ಕವಿ ಸಿದ್ದಲಿಂಗಯ್ಯ ಹೆಜ್ಜೆ ಗುರುತು

ವಿಕಿಪೀಡಿಯಾದಿಂದ 

ಸಿದ್ಧಲಿಂಗಯ್ಯ

ಡಾ. ಸಿದ್ಧಲಿಂಗಯ್ಯ
ಜನನ ೧೯೫೪
‘ಮಾಗಡಿ’ ತಾಲ್ಲೋಕಿನ ‘ಮಂಚನಬೆಲೆ’ ಗ್ರಾಮ
ವೃತ್ತಿ ಅಧ್ಯಾಪಕ, ಪ್ರಾಧ್ಯಾಪಕ, ಕವಿ, ಹೋರಾಟಗಾರ, ಅಧ್ಯಕ್ಷರು(ಕನ್ನಡ ಪುಸ್ತಕ ಪ್ರಾಧಿಕಾರ)
ರಾಷ್ಟ್ರೀಯತೆ ಭಾರತೀಯ
ಪ್ರಕಾರ/ಶೈಲಿ ಕಾವ್ಯ, ವಿಮರ್ಶೆ, ನಾಟಕ
ವಿಷಯ ಕನ್ನಡ
ಸಾಹಿತ್ಯ ಚಳುವಳಿ ನವೋದಯ

ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು.

ಜನನ, ಜೀವನ

ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ‘ಮಾಗಡಿ‘ ತಾಲ್ಲೋಕಿನ ‘ಮಂಚನಬೆಲೆ’ ಗ್ರಾಮದಲ್ಲಿ ೧೯೫೪ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.

ಕೃತಿಗಳು

ಪಿ.ಎಚ್ ಡಿ ಸಂಶೋಧನಾಪ್ರಬಂಧ

ಕವನ ಸಂಕಲನಗಳು

  1. ಹೊಲೆ ಮಾದಿಗರ ಹಾಡು, ೧೯೭೫
  2. ಮೆರವಣಿಗೆ, ೨೦೦೦
  3. ಸಾವಿರಾರು ನದಿಗಳು, ೧೯೭೯
  4. ಕಪ್ಪು ಕಾಡಿನ ಹಾಡು, ೧೯೮೩
  5. ಆಯ್ದಕವಿತೆಗಳು, ೧೯೯೭
  6. ಅಲ್ಲೆಕುಂತವರೆ
  7. ನನ್ನ ಜನಗಳು ಮತ್ತು ಇತರ ಕವಿತೆಗಳು, ೨೦೦೫
  8. ಸಮಕಾಲೀನ ಕನ್ನಡ ಕವಿತೆ ಭಾಗ-೩,೪ (ಸಂಪಾದನೆ ಇತರರೊಂದಿಗೆ), ೨೦೦೩

ವಿಮರ್ಶನಾ ಕೃತಿಗಳು

  1. ಹಕ್ಕಿ ನೋಟ, ೧೯೯೧
  1. ರಸಗಳಿಗೆಗಳು
  2. ಎಡಬಲ
  3. ಉರಿಕಂಡಾಯ, ೨೦೦೯

ಲೇಖನಗಳ ಸಂಕಲನ

  1. ಅವತಾರಗಳು, ೧೯೯೧
  2. ಸದನದಲ್ಲಿ ಸಿದ್ದಲಿಂಗಯ್ಯ ಭಾಗ -೧, ೧೯೯೬
  3. ಸದನದಲ್ಲಿ ಸಿದ್ದಲಿಂಗಯ್ಯ ಭಾಗ -೨, ೨೦೦೪
  4. ಜನಸಂಸ್ಕೃತಿ, ೨೦೦೭

ನಾಟಕಗಳು

ಆತ್ಮಕಥೆ

ಗೌರವ, ಪ್ರಶಸ್ತಿಗಳು

  1. ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-೧೯೮೪
  2. ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-೧೯೮೬
  3. ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -೧೯೯೨
  4. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -೧೯೯೬
  5. ಜಾನಪದ ತಜ್ಞ ಪ್ರಶಸ್ತಿ -೨೦೦೧
  6. ೨ ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ.
  7. ಸಂದೇಶ್ ಪ್ರಶಸ್ತಿ -೨೦೦೧
  8. ಡಾ.ಅಂಬೇಡ್ಕರ್ ಪ್ರಶಸ್ತಿ -೨೦೦೨
  9. ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -೨೦೦೨
  10. ಬಾಬುಜಗಜೀವನರಾಮ್ ಪ್ರಶಸ್ತಿ -೨೦೦೫
  11. ನಾಡೋಜ ಪ್ರಶಸ್ತಿ -೨೦೦೭
  12. ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -೨೦೧೨
  13. ಆಳ್ವಾಸ್ ನುಡಿಸಿರಿ ಪ್ರಶಸ್ತಿ -೨೦೧೨
  14. ಶ್ರವಣಬೆಳಗೊಳದಲ್ಲಿ ನಡೆದ ೮೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
  15. ನೃಪತುಂಗ ಪ್ರಶಸ್ತಿ -೨೦೧೮

‍ಲೇಖಕರು avadhi

June 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dr. M. S. Vidya

    ಸೂಕ್ತ ಆಯ್ಕೆ.ಪ್ರತಿಭೆ,ಶ್ರದ್ಧೆ,ಪರಿಣತಿ,ನಿಷ್ಠೆ ,ಸಮಾಜದ ಬಗ್ಗೆ ,ವಿದ್ಯಾರ್ಥಿಗಳ ಬಗ್ಗೆ ಕಳಕಳಿ ಪ್ರೀತಿ ಎಲ್ಲಕ್ಕಿಂತಲೂ ಮಿಗಿಲಾಗಿ ಇತ್ಯಾತ್ಮಕ ನಿಲುವು ಇದ್ದರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದು ತಮ್ಮ ಜೀವನದ ಮೂಲಕ ತೋರಿಸಿದ್ದಾರೆ ಗುರುಗಳು

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Dr. M. S. VidyaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: