ನನ್ಮಗಂದ್ ನಾವು ಕೂಡಾ ನಾಯಿ ಆಗೇ ಹುಟ್ಟಬೇಕ್ರಿ.. 

ಥೂ ನಾಯಿ.. ಅಂತ ಬೈದೀರಾ ಜೋಕೆ

ಹೌದೂ ಸ್ವಾಮಿ..

ನಿಮ್ಮ ಬೆಲೆಗಿಂತ ಈಗ ನಾಯಿ ಬೆಲೇನೇ ದೊಡ್ಡದು

ಯಾಕಂತೀರಾ ..??

ಲಕ್ಷ ಲಕ್ಷ ಕೊಟ್ಟು, ಕೋಟಿ ಕೊಟ್ಟು ಬೈಕು, ಕಾರು ತಂದಿದ್ದಾಯ್ತು . ಅದರ ಟೈರೂ  ಅದರ ಸುದ್ದಿ ಎರಡೂ ಸವೆದು ಹೋಯ್ತು

ಈಗ ಅದಲ್ಲ ಸುದ್ದಿ

ನಾಯಿದು ಸ್ವಾಮಿ ನಾಯಿದೂ

ಏಕಂದರೆ ಈ ನಾಯಿ ಬೆಲೆ- ಮೂಗಿನ ಮೇಲೆ ಬೆರಳು ಈಗಲೇ ಇಟ್ಕೊಳ್ಳಿ – ಬರೀ ಎರಡು ಕೋಟಿ ರೂಪಾಯಿ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಅಂತಿದ್ರು

c316a0443ae865d29668a755b9dc322fb860aceb-tc-img-preview
ಹೋಗ್ಲಿ ಬಿಡಿ

ಈ ನಾಯಿ ತಂದಿದ್ದು ಸತೀಶ್ ಅಂತ . ಬೆಂಗಳೂರಿನಲ್ಲಿ ಎಲ್ಲಾ ಬೆಲೆ ಆಕಾಶಕ್ಕೆ ಏರಿದೆ ಅಂತ ಗೊಣಗೋದೆ ಆಯ್ತು ಆಲ್ವಾ..  ಈಗ ನೋಡಿ ಸತೀಶ್ ಅವರು ಅದಕ್ಕೆ ಪ್ರೂಫ್ ಕೂಡಾ ಕೊಟ್ಟು ಬಿಟ್ಟಿದ್ದಾರೆ. ಬರೀ ಸೈಟ್ ಅಲ್ಲಾ, ನಾಯಿ ರೇಟೂ ಕೂಡಾ ಗಗನಕ್ಕೇರಿದೆ ಅಂತ.

ಈ ನಾಯೀನೇ ಬೇಕು ಅಂತ ಇವರು ೨೦ ವರ್ಷದಿಂದ ಹುಡುಕ್ತಾ ಇದ್ರಂತೆ. ಒಂದು ರೀತಿ ತಪಸ್ಸೂ ಅನ್ನಿ. ಅಕಸ್ಮಾತ್ ದೇವರು ಪ್ರತ್ಯಕ್ಷ ಆಗಿ ‘ಮಚ್ಚಾ! ಏನು ವರ ಬೇಕು ಕೇಳೋ’ ಅಂದಿದ್ರೆ ‘ಬ್ರೋ , ನನಗೆ ನಾಯಿ ಬೇಕು ನಾಯಿ’ ಅಂತ ಕುಣಿದಾಡ್ತಿದ್ರೆನೋ?

ಈ ನಾಯಿ ಸಿಕ್ಕಾಯ್ತು. ಆದರೆ ಅದನ್ನ ಬೆಂಗೂರುವರೆಗೂ ತಂದಿದ್ದ ಕಥೆ ಕೇಳಿ. ಅದೇನು ವೈ-ಫೈ ನಲ್ಲಿ ಬರೋಕ್ಕಾಗುತ್ತಾ..??

ಚೀನಾದಿಂದ ಬಟನ್ ಒತ್ತಿದ್ರೆ ಬೆಂಗಳೂರಿಗೆ ಬಂದು ಬೀಳೋದಿಕ್ಕೆ ಅದೇನು ಜಿ ಮೇಲಾ..
ಈ ಕೊರಿಯನ್ ಮಸ್ತಿಫ್ಫ್ ತಳಿ ನಾಯಿ ಬೆಂಗಳೂರಿಗೆ ಬರೋದಿಕ್ಕೆ ಬೇಕಾಗಿದ್ದು ಬರೋಬ್ಬರಿ ೧೫ ದಿನ.  ಮೂರು ತಿಂಗಳ ನಾಯಿಗೆ ೨ ಕೋಟಿ. ಬೀಜಿಂಗ್ ನಿಂದ ಬ್ಯಾಂಗ್ಕಾಕ್,  ಅಲ್ಲಿಂದ ನೇಪಾಳ, ದೆನ್ ಟು ಲಕ್ನೋ. ಇಂಡಿಯಾ ಗೇಟ್ ಇಂದಾನೆ ದೆಹಲಿಗೆ. ಉಸ್ಸಪ್ಪಾ ಅನ್ನೋದ್ರೊಳಗೆ ಬೆಂಗಳೂರಿಗೆ.

ಎರಡು ಕೋಟಿ ಕೊಟ್ಟು ಅದರ ಮೇಲೆ ಇನ್ನೂ ಹತ್ತು ಪಟ್ಟು ಸುರಿದರೂ ಈ ನಾಯಿ ಬದುಕೋದು 7 ವರ್ಷ ಮಾತ್ರ. ಈಗ ಒಂದು ಅಡಿ ಹೈಟಿದೆ.  ಆದ್ರೆ ಹುಷಾರಾಗಿರಿ ಇದರ ತೂಕ ಮಾತ್ರ 30 ಕೆ.ಜಿ. ಕದೀಬೇಕೂ ಅಂದ್ರೂ ಮಿನಿಮಮ್ ಮೂರು ಜನ ಬೇಕು. ಕದಿಯೋದಾದ್ರೆ ಈಗಲೇ ಕದ್ದುಬಿಡಿ, ಯಾಕಂದ್ರೆ ಇನ್ನು ೩ ವರ್ಷದಲ್ಲಿ ಇದು ೮೦ ಕೆ.ಜಿ ಆಗಿಬಿಡುತ್ತೆ.

ಹೇಳಿ ಕೇಳಿ ಇದು ಇರೋದೇ ಹಿಮ ಇರೋ ಕಡೆ. ಬೆಂಗಳೂರು ಬಿಸಿಲು ಎಂಗೈತೆ ಗುರು? ಅಂತ ಬರೋಕೆ ಮುಂಚೆ ಅದೂ ಕೂಡ ಓನರ್ ಸಾಹೇಬರನ್ನ ಕೇಳಲಿಲ್ಲ. ಈಗ್ಗ ೨೪ ಗಂಟೇನೂ ಫ್ಯಾನ್ ಗಾಳಿ ಬೇಕೇ ಬೇಕು

ನನ್ಮಗಂದ್ ನಾವು ಕೂಡಾ ಮುಂದಿನ ಜನ್ಮದಲ್ಲಿ ನಾಯಿ ಆಗೇ ಹುಟ್ಟಬೇಕ್ರಿ..

ಹುಟ್ಟಿದರೇ ನಾಯಿ ಆಗಿ ಹುಟ್ಟಬೇಕು..

 

‍ಲೇಖಕರು admin

April 4, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

2 ಪ್ರತಿಕ್ರಿಯೆಗಳು

  1. ಹಜರತ್ ಅಲಿ ದೇಗಿನಾಳ

    ಈ ಚೀನಿ ಕುನ್ನಿ ನಿಮ್ನ ನಂಬಿದ್ದ ನಮಗೊಂದ ಕೌತುಕ್ ನೋಡ್ರಿ! ಎಲ್ಲಾ ನಾಯಿ ಪಾಡ್ರಿ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಹಜರತ್ ಅಲಿ ದೇಗಿನಾಳCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: