ಸುಮಾ ಕಂಚೀಪಾಲ್ ಕಂಡಂತೆ- ಕ್ಯಾಮರಾವುಮನ್ ವಿದ್ಯಾ ಗೌಡ…

ಸುಮಾ ಕಂಚೀಪಾಲ್

ಸಾಮಾನ್ಯವಾಗಿ ಕ್ಯಾಮರಾ ಮ್ಯಾನ್ ಎನ್ನುವ ಪದವನ್ನು ನಾವು ಸಾಕಷ್ಟು ಬಾರಿ ಕೇಳಿರುತ್ತೇವೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಮಹಿಳೆಯರ ಹೆಸರು ಕೇಳುವುದು ವಿರಳ. ಆದರೆ ಶಕ್ತಿಮಾನ್, ಇಂಡಿಯನ್ ಐಡೆಲ್, ಆರ್ಯಮಾನ್, ಸ.ರಿ.ಗ.ಮ.ಪ, ಫಿಯರ್ ಪೈಲ್ಸ, ಲವ್ ಮಿ ಇಂಡಿಯಾ, ಅರವತ್ತಕ್ಕೂ ಹೆಚ್ಚು ಚಿತ್ರಕಥೆಗಳಿಗೆ ಇವರು ಕ್ಯಾಮರಾವುಮನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಾನು ಈ ಸಂದರ್ಶನದಲ್ಲಿ ನಿಮಗೆ  ಪರಿಚಯಿಸಲು ಹೊರಟಿರುವುದು ಛಾಯಾಗ್ರಾಹಕಿ ವಿದ್ಯಾ ಗೌಡ ಅವರನ್ನು. ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಛಾಯಾಚಿತ್ರ ಲೋಕಕ್ಕೆ ಪಾದಾರ್ಪಣೆ ಮಾಡಿ ಸೈ ಎನಿಸಿಕೊಂಡವರು ಇವರು.

ಪ್ರಶ್ನೆ: ಒಬ್ಬ ಮಹಿಳೆಯಾಗಿ ನೀವು ಛಾಯಾಗ್ರಹಣವನ್ನು ನಿಮ್ಮ ವೃತ್ತಿಯಾಗಿ ಆಯ್ದು ಕೊಳ್ಳಲು ಕಾರಣವೇನು ? 

ವಿದ್ಯಾ ಗೌಡ: ನಾನು ಚಿಕ್ಕಂದಿನಿಂದಲೂ ನಮ್ಮ ತಂದೆಯೊಂಟ್ಟಿಗೆ ಅವರನ್ನು ಅನುಕರಿಸಿಯೇ ಬೆಳೆದವಳು.ನನ್ನ‌ 16 ನೇ ವಯಸ್ಸಿನಲ್ಲಿ ನಾನು ಓ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ.‌ ನನ್ನ ತಂದೆ ಸುರೇಶ ಚೆನ್ನಪ್ಪ ಗೌಡ ಅವರೂ ಸಹ ಸಿನಿಮಾಟೊಗ್ರಾಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕೆಲಸಕ್ಕೆ ಹೋಗುವಾಗ ನಾನೂ ಕೆಲವೊಮ್ಮೆ ಅವರೊಟ್ಟಿಗೆ ಹೋಗುತ್ತಿದೆ. ಅವರು ಕೆಲಸ ಮಾಡುವ ವಿಧಾನವನ್ನು ನೋಡುತ್ತಿದ್ದೆ‌. ಅವರಿಂದಾಗಿಯೇ ನಾನು  ಇಪ್ಪತ್ತಾರು ವರ್ಷಗಳ ಹಿಂದೇ ಬೆಲೆಬಾಳುವ ಕ್ಯಾಮರಾಗಳನ್ನು ಮುಟ್ಟಿದ್ದೆ. ನಾನು ಈ ಕೆಲಸ ಆರಂಭಿಸುವಾಗ ಕ್ಯಾಮರಾ ಹಿಡಿಯುವ ಯಾವ ಮಹಿಳೆಯರೂ ಸಹ ನನಗೆ ಗೊತ್ತಿರಲಿಲ್ಲ. ಆದರೆ ತಂದೆಯಂತೆ ನಾನು ಇದೇ ಕೆಲಸವನ್ನೇ ಮಾಡಬೇಕೆಂಬ ಮನಸ್ಸಾಗಿದ್ದರಿಂದ ಈ ಕ್ಷೇತ್ರದಲ್ಲಿ ಮುಂದುವರೆದೆ. ಕೆಲವು ಸವಾಲುಗಳನ್ನು ಎದುರಿಸಬೇಕಾದ ಪ್ರಸಂಗಗಳು ಆಗಗಾ ಎದುರಾಗಿದ್ದವು. 

ಪ್ರಶ್ನೆ: ನೀವು ಕೆಲಸ ಮಾಡುವಾಗ ಸವಾಲುಗಳು  ಎದುರಾದವು ಎಂದಿರಿ ಆ ಸವಾಲುಗಳನ್ನು ನೀವು ಹೇಗೆ ನಿಭಾಯಿಸಿದ್ದೀರಿ? 

ವಿದ್ಯಾ ಗೌಡ: ಪುರುಷ ಪ್ರಾಧಾನ್ಯತೆಯ ಸಮಾಜದಲ್ಲಿ ಎಲ್ಲೆಡೆಯೂ ಮಹಿಳೆಗೆ ಒಂದಿಲ್ಲಾ ಒಂದು ರೀತಿಯಲ್ಲಿ ಸಣ್ಣದೊಂದು ತೊಡುಕು ಖಂಡಿತ ಎದುರಾಗುತ್ತದೆ. ಅದೇ ರೀತಿ ನನಗೂ ಎದುರಾಗಿತ್ತು. ಕೆಲಸಮಾಡುವ ಲೈಟ್ ಮ್ಯಾನ್ ಗಳು‌ ಕೂಡ ನನ್ನು ನೋಡಿ ಇವಳಿಂದೇನಾಗುತ್ತದೆ ಎಂದು ನನ್ನೆದುರೇ ನಗುತ್ತಿದ್ದರು. ಎಲ್ಲಿ‌ ಕೆಲಸ ಕೇಳಿದರು ಸಹ ಈ ಕ್ಷೇತ್ರಕ್ಕೆ ಮಹಿಳೆಯರು ಬೇಡ ಎಂಬ ಪ್ರತ್ಯುತ್ತರಗಳೇ ನನಗೆ ಸಿಕ್ಕಿದ್ದು. ಇಂದು ನಾನು ಹಲವು ಹಿರಿತೆರೆ ಮತ್ತು ಕಿರಿತೆರೆಗಳಿಗೆ ಛಾಯಾಗ್ರಹಣದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಮೊದಲಿಗೆ ನಾನು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿ ಬೆಳೆದಿದ್ದೇನೆ, ಬೆಳಕು ನಿರ್ವಹಣೆ, ಪೋಕಸ್ ಪುಲರ್, ಸಹಾಯಕ ಛಾಯಾಗ್ರಾಹಕಿ ಹೀಗೆ ಹಂತ ಹಂತವಾಗಿ ಹಾದಿಸವೆಸಿದ್ದೇನೆ. ಇಪ್ಪತ್ತು ವರ್ಷಗಳ ಕಾಲ ನಾನು ಈ ಕ್ಷೇತ್ರದಲ್ಲಿ ಜೀವಿಸಿದ್ದೇನೆ. ಇನ್ನು ಮುಂದೆಯೂ ಇದೇ ಕ್ಷೇತ್ರದಲ್ಲಿ ಇರಲು ಬಯಸುತ್ತೇನೆ. 

ಪ್ರಶ್ನೆ: ಒಬ್ಬ ಮಹಿಳೆಗೆ ಕೌಟುಂಬಿಕ ಸಹಕಾರ ಎಷ್ಟು ಮುಖ್ಯ ? 

ವಿದ್ಯಾ ಗೌಡ : ಖಂಡಿತವಾಗಿಯೂ ಮಹಿಳೆ ಮತ್ತು ಪುರುಷ ಇಬ್ಬರಿಗೂ ಕೌಟುಂಬಿಕ ಸಹಕಾರ ಅತಿಮುಖ್ಯವಾಗಿರುತ್ತದೆ. ಹೊಂದಾಣಿ ಮತ್ತು ಪ್ರೋತ್ಸಾಹ ಸಿಕ್ಕಿದಲ್ಲಿ ಯಾರು ಏನೇ ಅಂದರೂ ಸಹ ನಮ್ಮ ನಿಲುವಿನಲ್ಲಿ ಮುನ್ನಡೆಯಲು ಸಹಕಾರಿಯಾಗಿರುತ್ತದೆ. ನನಗೆ ನನ್ನ ತಂದೆಯ ಸಹಕಾರವೇ ನನ್ನನ್ನು ಈ ಕ್ಷೇತ್ರಕ್ಕೆ ಪರಿಚಯಿಸಿತು. 

ಪ್ರಶ್ನೆ : ನೀವು ಎಷ್ಟು ಭಾಷೆಗಳಲ್ಲಿ ಕೆಲಸ ಮಾಡಿದ್ದೀರಿ ಮತ್ತು ನಿಮಗೆ ಇಷ್ಟವೆನಿಸಿದ ಛಾಯಾಗ್ರಹಣ ಪ್ರಾಜೆಕ್ಟ್ ಯಾವುದು? 

ವಿದ್ಯಾ ಗೌಡ: ಚಿತ್ರೀಕರಣ ಮತ್ತು ನಿರ್ಮಾಣಕ್ಕೆ ಹೆಸರಾಗಿರುವ  ಮುಂಬೈನಲ್ಲೇ ಹುಟ್ಟಿ ಅಲ್ಲೇ ಬೆಳೆದವಳು ನಾನು. ಹಾಗಾಗಿ ಹಲವಾರು ಚಿತ್ರಕಥೆಗಳು ಮತ್ತು ಧಾರಾವಾಹಿಗಳಿಗೆ ಛಾಯಾಗ್ರಾಹಕಿಯಾಗಲು ಅವಕಾಶಗಳ ಕೊರತೆ ನನಗೆ ಎಂದೂ ಕಾಡಿಲ್ಲ. ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಗಳ ಚಿತ್ರೀಕರಣಗಳನ್ನು ಮಾಡಿದ್ದೇನೆ. ಮೊದ ಮೊದಲು ಜಾಹಿರಾತು ಮತ್ತು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ನನ್ನ ಕ್ಯಾಮರಾ ಕಣ್ಣುಗಳಿಂದ ಸೆರೆಹಿಡಿದಿದ್ದೇನೆ.  ನನಗೆ ನಾನು ಮಾಡಿದ ಪ್ರತಿಯೊಂದು ಕೆಲವು ತುಂಬಾ ಪ್ರಿಯವಾದದ್ದು ಮತ್ತು ಎಲ್ಲವೂ ಸಮಾನವಾದದ್ದು. ನನಗಿಷ್ಟವಾದ ಒಂದನ್ನುಮಾತ್ರ  ಆಯ್ಕೆ ಮಾಡಲು ಸಾಧ್ಯವಿಲ್ಲ‌. 

ಪ್ರಶ್ನೆ : ಭವಿಷ್ಯದ ಛಾಯಾಗ್ರಾಹಕರಿ ನೀವು ಯಾವ ಸಲಹೆಗಳನ್ನು ನೀಡಲು ಬಯಸುತ್ತೀರಾ? 

ವಿದ್ಯಾ ಗೌಡ: (ಮುಗುಳು ನಗು) ಕೇವಲ ಈ ಕ್ಷೇತ್ರವೊಂದೆ ಅಲ್ಲ ಎಲ್ಲಾ ಕ್ಷೆತ್ರದವರಿಗೂ ನಾನು ಹೇಳಲು ಬಯಸುವುದೆಂದರೆ, ಹಣವೊಂದೇ ಮುಖ್ಯವಲ್ಲ ಅದರೊಟ್ಟಿಗೆ ನಿಮ್ಮ ಗುರಿ ಮತ್ತು ಆಸಕ್ತಿ ಮುಖ್ಯ ಎಂಬುದನ್ನು ಎಂದಿಗೂ ಮರೆಯದಿರಿ. 

ಈ ಕ್ಷೇತ್ರಕ್ಕೆ ಬರುವವರನ್ನು ನಾನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇನೆ. ಏಕೆಂದರೆ ಪ್ರತಿಯೊಬ್ಬರಲ್ಲೂ ಒಂದೊಂದು ಭಿನ್ನತೆ ಇರುತ್ತದೆ. ನಾನೂ ಸಹ ಅದನ್ನು ಅವರಿಂದ ಕಲಿಯುತ್ತೇನೆ. ಪೂರ್ವತಯಾರಿ ಮಾಡಿಕೊಳ್ಳಿ ಪ್ರಾಯೋಗಿಕ ಕೆಲಸಗಳಷ್ಟೆ ಸಿದ್ದಾಂತವೂ ಮುಖ್ಯ. 

‘I want to do work till end of my life. Learning never ends, do hard work and achieve your goal’

‍ಲೇಖಕರು Admin

October 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: