ನಿವೃತ್ತ ಬ್ಯಾಂಕರ್ ಗಳಾದ ಶ್ರೀಮತಿ, ಶ್ರವಣ ಕುಮಾರಿ ಅವರ ಕಥಾಸಂಕಲನ ‘ಬೆಳಕು ಹರಿಯುವ ಮುನ್ನ’ ಮತ್ತು ಶ್ರೀ ಗುರುರಾಜ ಶಾಸ್ತ್ರಿಯವರ ಕಥಾಸಂಕಲನ ‘ಕತೆ-ಕೋಸಂಬರಿ’ ಪ್ರವಾಸ ಕಥನ ‘ಬಾ ಗುರು ಪ್ರವಾಸ ಹೋಗೋಣ’ ಕೃತಿಗಳನ್ನು. ಖ್ಯಾತ ಕಾದಂಬರಿಕಾರ ಶ್ರೀ ಗಜಾನನ ಶರ್ಮ ಇಂದು ಬಿಡುಗಡೆ ಮಾಡಿದರು.
‘ಬೆಳಕು ಹರಿಯುವ ಮುನ್ನ’ ಕಥಾ ಸಂಕಲನದ ಪರಿಚಯವನ್ನು ಕತೆಗಾರ ಜಿ. ವಿ. ಅರುಣ, ‘ಕತೆ-ಕೋಸಂಬರಿ’ ಕಥಾಸಂಕಲನದ ಪರಿಚಯವನ್ನು ಸಾಹಿತಿ ಶಶಿಧರ ಹಾಲಾಡಿ ಮಾಡಿಕೊಟ್ಟರು. ‘ಗುರು ಪ್ರವಾಸ ಹೋಗೋಣ’ ಪ್ರವಾಸ ಕಥನದ ಪರಿಚಯವನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಹಾಸ್ಯ ಸಾಹಿತಿ ಎಂ. ಎಸ್. ನರಸಿಂಹಮೂರ್ತಿಯವರು ಮಾಡಿದರು. ಲೇಖಕರಾದ ಶ್ರವಣ ಕುಮಾರಿ ಮತ್ತು ಗುರುರಾಜ ಶಾಸ್ತ್ರಿ ಕೃತಿಗಳ ಪ್ರಕಾಶಕರಾದ ‘ಸ್ನೇಹ ಬುಕ್ ಹೌಸ್’ ನ ಶ್ರೀ ಕೆ.ಬಿ. ಪರಶಿವಪ್ಪ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮನ್ವಯ ಸಮಿತಿ, ಕನ್ನಡವೇ ಸತ್ಯ ಪ್ರತಿಷ್ಠಾನ ದ ಅಧ್ಯಕ್ಷರಾದ ಬೆಂ. ಶ್ರೀ. ರವೀಂದ್ರ ವಹಿಸಿದ್ದರು. ರವಿ ಕುಸಬಿ ಸ್ವಾಗತಿಸಿದರು. ಹು. ವಾ. ಶ್ರೀ ಪ್ರಕಾಶ್ ವಂದಿಸಿದರು. ಡಾ. ಶುಭಶ್ರೀ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಹೃತ್ಪೂರ್ವಕ ಧನ್ಯವಾದಗಳು