ಹಾಲಿವುಡ್ ಪ್ರಲಾಪಗಳು…

ಜರ್ಮನ್ ಮೂಲ : ಬರ್ಟೋಲ್ಟ್ ಬ್ರೆಕ್ಟ್
ಇಂಗ್ಲಿಷಿಗೆ : ಆಡಮ್ ಕರ್ಷ್ಚ್

ಕನ್ನಡಕ್ಕೆ : ಡಾ ವಸಂತಕುಮಾರ ಎಸ್ ಕಡ್ಲಿಮಟ್ಟಿ

1.
ನವಿರಾದ ಉದ್ದನೆಯ ಹಸಿರ
ಕಾಳುಮೆಣಸಿನ ಮರಗಳ ಕೆಳಗೆ,
ರಾಗಸಂಯೋಜಕರು ಹಾಗೂ ಬರಹಗಾರರು
ಬೀದಿಯಲಿ ಕೆಲಸ ಮಾಡುತ್ತಾರೆ.
ಬಾಕ್ ನ ವಿನೂತನ ಮೈಲುಗಲ್ಲು
ಅವನದೇ ಜೇಬಿನೊಳಗೆ ನಲುಗಿಹೋಗಿದೆ,
ಡಾಂಟೆ ಕೂಡ ಲಯಕ್ಕೆ ತಕ್ಕಂತೆ
ತನ್ನ ತಿಕದ ಭಾಗವನ್ನ
ಅಲ್ಲಾಡಿಸುತ್ತಾನೆ.

2.
ದೇವಾನುದೇವತೆಗಳಿಗೇ ಹೆಸರಾದ ನಗರವದು,
ಹಾಗಾಗಿ ಅಲ್ಲಿನ ದೇವತೆಗಳನ್ನು ಗುರುತಿಸವುದು ಬಲು ಸುಲಭ.
ಅವರು ಹಿತವಾದ ಪರಿಮಳವನ್ನು ಹೊರಸೂಸುತ್ತಾರೆ,
ಅವರ ನಯನಗಳೆಲ್ಲ ಕಾಡಿಗೆ
ಗೆರೆಗಳಿಂದ ತುಂಬಿಹೋಗಿವೆ; ಸ್ವರ್ಣಲೇಪಿತ ಜನನ ನಿಯಂತ್ರಣ ಪೊರೆಗಳು ಅಳವಡಿಸಲಾಗುವುದನ್ನ
ನೋಡಬಲ್ಲಿರಿ ನೀವು ಇರುಳಿನಲ್ಲಿ;
ಚಿತ್ರಕಥೆಗಾರರು ತಿಂದುಂಡು ವಿಶ್ರಮಿಸುವ ಜಾಗದಲ್ಲೇ
ಅವರು ಉಪಹಾರಕ್ಕಾಗಿ ಒಂದೆಡೆ ಸೇರುತ್ತಾರೆ.

3.
ಪ್ರತಿದಿನವೂ ನಾನು ತುತ್ತು ಅನ್ನಕ್ಕಾಗಿ
ದುಡಿಯಲು ಹೋಗುತ್ತೇನೆ.
ವಿನಿಮಯ ರೂಪದಲ್ಲಿ ಎಲ್ಲೆಲ್ಲಾ
ಸುಳ್ಳುಗಳನ್ನ
ಮಾರಾಟ ಮಾಡಲಾಗುತ್ತದೋ,
ಅಲ್ಲೆಲ್ಲಾ ನನ್ನದೇ ಸ್ವಂತ ಸುಳ್ಳುಗಳು
ಒಂದು ಹರಾಜನ್ನು ಆಕರ್ಷಿಸುತ್ತವೆ
ಎಂದು ಭಾವಿಸುತ್ತೇನೆ.

4.
ಇದೇ ಸ್ವರ್ಗ, ಇದುವೇ ನರಕ:
ನಿಮ್ಮ ಒಟ್ಟು ಸಂಪಾದನೆಯೇ
ನಿಮ್ಮನ್ನ ನಿರ್ಧರಿಸುತ್ತದೆ,
ನೀವು ವೀಣೆಯನ್ನ ನುಡಿಸಿದಿರೋ
ಅಥವಾ ದಹಿಸಿದಿರೋ ಎಂದು.

5.
ಅವರ ಗಿರಿಶಿಖರಗಳಲಿ ಬಂಗಾರವಿದೆ,
ಅವರ ಕಡಲತಡಿಗಳಲ್ಲಿ ತೈಲವಿದೆ;
ಜೀವಕೋಶಗಳ ಕಣದಲ್ಲೆಲ್ಲಾ ಹೀಗೆ ಕನಸು ಕಾಣುವುದು
ಅವರಿಗೆ ಹೆಚ್ಚಿನ ಲಾಭ ನೀಡುತ್ತದೆ.

ಹಾಲಿವುಡ್ : ಲಾಸ್ ಎಂಜಲೀಸ್ ನಲ್ಲಿನ ಒಂದು ನಗರ ಪ್ರದೇಶದ ಹೆಸರು. ಅಮೆರಿಕನ್ ಫಿಲ್ಮ್ ಇಂಡಸ್ಟ್ರಿಯ ಹೆಸರು ಇದೇ ಆಗಿದೆ. ಜೋಹಾನ್ ಸೆಬಾಸ್ಟಿಯನ್ ಬಾಕ್ : ಜರ್ಮನಿಯ ಪ್ರಖ್ಯಾತ ಸಂಗೀತಗಾರ.

ಡಾಂಟೆ : ಇಟಲಿಯ ಪ್ರಖ್ಯಾತ ಕವಿ, ದಿ ಡಿವೈನ್ ಕಾಮಿಡಿಯ ಕರ್ತೃ.

ಹಿನ್ನೆಲೆ : ಜರ್ಮನಿಯ ನಾಜಿ ಆಡಳಿತದ ಅವಧಿಯಲ್ಲಿ ತಪ್ಪಿಸಿಕೊಂಡು ಕವಿ ಬರ್ಟೋಲ್ಟ್ ಬ್ರೆಕ್ಟ್ ಲಾಸ್ ಎಂಜಲೀಸ್ ನಲ್ಲಿ ನೆಲೆಗೊಂಡ ಸಂದರ್ಭದಲ್ಲಿ ಬರೆದ ಕವಿತೆಗಳ ಸಮೂಹದಲ್ಲಿ ಇದೂ ಒಂದಾಗಿದೆ. ಅವು ಹಾಲಿವುಡ್ ಪ್ರಲಾಪಗಳ ಗುಚ್ಛವೆಂದೇ ಪ್ರಸಿದ್ಧಿ ಪಡೆದಿವೆ.

Hollywood Elegies
-Bertolt Brecht

1.
Under the long green hair of pepper trees,
The writers and composers work the street.
Bach’s new score is crumpled in his pocket,
Dante sways his ass-cheeks to the beat.
2.
The city is named for the angels,
And its angels are easy to find.
They give off a lubricant odor,
Their eyes are mascara-lined;
At night you can see them inserting
Gold-plated diaphragms;
For breakfast they gather at poolside
Where screenwriters feed and swim.
3.
Every day, I go to earn my bread
In the exchange where lies are marketed,
Hoping my own lies will attract a bid.
4.
It’s Hell, it’s Heaven: the amount you earn
Determines if you play the harp or burn.
5.
Gold in their mountains,
Oil on their coast;
Dreaming in celluloid
Profits them most.

‍ಲೇಖಕರು Admin

October 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. prathibha nandakumar

    ಕ್ಷಮಿಸಿ … ತಪ್ಪುಗಳಿವೆ ಸರ್… ಬ್ರೆಕ್ಟ್ ನ ಕಾಲದ ಭಾಷೆ ಮತ್ತು ಆಡುನುಡಿಯ ಬಳಕೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಅನುವಾದದಲ್ಲಿ ತಪ್ಪುಗಳಾಗುತ್ತವೆ. ಮತ್ತು ಅವನು ಹಾಲಿವುಡ್ ಬಗ್ಗೆ ವ್ಯಂಗ್ಯದಿಂದ ಹೇಳುತ್ತಿದ್ದಾನೆ. ಉದಾಹರಣೆಗೆ Score is notations. “ವಿನೂತನ ಮೈಲುಗಲ್ಲು” ಅಲ್ಲ. Harp ವೀಣೆ ಅಲ್ಲ. ass-cheeks ಅಂದರೆ butt-crack, ಕುಂಡಿ ಸೀಳು ….

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ prathibha nandakumarCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: