‘ಹೈವೇ 63’ರ ಸುತ್ತ..

ತೇಜಾವತಿ ಎಚ್ ಡಿ

**

ಕಾದಂಬರಿ -ಹೈವೇ 63

ಲೇಖಕರು -ಸುನಂದಾ ಕಡಮೆ 

ಪ್ರಕಾಶನ -ಅಕೃತಿ ಪುಸ್ತಕ 

ಬೆಲೆ -200

ನಾಡಿನ ಶ್ರೇಷ್ಠ ಕಥೆಗಾರ್ತಿಯಲ್ಲೊಬ್ಬರಾದ ಸುನಂದಾ ಕಡಮೆಯವರ ‘ಹೈವೇ 63’ ಕಾದಂಬರಿಯು ಉದ್ದಕ್ಕೂ ಒಂದು ಕುತೂಹಲಭರಿತ ಕತಾವಸ್ತುವನ್ನೊಳಗೊಂದು ಓದುಗರೆದೆಯಲ್ಲಿ ಪ್ರಯಾಣಿಸುತ್ತದೆ. ಕಾದಂಬರಿಯ ಕೇಂದ್ರ ಬಿಂದು ಅರೆಬೈಲಿನಲ್ಲಿರುವ ಹೈವೇ 63 ದಾಬಾ. ಕಾಂತಾರದೊಳಗಿನ ನಿಗೂಢತೆ, ಕೌತುಕ , ಪ್ರಶ್ನೆ, ಉತ್ತರ, ಪ್ರಕೃತಿಯ ಬೆರಗು, ಕಾಡಂಚಿನ ಜನಜೀವನ, ಅವರ ವೇದನೆಗಳನ್ನು ದಟ್ಟವಾಗಿ ಹೇಳುತ್ತದೆ.

ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವ ಪ್ರಮುಖ ಪಾತ್ರ ಆಶಾ ಕಾರ್ಯಕರ್ತೆಯಾಗಿರುವ ನಳಿನಿ. ಆಶಾ ಕಾರ್ಯಕರ್ತೆಯಾದ ನಳಿನಿ  ಅರೆಬೈಲಿನ ಹೆಗ್ಗಾಡು ಕಣಿವೆಯಲ್ಲಿ ಸಾಗುತ್ತಾ ಕೊಂಡಗದಲ್ಲಿರುವ ಆರು ತಿಂಗಳ ಗರ್ಭಿಣಿಯಾಗಿರುವ ವಿಶ್ವನಾಥನ ಹೆಂಡತಿಗೆ ಬಿ ಕಾಂಪ್ಲೆಕ್ಸ್ ಗುಳಿಗೆಯನ್ನು ತಲುಪಿಸಲು ಹೋಗುವ ಸನ್ನಿವೇಶದೊಂದಿಗೆ ಆರಂಭವಾಗುವ ಕಾದಂಬರಿಯು ಜೋರು ಮಳೆಯಲ್ಲಿ ಯಾವುದೇ ವಾಹನ ಸೌಲಭ್ಯವಿಲ್ಲದ  ಸಂದಿಗ್ದ ಸಮಯದಲ್ಲೂ ಸುಸೂತ್ರವಾಗಿ ಮಗುವಿಗೆ ಜನ್ಮ ಕೊಡುವ ಅದೇ ಶಾಲಿನಿಯ ಸನ್ನಿವೇಶದೊಂದಿಗೆ ಮುಕ್ತಾಯವಾಗುತ್ತದೆ. ಹುಟ್ಟು ಸಾವಿನ ಪ್ರತೀಕವಾದ ಹಗಲು ರಾತ್ರಿಗಳು ಸೃಷ್ಟಿಯಲ್ಲಿ ನಿರಂತರವಾಗಿ ಜರುಗುತ್ತಿರುತ್ತವೆ  ಎನ್ನುವ ಸೂಕ್ಷ್ಮ ಸತ್ಯವನ್ನು ಹೇಳುತ್ತಲೇ ಕಾದಂಬರಿಕಾರರು ಪತ್ತೆದಾರಿಕೆಯ ಜಾಡು ಹಿಡಿದು ಎದುರಾಗುವ ಪ್ರಶ್ನೆಗಳಿಗೆ ಉತ್ತರದ ಸುಳಿವುಗಳನ್ನು ನೀಡುತ್ತಲೇ ಹೋಗುತ್ತಾರೆ.

 ಕಾಡೊಳಗೆ ಸಂಭವಿಸುವ ಕಾಡ್ಗಿಚ್ಚು ಒಮ್ಮೆ ಸಹಜವು ಮತ್ತೊಮ್ಮೆ ಅಸಹಜವು ಆಗಿ ತೋರುತ್ತದೆ. ಕಾಡ್ಗಿಚ್ಚಿನ ತಾಪಕ್ಕೆ ಒಬ್ಬೊಬ್ಬರೇ ಅಮಾಯಕರು ಬಲಿಯಾಗುತ್ತಾ  ಕಾಡೊಳಗೆ ನಡೆಯುವ ನಿಗೂಢ ವಿದ್ಯಮಾನಗಳನ್ನು ಬಯಲು ಮಾಡುತ್ತವೆ. ಇಲ್ಲಿ ಬರುವ ಮುಖ್ಯ ಕುಟುಂಬಗಳು ಎರಡು. ಮಾದೇವ ಗಾವ್ಕಾರ್ ಹಾಗೂ ಅವರ ಮಕ್ಕಳಾದ ನಳಿನಿ ಮತ್ತು ನಂದಿನಿಯದ್ದು ಒಂದಾದರೆ ಮತ್ತೊಂದು ದಾಮೋದರ ಖೇಣಿ, ಮಗ ವಿನಾಯಕ ಖೇಣಿಯವರದ್ದು. ಗಾಂವ್ಕಾರರ ಕುಟುಂಬವು ಸುಮಾರು ವರ್ಷಗಳ ಕೆಳಗೆ ಕಿರುವತ್ತಿಯಿಂದ ಅರೆಬೈಲ್ ಘಟ್ಟ ಪ್ರದೇಶದಲ್ಲಿ ಬಂದು ನೆಲೆಸಿದ್ದರೆ ಎರಡು ವರ್ಷಗಳಿಂದೀಚೆಗೆ ಅದೇ ಅರೆಬೈಲಿನ ಹೈವೇ ರಸ್ತೆಯಲ್ಲಿ ದಾಬಾ ಆರಂಭಿಸುವುದು ಖೇಣಿ ಕುಟುಂಬ. ಮೂಲ ಒಂದೇ ಊರಿನವರಾದ ಇವರು ಪರಿಚಯಸ್ತರಾಗಿದ್ದರಿಂದ ಒಬ್ಬರಿಗೊಬ್ಬರು ಹೇಗಲಾಗುತ್ತಾ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳುತ್ತಾರೆ. ನಳಿನಿ ಚಿಕ್ಕವಯಸ್ಸಿಗೆ ರಸ್ತೆ ಅಪಘಾತದಲ್ಲಿ ತನ್ನ ಗಂಡ ಸುಧಾಕರನನ್ನು ಕಳೆದುಕೊಂಡು ಆಶಾ ಕಾರ್ಯಕರ್ತ ಜೀವನದಲ್ಲೇ ಸಾರ್ಥಕತೆಯನ್ನು ಕಾಣುತ್ತಿರುತ್ತಾಳೆ.

ನಳಿನಿಯದ್ದು ಎಲ್ಲ ಸಂದರ್ಭದಲ್ಲೂ ಮೆಚ್ಚತಕ್ಕಂತಹ ಪ್ರಬುದ್ಧ ಪಾತ್ರ. ನಂದಿನಿ ತನ್ನ ದುಡುಕಿನ ಕಾರಣ ತಾನಾಗಿಯೇ ಜೀವನ ಹಾಳು ಮಾಡಿಕೊಳ್ಳುವ ಅಪ್ರಬುದ್ಧೆ. ಸದಾ ಸಿಡುಕು ಅಸಮಾಧಾನದಲ್ಲೇ ಇರುವ ನಂದಿನಿ ವೆಂಕಟ ಆಚಾರಿಯೊಂದಿಗೆ ಕಳೆದ ರಾತ್ರಿ ಘಟನೆಯನ್ನು ಯಾರೊಂದಿಗೂ ಹೇಳಿಕೊಳ್ಳಲಾಗದ ದ್ವಂದ್ವವನ್ನು ಅನುಭವಿಸುತ್ತಾ ಕೊನೆಗೊಂದು ಸಂದರ್ಭದಲ್ಲಿ ತನ್ನ ಜೀವನದ ಕಹಿ ಘಟನೆಯನ್ನು ಪುನರಾವಲೋಕನ ಮಾಡಿಕೊಂಡು ನಿರಾಳಳಾಗುವ ಅವಳಿಗೆ ಸ್ಪಷ್ಟತೆ ದೊರೆಯುತ್ತದೆ. ಅಲ್ಲಿಯವರೆಗೂ ಭ್ರಮಾಲೋಕದಲ್ಲಿದ್ದ ಅವಳು ವಾಸ್ತವಕ್ಕೆ ಮರಳಿ  ತನ್ನ ಜೀವನದ ನಿರ್ಧಾರ ತಾನೇ ಕೈಗೊಳ್ಳುವ ಬದಲಾವಣೆ ಮಾಡಿದ್ದರೂ ಮುಂದೆ ಅವಳು ವೆಂಕಟನನ್ನು ಸಂಪೂರ್ಣ ತಿರಸ್ಕರಿಸುತ್ತಾಳೋ ಅಥವಾ ಅವನೇ ಅನಿವಾರ್ಯವೆಂಬಂತೆ ಬದುಕು ಸಾಗಿಸುತ್ತಾಳೋ ಎಂಬ ಪ್ರಶ್ನೆಯೊಂದು ಉಳಿದುಹೋಗುತ್ತದೆ. ಗಾವ್ಕಾರರಿಗೆ  ಸೋತ ಜೀವನದಲ್ಲಿ ಭರವಸೆಯಂತೆ ತೋರುವುದು ವಿನಾಯಕನ ಆಗಮನ. ಈಗಾಗಲೇ ಬದುಕು ಕೆಡಿಸಿಕೊಂಡಿರುವ ನಂದಿನಿಯನ್ನು ಕಷ್ಟ ಜೀವಿಯಾದ ವಿನಾಯಕನಿಗೆ ಮದುವೆ ಮಾಡಿ ಅವಳನ್ನು ದಡಮುಟ್ಟಿಸುವುದು ತಂದೆಯಾದ ಗಾವ್ಕಾರರ ಆಶಯ. ಆದರೆ ವಿನಾಯಕನಿಗೆ ನಂದಿನಿಯೊಂದಿಗೆ ಬೆಳೆಯದ ಸಲುಗೆ ನಳಿಯೊಡನೆ ಬೆಳೆದದ್ದು ನೋಡಿ ಎಷ್ಟೋ ಬಾರಿ ಅಸಮಾಧಾನ ವ್ಯಕ್ತಪಡಿಸುವ ಗಾಂವ್ಕಾರರ ಉದ್ದೇಶ ಪ್ರಬುದ್ದೆಯಾದ ನಳಿನಿ ಹೇಗೋ ಬದುಕು ಸಾಗಿಸುತ್ತಾಳೆ ಆದರೆ ನಂದಿನಿಯ ಬದುಕು ಹಸನು ಮಾಡುವುದಷ್ಟೇ.

ನಾಡಿನ ಶ್ರೇಷ್ಠ ಕಥೆಗಾರ್ತಿಯಲ್ಲೊಬ್ಬರಾದ ಸುನಂದಾ ಕಡಮೆಯವರ ‘ಹೈವೇ 63’ ಕಾದಂಬರಿಯು ಉದ್ದಕ್ಕೂ ಒಂದು ಕುತೂಹಲಭರಿತ ಕತಾವಸ್ತುವನ್ನೊಳಗೊಂದು ಓದುಗರೆದೆಯಲ್ಲಿ ಪ್ರಯಾಣಿಸುತ್ತದೆ. ಕಾದಂಬರಿಯ ಕೇಂದ್ರ ಬಿಂದು ಅರೆಬೈಲಿನಲ್ಲಿರುವ ಹೈವೇ 63 ದಾಬಾ. ಕಾಂತಾರದೊಳಗಿನ ನಿಗೂಢತೆ, ಕೌತುಕ , ಪ್ರಶ್ನೆ, ಉತ್ತರ, ಪ್ರಕೃತಿಯ ಬೆರಗು, ಕಾಡಂಚಿನ ಜನಜೀವನ, ಅವರ ವೇದನೆಗಳನ್ನು ದಟ್ಟವಾಗಿ ಹೇಳುತ್ತದೆ. ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವ ಪ್ರಮುಖ ಪಾತ್ರ ಆಶಾ ಕಾರ್ಯಕರ್ತೆಯಾಗಿರುವ ನಳಿನಿ. ಆಶಾ ಕಾರ್ಯಕರ್ತೆಯಾದ ನಳಿನಿ  ಅರೆಬೈಲಿನ ಹೆಗ್ಗಾಡು ಕಣಿವೆಯಲ್ಲಿ ಸಾಗುತ್ತಾ ಕೊಂಡಗದಲ್ಲಿರುವ ಆರು ತಿಂಗಳ ಗರ್ಭಿಣಿಯಾಗಿರುವ  ವಿಶ್ವನಾಥನ ಹೆಂಡತಿಗೆ ಬಿ ಕಾಂಪ್ಲೆಕ್ಸ್ ಗುಳಿಗೆಯನ್ನು ತಲುಪಿಸಲು ಹೋಗುವ ಸನ್ನಿವೇಶದೊಂದಿಗೆ ಆರಂಭವಾಗುವ ಕಾದಂಬರಿಯು ಜೋರು ಮಳೆಯಲ್ಲಿ ಯಾವುದೇ ವಾಹನ ಸೌಲಭ್ಯವಿಲ್ಲದ  ಸಂದಿಗ್ದ ಸಮಯದಲ್ಲೂ ಸುಸೂತ್ರವಾಗಿ ಮಗುವಿಗೆ ಜನ್ಮ ಕೊಡುವ ಅದೇ ಶಾಲಿನಿಯ ಸನ್ನಿವೇಶದೊಂದಿಗೆ ಮುಕ್ತಾಯವಾಗುತ್ತದೆ. ಹುಟ್ಟು ಸಾವಿನ ಪ್ರತೀಕವಾದ ಹಗಲು ರಾತ್ರಿಗಳು ಸೃಷ್ಟಿಯಲ್ಲಿ ನಿರಂತರವಾಗಿ ಜರುಗುತ್ತಿರುತ್ತವೆ  ಎನ್ನುವ ಸೂಕ್ಷ್ಮ ಸತ್ಯವನ್ನು ಹೇಳುತ್ತಲೇ ಕಾದಂಬರಿಕಾರರು ಪತ್ತೆದಾರಿಕೆಯ ಜಾಡು ಹಿಡಿದು ಎದುರಾಗುವ ಪ್ರಶ್ನೆಗಳಿಗೆ ಉತ್ತರದ ಸುಳಿವುಗಳನ್ನು ನೀಡುತ್ತಲೇ ಹೋಗುತ್ತಾರೆ.

ಕಾಡೊಳಗೆ ಸಂಭವಿಸುವ ಕಾಡ್ಗಿಚ್ಚು ಒಮ್ಮೆ ಸಹಜವು ಮತ್ತೊಮ್ಮೆ ಅಸಹಜವು ಆಗಿ ತೋರುತ್ತದೆ. ಕಾಡ್ಗಿಚ್ಚಿನ ತಾಪಕ್ಕೆ ಒಬ್ಬೊಬ್ಬರೇ ಅಮಾಯಕರು ಬಲಿಯಾಗುತ್ತಾ  ಕಾಡೊಳಗೆ ನಡೆಯುವ ನಿಗೂಢ ವಿದ್ಯಮಾನಗಳನ್ನು ಬಯಲು ಮಾಡುತ್ತವೆ. ಇಲ್ಲಿ ಬರುವ ಮುಖ್ಯ ಕುಟುಂಬಗಳು ಎರಡು. ಮಾದೇವ ಗಾವ್ಕಾರ್ ಹಾಗೂ ಅವರ ಮಕ್ಕಳಾದ ನಳಿನಿ ಮತ್ತು ನಂದಿನಿಯದ್ದು ಒಂದಾದರೆ ಮತ್ತೊಂದು ದಾಮೋದರ ಖೇಣಿ, ಮಗ ವಿನಾಯಕ ಖೇಣಿಯವರದ್ದು. ಗಾಂವ್ಕಾರರ ಕುಟುಂಬವು ಸುಮಾರು ವರ್ಷಗಳ ಕೆಳಗೆ ಕಿರುವತ್ತಿಯಿಂದ ಅರೆಬೈಲ್ ಘಟ್ಟ ಪ್ರದೇಶದಲ್ಲಿ ಬಂದು ನೆಲೆಸಿದ್ದರೆ ಎರಡು ವರ್ಷಗಳಿಂದೀಚೆಗೆ ಅದೇ ಅರೆಬೈಲಿನ ಹೈವೇ ರಸ್ತೆಯಲ್ಲಿ ದಾಬಾ ಆರಂಭಿಸುವುದು ಖೇಣಿ ಕುಟುಂಬ. ಮೂಲ ಒಂದೇ ಊರಿನವರಾದ ಇವರು ಪರಿಚಯಸ್ತರಾಗಿದ್ದರಿಂದ ಒಬ್ಬರಿಗೊಬ್ಬರು ಹೆಗಲಾಗುತ್ತಾ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳುತ್ತಾರೆ. ನಳಿನಿ ಚಿಕ್ಕವಯಸ್ಸಿಗೆ ರಸ್ತೆ ಅಪಘಾತದಲ್ಲಿ ತನ್ನ ಗಂಡ ಸುಧಾಕರನನ್ನು ಕಳೆದುಕೊಂಡು ಆಶಾ ಕಾರ್ಯಕರ್ತೆಯಾಗಿ ಸಾರ್ಥಕತೆಯನ್ನು ಕಾಣುತ್ತಿರುತ್ತಾಳೆ. ನಳಿನಿಯದ್ದು ಎಲ್ಲ ಸಂದರ್ಭದಲ್ಲೂ ಮೆಚ್ಚತಕ್ಕಂತಹ ಪ್ರಬುದ್ಧ ಪಾತ್ರ. ಅವಳ ಅಳೆದು ತೂಗಿ ಮಾತನಾಡುವ ಕಲೆ ಹಲವು ಸನ್ನಿವೇಶಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ನಂದಿನಿ ತನ್ನ ದುಡುಕಿನ ಕಾರಣ ತಾನಾಗಿಯೇ ಜೀವನ ಹಾಳು ಮಾಡಿಕೊಳ್ಳುವ ಅಪ್ರಬುದ್ಧೆ. ಸದಾ ಸಿಡುಕು ಅಸಮಾಧಾನದಲ್ಲೇ ಇರುವ ನಂದಿನಿ ವೆಂಕಟ ಆಚಾರಿಯೊಂದಿಗೆ ಇಡೀ ರಾತ್ರಿ ಕಳೆದ ಘಟನೆಯನ್ನು ಯಾರೊಂದಿಗೂ ಹೇಳಿಕೊಳ್ಳಲಾಗದ ದ್ವಂದ್ವವನ್ನು ಅನುಭವಿಸುತ್ತಾ ಕೊನೆಗೊಂದು ಸಂದರ್ಭದಲ್ಲಿ ತನ್ನ ಜೀವನದ ಕಹಿ ಘಟನೆಯನ್ನು ಪುನರಾವಲೋಕನ ಮಾಡಿಕೊಂಡು ನಿರಾಳಳಾಗುವ ಅವಳಿಗೆ ಸ್ಪಷ್ಟತೆ ದೊರೆಯುತ್ತದೆ. ಅಲ್ಲಿಯವರೆಗೂ ಭ್ರಮಾಲೋಕದಲ್ಲಿದ್ದ ಅವಳು ವಾಸ್ತವಕ್ಕೆ ಮರಳಿ  ತನ್ನ ಜೀವನದ ನಿರ್ಧಾರ ತಾನೇ ಕೈಗೊಳ್ಳುವ ಬದಲಾವಣೆ ಮಾಡಿದ್ದರೂ ಮುಂದೆ ಅವಳು ವೆಂಕಟನನ್ನು ಸಂಪೂರ್ಣ ತಿರಸ್ಕರಿಸುತ್ತಾಳೋ ಅಥವಾ ಅವನೇ ಅನಿವಾರ್ಯವೆಂಬಂತೆ ಒಪ್ಪಿ ಬದುಕು ಸಾಗಿಸುತ್ತಾಳೋ ಎಂಬ ಪ್ರಶ್ನೆಯೊಂದು ಉಳಿದುಹೋಗುತ್ತದೆ. ಗಾಂವ್ಕಾರರಿಗೆ  ಸೋತ ಜೀವನದಲ್ಲಿ ಭರವಸೆಯಂತೆ ತೋರುವುದು ಹಾಸ್ಯಭರಿತ ಮಾತು, ಲವಲವಿಕೆಯ ಹುಡುಗ ವಿನಾಯಕನ ಆಗಮನ. ಈಗಾಗಲೇ ಬದುಕು ಕೆಡಿಸಿಕೊಂಡಿರುವ ನಂದಿನಿಯನ್ನು ಕಷ್ಟ ಜೀವಿಯಾದ ವಿನಾಯಕನಿಗೆ ಮದುವೆ ಮಾಡಿ ಅವಳನ್ನು ಜೀವನದಲ್ಲಿ ದಡಮುಟ್ಟಿಸುವುದು ತಂದೆಯಾಗಿ ಗಾವ್ಕಾರರ ಆಶಯ. ಆದರೆ ವಿನಾಯಕನಿಗೆ ನಂದಿನಿಯೊಂದಿಗೆ ಬೆಳೆಯದ ಸಲುಗೆ ನಳಿಯೊಡನೆ ಬೆಳೆದದ್ದು ನೋಡಿ ಎಷ್ಟೋ ಬಾರಿ ಅಸಮಾಧಾನ ವ್ಯಕ್ತಪಡಿಸುವ ಗಾಂವ್ಕಾರರ ಉದ್ದೇಶ ಪ್ರಬುದ್ದೆಯಾದ ನಳಿನಿ ಹೇಗೋ ಬದುಕು ಸಾಗಿಸುತ್ತಾಳೆ ಆದರೆ ನಂದಿನಿಯ ಬದುಕು ಹಸನು ಮಾಡುವುದಷ್ಟೇ. 

ಕಾದಂಬರಿಯಲ್ಲಿನ ಪ್ರೇಮ ಪ್ರಕರಣಗಳು ಕವಲು ದಾರಿಯಲ್ಲಿ ಸಾಗುತ್ತವೆ. ಈಗಾಗಲೇ ತನ್ನ 10 ವರ್ಷಗಳ ಅಜ್ಞಾತವಾಸದಲ್ಲಿ ವಿನಾಯಕ ಅಲ್ಲಿದ್ದ ಅಡುಗೆ ಸಹಾಯಕಳಾದ ನೀರಾಳನ್ನು ಇಷ್ಟಪಟ್ಟಿದ್ದು ನಂತರ ನಳಿನಿಗೆ ಸಿಕ್ಕರೆ ಅತ್ತ ನಳಿನಿಗೂ ತನ್ನ ಗಂಡ ಸುಧಾಕರನ ಮರಣದ ನಂತರ ಬರಡು ಮನಸಲ್ಲಿ ಭಾವನೆ ಚಿಗುರಿದ್ದು ವಿನಾಯಕನಿಂದ. ಹಾಗೆಯೇ ನಂದಿನಿ ಇಷ್ಟಪಡುವ ವೆಂಕಟ ಆಚಾರಿಗೂ ಈಗಾಗಲೇ ಒಂದು ಮದುವೆಯಾಗಿ ಅದರಿಂದ ಮುಕ್ತಿ ಪಡೆದುಕೊಂಡಿದ್ದ ವೆಂಕಟ ಬೀಸಿದ ಬಲೆಗೆ ನಂದಿನಿ ಸಿಲುಕುತ್ತಾಳೆ. ಇವೆರಡೂ ಅಪೂರ್ಣ ಅಂತ್ಯವನ್ನು ನೀಡಿದರೆ ಜಲಜಳದ್ದು ಯಶಸ್ವಿ ಪ್ರೇಮಕತೆಯೊಂದಿಗೆ ತವರಿನ ಬಂಧ ಉಳಿಯುತ್ತದೆ.

ವೈರುಧ್ಯಗಳ ನಡುವೆಯೂ ನಳಿನಿ ಮತ್ತು ವಿನಾಯಕರ ನಡುವಿನ ಅರ್ಥಮಾಡಿಕೊಳ್ಳುವಿಕೆ ಅವರ ಬಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಜೊತೆಗೆ ವಿನಾಯಕನ ದಾಬಾ ಹಂತ ಹಂತವಾಗಿ ಬೆಳೆಯುವುದಕ್ಕೆ ನಳಿನಿಯೇ ಕಾರಣಳಾಗಿ ಪರರ ಕಷ್ಟಕ್ಕೆ ಸದಾ ಸ್ಪಂದಿಸುವ ಅವಳ ಗುಣ ಎಲ್ಲರಿಗೂ ಹಿಡಿಸುವಂತದ್ದು. 

ವಿನಾಯಕನ ತಂದೆ ದಾಮೋದರ ಖೇಣಿಯವರು ನಂದಿನಿಯನ್ನು ಆಪ್ತವಾಗಿ ಇಷ್ಟಪಡುವ ಮಗನಿಗೆ ಸೊಸೆಯಾಗಿ ತರುವ ಹಂಬಲವುಳ್ಳವರು. ಅವರು ಯಾರೊಂದಿಗೂ ಹೇಳಿಕೊಳ್ಳಲಾಗದ ತನ್ನ ಮನಸ್ಸಿನ ತಳಮಳಗಳನ್ನು ಸತ್ತ ತನ್ನ ಹೆಂಡತಿ ನೇತ್ರಾವತಿಯ ನೆನಪುಗಳನ್ನು ನಳಿನಿಯ ಮುಂದೆ ತೋಡಿಕೊಂಡು ಮಗುವಿನಂತೆ ದುಃಖಿಸುವುದು ಹೆಂಡತಿಯ ಮೇಲಿನ ಪ್ರೀತಿಗೆ ಸಾಕ್ಷಿ. ಮೇಲಿಂದ ಮೇಲೆ ಪೆಟ್ಟು ತಿಂದು ಬದುಕಿದ ಹಿರಿಯ ಜೀವ. ಅಪ್ಪ ಅಮ್ಮಂದಿರಿಗೆ ಗೊತ್ತಿಲ್ಲದೆ ಹೋಗಿ ತನ್ನದೇ ಊರಿನ ಆತ್ಮರಾಮ ಸಿದ್ಧಿಯೊಂದಿಗೆ ವಿವಾಹವಾದ ಇದ್ದ ಒಬ್ಬ ಮಗಳು ಕೊನೆಯ ದರ್ಶನಕ್ಕೂ ಬರೆದಿರುವುದು ವಿಪರ್ಯಾಸ. ಇನ್ನೂ ಒಂದು ಸಣ್ಣ ನೆಪಕ್ಕೆ ಮನೆ ಬಿಟ್ಟು ಹೋಗಿ ಹತ್ತಾರು ವರ್ಷಗಳ ಕಾಲ ಅಜ್ಞಾತವಾಗಿ ಬದುಕಿ ಬಂದ ಮಗನಿಂದ  ಎಷ್ಟೋ ವರ್ಷಗಳ ಕಾಲ ಪತಿಪತ್ನಿಯರಿಬ್ಬರೂ  ಮಕ್ಕಳಿದ್ದೂ ಅನಾಥರಂತೆ ಬದುಕಿದ ಸ್ಥಿತಿ ಅದರೊಟ್ಟಿಗೆ ಹೆಂಡತಿ ಹಾಸಿಗೆ ಹಿಡಿದು ಅಸುನೀಗಿದ್ದು ಕೂಡ ಖೇಣಿಯವರ ಜೀವನದ ಆಘಾತವೇ. ಇವೆಲ್ಲ ಈ ಎರಡು ಕುಟುಂಬಗಳ ಕೌಟುಂಬಿಕ ವಾತಾವರಣವನ್ನು ಹೇಳಿದರೆ ಇನ್ನೊಂದೆಡೆ ಕಾಡಂಚಿನ ಜನಜೀವನ ಅವರು ಎದುರಿಸುವ ಸವಾಲುಗಳನ್ನು ಕಾಣಬಹುದು. 

ಕಾದಂಬರಿಯ ಖಳನಾಯಕನಂತೆ ತೋರುವ ಮಂಜುನಾಥ ಅದಿರು ಕಳ್ಳಸಾಗಣೆ, ಗಾಂಜಾ, ಚರಸ್ ಮುಂತಾದ ಅಕ್ರಮಗಳ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದ ಅಪಾಯಕಾರಿ ಮನುಷ್ಯ. ಆಕಸ್ಮಿಕವಾಗಿ  ದಾಬಾಕ್ಕೆ ಆಗಮಿಸುವ ಮಂಜುನಾಥನ ವೈಭವಕ್ಕೆ ಮಾರುಹೋಗಿ ಅವನ ಹಿಂದಿನ ಪರಿಚಯವೂ ಸೇರಿ ಹಿಗ್ಗಿನೊಂದಿಗೆ ಅವನ ಕೈಗೊಂಬೆಯಾಗಿ ಒದ್ದಾಡುವ ವಿನಾಯಕ ಕೊನೆಗೆ ಅವನ ಮೋಸದ ಜಾಲದಲ್ಲಿ ಬಂಧಿಯಾಗುತ್ತಾನೆ. ಅವನು ಮಾಡದ ತಪ್ಪಿಗೆ ಸಿಲುಕಿದನೋ ಅಥವಾ ಮಾಡಿದ ತಪ್ಪಿಗೋ ಎನ್ನುವ ಕೊನೆಯ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ತನ್ನ 10 ವರ್ಷಗಳ ಅಜ್ಞಾತವಾಸದಲ್ಲಿ ಕಳೆದ ಜೀವನದ ಘಟನೆಗಳು ಹೊರಬರುವುದು ಅವನ ವಿಪತ್ತಿನ ಸಂದರ್ಭದಲ್ಲಿ.  ಆದರೆ ಮಂಜುನಾಥ ಫಾರೆಸ್ಟ್ ಗಾರ್ಡ್ ದತ್ತಾರಾಮ, ದಾಬಾಕ್ಕೆ ಬಾಳೆಲೆ ಸಪ್ಲೈ ಮಾಡುತ್ತಿದ್ದ ಮಲ್ಲಿಯಂತ ಅಮಾಯಕ ಜೀವಗಳನ್ನು ಬಲಿ ಪಡೆದ ಕಿರಾತಕನಾಗಿ ಕಾಣುತ್ತಾನೆ. ಅಲ್ಲದೆ ವಿಶ್ವನಾಥ, ವೆಂಕಟ ಆಚಾರಿಯಂತ ಬಂಟರನ್ನು ಅಂಗೈಯಲ್ಲಿಟ್ಟುಕೊಂಡು  ಬೇಕಾದಾಗ ಬೇಕಾದಂತೆ ಬಳಸಿಕೊಳ್ಳುವ ದಾಳಗಳನ್ನಾಗಿ ಮಾಡಿಕೊಳ್ಳುತ್ತಾನೆ. ಪರಿಸರವಾದಿಗಳಾದ ಮಾಳಸೇಕರರದ್ದು ಹೋರಾಟದ ಬದುಕು. ಸದಾ ಅವರಲ್ಲಿ ತುಡಿಯುವ ಪರಿಸರ ಪ್ರಜ್ಞೆ ನಳಿನಿಯ ಮೇಲೂ ಪ್ರಭಾವ ಬೀರಿ ಗಟ್ಟಿತನದ ಪಾತ್ರವಾಗಿ ಉಳಿಯುತ್ತದೆ. ಕಾಡ್ಗಿಚ್ಚು, ಲಾರಿಗಳ ಮುಷ್ಕರ, ರಸ್ತೆಯ ಅಪಘಾತ  ಮುಂತಾದವುಗಳ ಹಿಂದಿದ್ದ  ಮಂಜುನಾಥನ ಕೈವಾಡ ಕೇವಲ ತನ್ನ ಸ್ವಾರ್ಥ ಸಾಮ್ರಾಜ್ಯದ ಕಳ್ಳಮಾಲನ್ನು ಸಾಗಿಸುವುದಕ್ಕಾಗಿ ಮಾಡಿಕೊಂಡಿದ್ದ ಯೋಜನೆಗಳು. ತನ್ನ ರಹಸ್ಯ ಕೋಟೆಯನ್ನು ಯಾರೂ ಭೇದಿಸಲಾರದಂತೆ ಕ್ರಮವಹಿಸಿದ್ದರು ಕೂಡ ಯಾರಾದರೂ ಭೇದಿಸಿದರೆ ಯಾವುದೋ ನೆಪಮಾಡಿ ಅವರಿಗೆ ಮುಕ್ತಿ ತೋರಿಸುವ ಚಾಕಚಕ್ಯತೆಯಲ್ಲಿ ಮಂಜುನಾಥ ನಿಪುಣ. 

ಇನ್ನು ಆಶಾ ಕಾರ್ಯಕರ್ತೆಯರ ವೃತ್ತಿ ಜೀವನದಲ್ಲಿ ಅದರಲ್ಲೂ ಕಾಡು ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಎದುರಾಗುವ ಸವಾಲುಗಳನ್ನು, ನೆಟ್ವರ್ಕ್ ಇಲ್ಲದ ಸ್ಥಳಗಳಲ್ಲಿಯೂ ಜೀವ ಉಳಿಸಲು ಅವರು ಹೋರಾಡುವ ಮಾನವೀಯತೆಯನ್ನು, ಅವರ ಕಷ್ಟಕರವಾದ ದಾರಿಗಳನ್ನು ಕಾದಂಬರಿಯು ಅನಾವರಣಗೊಳಿಸುತ್ತದೆ. ಕೊನೆಯವರೆಗೂ ಕುತೂಹಲ ಕೆರಳಿಸುವ ಮತ್ತೊಂದು ಸಂಗತಿ ಗಿಳಿ ಹೆಸರು ಮೈಬಣ್ಣದ ವಿಚಿತ್ರ ಚಿತ್ತಾರವಿರುವ ಕಾರು. ಹಿಂಬದಿಯ ಗಾಜಿಗೆ ಹಸಿರು ಮರದ ಚಿತ್ರವುಳ್ಳ ಹಾಗೂ ಮುಂಬದಿಯ ಗಾಜಿಗೆ ಕೆಂಪು ಕಣ್ಣುಗಳ ಚಿತ್ರವಿರುವ ಈ ಕಾರು ಬಂದಾಗೊಮ್ಮೆ ತಾಯವ್ವ ಹೇಳುವಂತೆ ಅಪಶಕುನದಂತೆಯೇ ಭಾಸವಾಗಿ ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಒಂದೇ ಆಯಿತು ಎಂಬಂತೆ ಮರಣಗಳು ಸಂಭವಿಸುತ್ತವೆ. ಆದರೆ ಈ ಯಮರೂಪಿ ಕಾರು ಅಂತ್ಯದಲ್ಲಿ ಜೀವ ಉಳಿಸುವ ಸಂಜೀವಿನಿಯಾಗುತ್ತದೆ. ಒಟ್ಟು 15 ಅಧ್ಯಾಯಗಳಲ್ಲಿರುವ ಕಾದಂಬರಿಯ ಉಳಿದ ಪಾತ್ರಗಳಾದ ಯಮುನಕ್ಕ, ಕೇಮು, ಕುಟ್ನ, ಮಳಲಿ, ಹಮ್ಮಣ್ಣ, ಗಿರಣಿ ಪಾರ್ವತಕ್ಕ ಮುಂತಾದ ಪಾತ್ರಗಳು ಅಗತ್ಯಕ್ಕೆ ತಕ್ಕಷ್ಟು ಬಂದು ಹೋಗುತ್ತವೆ. ಪ್ರೇಮ,ದ್ವೇಷ, ತಾಳ್ಮೆ, ಪ್ರತೀಕಾರ, ಈರ್ಶೆ, ಕಳ್ಳಸಾಗಣೆ, ಪರಿಸರ ಕಾಳಜಿ, ಆಶಾಕಿರಣ, ಜನನ ಮರಣ, ಸಮಯಸಾಧಕತೆ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲವುಗಳ ಮೇಲೆ ಬೆಳಕು ಚೆಲ್ಲುವ ಕಾದಂಬರಿ ವಾಸ್ತವದ ತಲ್ಲಣಗಳಿಗೆ ಕಿವಿಯಾಗುತ್ತದೆ. 

‍ಲೇಖಕರು avadhi

April 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: