**
ಪ್ರೀತಿಯ ಪುಸ್ತಕ ಪ್ರೇಮಿಯೇ,
ಸಮಕಾಲೀನ ಬರಹಗಾರರ ಚಿಂತನೆ, ಸವಾಲುಗಳು, ಯೋಚಿಸುವ ಬಗ್ಗೆ ಬೆಳಕು ಚೆಲ್ಲುವ “ಹಳೆ ಬಾಟ್ಲಿ ಹೊಸ ವೈನು” ಸಂವಾದ ಕಾರ್ಯಕ್ರಮ ನಮ್ಮ ಸಾಹಿತ್ಯದ ಹೊಸ ಪ್ರಯೋಗ, ಹಳೆ ಬೇರು ಹೊಸ ಚಿಗುರು ಎನ್ನುವಂತೆ ನಮ್ಮ ನಡುವೆ ಇರುವ ಎಚ್ಚರಿಕೆಯ ಗಂಟೆಯಾಗಿರುವ ಹಿರಿಯ ಬರಹಗಾರು ಸಮಕಾಲೀನ ಬರಹಗಾರರನ್ನು ಕೂರಿಸಿಕೊಂಡು ನಡೆಸಿಕೊಡುವ ಸಂವಾದ ಕಾರ್ಯಕ್ರಮ ಇದಾಗಿದೆ.
ಈಗಾಗಲೇ ಮೂರು ಯಶಸ್ವಿ ಸಂಚಿಕೆಗಳು ನಡೆದಿವೆ. ಕಥೆಗಾರರಾದ ಶಶಿಕುಮಾರ್ (ಬ್ಯಾಟೆಮರ ಕೃತಿ) ಮತ್ತು ಕಿರಣ್ ಕುಮಾರ್ ಕೆ ಆರ್ (ಕಾಜೂಬಿಸ್ಕೆಟ್ ಕೃತಿ) ರವರ ಜೊತೆ ಸಂಧ್ಯಾರಾಣಿ ನಡೆಸಿಕೊಟ್ಟ ಸಂವಾದ, ಕತೆಗಾರ್ತಿಯರಾದ ಅರ್ಪಣಾ ಎಚ್ ಎಸ್ (ಕೆಂಪು ಕೃತಿ) ಮತ್ತು ದಯಾ ಗಂಗನಘಟ್ಟ (ಉಪ್ಪು ಚ್ಚಿಮುಳ್ಳು) ಕೃತಿ ರವರ ಜೊತೆ ಜಿ.ಎನ್.ಮೋಹನ್ ನಡೆಸಿಕೊಟ್ಟ ಸಂವಾದ ಮತ್ತು ಸಮಕಾಲೀನ ಕವಿಗಳಾದ/ ಕವಯತ್ರಿಯರಾದ ಚಾಂದ್ ಎನ್ ಪಾಷ, ಲಕ್ಷ್ಮಣ್ ವಿ ಎ, ವಿದ್ಯಾರಶ್ಮಿ ಪೆಲ್ಲತಡ್ಕ ಮತ್ತು ನಾಗಶ್ರೀ ಎಸ್ ಅಜಯ್ ಅವರ ಜೊತೆ ಎಂ.ಆರ್.ಕಮಲಾ ನಡೆಸಿಕೊಟ್ಟ ಸಂವಾದ. ಕಳೆದ ಮೂರು ಸಂಚಿಕೆಗಳು.
ಎರಡು ಸಂಚಿಕೆಗಳು ‘ಸಂಯತಿ’ ಜಾಗದಲ್ಲೂ, ಒಂದು ಸಂಚಿಕೆ ‘ಮಹಾಮನೆ’ ಜಾಗದಲ್ಲೂ ನಡೆದಿದೆ.
‘ತ್ರಿಲೋಕ ಬರಹ’, ‘ಬಾ ಗುರು ಬುಕ್ ತಗೋ’ ತಂಡದ ಸಹಯೋಗದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುತ್ತಿರುವ ಈ ಸಾಹಿತ್ಯ ಪ್ರಯೋಗಕ್ಕೆ ನೀವು ಕೂಡ ಕೈ ಜೋಡಿಸಬಹುದು.
– ಸ್ಥ ಳದ ಅವಕಾಶ (೨೫-೩೦ ಮಂದಿ ಕೂರುವಷ್ಟು, ಬಸ್ & ಮೆಟ್ರೊ ನಿಲ್ದಾ ಣ ಸಮೀಪವಿದ್ದ ಲ್ಲಿ ಸೂಕ್ತ)
– ಹೊಸ ಪುಸ್ತಕಗಳ ಉಡುಗೊರೆ (ಬರಹಗಾರರಿಗೆ ಉಡುಗೊರೆ) – ಧನ ಸಹಾಯ (ಕನಿಷ್ಠ ಗರಿಷ್ಠ ದ ಒತ್ತಾಯವಿಲ್ಲ )
– ಬೇರೆ ಯಾವುದೇ ರೀತಿಯ ಸೃಜನಾತ್ಮಕ ಸಹಾಯ. ನಿಮ್ಮ ಭರವಸೆಯ ಉತ್ತರಕ್ಕಾಗಿ ಎದುರು ನೋಡುತ್ತಾ ಮತ್ತು ಒಟ್ಟಿಗೆ ಕೈ ಹಿಡಿದು ಹೆಜ್ಜೆ ಹಾಕುತ್ತ ಕನ್ನಡ ಸಾಹಿತ್ಯದ ಕಂಪನ್ನು ಪಸರಿಸುವ ಅಭಿಲಾಷೆ ವ್ಯಕ್ತಪಡಿಸುತ್ತ.
– ಜಯರಾಮಚಾರಿ & ವಿಕ್ರಮ್ ಬಿ.ಕೆ (ಬಾ ಗುರು ಬುಕ್ ತಗೋ & ತ್ರಿಲೋಕ ಬರಹ)
9739082600 /7676625251
0 ಪ್ರತಿಕ್ರಿಯೆಗಳು