ಸ್ಮಿತಾ ಶೆಣೈ ಕವಿತೆ – ಕಿಸೆಯ ಲಂಗ…

ಸ್ಮಿತಾ ಶೆಣೈ

ಆಂಟಿ ಕೊಡಿಸಿದ ನಾಲ್ಕು ಗೋಲಿಗಳಲ್ಲಿ ಒಂದೂ ಉಳಿಸಲಿಲ್ಲ ಅಣ್ಣ
ಆಚೆ ಮನೆಯ ಹುಡುಗನೊಂದಿಗೆ ಆಡಿ ಸೋತ
ಜೇಬಲ್ಲಿಟ್ಟುಕೊಳ್ಳಲು ಕೊಟ್ಟಿದ್ದೆ

ಹೋಗಲಿ ಬಿಡು
ಈಗ ನಿನಗವು ಇಲ್ಲ.. ಅವನಿಗೂ ಉಳಿಯಲಿಲ್ಲವಲ್ಲ
ಇಲ್ಲದ ಗೋಲಿಗಾಗಿ ಅಣ್ಣ ತಂಗಿ ಕಚ್ಚಾಡಬಾರದು
ಅಂದಳಮ್ಮ
ನನಗೇಕೋ ಇದು ಸರೀ ತಿಳಿಯಲಿಲ್ಲ

ಹೋಗಲಿ ಬಿಡು
ಸಂತೆಗೆ ಹೋದಾಗ ನಿನಗೆ
ಬದಲಿಗೆ ಗೊಂಬೆ ತರುತ್ತೇನೆ
ಅವನಿಗದು ಬೇಡ,
ನೀನೇ ಆಡು.. ಅಂತೆ ಅಪ್ಪ
ನನಗದು ತೋಚಿರಲಿಲ್ಲ

ಅಣ್ಣನೋ.. ಸೋಲುವ ಕಷ್ಟ ನಿನಗೇನು ಗೊತ್ತು?
ಗೋಲಿಯನ್ನೇ ಆಡದವಳಿಗೆ?
ನಾನಾದರೂ ಆಡಿಸೋತೆ
ನೀನು ಸುಮ್ಮನೆ
ಇಟ್ಟುಕೂತಿದ್ದೆಯಲ್ಲ
ನನಗೆ ಈ ನ್ಯಾಯ ತಿಳಿಯಲೇ ಇಲ್ಲ

ಆ ಬಾರಿಯ ಹೊಸಲಂಗಕ್ಕೆ ಒಂದು ಕಿಸೆ ಹೊಲಿ ಬೇಕೆಂದಾಗ ಎಲ್ಲರೂ ನಕ್ಕರು
ಅದಕ್ಕೆ ಸರಿಯಾಗಿ..
ಲಂಗಕ್ಕೆ ಕಿಸೆ ಇಡುವುದಿಲ್ಲ
ಎಂದ ಟೈಲರ್
ಎನಾಗುತ್ತದೆ ಎಂದರೆ
ನೆರಿಗೆ ಕಮ್ಮಿ ಆದೀತಂತೆ
ಅಮ್ಮನಿಗೆ ನಾನು ತುಂಬ ನೆರಿಗೆ ಲಂಗ ಹಾಕಿ
ಗೊಂಬೆಯಂತೆ ಕಾಣುಬೇಕಂತೆ
ನಾನು ಅತ್ತರೂ ಕೊನೆಗೆ ಒಪ್ಪಿದೆ

ಈಗಲೂ ನನ್ನ ಲಂಗಕ್ಕೆ ಕಿಸೆ ಇಲ್ಲ
ನನಗೊಂದು ಕನಸಿದೆ
ನಾನೇ ಕಿಸೆಯ ಲಂಗಗಳನ್ನು ಹೊಲಿಯಬೇಕು
ಲಂಗಕ್ಕೂ ಕಿಸೆ ಇರಬೇಕು

‍ಲೇಖಕರು Admin

January 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: