ಸೂರ್ಯಗಿರಕಿ…

ಗೀತಾ ಹೆಗಡೆ

ಬಸ್ಸು ಭರ್ರೆಂದು ರಸ್ತೆ ಸೀಳಿ
ಹವಾ-ಮಜಲಿನಲಿ ಹಾರುತ್ತಿದೆ
ಸರಸರನೆ ಹರಿಯುವ
ಗಿಡ-ಮರಗಳು..

ಅಲೆಲೆ!? ರಸ್ತೆಗೆ ರಸ್ತೆಯೇ
ಸರಿಯುತ್ತಿದೆಯೆ? ಅರೆ!
ನಾವಿಲ್ಲಿ ಕೂತೇ ಇದ್ದೇವೆ! ಬೆಟ್ಟ-
ಗುಡ್ಡಗಳು ಚಲಿಸುವಾಗ!

ರಸ್ತೆ ಪಕ್ಕದಲ್ಲಿ ಎತ್ತರದ ಬೇಲಿ-ಹೂ
ಮೊಗ್ಗಿನಂಥ ಸ್ನಿಗ್ಧ ಮುಖದ
ಪುಟ್ಟಿ ಕೊಯ್ಯುತ್ತಿದ್ದಾಳೆ
ದೋಟಿ ಹಿಡಿದು
ಎಳೆ ಕೂಸು- ಅವಳ
ಬುಟ್ಟಿ ತುಂಬುವಷ್ಟರಲ್ಲಿ
ಚಾಲಕ ನಮ್ಮ
ತೀರ ಮುಂದೆ
ತಂದುಬಿಟ್ಟಿದ್ದಾನೆ!

ಜಗುಲಿಕಟ್ಟೆಯ ಮೇಲೆ ಕುಳಿತು ಬಗ್ಗಿ-
ಮಗ್ಗಿ ಉರುಹಾಕುವ ಆ ಬಾಲೆ-
ಗೆ ಲೆಕ್ಕ ತಪ್ಪುವುದಿಲ್ಲ- ಮುಂದೆಂದೂ
ಜಡೆ ಹಾಕುತ್ತಲೇ ಅಮ್ಮ
ಊರಿದ್ದಾಳೆ ತನ್ನ ಕಣ್ಣನ್ನೂ!

ಕಣ್ಣೆಲ್ಲ ಹನಿದ ಮದುವೆ ಹೆಣ್ಣನ್ನು
ಹಾಡುತ್ತ ಬೀಳ್ಕೊಡುತ್ತಿದ್ದಾರೆ-
ಮುನ್ನಿನ ಮದುವಣಗಿತ್ತಿಯರು
ಅವಳ ರಸ್ತೆಯದೆಷ್ಟು ದೂರವೋ
ಗೊತ್ತು-ಗುರಿಯೆಲ್ಲೋ!

ಮಗ ಮರೆತ ಊಟದ ಡಬ್ಬಿ
ಹಿಡಿದು
ಓಡುತ್ತಿದ್ದಾಳೆ ತಾಯಿ
ಉರಿಬಿಸಿಲಲ್ಲಿ ಬರಿ-
ಗಾಲಲ್ಲಿ- ಸೂರ್ಯ-
ಗಿರಕಿ ಹೊಡೆಯುತ್ತಿದ್ದಾನೆ- ಆ
ಒಡಲಲ್ಲಿ!

ಯಾರೋ ಅಜ್ಜಿಗೆ ಇಳಿಯುವ ತಾಣ
ಊರುಗೋಲು, ಮನೆ, ಅಲ್ಲೇ-
ಮರೆತ ನೆನಪು..

ಕೆನ್ನೆಯಲ್ಲಿ ಕೇದಿಗೆ- ಸಂಪಿಗೆ
ಅರಿಷಿಣ ಬಣ್ಣ ಹಚ್ಚಿ- ಬಿಚ್ಚಿ
ಹಣ್ಣಾಯಿತು ಇಳಿಸಂಜೆ;
ಉರುಳುವ ಋತುಗಾಲಿ-
ಯಚ್ಚಿನಡಿ ರಸ್ತೆ ಉಳಿಯಿತು
ಉಳುವ ಮೂಕನಂತೆ..

‍ಲೇಖಕರು Admin

May 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: