ಗಝಲ್
ಸಂತೆಬೆನ್ನೂರು ಫೈಜ್ನಟ್ರಾಜ್
ಹಾಡ ಜಾಡಿನಲ್ಲಿ ಸಾಗಿ ಕಳೆದು ಹೋಗಿರುವೆ ನಾನು
ಕಾಡೆ ವಾಸಿ ಹಾಡಿಗಿಂತ ಪದ ಸಿಗದೆ ಸುಮ್ಮನೆ
ದಾರಿ ತುಂಬಾ ಕನಸ ಹೆಣದ ಪಾಪದ ಹೂವುಗಳು
ತುಳಿದು ಸಾಗಲಾರದೇ ನಿಂತು ನೋಡುತಿರುವೆ ಸುಮ್ಮನೆ
ಅಲ್ಲೊಂದು ಇಲ್ಲೊಂದು ಗಮನ ಸೆಳೆವ ಸಾಲುಗಳು
ಪೋಣಿಸದೇ ಸೋತು ಹೋದೆ ಏಕೋ ನಾ ಸುಮ್ಮನೆ
ದಣಿದ ಹೃದಯ ಮೌನಗೀತೆ ಹಾಡದೇಕೋ ಕಾಡಿನಲಿ
ನಾಡಲಿರದ ಪ್ರೀತಿಯ ಹುಡುಕೆ ಬರಿ ನಿರಾಶೆ ಸುಮ್ಮನೆ
ಹಾಡೊಂದು ಕಟ್ಟವುದು ಪ್ರೀತಿ ಕಟ್ಟಿದಂತೆಯೆ
ಸಿಕ್ಕಿದ್ದು ನಮ್ಮ ಪಾಲು ಸಿಗದಿರುವುದಕೇಕೆ ಮನ ಸುಮ್ಮನೆ
ಕನಸ ಕಾಡ ನಡುವೆ ಹಾಡಿಗಾಗಿ ಹಂಬಲ
ಪ್ರೀತಿ ಮಾಡೋ ‘ಫೈಜ್’ ಹಾಡದಿರಲಾರ ಸುಮ್ಮನೆ!!
chennaagide..matla,makta,khafia kadege gaman kottare gajalge geyate barutte..!