ಪುಷ್ಪಾಗೆ ಹುಟ್ಟುಹಬ್ಬದ ದಿನವೇ ಒಲಿದ ವಿಜಯ…

ಫೋಟೋ : ಕಾವ್ಯಶ್ರೀ ಎಚ್

ಇಂದು ಎಚ್ ಎಲ್ ಪುಷ್ಪ ಅವರ ಹುಟ್ಟು ಹಬ್ಬದ ದಿನ. ಬೆಳಗ್ಗೆ ಎಲ್ಲ ಫೇಸ್ ಬುಕ್ ನಲ್ಲಿ ಅವರಿಗೆ ಹುಟ್ಟು ಹಬ್ಬದ ಅಭಿನಂದನೆಯ ಸುರಿಮಳೆ ಸುರಿದಿತ್ತು. ಅದು ಸಂಜೆಯ ವೇಳೆ ಅಭಿನಂದನೆಯ ಮಳೆಯಾಗಿ ಪರಿವರ್ತನೆಯಾಗಿತ್ತು.

‘ಅವಧಿ’ ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯ ಫಲಿತಾಂಶವನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸುತ್ತಿದ್ದಂತೆಯೇ ‘ಅವಧಿ’ಯ ಫೇಸ್ ಬುಕ್ ತಾಣದಲ್ಲಿ ನಾಡಿನ ಎಲ್ಲೆಡೆಯಿಂದ ಎಚ್ ಎಲ್ ಪುಷ್ಪ ಅವರನ್ನು ಅಭಿನಂದಿಸುತ್ತಿದ್ದಾರೆ.

ಖ್ಯಾತ ಲೇಖಕಿ ಇಂದಿರಾ ಹೆಗ್ದೆಯವರು ‘ಇಂದು ಪುಷ್ಪ ಅವರ ಜನ್ಮದಿನವೂ ಆಗಿತ್ತು. ಅವರ ವಿದ್ವತ್ತಿಗೆ, ಸನ್ನಡತೆಗೆ ಸಂದ ಜಯ ಇದು’ ಎಂದು ಬಣ್ಣಿಸಿದ್ದಾರೆ.

ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಮ್ ಹಾಗೂ ಸಾಹಿತಿ ಡಾ. ಆನಂದ ಋಗ್ವೇದಿ ಇವರ ನಡುವೆ ಈ ಸಂದರ್ಭದಲ್ಲಿ ಒಂದು ಸ್ವಾರಸ್ಯಕರ ಚರ್ಚೆ ನಡೆದಿದೆ. ಸೀತಾರಾಮ್ ಅವರು ‘ದೊಡ್ಡಬಳ್ಳಾಪುರಕ್ಕೆ ಜಯವಾಗಲಿ’ ಎಂದು ಕಾಮೆಂಟ್ ಮಾಡಿದರೆ, ಆನಂದ್ ಋಗ್ವೇದಿಯವರು ‘ನಿಮ್ಮೂರ ಮಗಳೇ ನಮ್ಮೂರ ಸೊಸೆ’ ಎಂದು ಪ್ರತಿಕ್ರಿಯಿಸಿದ್ದರು. ಅನಂತರ ಆರ್ ಜಿ ಹಳ್ಳಿ ನಾಗರಾಜ್ ಅವರು ದಾವಣಗೆರೆ ಜಿಲ್ಲೆಗೆ ಸೇರಿದವರೇ ಎಂಬ ಚರ್ಚೆ ಮುಂದುವರೆಯಿತು.

ಡಾ. ಪುರುಷೋತ್ತಮ ಬಿಳಿಮಲೆ, ಎನ್ ಆರ್ ವಿಶುಕುಮಾರ್, ಡಾ. ನಾ ಸೋಮೇಶ್ವರ್, ವಿದ್ಯಾರಶ್ಮಿ ಪೆಲತ್ತಡ್ಕ, ಸುಧಾ ಆಡುಕಳ, ಶಿವರಾಮ ಪಡಿಕ್ಕಲ್, ಬಿ ಎನ್ ಮಲ್ಲೇಶ್, ರಮೇಶ್ ಉಡುಪ, ಎಮ್ ಜಿ ಚಂದ್ರಶೇಖರಯ್ಯ, ಟಿ ಆರ್ ಚಂದ್ರಶೇಖರ್, ಅಶೋಕ್ ಶೆಟ್ಟರ್, ಆಶಾ ರಘು, ರೇಣುಕಾ ನಿಡಗುಂದಿ, ಬಿ ವಿ ಭಾರತಿ, ವಿಜಯಲಕ್ಷ್ಮಿ ಅಭಿನಂದನೆ ಸಲ್ಲಿಸಿದ್ದಾರೆ.

ಎಚ್ಎಲ್ ಪುಷ್ಪ ಅವರು ರಂಗಭೂಮಿ ಚಟುವಟಿಕೆಯಲ್ಲಿಯೂ ಅತ್ಯಂತ ಸಕ್ರಿಯ. ಅವರ ಪಿಎಚ್ ಡಿ ಪ್ರಬಂಧದ ವಿಷಯ ರಂಗಭೂಮಿ ಕುರಿತದ್ದೆ ಆಗಿದ್ದು, ಸಿ ಜಿ ಕೃಷ್ಣಸ್ವಾಮಿ ಅವರು ಮಾರ್ಗದರ್ಶಕರಾಗಿದ್ದರು. ಈ ಹಿನ್ನೆಲೆಯಲ್ಲಿ ರಂಗಭೂಮಿ ಅನೇಕರು ಪುಷ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಶಶಿಧರ್ ಅಡಪ, ಶಶಿಧರ್ ಬಾರಿಘಾಟ್, ಗೀತಾ ಸುರತ್ಕಲ್, ಆಲೂರು ದೊಡ್ಡ ನಿಂಗಪ್ಪ, ಕೆ ಎಸ್ ಡಿ ಎಲ್ ಚಂದ್ರು, ಕೃಷ್ಣ ರಾಯಚೂರು, ಪ್ರಸಾದ್ ರಕ್ಷಿದಿ, ವಾಣಿ ಸತೀಶ್, ಚಂದ್ರ ಸೌಗಂಧಿಕಾ ಮುಂತಾದವರು ಅಭಿನಂದನೆಗಳನ್ನು ತಿಳಿಸಿದ್ದಾರೆ

ಎನ್ ಗಾಯಿತ್ರಿ ಅವರು ತಮ್ಮ ನಿರೀಕ್ಷೇ. ಸುಳ್ಳಾಗಲಿಲ್ಲ ಎಂದು ಸಂಭ್ರಮಪಟ್ಟಿದ್ದಾರೆ.

ಕೆ ಸುಶೀಲಾ ಅವರು ‘ಗೆಳತಿಯ ಗೆಲುವು ನಿರೀಕ್ಷಿತವಾಗಿತ್ತು’ ಎಂದು ಹೇಳಿದರು.

ಈ ಮಧ್ಯೆ ಸುಕನ್ಯ ಕಳಸಾ ಅವರು ಬಾದಾಮಿ ಹಾಗೂ ಗೋಡಂಬಿಯನ್ನು ಸೇರಿಸಿ ಮಾಡಿದ ಹೋಳಿಗೆಯ ಚಿತ್ರ ಹಾಕಿ ಇದು ಪುಷ್ಪ ಅವರ ಜಯಕ್ಕೆ ಸಾರಿದ್ದಾರೆ

ಇನ್ನು ಅಭಿನಂದನೆಗಳು ಬರುತ್ತಲೇ ಇವೆ.

‍ಲೇಖಕರು Admin

September 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಹೃತ್ಪೂರ್ವಕ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: