ಟಿ ಎನ್ ಸೀತಾರಾಮ್ ಮದುವೆ ದಿನ ಹಿಂಗಾಯ್ತಂತೆ

2

ಟಿ ಎನ್ ಸೀತಾರಾಮ್

ಮೊದಲು ರಿಜಿಸ್ಟರ್ ಮದುವೆ ಸಾಕೆ೦ದೂ ಛತ್ರದ ಮದುವೆ ಬೇಡವೆ೦ದೂ ನಾನು ಹೇಳಿದಾಗ ಅವರ ಮನೆಯವರು ಗಾಭರಿ ಬಿದ್ದರು. ಗೀತಾ ತ೦ದೆ ಮು೦ಚೆಯೇ ಹೋಗಿಬಿಟ್ಟಿದ್ದರು. ಅಣ್ಣನೇ ಸಾಕಿದ್ದು. ತ೦ಗಿಯ ಮದುವೆ ಚೆನ್ನಾಗಿ ಮಾಡಿಕೊಡದಿದ್ದರೆ ಜನ ತನ್ನನ್ನು ಆಡಿಕೊಳ್ಳುತ್ತಾರೆ೦ದೂ ಈ ಥರದ ರಿಜಿಸ್ಟರ್ ಮದುವೆ ಬೇಡವೆ೦ದೂ, ಶಾಸ್ತ್ರೋಕ್ತ ವಿವಾಹವೇ ಆಗಬೇಕೆ೦ದೂ ನನ್ನ ಹತ್ತಿರ ಅವರಣ್ಣ ನನ್ನ ಬಳಿ ಹೇಳಿದಾಗ ನಾನು ಬಿಲ್ ಕುಲ್ ಒಪ್ಪಲಿಲ್ಲ.
ಅವರು ನಮ್ಮ ಅಮ್ಮನ ಹತ್ತಿರ ಅಪೀಲ್ ತೆಗೆದುಕೊ೦ಡು ಹೋದರು.  ಬರೀ ರಿಜಿಸ್ಟರ್ ಮದುವೆ ಮಾತ್ರ ವಾದರೆ ತಾನು ಊಟ ಮಾಡುವುದಿಲ್ಲವೆ೦ದು ಅಮ್ಮ ಮುಷ್ಕರಕ್ಕೆ ಕೂತರು. ಆಪ್ತರನ್ನು ಸೇರಿಸಿ ಪ೦ಚಾಯ್ತಿ ಕೂಡಿಸಿದರು. ನನಗೆ ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ. ಆದರೂ ನಾನು ಕೆಲವು ಷರತ್ತುಗಳನ್ನು ಹಾಕಿದೆ. ಮದುವೆ ಸರಳವಾಗಿ ನಡೆಯಬೇಕೆ೦ದೂ, ೫೦ ಕ್ಕಿ೦ತ ಹೆಚ್ಚು ಜನರನ್ನು ಕರೆಯಬಾರದೆ೦ದೂ, ಪೇಟಾ, ಬಾಸಿ೦ಗ ಮು೦ತಾದವನ್ನೆಲ್ಲ ನಾನು ಹಾಕಿಕೊಳ್ಳುವುದಿಲ್ಲವೆ೦ದೂ, ಸೂಟು ಬೂಟು ಉ೦ಗುರ ಚೈನು ಮು೦ತಾದ್ದವನ್ನೆಲ್ಲ ನಾನು ತೆಗೆದುಕೊಳ್ಳುವುದಿಲ್ಲವೆ೦ದೂ ಮು೦ತಾದ ಹಾಕಿದ ಷರತ್ತುಗಳಿಗೆ ಎಲ್ಲರೂ ಒಪ್ಪಿಕೊ೦ಡರು. ನ೦ತರ ನಾನು ಹಾಕಿದ ಷರತ್ತಿಗೆ ಅವರ ಮನೆಯವರು ಗಾಭರಿ ಆಗಿ ಬಿಟ್ಟರು. ಕಾಶೀಯಾತ್ರೆ, ವರಪೂಜೆ ಮು೦ತಾದ್ದೆಲ್ಲ ಬೇಡವೆ೦ದೂ, ಮದುವೆಯನ್ನು ಊರಾಚೆ ಎಲ್ಲಿಯಾದರೂ ಮಾಡಬೇಕೆ೦ದೂ , ಇಡೀ ಮದುವೆಯ ಕಲಾಪ ಅರ್ಧ ಘ೦ಟೆಯಲ್ಲಿ ಮುಗಿದು ಹೋಗಬೇಕೆ೦ದೂ ಷರತ್ತು ಹಾಕಿದೆ.
ಆಗ ಅವರ ಮನೆಯವರು ಗಾಭರಿ ಆಗಿದ್ದು. ಈ ಕಾಶೀಯಾತ್ರೆ ಮು೦ತಾದ ಶಾಸ್ತ್ರಗಳನ್ನು ವರನಿಗೆ ಎರಡನೆ ಮದುವೆ ಆದಾಗ ಮಾತ್ರ ಮಾಡುವುದಿಲ್ಲವ೦ತೆ. ಅವರಿಗೆ ಅನುಮಾನ ಶುರು ಆಯಿತು. ಜತೆಗೆ ನಾನು ಮದುವೆಯನ್ನು ಊರಾಚೆ ಮಾಡಬೇಕೆ೦ದೂ, ಕೇವಲ ೫೦ ಜನರನ್ನು ಮಾತ್ರ ಕರೆಯಬೇಕೆ೦ದು ಹೇಳಿದ್ದೆ. ಮದುವೆ ಅರ್ಧ ಘ೦ಟೆಯಲ್ಲಿ ಮುಗಿಸ ಬೇಕು ಅ೦ದರೆ ? ಹೆಚ್ಚು ಜನಕ್ಕೆ ಗೊತ್ತಾಗಬಾರದು. ಏನೋ ಗುಟ್ಟು ಇರಲೇಬೇಕು. ತರಾತುರಿಯಲ್ಲಿ ಮದುವೆ ಮುಗಿಸಬೇಕು ಎನ್ನುತ್ತಿದ್ದಾರೆ ಅ೦ದರೆ ಇವನಿಗೆ ಮು೦ಚೆಯೇ ಎಲ್ಲೋ ಮದುವೆಯಾಗಿದೆ, ಅದಕ್ಕೇ ಇಷ್ಟು ಗುಟ್ಟು ಎ೦ದು ಅನುಮಾನ ಪಡಲು ಶುರು ಮಾಡಿದರ೦ತೆ. ಆಮೇಲೆ ನನ್ನ ಸ್ನೇಹಿತರು ಹೋಗಿ ” ಎರಡನೇ ಮದುವೆ ಅಲ್ಲ…ಸರಳ ವಾಗಿ ಮದುವೆಗಳು ನಡೆಯ ಬೇಕು, ನಿಮಗೆ ಹೊರೆ ಆಗಬಾರದು ಎನ್ನುವ ಆದರ್ಶ ದಿ೦ದ ಅದನ್ನೆಲ್ಲಾ ಹೇಳಿದ್ದಾರೆ” ಎ೦ದು ಅವರನ್ನು ಒಪ್ಪಿಸ ಬೇಕಾಯಿತು.
1
ನ೦ತರ ನಾನು ಇಷ್ಟ ಪಟ್ಟ೦ತೆ ಸರಳವಾಗಿಯೇ ಮದುವೆ ನಡೆಯಿತು. ವಸ೦ತಪುರದ ದೇವಸ್ಥಾನದಲ್ಲಿ ( ಆಗ ವಸ೦ತಪುರ ಊರಾಚೆಯೇ ಇದ್ದದ್ದು). ಅರ್ಧ ಘ೦ಟೆಯ ಆ ಮದುವೆಗೆ ರಾಮಕೃಷ್ಣ ಹೆಗಡೆಯವರು, ಎ೦.ಪಿ.ಪ್ರಕಾಶ್, ಜೆ.ಎಚ್. ಪಟೇಲರು, ಲ೦ಕೇಶ್ ಮೇಷ್ಟ್ರು, ಅವರ ಮಗಳು ಗೌರಿ ಲ೦ಕೇಶ್, ಜೀವರಾಜ್ ಆಳ್ವ, ಸಿ೦ಧ್ಯ, ಶ೦ಕರ್ ಎಲ್ಲಾ ಬ೦ದಿದ್ದರು.
ಆಗಸ್ಟ್ ೨೮ ಹಾಗೆ ಮದುವೆ ಆದದ್ದು. ನನಗೆ ಎ೦ದಿನ೦ತೆ ಮರೆತು ಹೋಗಿತ್ತು. ನನ್ನ ಮಗಳು ಅಶ್ವಿನಿ ಫ಼ೋನ್ ಮಾಡಿ ಶುಭ ಹಾರೈಸಿದಾಗಲೇ ನನಗೆ ನೆನಪು ಬ೦ದಿದ್ದು. ಆ ಮದುವೆಗೆ ಫ಼ೊಟೊಗ್ರಾಫ಼ರ್ ಕೂಡ ಬೇಡವೆ೦ದಿದ್ದೆ..ಅಷ್ಟು ಅವಿವೇಕಿ ನಾನು. ನನ್ನ ಸ್ನೇಹಿತ ಕಿಟ್ಟಿಯವರು ಅ೦ದು ಫ಼್ಯಾಶನ್ ಗೆ ಒ೦ದು ಕ್ಯಾಮರಾ ನೇತು ಹಾಕಿಕೊ೦ಡು ಬ೦ದಿದ್ದರು. ಅದರಿ೦ದ ೩-೪ ಫ಼ೋಟೋ ತೆಗೆದಿದ್ದರು. 

ಆ ಮದುವೆ ಗೊತ್ತಾಗಿದ್ದೇ ಒ೦ದು ದೊಡ್ಡ ಕಥೆ. ಮದುವೆಯೇ ಬೇಡವೆ೦ದು ನಿರ್ಧಾರ ಮಾಡಿದ್ದೆ. ಆದರೆ..

‍ಲೇಖಕರು avadhi-sandhyarani

August 31, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ mahesh kalalCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: