ಸ್ಫೂರ್ತಿ
ಅಳುತ್ತಾ ಜನಿಸಿದೆಯಾ!?
ಮನೆತುಂಬ ಸಂತೋಷ ಸಂಭ್ರಮ,
ಆಟ, ಪಾಠ, ಊಟ, ಓಟ
ಅಪ್ಪ ಅಮ್ಮನಿಗೆ ತರಾವರಿ ಚಿಂತೆಗಳು;
ಅವರ ಸಹಾಯದಿಂದ
ಬದುಕಿನ ಒಂದು ಹಂತಕ್ಕೆ ಬಂದು ತಲುಪಿದೆ,
ಉದ್ಯೋಗ, ಸಿದ್ಧಾಂತ, ಪ್ರೀತಿ, ನೋವು,
ಮೋಸ, ವಂಚನೆಗಳ ಭಯ ನನ್ನನ್ನು ಆವರಿಸಿತು.
ಇಗೋ!
ಅವಳಿಗಿನ್ನೂ ಮದುವೆಯಾಗಿಲ್ಲ ಎಂಬ ಕೂಗು ಒಂದೆಡೆ,
ಓಹೋ!
ಕಂಪನಿ ಬದಲಾಯಿಸುದಿಲ್ಲವೆ?
ವೃತ್ತಿ ಜೀವನ, ಹಣ, ಸ್ಥಾನ ದೊಡ್ಡದು
ಎಂಬ ಮಾರ್ದನಿ ಇನ್ನೊಂದೆಡೆ,
ಅಯ್ಯೋ!
ನಿನ್ನ ಹವ್ಯಾಸ ಪೂರ್ತಿ ನಿಲ್ಲಿಸಿದೆಯಾ?
ಎಂಬ ಮಾತು ಮತ್ತೊಂದೆಡೆ,
ರಾಮ ರಾಮ!
ಹೆಣ್ಣು ಸುಸಂಸ್ಕೃತ, ಸಜ್ಜನ, ಸವಿನಯದಿಂದ
ಇರಬೇಕು ಎಂಬ ಗೋಗರೆತ ಮಗದೊಂದುಕಡೆ.

ಆದರೆ;
ನನ್ನ ಕನಸುಗಳು?
ನನ್ನ ಆಸೆ, ಆಕಾಂಕ್ಷೆಗಳು?
ನನ್ನ ಅಭಿರುಚಿಗಳು?
ಸಮಾಜದ ಹೊಟ್ಟೆ ತುಂಬಿಸಲಾ?
ಇಲ್ಲಾ ನನ್ನ ಆತ್ಮ ತೃಪ್ತಿ ದೊಡ್ಡದಾ?
ನಾ ಅತ್ತರೂ, ನಕ್ಕರೂ
ನಿಲ್ಲದು ಸಮಾಜದ ಅಪಹಾಸ್ಯ.
ಹ್ಮ!
ಇದು ನನ್ನೊಬ್ಬಳ ಕತೆಯಲ್ಲಾ!
ನಮ್ಮೆಲ್ಲರ ಕತೆ.
ನೆನ್ನೆ ನಾಳೆಗಳ ಹೋರಾಟದಲ್ಲಿ
ಬೆತ್ತಲಾಗುತ್ತಾ ನಿಂತಿದೆ ನಮ್ಮ
ಇಂದಿನ ಭಗ್ನಗೊಂಡ ಕನಸುಗಳು.
0 ಪ್ರತಿಕ್ರಿಯೆಗಳು