ಸೊಳ್ಳೆ ಮಗ್ಗಿ ಹೇಳುತ್ತಾ?

ಚಿಂಚು – ಮಿಂಚು ಕಥಾಸರಣಿ -೧

ಹೇಮಾ ಹೆಬ್ಬಗೋಡಿ

ʼ2 X1=2

2 x 2 =4

2 x 3 = ಜುಂಯ್‌… ಗುಂಯ್…..ಜುಂಯ್‌…

ಈ ಸೊಳ್ಳೆನಾ… ಕಿವಿಯ ಹತ್ತಿರ ಅತ್ತಿತ್ತ ಕೈಯಾಡಿಸುತ್ತಾ ಇದ್ದ ಚಿಂಚುಗೆ ಎದುರಿಗೊಂದು ಸೊಳ್ಳೆ ಕಾಣಿಸಿತು. ಟಪ್‌ ಅಂತ ಹೊಡೆದಳು. ಆದರೆ ಸೊಳ್ಳೆ ಸಿಗಲಿಲ್ಲ. ಸೊಳ್ಳೆ ಬ್ಯಾಟ್‌ ಹಿಡಿದು ಅತ್ತಿಂದಿತ್ತ ಹಾರಾಡುತ್ತಿದ್ದಳು.

ರೂಂ ಒಳಗೆ ಬಂದ ಅಮ್ಮನಿಗೆ ಇವಳ ಎಗರಾಟ ನೋಡಿ ಸಿಟ್ಟು ಬಂತು ʼಮಗ್ಗಿ ಓದು ಅಂದರೆ ಏನು ಮಾಡ್ತಾ ಇದೀಯಾ?ʼ

ʼಅಮ್ಮ ಈ ಸೊಳ್ಳೆಗಳು ನನಗೆ ಓದೋಕೆ ಬಿಡ್ತಿಲ್ಲ. ನಾನು 2 one zarrr ಅನ್ನೋ ಹೊತ್ತಿಗೆ ಕಿವಿ ಹತ್ತಿರ ಬಂದು ಜುಂಯ್‌..ಗುಂಯ್‌.. ಅಂತಿದೆʼ

ʼಸುಮ್ಮನೆ ಕತೆ ಕಟ್ಟಬೇಡ. ಸೊಳ್ಳೆ ಬತ್ತಿ ಹಚ್ಚುತೀನಿ. ಸುಮ್ಮನೆ ಕೂತು ಓದು. ಇನ್ನರ್ಧ ಗಂಟೇಲಿ ಮುಗಿಸಿರಬೇಕುʼ ಅಂತ ಅಮ್ಮ ಸೊಳ್ಳೆ ಬತ್ತಿ ಹಚ್ಚಿ ಹೋದಳು.

ಮತ್ತೆ ಚಿಂಚು ಓದಲು ಕೂತಳು..

ಇದ್ದಕ್ಕಿದ್ದಂತೆ ಅವಳಿಗೆ ಸೊಳ್ಳೆಯ ಸದ್ದು ಮಗ್ಗಿ ಹೇಳುವ ಹಾಗೆ ಅನ್ನಿಸಲು ಶುರುವಾಯಿತು.

ರೂಮಿನ ಬಾಗಿಲು ತೆಗೆದು ಅಮ್ಮನಿಗೆ ಹೇಳಲು ಹೋದಳು.

ʼಅಮ್ಮ, ಅಮ್ಮ ಸೊಳ್ಳೆಗೂ ಮಗ್ಗಿ ಬರುತ್ತಮ್ಮʼ

ʼಚಿಂಚು ಈಗ ಓದೋಕೆ ಕೂರುತಿಯೋ ಇಲ್ಲವೋʼ ಅಂತ ಅಮ್ಮ ಗದರಿದಳು.

ʼಈ ಅಮ್ಮ ಯಾವಾಗಲೂ ಹೀಗೆ ನಾನು ಎಷ್ಟು ಇಂಟರೆಸ್ಟಿಂಗ್‌ ವಿಷಯ ಕಂಡುಹಿಡಿದಿದೀನಿ. ಕೇಳಿಸಿಕೊಳ್ಳೋದೆ ಇಲ್ಲ ಅಂತಾಳೆ. ನಾಳೆ ಸಿರಿಗೆ ಈ ವಿಷಯ ಹೇಳಬೇಕು.ʼ ಅಂದು ಕೊಂಡು ರೂಮಿಗೆ ಬಂದವಳು ಸೊಳ್ಳೆ ಬತ್ತಿ ಆರಿಸಿ ಕೂತಳು. ಮತ್ತೆ ಸೊಳ್ಳೆಯ ಸದ್ದು ಕೇಳಿಸಲು ಶುರುವಾಯಿತು.

ಅರ್ಧಗಂಟೆ ಬಿಟ್ಟು ಅಮ್ಮ ರೂಮಿಗೆ ಬಂದು ʼಓದಿದೆಯಾ?ʼ

ʼಓ ಆಗಲೇ ಓದಿಬಿಟ್ಟೆ. ಅಮ್ಮ ಮಗ್ಗೀನ ಹೊಸ ತರಹ ಹೇಳ್ತಿನಿ ಕೇಳ್ತಿಯಾ?ʼ

ʼಹೂಂ ಹೇಳುʼ

ʼ2 one zarrr 2

2 two zarrr 4

2 three zarrಊಂಂಂಂಂಂಂ

2 four ಜೂಂಯ್‌ಯ್‌ಯ್‌ʼ

ʼಏಯ್‌ ತರಲೆ ಏನಿದು?ʼ

ʼಅಮ್ಮ ಇದು ಸೊಳ್ಳೆ ಮಗ್ಗಿ. ಸೊಳ್ಳೇನೆ ಕಿವಿ ಹತ್ತಿರ ಬಂದು ಹೇಳಿಕೊಡ್ತುʼ

ʼಚಿಂಚು ತಲೆಹರಟೆ ಬೇಡʼ

ʼನಿಜವಾಗ್ಲೂ ಅಮ್ಮ. ನೀನು ಸುಮ್ಮನೆ ಕೇಳಿಸಿಕೋ ನಿನಗೂ ಕೇಳಿಸುತ್ತೆ. ಮಗ್ಗಿ ತರಹಾನೇ ಕೇಳಿಸುತ್ತೆ ತಾನೆ?ʼ

ಅಮ್ಮನಿಗೆ ಸಿಟ್ಟು, ನಗು ಒಟ್ಟಿಗೆ ಬಂತು.

ʼಚಿಂಚು ಅದು ಸೊಳ್ಳೆ ಮಗ್ಗಿ ಹೇಳೋದು ಅಲ್ಲ. ಅದು ಹಾರುವಾಗ ರೆಕ್ಕೆ ಎಷ್ಟು ಜೋರಾಗಿ ಬಡಿಯುತ್ತೋ ಅಷ್ಟು ಜೋರಾಗಿ ಸದ್ದು ಕೇಳುತ್ತೆ. ಅದು ನಮ್ಮ ಕಿವಿ ಹತ್ತಿರ ಹಾರುವಾಗ ನಮಗೆ ಆ ಸದ್ದು ಕೇಳುತ್ತೆ. ಈಗ ಸುಮ್ಮನೆ ಮಗ್ಗಿ ಹೇಳುʼ ಅಂದಳು

ಆ ಸದ್ದು ಸೊಳ್ಳೆ ಹೇಳೋ ಮಗ್ಗಿಯಲ್ಲ ಅಂತ ಅಮ್ಮ ಹೇಳಿದಾಗ ಸ್ವಲ್ಪ ಬೇಜಾರಾಯಿತು. ಆದರೂ ಅವಳಿಗೆ ಸೊಳ್ಳೆ ಮಗ್ಗಿ ಹೇಳಿದಂತೆ ಕೇಳಿಸುತ್ತಿತ್ತು. ʼನಾಳೆ ಸಿರಿ ಸಿಕ್ಕ ತಕ್ಷಣ ಸೊಳ್ಳೆ ಹೇಗೆ ಸದ್ದು ಮಾಡುತ್ತೆ ಅಂತ ಹೇಳಬೇಕು. ಅವಳಿಗೂ ಸೊಳ್ಳೆ ಸದ್ದು ಎಲ್ಲಿಂದ ಬರುತ್ತೆ ಅಂತ ಗೊತ್ತಿರಲ್ಲʼ, ಅಂತ ಅಂದುಕೊಂಡಳು.

‍ಲೇಖಕರು Admin

September 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: