ಸ್ವ-ಭಾವ ಚಿತ್ರಗಳು…

ಕೆ ವಿ ಸುಬ್ರಹ್ಮಣ್ಯಂ

ನಮ್ಮ ಸಂದರ್ಭದ ಅಸಾಮಾನ್ಯ ಭಾವಚಿತ್ರಕಾರರೇ ಅಲ್ಲದೆ ವಿಶಿಷ್ಟ ಸ್ವ – ಭಾವಚಿತ್ರ (self- portraits)ಕಾರರೂ ಆಗಿದ್ದ ಕೆ. ಎನ್. ರಾಮಚಂದ್ರನ್ ಅವರ ನೆನಪಿಗೆ ಈ ಕೆಲವು ಚಿತ್ರಗಳು. ಹೆಬ್ಬಾರ್, ಕಾರಂತರನ್ನೆ ಅಲ್ಲದೆ ನಮ್ಮಲ್ಲಿ ಹಲವರನ್ನು ಅವರದೇ ಆದ ಗ್ರಹಿಕೆಯಿಂದ ರಾಮಚಂದ್ರನ್ ಚಿತ್ರಿಸಿದ್ದಾರೆ. ಅಚ್ಚರಿಯೆಂದರೆ ಬಹುತೇಕ ಅವರ pictorial ಆದ ಕೃತಿಗಳಲ್ಲಿ ಅವರ ಮುಖವೂ ಇರುತ್ತಿತು! ನಮ್ಮಲ್ಲಿ ಕೆಲವರನ್ನೂ ಹಾಗೆ ಗುಂಪಿನಲ್ಲಿ, ಯಾವುದೊ ವೇಷದಲ್ಲಿ ಸಂಯೋಜಿಸಿಬಿಡುತ್ತಿದ್ದರು. ಕೆಲವು ಕೃತಿಗಳನ್ನು ತೋರಿಸಿ, ಅವರು “ನೋಡಿ ನೀವಿಲ್ಲಿದ್ದೀರಿ” ಎಂದಾಗ ನನಗೆ ಅಚ್ಚರಿ. ‘ಮಾಡೆಲ್’ ಇಲ್ಲದೆಯೇ ವ್ಯಕ್ತಿಗಳನ್ನು, ಅವರು ಇದ್ದಹಾಗೆಯೇ ಚಿತ್ರಿಸುವ ಅಸಾಮಾನ್ಯ ಸಾಮರ್ಥ್ಯ ಅವರದು.ಈ ಎಲ್ಲಕ್ಕಿಂತ ಮುಖ್ಯವಾಗಿ ಅವರನ್ನೇ ಅವರು ನೋಡಿಕೊಂಡು ಚಿತ್ರಿಸಿರುವ ಅಪರೂಪದ ಹಲವು ‘ಸ್ವ-ಭಾವಚಿತ್ರ’ಗಳು ಗಮನಿಸುವಂತಿವೆ.

ಸ್ವ-ಭಾವಚಿತ್ರ ಪ್ರಕಾರದ ಪರಂಪರೆಯೂ ಕೌತುಕವನ್ನು ಉಂಟುಮಾಡಬಲ್ಲದು. ಆ ಹಿಂದಿನ ಹಲವರೊಂದಿಗೆ ರೆಮ್ ಬ್ರಾಂಟ್, ಪಿಕಾಸೋ, ಗಾಗಿನ್, ವ್ಯಾನ್ ಗಾಗ್ ಮೊದಲದವರು ಇಲ್ಲಿ ನೆನಪಾಗುತ್ತರಲ್ಲವೇ . ಪಿಕಾಸೋ ಮತ್ತು ವ್ಯಾನ್ ಗಾಗ್ ರಂತೂ ತಮ್ಮ ಹಲವು ವಯೋಮಾನಗಳ ಸಂದರ್ಭದ ಹಲವು ಸ್ವ – ಭಾವಚಿತ್ರಗಳನ್ನು ಅನನ್ಯವಾಗಿ ಚಿತ್ರಿಸಿಕೊಂಡಿದ್ದಾರೆ. ಅವು ಈಗ ವಿಖ್ಯಾತ.

ನಮ್ಮಲ್ಲಿ ಹೆಬ್ಬಾರ್, ಹುಸೇನ್ ರವರುಗಳ ಸ್ವ – ಭಾವ ಚಿತ್ರಗಳೂ ಹೆಚ್ಚು ಪರಿಚಿತವೇ ಆಗಿವೆ ; ಅದೊಂದು ವಿಶಿಷ್ಟ ಮನಸ್ಥಿತಿಯೇ ಸರಿ. ಇಂದು ಚಿತ್ರಿಸಲು ಬರದವರು ಸೆಲ್ಫಿ ತೆಗೆದು ಕೊಳ್ಳುವುದೂ ಈ ‘ಸ್ವ – ಭಾವಚಿತ್ರ’ ಪರಂಪರೆಯ ಮುಂದುವರಿಕೆಯೇ ಆಗಿದೆ ಎಂದೂ ಹೇಳಬಹುದಲ್ಲವೇ?

‍ಲೇಖಕರು Admin

September 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: