವರು, ಬೆಂಬಲವಿಲ್ಲದವರು ನ್ಯಾಯ ಕೇಳುವುದಕ್ಕೆ ಹೋದರೆ ಅವರಿಗೆ ಧಮ್ಕಿ ಹಾಕೋದು ಇಂದು ಸಾಮಾನ್ಯವಾಗಿಬಿಟ್ಟಿದೆ. ಅದಕ್ಕೆ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಪ್ರಶ್ನಿಸುವುದು ಕಲಿಯಬೇಕಿದೆ. ನಾವೆಲ್ಲರೂ ಕಾನೂನು ತಿಳಿದುಕೊಳ್ಳುವುದು ತುಂಬಾ ಅವಶ್ಯಕ ಇದೆ. ನಮ್ಮ ತಂದೆ ತಾಯಿ ಯಾವ ಕೆಲಸ ಮಾಡುತ್ತಾರೋ ನಾವು ಅದನ್ನೇ ಮಾಡಬೇಕಾ? ಈಗ ನಮ್ಮ ಬಾಬಾಸಾಹೇಬ ಡಾ. ಬಿ.ಆರ್ ಅಂಬೇಡ್ಕರ್ ಸಂವಿಧಾನ ಬರೆದಿದ್ದಾರೆ. ನಮ್ಮ ಮಗುವನ್ನು ಶಾಲೆ ಓದಿಸಿ ದೊಡ್ಡ ವ್ಯಕ್ತಿಯನ್ನು ಮಾಡುತ್ತೇನೆ ಅಂತ ಭರತ್ ಆಗ ದು. ಸರಸ್ವತಿ ಅವರು ಅಂಬೇಡ್ಕರ್ ಅವರು ಒಂದೇ ದಾರಿ ತೋರಿಸಿಲ್ಲ ಭರತ್‌ನ ಕೈ ಹಿಡಿದು ಸುತ್ತ ತಿರುಗಿಸುತ್ತ ಅವರು ಒಂದೇ ದಾರಿ ತೋರಿಸಿಲ್ಲ ಹಲವಾರು ದಾರಿಗಳನ್ನು ತೋರಿಸಿದ್ದಾರೆ. ಅಂಬೇಡ್ಕರ್ ದಾರಿ; ಅರಿವಿನ ದಾರಿ ಎಂದು ಹೇಳುತ್ತಾರೆ.

ಅಂಬೇಡ್ಕರ್ ಅವರು ಸಂವಿಧಾನ ಬರೆಯಬೇಕಾದರೆ ಸುಮ್ಮನೆ ಬರೆದಿದ್ದಾರೆಯೇ? 137 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿದ್ದಾರೆ. ನಮ್ಮ ಮನೆಯ ಹತ್ತಿರ ಪೌರಕಾರ್ಮಿಕರು ಕಸ ತಗೊಂಡು ಹೋಗುವುದಕ್ಕೆ ಬರುತ್ತಾರೆ ಅವರಿಗೆ ಬಾಯಾರಿಕೆ ಆಗಿ ಕೇಳಿದರೆ ನೀರು ಕೊಡಕ್ಕೂ ಹಿಂದೆ ಮುಂದೆ ನೋಡುತ್ತಾರೆ ನಮ್ಮ ಜನ. ಕೊಟ್ಟರೂ ಕೊಟ್ಟಿರುವ ಗ್ಲಾಸ್‌ನ್ನು ತೊಳೆದು ಪ್ರತ್ಯೇಕವಾಗಿ ಇಡುತ್ತಾರೆ. ಮತ್ತೆ ಹಸಿಕಸ-ಒಣಕಸ ಬೇರ್ಪಡಿಸಿ ಅಂತ ಬರೆದಿದ್ದರೂ ಜನ ಮಾತ್ರ ಬೇರ್ಪಡಿಸುವುದಿಲ್ಲ ನಾನೇ ಕಣ್ಣಾರೆ ಕಂಡಿದ್ದೇನೆ.

ಎಲ್ಲಾ ಹಂತದ ಸರ್ಕಾರಿ ನೌಕರರ ಸಂಬಳ ಹೆಚ್ಚಾದರೆ ಇವರ ಸಂಬಳ ಹೆಚ್ಚಾಗುವುದಿಲ್ಲ ಯಾಕೆ ಅವರು ಮನುಷ್ಯರಲ್ವ!? ಪೌರಕಾರ್ಮಿಕರು ಒಂದು ದಿನ ಕೆಲಸ ನಿಲ್ಲಿಸಿದರೆ ಎಷ್ಟು ಕಷ್ಟ ಆಗುತ್ತೆ ಗೊತ್ತಾ? ಅಂತಹದರಲ್ಲಿ ಒಂದು ತಿಂಗಳು ಕೆಲಸ ನಿಲ್ಲಿಸಿದರಂತೂ ನಮ್ಮ ಸುತ್ತಮುತ್ತಲಿನ ವಾತಾವರಣ ಹೇಗಿರುತ್ತೆ ಒಮ್ಮೆ ಊಹಿಸಿ, ಆಲೋಚಿಸಿ ಅಧಿಕಾರಿಗಳೇ! ಸಫಾಯಿ ಕರ್ಮಚಾರಿ ಮತ್ತು ಪೌರಕಾರ್ಮಿಕರ ಬದುಕಿನ ಏಳ್ಗೆಗಾಗಿ ಪ್ರತ್ಯೇಕ ವಿಶೇಷ ಸೌಲಭ್ಯಗಳನ್ನು ಹೆಚ್ಚೆಚ್ಚು ನೀಡಲು ಸರ್ಕಾರ ಮುಂದಾಗುವಂತಾಗಲಿ.


‍ಲೇಖಕರು avadhi

October 7, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗುರುಗಳಿಗೆ ಅಭಿನಂದನೆಗಳು

ಗುರುಗಳಿಗೆ ಅಭಿನಂದನೆಗಳು

ರಾಮನಗರ ಜಿಲ್ಲಾ ಕಾವ್ಯ ಯಾನ -ನಾಲ್ಕನೇ ಕವಿಗೋಷ್ಠಿಯ ಸರ್ವಾಧ್ಯಕ್ಷರಾಗಿ ವಿದ್ವಾಂಸರು, ಸಂಸ್ಕೃತಿ ಚಿಂತಕರೂ ಆದ ಡಾ.ಬೈರಮಂಗಲ ರಾಮೇಗೌಡ ಅವರನ್ನು...

ಶ್ರೀನಿವಾಸ ಪ್ರಭು ಅಂಕಣ: ಹೊಸ ಕನಸಿಗಾಗಿ ‘ಕನಸಿನ ಮನೆ’ ಮಾರಿದೆ..!

ಶ್ರೀನಿವಾಸ ಪ್ರಭು ಅಂಕಣ: ಹೊಸ ಕನಸಿಗಾಗಿ ‘ಕನಸಿನ ಮನೆ’ ಮಾರಿದೆ..!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

ಪ್ರಿಯ ಯುವಜನರೆ, ಏಳಿ.. ಎದ್ದೇಳಿ

ಪ್ರಿಯ ಯುವಜನರೆ, ಏಳಿ.. ಎದ್ದೇಳಿ

ಕಾರ್ಗಿಲ್‌ನ ಕದನವಾಣಿ ** ಸಿ ಯು ಬೆಳ್ಳಕ್ಕಿ ** ಕಾರ್ಗಿಲ್ ಯುದ್ಧ ಹಲವಾರು ಕಾರಣಗಳಿಂದ ವಿಶ್ವದ ಸಮರ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This